Asianet Suvarna News Asianet Suvarna News

ದೇವಸ್ಥಾನ ಭೇಟಿ ವೇಳೆ ಅನಂತ್ ಅಂಬಾನಿ ಕಲರ್ ವಾಚ್ ಮೇಲೆ ಎಲ್ಲರ ಕಣ್ಣು, ಇದ್ರ ಬೆಲೆ ಎಷ್ಟು ಅಂತೀರಾ?

ಅನಂತ್ ಅಂಬಾನಿ ಹಾಗೂ ರಾಧಿಕಾ ಅದ್ಧೂರಿ ವಿವಾಹ ಜುಲೈ12ಕ್ಕೆ ನಡೆಯಲಿದೆ. ಇದೀಗ ಅಂಬಾನಿ ಕುಟುಂಬ ಆಮಂತ್ರ ಪತ್ರಿಕೆ ಹಂಚುತ್ತಿದೆ. ಈ ನಡುವೆ ದೇವಸ್ಥಾನಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದ ಅನಂತ್ ಅಂಬಾನಿ ಕಲರ್ ಕಲರ್ ವಾಚ್ ಮೇಲೆ ಎಲ್ಲರ ಕಣ್ಣು ಬಿದ್ದಿದೆ. ಈ ವಾಚ್ ಬೆಲೆ ಬರೋಬ್ಬರಿ 6.91 ಕೋಟಿ ರೂ.
 

All eyes on Anant Ambani luxury watch worth rs 6 91 crore during temple visit for wedding invitation ckm
Author
First Published Jul 1, 2024, 2:23 PM IST

ನವದೆಹಲಿ(ಜು.01) ಉದ್ಯಮಿ ಮುಕೇಶ್ ಅಂಬಾನಿ ಪುತ್ರ ಅನಂತ್ ಅಂಬಾನಿ ಅದ್ಧೂರಿ ವಿವಾಹ ಮಹೋತ್ಸವ ತಯಾರಿ ಭರ್ಜರಿಯಾಗಿ ನಡೆಯುತ್ತಿದೆ. ಕೋಟಿ ಕೋಟಿ ರೂಪಾಯಿ ಪ್ರೀ ವೆಡ್ಡಿಂಗ್ ಕಾರ್ಯಕ್ರಮ ಮುಗಿದಿದೆ. ಇದೀಗ ಅದ್ದೂರಿ ವಿವಾಹ ಜುಲೈ 12ರಂದು ನಡೆಯಲಿದೆ. ಸದ್ಯ ಅಂಬಾನಿ ಕುಟುಂಬ ಐಷಾರಾಮಿ ಆಮಂತ್ರ ಪತ್ರಿಕೆ ಹಂಚುತ್ತಿದೆ. ಇದರ ನಡುವೆ ಅನಂತ್ ಅಂಬಾನಿ ದೇವಸ್ಥಾನಕ್ಕೆ ತೆರಳಿ ಆಶೀರ್ವಾದ ಪಡೆದು ಆಮಂತ್ರಣ ಪತ್ರಿಕೆ ಹಂಚುತ್ತಿದ್ದಾರೆ. ಹೀಗೆ ದೇವಸ್ಥಾನ ಬೇಟಿ ವೇಳೆ ಎಲ್ಲರ ಚಿತ್ತ ಅನಂತ್ ಅಂಬಾನಿ ವಾಚ್ ಮೇಲೆ ನೆಟ್ಟಿದೆ. ಕೆಂಪು ಬಣ್ಣದ ಕಲರ್ ಕಲರ್ ವಾಚ್ ಬೆಲೆ ಬರೋಬ್ಬರಿ 6.91 ಕೋಟಿ ರೂಪಾಯಿ.

ಮಾಧ್ಯಮದ ಜೊತೆಗೆ ಮಾತನಾಡುವ ವೇಳೆ ಅಂಬಾನಿ ವಾಚ್ ಎಲ್ಲರ ಗಮನಸೆಳೆದಿದೆ. ಕಾರಣ ಅನಂತ್ ಅಂಬಾನಿ ಧರಿಸಿದ ಕಲರ್ ಕಲರ್ ವಾಚ್ ನೋಡಲು ಅತ್ಯಂತ ದುಬಾರಿ. ತಮ್ಮ ಡ್ರೆಸ್‌ಗೆ ಅನುಗುಣವಾಗಿ ಕೆಂಪು ಬಣ್ಣದ ವಾಚ್ ಧರಿಸಿದ್ದರು. ರೆಡ್ ಕಾರ್ಬನ್ ವಾಚ್ ಬೆಲೆ 828,000 ಅಮೆರಿಕನ್ ಡಾಲರ್. ಅಂದರೆ ಭಾರತೀಯ ರೂಪಾಯಿಗಳಲ್ಲಿ ಸರಿಸುಮಾರು 6.91 ಕೋಟಿ ರೂಪಾಯಿ.

ಹಡಗಿನಲ್ಲಿ ಅಂಬಾನಿ ಪ್ರೀ ವೆಡ್ಡಿಂಗ್‌ಗೆ ಬೆಂಗಳೂರಿನ ರಾಮೇಶ್ವರಂ ಕೆಫೆ ಫುಡ್, ಮೆನು ಲಿಸ್ಟ್ ಬಹಿರಂಗ!

ಎಲ್ಲಾ ಶ್ರೀಮಂತರಿಗೆ ಈ ವಾಚ್ ಖರೀದಿಸಲು ಸಾಧ್ಯವಿಲ್ಲ. ಇದಕ್ಕೆ ಕಾರಣ ದುಬಾರಿ ಬೆಲೆಯಲ್ಲ. ಇದು ಲಿಮಿಟೆಡ್ ಎಡಿಶನ್ ವಾಚ್.  ಈ ವಾಚ್ ಖರೀದಿಸಲು ಮೊದಲೇ ಬುಕ್ ಮಾಡಬೇಕು. ಬುಕಿಂಗ್ ವೇಳೆ ಇದರ ನಿಖರ ಬೆಲೆ ಬಹಿರಂಗವಾಗಿರುವುದಿಲ್ಲ. ಕಾರಣ ಕೇವಲ 18 ವಾಚ್‌ಗಳು ಮಾತ್ರ ಉತ್ಪಾದನೆ ಮಾಡಲಾಗಿದೆ.  18 ವಾಚ್‌ಗಳ ಪೈಕಿ ಒಂದು ವಾಚ್ ಅನಂತ್ ಅಂಬಾನಿ ಕೈಯಲ್ಲಿದೆ.  

All eyes on Anant Ambani luxury watch worth rs 6 91 crore during temple visit for wedding invitation ckm

ಇತ್ತೀಚೆಗೆ ನೀತಾ ಅಂಬಾನಿ ಮಗನ ಮದುವೆ ಆಮಂತ್ರ ಪತ್ರಿಕೆಯನ್ನು ಕಾಶಿ ವಿಶ್ವನಾಥನ ದೇವರ ಹೆಸರಿಗೆ ನೀಡಿ ಆಶೀರ್ವಾದ ಪಡೆದಿದ್ದರು. ಜುಲೈ 12 ರಂದು ಮುಕೇಶ್- ನೀತಾ ಅಂಬಾನಿ ದಂಪತಿಯ ಮಗ ಅನಂತ್ ಅಂಬಾನಿ ಅವರ ವಿವಾಹವು ಉದ್ಯಮಿ ವಿರೇನ್ ಮರ್ಚೆಂಟ್ ಅವರ ಮಗಳು ರಾಧಿಕಾ ಮರ್ಚೆಂಟ್ ಜತೆಗೆ ನಡೆಯಲಿದೆ. ವಿವಾಹವು ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ ನಲ್ಲಿನ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್ ನಲ್ಲಿ ನಡೆಯಲಿದೆ. 

ಅಬ್ಬಬ್ಬಾ..ಅನಂತ್‌-ರಾಧಿಕಾ ಮದ್ವೆಗೆ ಅನಿಲ್‌ ಅಂಬಾನಿ ಬಂದಿಳಿದ ಕಾರಿನ ಬೆಲೆ ಇಷ್ಟೊಂದಾ?
 
ತಮ್ಮ ಮನೆಯ ಶುಭ ಸಮಾರಂಭಗಳಲ್ಲಿ ಸಾಂಪ್ರದಾಯಿಕ ಆಚರಣೆಗೆ ಬಹು ಮಹತ್ವ ನೀಡುವಂಥ ಅಂಬಾನಿ ಕುಟುಂಬವು ಅನಂತ್- ರಾಧಿಕಾ ವಿವಾಹ ಪೂರ್ವ ಸಮಾರಂಭವನ್ನು ಗುಜರಾತ್ ನಲ್ಲಿ ಸಾಂಪ್ರದಾಯಿಕ ಹಾಗೂ ಆಧುನಿಕ ರೀತಿಯಲ್ಲಿ ನೆರವೇರಿಸಿತ್ತು.ತಮ್ಮ ಮಗ ಅನಂತ್ ಹಾಗೂ ರಾಧಿಕಾ ಅವರ ಜೊತೆಗೆ ದೇಶದ ಪ್ರಮುಖ ದೇಗುಲಗಳಿಗೆ ಭೇಟಿ ನೀಡಿದ್ದಂಥ ಮುಕೇಶ್ ಅಂಬಾನಿ ಅವರು ಅಲ್ಲೆಲ್ಲ ಕೋಟ್ಯಂತರ ರೂಪಾಯಿಯನ್ನು ದೇಣಿಗೆ ರೂಪದಲ್ಲಿ ಅರ್ಪಣೆ ಮಾಡಿದ್ದರು.


 

Latest Videos
Follow Us:
Download App:
  • android
  • ios