ಮಾರುಕಟ್ಟೆಗೆ ಹೊಸ ಈರುಳ್ಳಿ; ಬೆಲೆ ಇಳಿಕೆ!

ಮಾರುಕಟ್ಟೆಗೆ ಹೊಸ ಈರುಳ್ಳಿ; ಬೆಲೆ ಇಳಿಕೆ| ರಾಜ್ಯ, ಮಹಾರಾಷ್ಟ್ರದಿಂದ ಮಾರುಕಟ್ಟೆಗೆ ಈರುಳ್ಳಿ| ಬೆಂಗಳೂರು ಎಪಿಎಂಸಿಯಲ್ಲಿ ದರ ಕೊಂಚ ಕುಸಿತ

After record high of Rs 100 per kg onion prices cool down across Maharashtra

ಬೆಂಗಳೂರು[ಡಿ.10]: ಮಹಾರಾಷ್ಟ್ರ ಹಾಗೂ ರಾಜ್ಯದ ಹೊಸ ಈರುಳ್ಳಿ ಮಾರುಕಟ್ಟೆಗೆ ಬರುತ್ತಿರುವ ಹಿನ್ನೆಲೆಯಲ್ಲಿ ಈರುಳ್ಳಿ ಬೆಲೆಯಲ್ಲಿ ಸ್ವಲ್ಪ ಪ್ರಮಾಣದ ಇಳಿಕೆ ಕಂಡು ಬಂದಿದೆ.

ಈಜಿಪ್ಟ್‌ ದೇಶದಿಂದ ಈರುಳ್ಳಿ ಆಮದು ಮಾಡಿಕೊಂಡಿರುವುದು ಹಾಗೂ ಮಹಾರಾಷ್ಟ್ರ ಮತ್ತು ರಾಜ್ಯದ ವಿವಿಧ ಭಾಗಗಳಿಂದ ಹೊಸ ಈರುಳ್ಳಿ ಯಶವಂತಪುರ ಎಪಿಎಂಸಿ ಮಾರುಕಟ್ಟೆಗೆ ಸೋಮವಾರ ಬಂದಿರುವುದರಿಂದ ಬೆಲೆ ಕಡಿಮೆಯಾಗಿದೆ.

ಕಳೆದ ಶನಿವಾರ ಎಪಿಎಂಸಿ ಮಾರುಕಟ್ಟೆಯಲ್ಲಿ ಕ್ವಿಂಟಾಲ್‌ಗೆ 10 ರಿಂದ 14 ಸಾವಿರ ರು. ಇದ್ದ ಈರುಳ್ಳಿ ಬೆಲೆ ಸೋಮವಾರ 6 ರಿಂದ 12 ಸಾವಿರ ರು.ಗೆ ಇಳಿಕೆಯಾಗಿದೆ. ಈ ಮಧ್ಯ ಈಜಿಪ್ಟ್‌ ಈರುಳ್ಳಿ ಬೆಲೆಯಲ್ಲಿಯೂ ಕುಸಿತ ಉಂಟಾಗಿದ್ದು, ಶನಿವಾರ ಕ್ವಿಂಟಾಲ್‌ಗೆ 10 ರಿಂದ 12 ಸಾವಿರ ರು. ಇದ್ದ ಬೆಲೆ ಸೋಮವಾರ 9 ರಿಂದ 11 ಸಾವಿರಕ್ಕೆ ಕುಸಿದಿದೆ.

ಕಳೆದ ಶನಿವಾರ ಯಶವಂತಪುರ ಎಪಿಎಂಸಿಗೆ ಬಂದ ಈರುಳ್ಳಿ ದಾಸ್ತಾನಿಗಿಂತ ಸೋಮವಾರ ದುಪ್ಪಟ್ಟು ದಾಸ್ತಾನು ಬಂದಿದೆ. ಮಾರುಕಟ್ಟೆಯಲ್ಲಿ ಬೇಡಿಕೆ ಇಲ್ಲ ಕಾರಣ ಸೋಮವಾರ ಎಪಿಎಂಸಿಯಲ್ಲಿ ಈರುಳ್ಳಿ ಮಾರಾಟ ಅಷ್ಟೊಂದು ಚುರುಕಾಗಿರಲಿಲ್ಲ ಎಂದು ಎಪಿಎಂಸಿಯ ಈರುಳ್ಳಿ ವ್ಯಾಪಾರಿ ಉದಯ ಶಂಕರ್‌ ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದರು.

ಗುಣಮಟ್ಟ ಸರಿ ಇಲ್ಲ:

‘ಮಹಾರಾಷ್ಟ್ರದ ಹಳೆಯ ಈರುಳ್ಳಿ ಚೆನ್ನಾಗಿದ್ದು, ಮಾರುಕಟ್ಟೆಗೆ ಬರುತ್ತಿದೆ. ಆದರೆ, ರಾಜ್ಯದ ವಿವಿಧ ಜಿಲ್ಲೆಗಳಿಂದ ಬರುತ್ತಿರುವ ಹೊಸ ಈರುಳ್ಳಿಯ ಗುಣಮಟ್ಟಅಷ್ಟೊಂದು ಚೆನ್ನಾಗಿಲ್ಲ. ಅಲ್ಲದೇ ಹಸಿ ಈರುಳ್ಳಿ ಆಗಿರುವುದರಿಂದ ಕೆಟ್ಟಿರುವ ಮತ್ತು ಒಡೆದ ಪ್ರಮಾಣ ಹೆಚ್ಚಾಗಿದೆ. ಸೋಮವಾರ ಬೆಂಗಳೂರು ಎಪಿಎಂಸಿ ಮಾರುಕಟ್ಟೆ65 ಸಾವಿರ ಚೀಲ ಬಂದಿದೆ. ಜನವರಿವರೆಗೆ ಈರುಳ್ಳಿ ಬೆಲೆಯಲ್ಲಿ ಏರಿಳಿತ ನಿರಂತರವಾಗಿ ಇರಲಿದೆ’ ಎಂದು ಉದಯ್‌ ಶಂಕರ್‌ ತಿಳಿಸಿದ್ದಾರೆ.

Latest Videos
Follow Us:
Download App:
  • android
  • ios