ಮುಂಬೈ[ಜ.08]: ಅಮೆರಿಕ-ಇರಾನ್‌ ನಡುವೆ ಯುದ್ಧ ಸೃಷ್ಟಿಯಾಗಬಹುದು ಎಂಬ ಆತಂಕದಿಂದ ಏರಿಕೆ ಕಂಡಿದ್ದ ಚಿನ್ನದ ಬೆಲೆ, ಕುಸಿತ ಕಂಡಿದ್ದ ರುಪಾಯಿ ಮೌಲ್ಯ ಹಾಗೂ ಷೇರುಪೇಟೆಗಳು ಮಂಗಳವಾರ ಚೇತರಿಸಿಕೊಂಡಿವೆ. ಯುದ್ಧದ ಬಗ್ಗೆ ಮಂಗಳವಾರ ಉಭಯ ದೇಶಗಳು ಉದ್ರೇಕದ ಹೇಳಿಕೆ ನೀಡದೇ ಇರುವುದು ಪೇಟೆಗಳ ಮೇಲೆ ಸಕಾರಾತ್ಮಕ ಪರಿಣಾಮ ಬೀರಿದೆ.

ಚಿನ್ನದ ಬೆಲೆ ಮಂಗಳವಾರ 420 ರು. ಇಳಿಕೆ ಕಂಡಿದೆ. ಪ್ರತಿ 10 ಗ್ರಾಂಗೆ 41,210 ರು. ಬೆಲೆ ದಾಖಲಿಸಿದೆ. ಅಂತೆಯೇ ಬೆಳ್ಳಿ ಬೆಲೆ ಕೆಜಿಗೆ 830 ರು. ಇಳಿದಿದ್ದು, 48,600 ರು.ಗೆ ದಿನದ ವಹಿವಾಟು ಮುಗಿಸಿದೆ.

ಇದೇ ವೇಳೆ, ಡಾಲರ್‌ ಎದುರು ರುಪಾಯಿ ಮೌಲ್ಯ ಕೂಡ 11 ಪೈಸೆ ಏರಿಕೆ ಕಂಡಿದ್ದು, 71.82 ರು.ಗೆ ದಿನಾಂತ್ಯ ಕಂಡಿದೆ.

ಹಟ್ಟಿ ಚಿನ್ನದ ಗಣಿಗೆ 80 ಕೋಟಿ ರು. ಲಾಭ

ಬಾಂಬೆ ಷೇರು ಮಾರುಕಟ್ಟೆ192 ಅಂಕ ಏರಿಕೆ ಕಂಡು 40,869 ರು.ಗೆ ದಿನದ ವಹಿವಾಟು ಮುಗಿಸಿತು, ರಾಷ್ಟ್ರೀಯ ಷೇರುಪೇಟೆ ನಿಫ್ಟಿ 59.90 ಅಂಕ ಏರಿ 12,052.95ಕ್ಕೆ ದಿನಾಂತ್ಯ ಕಂಡಿತು.

ಜಿಡಿಪಿ ಶೇ.5ಕ್ಕೆ ಇಳಿದು 11 ವರ್ಷದ ಕನಿಷ್ಠ ಸಾಧ್ಯತೆ

ಆರ್ಥಿಕ ಕುಸಿತದ ಭೀತಿಯ ನಡುವೆಯೇ, ‘ಜಿಡಿಪಿ ಪ್ರಗತಿ ದರ 2019-20ನೇ ಸಾಲಿನನಲ್ಲಿ ಶೇ.5ಕ್ಕೆ ಇಳಿಯಬಹುದು’ ಎಂದು ಸರ್ಕಾರಿ ಅಂಕಿ-ಅಂಶಗಳು ಹೇಳಿವೆ. ಇದು ನಿಜವಾದರೆ ಜಿಡಿಪಿ 11 ವರ್ಷದ ಕನಿಷ್ಠಕ್ಕೆ ಕುಸಿಯಲಿದೆ. ಉತ್ಪಾದನಾ ವಲಯ ಹಾಗೂ ನಿರ್ಮಾಣ ವಲಯದ ಮಂದಗತಿಯೇ ಇದಕ್ಕೆ ಕಾರಣ.

2008-09ರಲ್ಲಿ ಜಿಡಿಪಿ ಬೆಳವಣಿಗೆ ದರ ಶೇ.3.1ಕ್ಕೆ ಕುಸಿದಿತ್ತು. ಇದಾದ ಬಳಿಕದ ಅತಿ ಕನಿಷ್ಠವೆಂದರೆ ಶೇ.5 ಆಗಲಿದೆ. ಫೆ.1ರಂದು ಮಂಡಿಸಲಾಗುವ ಕೇಂದ್ರ ಬಜೆಟ್‌ ಹಿನ್ನೆಲೆಯಲ್ಲಿ ಈ ಅಂಕಿ-ಅಂಶಗಳಿಗೆ ಮಹತ್ವ ಬಂದಿದೆ.

ರಾಷ್ಟ್ರೀಯ ಸಾಂಖ್ಯಿಕ ಕಚೇರಿ ಈ ವಿತ್ತೀಯ ವರ್ಷದ ಮುಂದಿನ ಅಂದಾಜನ್ನು ಬಿಡುಗಡೆ ಮಾಡಿದ್ದು, ಉತ್ಪಾದನಾ ವಲಯ ಶೇ.2ರಷ್ಟುಕುಸಿಯಲಿದೆ. ಕಳೆದ ವರ್ಷ ಶೇ.6.9ರ ಪ್ರಗತಿ ದರದಲ್ಲಿ ಉತ್ಪಾದನಾ ವಲಯ ಬೆಳವಣಿಗೆ ಕಂಡಿತ್ತು.

ಜಿಡಿಪಿ ಮೊದಲ ತ್ರೈಮಾಸಿಕದಲ್ಲಿ ಶೇ.5ರಷ್ಟುಪ್ರಗತಿ ಕಂಡಿದ್ದರೆ ನಂತರದ ತ್ರೈಮಾಸಿಕದಲ್ಲಿ ಶೇ.4.5ಕ್ಕೆ ಕುಸಿದಿತ್ತು.

ಚಿನ್ನದ ಬೆಲೆ ಲೆಕ್ಕ ಹಾಕೋದ್ಹೇಗೆ?