Asianet Suvarna News Asianet Suvarna News

ಅಯ್ಯೋ!, ಸುಪ್ರೀಂ ಗೆ ಕೇಂದ್ರದ ಸೆಡ್ಡು: ಬ್ಯಾಂಕ್, ಮೊಬೈಲ್‌ಗೆ ಆಧಾರ್ ಕಡ್ಡಾಯ ಮುಂದುವರಿಕೆ?

ಬ್ಯಾಂಕ್ ಮತ್ತು ಮೊಬೈಲ್‌ಗೆ ಆಧಾರ್ ಲಿಂಕ್ ಕಡ್ಡಾಯ! ನಿಯಮ ಮುಂದುವರೆಸಲು ಕೇಂದ್ರ ಸರ್ಕಾರ ನಿರ್ಧಾರ! ಸಂಸತ್ ಪಾಸ್ ಮಾಡಿದ ಕಾನೂನು ಪುನರ್ ಸ್ಥಾಪನೆಗೆ ಮುಂದು! ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಮಾಹಿತಿ

Banks, telecom companies could be allowed to use Aadhaar, says Finance Minister
Author
Bengaluru, First Published Oct 6, 2018, 6:16 PM IST

ನವದೆಹಲಿ(ಅ.6): ಬ್ಯಾಂಕ್ ಮತ್ತು ಮೊಬೈಲ್‌ಗೆ ಆಧಾರ್ ಲಿಂಕ್ ಕಡ್ಡಾಯ ನಿಯಮ ಮುಂದುವರೆಸಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು, ಸಂಸತ್ ಪಾಸ್ ಮಾಡಿದ ಕಾನೂನು ಇದನ್ನು ಪುನರ್ ಸ್ಥಾಪಿಸಲಿದೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ. 

ಬ್ಯಾಂಕ್ ಮತ್ತು ಮೊಬೈಲ್‌ಗೆ ಆಧಾರ್ ಲಿಂಕ್ ಕಡ್ಡಾಯ ನಿಯಮ ಮುಂದುವರೆಸಲು ಕೇಂದ್ರ ನಿರ್ಧರಿಸಿದ್ದು, ಈ ಸಂಬಂಧ ಹೊಸ ಕಾನೂನು ಜಾರಿಗೆ ತರುವುದಿಲ್ಲ ಎನ್ನಲಾಗುವುದಿಲ್ಲ ಅರುಣ್ ಜೇಟ್ಲಿ ಹೇಳಿದ್ದಾರೆ.

ಕಳೆದ ತಿಂಗಳು ಆಧಾರ್ ಸಾಂವಿಧಾನಿಕ ಮಾನ್ಯತೆ ಎತ್ತಿ ಹಿಡಿದ ಸುಪ್ರೀಂ ಕೋರ್ಟ್, ಸರ್ಕಾರಿ ಯೋಜನೆಗಳ ಲಾಭ ಪಡೆಯಲು ಮಾತ್ರ ಆಧಾರ್ ಕಡ್ಡಾಯ. ಟೆಲಿಕಾಂ ಕಂಪನಿಗಳಿಗೆ ಮತ್ತು ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡುವುದು ಕಡ್ಡಾಯವಲ್ಲ ಎಂದು ಹೇಳಿತ್ತು.

ತೀರ್ಪು ಐತಿಹಾಸಿಕ ಎಂದಿರುವ ಅರುಣ್ ಜೇಟ್ಲಿ, ಆಧಾರ್ ಕಾನೂನು ಬದ್ಧವಾಗಿದೆ ಎಂದು ಸುಪ್ರೀಂ ಕೋರ್ಟ್ ಒಪ್ಪಿಕೊಂಡಿದೆ ಎಂದು ಹೇಳಿದ್ದಾರೆ. ಆಧಾರ್ ದೇಶದ ಪೌರತ್ವದ ಕಾರ್ಡ್ ಅಲ್ಲ ಎಂದೂ ಜೇಟ್ಲಿ ಸ್ಪಷ್ಟಪಡಿಸಿದ್ದಾರೆ.

ಆಧಾರ್ ಎಲ್ಲಾ ರೀತಿಯ ಜನರಿಗೆ ಸರ್ಕಾರದ ವಿವಿಧ ಯೋಜನೆಗಳ ಲಾಭ ಮತ್ತು ಸಬ್ಸಿಡಿಯನ್ನು ಪಡೆಯಲು ಒಂದು ವ್ಯವಸ್ಥೆಯಾಗಿದ್ದು, ಅದು ಆಧರ್‌ನ ಮೂಲ ಉದ್ದೇಶ ಎಂದು ಸಚಿವರು ಹೇಳಿದ್ದಾರೆ.

Follow Us:
Download App:
  • android
  • ios