Asianet Suvarna News Asianet Suvarna News

Stock market| Aramco Deal ರದ್ದು, ಒಂದೇ ಕ್ಷಣದಲ್ಲಿ 70 ಸಾವಿರ ಕೋಟಿ ನಷ್ಟ ಅನುಭವಿಸಿದ RIL!

* Aramco Deal ರದ್ದು ಅಂಬಾನಿ ಸಾಮ್ರಾಜ್ಯಕ್ಕೆ ಭಾರೀ ನಷ್ಟ

* ಕ್ಷಣಾರ್ಧದಲ್ಲಿ ಎಪ್ಪತ್ತು ಸಾವಿರ ಕೋಟಿ ನಷ್ಟ ಕಂಡ ರಿಲಯನ್ಸ್

 

Aramco deal re evaluation erases 9 billion Dollars in RIL market cap pod
Author
Bangalore, First Published Nov 22, 2021, 6:14 PM IST

ಮುಂಬೈ(ನ.22): ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಸೌದಿ ಅರಾಮ್ಕೊ ನಡುವಿನ ಒಪ್ಪಂದ ರದ್ದುಗೊಳಿಸಲಾಗಿದೆ ((Reliance Industries and Saudi Aramco Deal Cancelled) ಎಂಬ ಸುದ್ದಿ ಹೊರ ಬಂದ ಬಳಿಕ ರಿಲಯನ್ಸ್ ಇಂಡಸ್ಟ್ರೀಸ್ ಷೇರು ಮೌಲ್ಯ ಭಾರೀ ಕುಸಿತ ಕಂಡಿದೆ. ಹೂಡಿಕೆದಾರರ ಜೊತೆಗೆ, ರಿಲಯನ್ಸ್ ಇಂಡಸ್ಟ್ರೀಸ್‌ನ (Reliance Industries) ಮಾರುಕಟ್ಟೆ ಕ್ಯಾಪ್ ಸಹ 70 ಸಾವಿರ ಕೋಟಿ ರೂಪಾಯಿಗಳಷ್ಟು ಕಡಿಮೆಯಾಗಿದೆ, ಇದರ ಬೆನ್ನಲ್ಲೇ ಕಂಪನಿಯ ಮಾರುಕಟ್ಟೆ ಮೌಲ್ಯ (Reliance Industries Market Cap) ) 15 ಲಕ್ಷ ಕೋಟಿ ರೂಪಾಯಿಗಳಿಗಿಂತ ಕಡಿಮೆಗೊಂಡಿದೆ. ರಿಲಯನ್ಸ್ ಷೇರುಗಳ ಮಹಾ ಕುಸಿತದ ಪರಿಣಾಮ ಇಡೀ ಷೇರು ಮಾರುಕಟ್ಟೆಯ ಮೇಲೂ ಕಂಡುಬಂದಿದೆ ಎಂಬುವುದು ಉಲ್ಲೇಖನೀಯ. ಇಂದು ಬಾಂಬೆ ಸ್ಟಾಕ್ ಎಕ್ಸ್ಚೇಂಜ್ ಮತ್ತು ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್ನ (Bombay Stock and National Exchange) ಪ್ರಮುಖ ಸೂಚ್ಯಂಕಗಳು ಸುಮಾರು ಶೇಕಡಾ 2ರಷ್ಟು ಕುಸಿತದೊಂದಿಗೆ ವ್ಯವಹಾರ ಮುಗಿಸಿವೆ.

ರಿಲಯನ್ಸ್ ಷೇರುಗಳಲ್ಲಿ ಭಾರೀ ಕುಸಿತ

ಇಂದು ರಿಲಯನ್ಸ್ ಷೇರುಗಳಲ್ಲಿ (Reliance Industries) ದಾಖಲೆಯ ಕುಸಿತ ಕಂಡು ಬಂದಿದೆ. ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್‌ನ ಪ್ರಮುಖ ಸೂಚ್ಯಂಕ ಸೆನ್ಸೆಕ್ಸ್‌ನಲ್ಲಿ (Sensex) ರಿಲಯನ್ಸ್ ಇಂಡಸ್ಟ್ರೀಸ್ ಷೇರುಗಳು ಶೇಕಡಾ 4.42 ರಷ್ಟು ಕುಸಿದು ಅಂದರೆ, 109.35 ರೂಪಾಯಿಯಷ್ಟು ಇಳಿಕೆಯಾಗಿ ದಿನದಂತ್ಯಕ್ಕೆ 2363.40 ರೂ. ತಲುಪಿದೆ. ವಹಿವಾಟಿನ ಅವಧಿಯಲ್ಲಿ ಕಂಪನಿಯ ಷೇರು 2351 ರೂ.ಗೆ ತಲುಪಿತ್ತು. ಅದಕ್ಕೂ ಮೊದಲು ಕಂಪನಿಯ ಷೇರುಗಳು 2440 ರೂ.ನಲ್ಲಿ ವಹಿವಾಟು ಆರಂಭಿಸಿದ್ದವು. ಶುಕ್ರವಾರ ಪ್ರತಿ ಷೇರಿಗೆ 2472.75 ರೂ. ಆಗಿತ್ತು. 

ಮಾರುಕಟ್ಟೆ ಬಂಡವಾಳದಿಂದಾಗಿ ಸುಮಾರು 70 ಸಾವಿರ ಕೋಟಿ ನಷ್ಟ

ಕಂಪನಿಯ ಷೇರುಗಳ ಕುಸಿತದಿಂದಾಗಿ ಕಂಪನಿಯ ಮಾರುಕಟ್ಟೆ ಕ್ಯಾಪ್ (Market Cap) ಭಾರೀ ನಷ್ಟವನ್ನು ಅನುಭವಿಸಿದೆ. ಮಾರುಕಟ್ಟೆ ಮುಚ್ಚುವ ಹೊತ್ತಿಗೆ, ಕಂಪನಿಯ ಮಾರುಕಟ್ಟೆ ಮೌಲ್ಯವು ಸುಮಾರು 70 ಸಾವಿರ ಕೋಟಿ ರೂ.ನಿಂದ 15 ಲಕ್ಷ ಕೋಟಿ ರೂ.ಗಿಂತ ಕೆಳಗಿಳಿದಿದೆ. ಅಂಕಿಅಂಶಗಳ ಬಗ್ಗೆ ಗಮನಿಸುವುದಾದರೆ, ಶುಕ್ರವಾರದಂದು ಕಂಪನಿಯ ಮಾರುಕಟ್ಟೆ ಮೌಲ್ಯವು 15,68,550.17 ಕೋಟಿ ರೂ.ಗಳಷ್ಟಿತ್ತು, ಇದು ಇಂದು ರೂ.14,99,185.71 ಕೋಟಿಗೆ ಇಳಿದಿದೆ. ಅಂದರೆ ಕಂಪನಿಯ ಮಾರುಕಟ್ಟೆ ಮೌಲ್ಯ 69,364.46 ರೂ.ಗಳಷ್ಟು ಇಳಿಕೆಯಾಗಿದೆ.

ಕಳೆದ ವಾರ 76 ಸಾವಿರ ಕೋಟಿ ನಷ್ಟವಾಗಿತ್ತು

ಕಳೆದ ವಾರವೂ ರಿಲಯನ್ಸ್ ಇಂಡಸ್ಟ್ರೀಸ್ ಷೇರುಗಳಲ್ಲಾದ ಗಮನಾರ್ಹ ಕುಸಿತದಿಂದಾಗಿ ಮಾರುಕಟ್ಟೆ ಮೌಲ್ಯದಲ್ಲಿ ಸುಮಾರು 76 ಸಾವಿರ ಕೋಟಿ ರೂ. ಕುಸಿತವಾಗಿತ್ತು. ಅಂದರೆ ಕಳೆದ ವಾರದ ನಷ್ಟ ಮತ್ತು ಇಂದಿನ ನಷ್ಟವನ್ನು ಸೇರಿಸಿದರೆ 1.46 ಲಕ್ಷ ಕೋಟಿ ರೂ. ತಜ್ಞರ ಅನ್ವಯ ರಿಲಯನ್ಸ್ ಷೇರುಗಳಲ್ಲಿ ಇನ್ನೂ ಸ್ವಲ್ಪ ಇಳಿಕೆಯಾಗಬಹುದು ಎನ್ನಲಾಗದೆ. ಆದರೆ ಸ್ಟಾಕ್ ಮಾರುಕಟ್ಟೆಯ ತಜ್ಞರು ಇನ್ನೂ ಈ ಸ್ಟಾಕ್ನಲ್ಲಿ ತಮ್ಮ ನಂಬಿಕೆ ಇರಿಸಿದ್ದಾರೆ.

ಇಂದು ಹೂಡಿಕೆದಾರರು ನಷ್ಟ 

ಇನ್ನು ಹೂಡಿಕೆದಾರರ ಬಗ್ಗೆ ಗಮನಿಸುವುದಾದರೆ, ಅವರು ದೊಡ್ಡ ನಷ್ಟವನ್ನು ಅನುಭವಿಸಿದ್ದಾರೆ. ಇಂದು ಕಂಪನಿಯು ತನ್ನ ಒಂದು ಷೇರಿನಲ್ಲಿ 109.35 ರೂ.ಗಳನ್ನು ಕಳೆದುಕೊಂಡಿದೆ. ಹೂಡಿಕೆದಾರರು 1,000 ಷೇರುಗಳನ್ನು ಹೊಂದಿದ್ದರೆ, ಅವರು ರೂ 1,09,350 ನಷ್ಟವನ್ನು ಅನುಭವಿಸುತ್ತಾರೆ. ಕಳೆದ ವಾರಕ್ಕೆ ಈ ನಷ್ಟವನ್ನು ಸೇರಿಸಿದರೆ, ಅದು ಇನ್ನೂ ದೊಡ್ಡದಾಗಿರುತ್ತದೆ.

Follow Us:
Download App:
  • android
  • ios