ಹಣಕಾಸು ಸಚಿವರಾಗಿ ಮತ್ತೆ ಅಧಿಕಾರ ಸ್ವೀಕರಿಸಿದ ಜೇಟ್ಲಿ! ಮೂತ್ರಪಿಂಡದ ತೊಂದರೆಯಿಂದ ಬಳಲುತ್ತಿದ್ದ ಸಚಿವ! ಮೂತ್ರಪಿಂಡದ ಕಸಿ ಮಾಡಿಕೊಂಡಿದ್ದ ಜೇಟ್ಲಿ! ಜೇಟ್ಲಿಗೆ ಹಣಕಾಸು ಜವಾಬ್ದಾರಿ ಮರಳಿಸಿದ ರಾಷ್ಟ್ರಪತಿ

ನವದೆಹಲಿ(ಆ.23): ಮೂತ್ರಪಿಂಡದ ತೊಂದರೆಯಿಂದ ಬಳಲುತ್ತಿದ್ದ ಕೇಂದ್ರ ಸಚಿವ ಅರುಣ್ ಜೇಟ್ಲಿ, ಆರೋಗ್ಯ ಸುಧಾರಣೆಗೊಂಡ ಪರಿಣಾಮ ಮತ್ತೆ ಹಣಕಾಸು ಖಾತೆ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹಣಕಾಸು ಸಚಿವ ಸ್ಥಾನಕ್ಕೆ ಜೇಟ್ಲಿ ಅವರನ್ನು ಮರು ನೇಮಕ ಮಾಡಿದ್ದಾರೆ.

ಪ್ರಧಾನಿ ಮೋದಿ ಸಲಹೆ ಮೇರೆಗೆ ರಾಷ್ಟ್ರಪತಿಗಳು ಕೇಂದ್ರ ಹಣಕಾಸು ಮತ್ತು ಕಾರ್ಪೋರೇಟ್ ವ್ಯವಹಾರಗಳ ಖಾತೆ ಇಲಾಖೆಯನ್ನು ಅರುಣ್ ಜೇಟ್ಲಿಯವರಿಗೆ ವಹಿಸುವಂತೆ ಆದೇಶ ನೀಡಿದ್ದಾರೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

Scroll to load tweet…

ಕಳೆದ ಮೇ 14ರಂದು ಅರುಣ್ ಜೇಟ್ಲಿಯವರು ಮೂತ್ರಪಿಂಡದ ಕಸಿ ಮಾಡಿಕೊಂಡಿದ್ದರು. ವೈದ್ಯರ ಸಲಹೆ ಮೇರೆಗೆ ಜೇಟ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ಈ ಹಿನ್ನೆಲೆಯಲ್ಲಿ ಅವರ ಖಾತೆಯ ಜವಾಬ್ದಾರಿಯನ್ನು ಮಧ್ಯಂತರ ಅವಧಿಗೆ ಪಿಯೂಷ್ ಗೋಯಲ್ ಅವರಿಗೆ ನೀಡಲಾಗಿತ್ತು.