ನವದೆಹಲಿ(ಏ.13): ರಫೆಲ್ ಯುದ್ಧ ವಿಮಾನ ಖರೀದಿ ಒಪ್ಪಂದದ ಬೆನ್ನಲ್ಲೇ, ಅನಿಲ್‌ ಅಂಬಾನಿ ಒಡೆತನದ ರಿಲಯನ್ಸ್‌ ಕಮ್ಯುನಿಕೇಶನ್ಸ್ ನ ಫ್ರೆಂಚ್‌ ನೋಂದಾಯಿತ ಟೆಲಿಕಾಮ್‌ ಸಂಸ್ಥೆಯ 143.7 ದಶಲಕ್ಷ ಯೂರೋ ತೆರಿಗೆಯನ್ನು ಫ್ರಾನ್ಸ್ ಮನ್ನಾ ಮಾಡಿದೆ. 

ಈ ಕುರಿತು ವರದಿ ಮಾಡಿರುವ ಪ್ರಮುಖ ಫ್ರೆಂಚ್‌ ದೈನಿಕ ಲೀ ಮಾಂಡ್‌, ರಿಲಯನ್ಸ್‌ ಫ್ಲ್ಯಾಗ್‌ ಅಟ್ಲಾಂಟಿಕ್‌ ಫ್ರಾನ್ಸ್‌ ಕಂಪನಿಗೆ  151 ದಶಲಕ್ತ ಯೂರೋ ಪಾವತಿಸುವಂತೆ ಫ್ರಾನ್ಸ್ ತೆರಿಗೆ ಸಂಸ್ಥೆ ತಿಳಿಸಿತ್ತು. ಆದರೆ ಅಂತಿಮವಾಗಿ ಕೇವಲ 7.3 ದಶಲಕ್ಷ ಯೂರೋ ಸ್ವೀಕರಿಸಿದೆ ಎಂದು ತಿಳಿಸಿದೆ.

ರಿಲಯನ್ಸ್‌ ಫ್ಯಾಗ್‌ ಸಂಸ್ಥೆ ಫ್ರಾನ್ಸ್‌ನಲ್ಲಿ ಟೆರೆಸ್ಟ್ರಿಯಲ್‌ ಕೇಬಲ್‌ ನೆಟ್‌ ವರ್ಕ್‌ ಮತ್ತು ಇತರ ಟೆಲಿಕಾಂ ಮೂಲ ಸೌಕರ್ಯಗಳ ಒಡೆತನವನ್ನು ಹೊಂದಿದೆ.

ಇನ್ನು ಲೀ ಮಾಂಡ್ ವರದಿಗೆ ಪ್ರತಿಕ್ರಿಯೆ ನೀಡಿರುವ ರಿಲಯನ್ಸ್ ಕಮ್ಯುನಿಕೇಶನ್ಸ್, ಕಾನೂನಿನ ಅಡಿಯಲ್ಲೇ ತೆರಿಗೆ ಮನ್ನಾ ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದೆ.

ದೇಶದಲ್ಲಿ ಏ.11ರಿಂದ ಮೇ.19 ರವರೆಗೆ ಏಳು ಹಂತಗಳಲ್ಲಿ ಮತದಾನ. ಕರ್ನಾಟಕದಲ್ಲಿ ಏ.18 ಹಾಗೂ ಏ.23 ರಂದು ಎರಡು ಹಂತಗಳಲ್ಲಿ ಮತದಾನ. ಭಾರತದಲ್ಲಿ 543 ಲೋಕಸಭಾ ಕ್ಷೇತ್ರ, ಕರ್ನಾಟಕದಲ್ಲಿ 28.