8 ವರ್ಷಗಳ ನಂತರ ಪೆಟ್ರೋಲ್‌, ಡೀಸೆಲ್‌ ಮಾರಾಟ ಮಾಡುವ ಡೀಲರ್‌ಗಳ ಕಮೀಷನ್‌ ಏರಿಕೆ

ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಪೆಟ್ರೋಲ್ ಬಂಕ್ ಮಾಲೀಕರಿಗೆ ನೀಡುವ ಕಮೀಷನ್ ದರವನ್ನು ಹೆಚ್ಚಿಸಿವೆ. ಪ್ರತಿ ಲೀಟರ್ ಪೆಟ್ರೋಲ್ ಮೇಲೆ 65 ಪೈಸೆ ಮತ್ತು ಡೀಸೆಲ್ ಮೇಲೆ 44 ಪೈಸೆ ಹೆಚ್ಚಳವಾಗಿದ್ದು, ಗ್ರಾಹಕರಿಗೆ ಇಂಧನ ದರದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.

After 8 years commission of dealers selling petrol diesel increased san

ಬೆಂಗಳೂರು (ಅ.30): ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು, ಪೆಟ್ರೋಲ್‌ ಬಂಕ್‌ ಮಾಲೀಕರಿಗೆ ಪೆಟ್ರೋಲ್‌, ಡೀಸೆಲ್‌ ಮಾರಾಟಕ್ಕೆ ನೀಡುತ್ತಿದ್ದ ಕಮೀಷನ್‌ ದರ ಏರಿಕೆ ಮಾಡಿ ದೀಪಾವಳಿ ಖುಷಿ ನೀಡಿದೆ. ಇದರ ಹೊರತಾಗಿಯೂ ಗ್ರಾಹಕರಿಗೆ ವಿತರಣೆ ಮಾಡುವ ಪೆಟ್ರೋಲ್‌ ಹಾಗೂ ಡೀಸೆಲ್‌ ದರದಲ್ಲಿ ಯಾವುದೇ ಬದಲಾವಣೆ ಆಗೋದಿಲ್ಲ. ಹಿಂದಿನಂತೆಯೇ ಮುಂದುವರಿಯಲಿದೆ. ಅದರಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ.ತೈಲ ಕಂಪನಿಗಳ ನಿರ್ಧಾರದ ಅನ್ವಯ ಪ್ರತಿ ಲೀಟರ್ ಪೆಟ್ರೋಲ್‌ ಮೇಲಿನ ಕಮೀಷನ್‌ಅನ್ನು 65 ಪೈಸೆ, ಡೀಸೆಲ್‌ ಮೇಲಿನ ಕಮೀಷನ್‌ ಅನ್ನು 44 ಪೈಸೆ ಹೆಚ್ಚಿಸಲಾಗಿದ್ದು, ಅಕ್ಟೋಬರ್‌ 30 ರಿಂದಲೇ ಇದು ಜಾರಿಗೆ ಬರಲಿದೆ. ಆದರೆ, ಚಿಲ್ಲರೆ ಇಂಧನ ಮಾರಾಟದ ಮೇಲೆ ಈ ಬೆಲೆ ಏರಿಕೆ ಯಾವುದೇ ಪರಿಣಾಮ ಬೀರೋದಿಲ್ಲ ಎಂದು ಭಾರತೀಯ ತೈಲ ನಿಗಮ ತಿಳಿಸಿದೆ.

ಅದರೊಂದಿಗೆ ಒಟ್ಟು 8 ವರ್ಷದ ಬಳಿಕ ಡೀಲರ್‌ಗಳ ಕಮೀಷನ್‌ಅನ್ನು ಏರಿಕೆ ಮಾಡಿದಂತಾಗಿದೆ.ಪ್ರಸ್ತುತ ಡೀಲರ್‌ಗಳಿಗೆ ಪ್ರತಿ ಕಿಲೋಲೀಟರ್‌ ಪೆಟ್ರೋಲ್‌ಗೆ (1 ಕಿಲೋಲೀಟರ್‌ ಎಂದರೆ 1 ಸಾವಿರ ಲೀಟರ್‌ ಇಂಧನ) 1868.14 ರೂಪಾಯಿ ಕಮೀಷನ್‌ ಸಿಗುತ್ತಿದ್ದರೆ, ಡೀಸೆಲ್‌ನ ಪ್ರತಿ ಕಿಲೋಲೀಟರ್‌ಗೆ 1389.35 ರೂಪಾಯಿ ಕಮೀಷನ್‌ ಸಿಗುತ್ತಿತ್ತು.

ವ್ಯವಹಾರವೇ ಇಲ್ಲ, ಹಾಗಿದ್ರೂ ಕೆಲ ತಿಂಗಳ ಹಿಂದೆ ಈ ಕಂಪನಿಯಲ್ಲಿ 1 ಲಕ್ಷ ಹಾಕಿದ್ರೆ ಈಗಾಗ್ತಿತ್ತು 670 ಕೋಟಿ!

ಒಡಿಶಾ, ಛತ್ತೀಸ್‌ಗಢ ಮತ್ತು ಹಿಮಾಚಲ ಪ್ರದೇಶದಂತಹ ರಾಜ್ಯಗಳಲ್ಲಿ ಹಲವಾರು ಸ್ಥಳಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳಲ್ಲಿ ಬೆಲೆಗಳನ್ನು ಇಳಿಕೆ ಮಾಡಲಾಗಿದೆ. ಈ ರಾಜ್ಯದಲ್ಲಿನ ಇಂಧನ ಸರಕು ಸಾಗಣೆಯನ್ನು ತರ್ಕಬದ್ಧ ಮಾಡಿದ ಬೆನ್ನಲ್ಲಿಯೇ ಕ್ರಮ ಕೈಗೊಳ್ಳಲಾಗಿದೆ. ಇದರಿಂದಾಗಿ ಒಡಿಶಾದ ಮಲ್ಕಾನ್‌ಗಿರಿಯ ಕುನನ್‌ಪಲ್ಲಿ ಮತ್ತು ಕಲಿಮೆಲಾದಲ್ಲಿ ಪೆಟ್ರೋಲ್ ಬೆಲೆ ಕ್ರಮವಾಗಿ 4.69 ಮತ್ತು 4.55 ರೂ. ಮತ್ತು ಡೀಸೆಲ್ ದರಗಳು ಕ್ರಮವಾಗಿ 4.45 ಮತ್ತು 4.32 ರೂಪಾಯಿ ಇಳಿಕೆಯಾಗಿದೆ. ಅದೇ ರೀತಿ, ಛತ್ತೀಸ್‌ಗಢದ ಸುಕ್ಮಾದಲ್ಲಿ ಪೆಟ್ರೋಲ್ ಬೆಲೆಯಲ್ಲಿ 2.09 ರೂ ಮತ್ತು ಡೀಸೆಲ್ ಬೆಲೆಯಲ್ಲಿ 2.02 ರೂ ಇಳಿಕೆಯಾಗಲಿದೆ. ರಾಜ್ಯದ ಬಿಜಾಪುರ, ಬೈಲಾಡಿಲಾ, ಕಾಟೇಕಲ್ಯಾಣ, ಬಾಚೇಲಿ ಮತ್ತು ದಾಂತೇವಾಡದಲ್ಲೂ ದರ ಕಡಿತವಾಗಲಿದೆ.

ಅ.29 ರಂದು ದೇಶದಲ್ಲಿ 22 ಸಾವಿರ ಕೋಟಿ ಮೊತ್ತದ ಚಿನ್ನ-ಬೆಳ್ಳಿ ಸೇಲ್‌!

ಅರುಣಾಚಲ ಪ್ರದೇಶ, ಹಿಮಾಚಲ ಪ್ರದೇಶ, ಉತ್ತರಾಖಂಡ ಮತ್ತು ಮಿಜೋರಾಂನಲ್ಲಿ ಹಲವಾರು ಸ್ಥಳಗಳಲ್ಲಿ ಬೆಲೆಗಳನ್ನು ಕಡಿತಗೊಳಿಸಲಾಗುವುದು. "ಡೀಲರ್ ಕಮಿಷನ್ ಹೆಚ್ಚಳವು ದೇಶದಲ್ಲಿನ ನಮ್ಮ ಇಂಧನ ಚಿಲ್ಲರೆ ಮಾರಾಟ ಮಳಿಗೆಗಳಿಗೆ ಪ್ರತಿದಿನ ಭೇಟಿ ನೀಡುವ ಸರಿಸುಮಾರು 7 ಕೋಟಿ ನಾಗರಿಕರಿಗೆ ಇಂಧನ ಬೆಲೆಗಳನ್ನು ಹೆಚ್ಚಿಸದೆ ಉತ್ತಮ ಸೇವೆಗಳನ್ನು ಒದಗಿಸುತ್ತದೆ" ಎಂದು ಪೆಟ್ರೋಲಿಯಂ ಸಚಿವ ಹರ್ದೀಪ್‌ ಸಿಂಗ್‌ಪುರಿ ತಿಳಿಸಿದ್ದಾರೆ.


 

Latest Videos
Follow Us:
Download App:
  • android
  • ios