ನವದೆಹಲಿ[ಜು.22]: ಒಂದುವರೆ ವರ್ಷದ ಹಿಂದಷ್ಟೇ ಆರಂಭವಾದ ಆದಿತ್ಯ ಬಿರ್ಲಾ ಐಡಿಯಾ ಒಡೆತನದ ಪಾವತಿ ಬ್ಯಾಂಕ್‌ ಲಿ. ಸೇವೆಯನ್ನು ಅನಿರೀಕ್ಷಿತ ಬೆಳವಣಿಗೆಯಲ್ಲಿ ಬಂದ್‌ ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ.

ಕಳೆದ ಕೆಲ ದಿನಗಳಲ್ಲಿ ಪಾವತಿ ಬ್ಯಾಂಕ್‌ಗಳು ಸೇವೆ ಸ್ಥಗಿತಗೊಳಿಸುತ್ತಿರುವ 4ನೇ ಉದಾಹರಣ ಇದಾಗಿದೆ. ಪಾವತಿ ಬ್ಯಾಂಕಿಂಗ್‌ ವಲಯದಲ್ಲಿನ ಅನಿರೀಕ್ಷಿತ ಬೆಳವಣಿಗೆಗಳು, ಉದ್ಯಮವನ್ನು ಲಾಭದಾಯಕವಲ್ಲದ ಸ್ಥಿತಿಗೆ ತಲುಪಿಸಿದೆ. ಹೀಗಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಂಸ್ಥೆ ಹೇಳಿದೆ.

2015ರಲ್ಲಿ 11 ಸಂಸ್ಥೆಗಳಿಗೆ ಆರ್‌ಬಿಐ ಪಾವತಿ ಬ್ಯಾಂಕಿಂಗ್‌ ಲೈಸೆನ್ಸ್‌ ನೀಡಿತ್ತು. ಸೇವಾವಧಿಯಲ್ಲಿ 20 ಕೋಟಿ ಠೇವಣಿ ಸಂಗ್ರಹಿಸಿದ್ದ ಬ್ಯಾಂಕ್‌, 24 ಕೋಟಿ ನಷ್ಟಅನುಭವಿಸಿತ್ತು.