ಬ್ಯಾಂಕ್‌ಗೆ ರಜಾ 6 ದಿನವೋ, 4 ದಿನವೋ? ರಜಾನೇ ಇಲ್ವೋ?: ರಾಮ ರಾಮ!

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 30, Aug 2018, 5:03 PM IST
Banks to remain closed for 5 days?
Highlights

ಸೆಪ್ಟೆಂಬರ್ ಮೊದಲ ವಾರದಲ್ಲಿ ಬ್ಯಾಂಕ್‌ಗಳಿಗೆ ಎಷ್ಟು ದಿನ ರಜೆ?! 6 ದಿನ? 4 ದಿನ? ಅಥವಾ ರಜಾನೇ ಇಲ್ವೋ ಎಂಬ ಕುತೂಹಲ! ಸೆ.3 ಜನ್ಮಾಷ್ಟಮಿಗೆ ರಜೆ ಇಲ್ಲ ಎಂದು ಸ್ಪಷ್ಟನೆ! ಸೆ. 4,5 ಆರ್‌ಬಿಐ ಸಿಬ್ಬಂದಿ ಪ್ರತಿಭಟನೆ ರಜೆ ಸಾಧ್ಯತೆ

ಬೆಂಗಳೂರು(ಆ.30): ಮುಂಬರುವ ಸೆಪ್ಟೆಂಬರ್ ತಿಂಗಳಲ್ಲಿ ಬ್ಯಾಂಕ್‌ಗಳಿಗೆ ಸತತ 6 ದಿನಗಳ ರಜೆ ಇರಲಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಇದರಿಂದ ಗ್ರಾಹಕರಲ್ಲಿ ಭಾರೀ ಗೊಂದಲ ಉಂಟಾಗಿದೆ. ಸೆಪ್ಟೆಂಬರ್ ಮೊದಲ ವಾರದಲ್ಲಿ ಸತತ 6 ದಿನಗಳ ಕಾಲ ಬ್ಯಾಂಕ್‌ಗಳಿಗೆ ರಜೆ ಇರಲಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಆದರೆ ಸೆಪ್ಟೆಂಬರ್ ಮೊದಲ ವಾರದಲ್ಲಿ ಬ್ಯಾಂಕ್‌ಗಳಿಗೆ ಕೇವಲ 3 ದಿನ ರಜೆ ಇರಲಿದೆ ಎಂಬುದು ಅಧಿಕೃತ ಮೂಲಗಳಿಂದ ತಿಳಿದು ಬಂದಿದೆ. ಸೆ.2 ಭಾನುವಾರವಾಗಿದ್ದು, ಎಂದಿನಂತೆ ಎಲ್ಲಾ ಬ್ಯಾಂಕ್‌ಗಳಿಗೂ ರಜೆ ಇರುತ್ತದೆ. ಸೆ. 3 ರಂದು ಜನ್ಮಾಷ್ಟಮಿ ಇದ್ದು, ಕರ್ನಾಟಕದ ಬ್ಯಾಂಕ್‌ಗಳಿಗೆ ರಜೆ ಇರುವುದಿಲ್ಲ ಎಂದು ಸ್ಪಷ್ಟನೆ ಕೊಡಲಾಗಿದೆ.

ಅದರಂತೆ ಸೆ. 4 ಮತ್ತು 5 ರಂದು ಆರ್‌ಬಿಐ ಸಿಬ್ಬಂದಿ ಸಾಮೂಹಿಕ ರಜೆ ಮೇಲೆ ತೆರಳಲಿದ್ದು, ಆ ಎರಡು ದಿನ ದೇಶದ ಎಲ್ಲಾ ಬ್ಯಾಂಕ್‌ಗಳಿಗೆ ರಜೆ ಘೋಷಣೆ ಮಾಡುವ ಸಾಧ್ಯತೆ ಇದೆ ಎಂದು ಈ ಮೊದಲು ಹೇಳಲಾಗಿತ್ತಾದರೂ, ಕೇವಲ ಆಂತರಿಕ ಕೆಲಸ ಕಾರ್ಯಗಳ ಮೇಲೆ ಒತ್ತಡ ಬೀಳುವುದರಿಂದ ಆ ಎರಡು ದಿನ ರಜೆ ಘೋಷಣೆ ಮಾಡದಿರಲು ನಿರ್ಧರಿಸಲಾಗಿದೆ. 

ಅದರಂತೆ ಸೆ. ೪ ಮತ್ನ್ನುತು ೫ ರಂದು ಎಟಿಎಂ ಕಾರ್ಯನಿರ್ವಹಣೆಗೆ ಯಾವುದೇ ತೊಂದರೆ ಇರುವುದಿಲ್ಲ ಎಂದೂ ಬ್ಯಾಂಕ್ ಮೂಲಗಳು ಸ್ಪಷ್ಟಪಡಿಸಿವೆ. ಸೆ. 6 ಮತ್ತು 7 ರಂದು ಬ್ಯಾಂಕ್ ಎಂದಿನಂತೆ ಕಾರ್ಯ ನಿರ್ವಹಿಸಲಿದ್ದು, ಸೆ. 8ಕ್ಕೆ ಎರಡನೇ ಶನಿವಾರ ಎಂದಿನಂತೆ ಬ್ಯಾಂಕ್‌ಗಳಿಗೆ ರಜೆ ಇರಲಿದೆ.

ಅಂದರೆ ಸೆಪ್ಟೆಂಬರ್ ಮೊದಲ ವಾರದಲ್ಲಿ ಬ್ಯಾಂಕ್‌ಗಳಿಗೆ ಕೇವಲ 2 ದಿನ ರಜೆ ಇದ್ದು, ಅದೂ ಕೂಡ ಸತತವಾಗಿ ಇರದೇ ಸೆ. 2(ಭಾನುವಾರ) ಮತ್ತು ಸೆ. 8(ಎರಡನೇ ಶನಿವಾರ) ಮಾತ್ರ ರಜೆ ಇರಲಿದೆ. 

loader