ರಿಲಯನ್ಸ್‌ ಗ್ರೂಪ್‌ ಬಿಗ್‌ ಎಫ್‌ ರೇಡಿಯೋ ಚಾನಲ್‌ನಲ್ಲಿ ಹೊಂದಿರುವ ಎಲ್ಲಾ ಷೇರುಗಳನ್ನು ಜಾಗರಣ್‌ ಪ್ರಕಾಶನ್‌ ಒಡೆತನದ ಮ್ಯೂಸಿಕ್‌ ಬ್ರಾಡ್‌ಕಾಸ್ಟ್‌ ಲಿಮಿಟೆಡ್‌ಗೆ ಸಾವಿರಾರು ಕೋಟಿಗೆ ಮಾರಾಟ ಮಾಡಲು ನಿರ್ಧರಿಸಲಾಗಿದೆ.

ಮುಂಬೈ: ಅನಿಲ್‌ ಅಂಬಾನಿ ಅವರ ರಿಲಯನ್ಸ್‌ ಗ್ರೂಪ್‌ ಬಿಗ್‌ ಎಫ್‌ ರೇಡಿಯೋ ಚಾನಲ್‌ನಲ್ಲಿ ಹೊಂದಿರುವ ಎಲ್ಲಾ ಷೇರುಗಳನ್ನು ಜಾಗರಣ್‌ ಪ್ರಕಾಶನ್‌ ಒಡೆತನದ ಮ್ಯೂಸಿಕ್‌ ಬ್ರಾಡ್‌ಕಾಸ್ಟ್‌ ಲಿಮಿಟೆಡ್‌ಗೆ ಸುಮಾರು 1,200 ಕೋಟಿ ರು.ಗಳಿಗೆ ಮಾರಾಟ ಮಾಡಲಿದೆ. 

ರಿಲಯನ್ಸ್‌ ಗ್ರೂಪ್‌ನ ಅಂಗ ಸಂಸ್ಥೆಗಳಾದ ರಿಲಯನ್ಸ್‌ ಕ್ಯಾಪಿಟಲ್‌ ಮತ್ತು ರಿಲಯನ್ಸ್‌ ಲ್ಯಾಂಡ್‌ ರಿಲಯನ್ಸ್‌ ಬ್ರಾಡ್‌ಕಾಸ್ಟ್‌ ಲಿಮಿಟೆಡ್‌ನಲ್ಲಿ ಹೊಂದಿರುವ ಎಲ್ಲಾ ಷೇರುಗಳನ್ನು ಮ್ಯೂಸಿಕ್‌ ಬ್ರಾಡ್‌ಕಾಸ್ಟ್‌ಗೆ ಮಾರಾಟ ಮಾಡಲಿದೆ. 

ಈ ವ್ಯವಹಾರದಿಂದ ರಿಲಯನ್ಸ್‌ ಗ್ರೂಪ್‌ನ ಸಾಲವನ್ನು ಕಡಿಮೆ ಮಾಡಲು ಸಹಾಯವಾಗಲಿದೆ. ಬಿಗ್‌ ಎಫ್‌ಎಂ ಕನ್ನಡ ಸೇರಿದಂತೆ ದೇಶದೆಲ್ಲೆಡೆ 58 ಎಫ್‌ಎಂ ಸ್ಟೇಷನ್‌ಗಳನ್ನು ಹೊಂದಿದೆ.