Asianet Suvarna News Asianet Suvarna News

UIDAI ಹೊಸ ಯೋಚನೆ, ಆಧಾರ್ ಜೊತೆ ಜನನ, ಮರಣ ದಾಖಲೆಗಳು ಲಿಂಕ್ !

2010ರಲ್ಲಿ ಪ್ರಾರಂಭ ಮಾಡಲಾಗಿದ್ದ ಆಧಾರ್, ವಿಶ್ವದ ಅತೀದೊಡ್ಡ ಬಯೋಮೆಟ್ರಿಕ್ ಗುರುತಿನ ಡೇಟಾಬೇಸ್ ಎಂದು ಹೇಳಲಾಗಿದೆ. ಈಗಾಗಲೇ ಭಾರತದ ಎಲ್ಲಾ ವಯಸ್ಕರು ಅಧಾರ್ ಕಾರ್ಡ್‌ಗಳನ್ನು ಹೊಂದಿದ್ದಾರೆ.
 

Aadhaar will soon cover entire lifecycle data UIDAI Plans to link birth death data san
Author
Bengaluru, First Published Jun 15, 2022, 8:08 PM IST | Last Updated Jun 15, 2022, 8:08 PM IST

ನವದೆಹಲಿ (ಜೂನ್ 15): ಒಬ್ಬ ವ್ಯಕ್ತಿಯ ಸಂಪೂರ್ಣ ದಾಖಲೆಗಳನ್ನು ಹೊಂದಿರುವ ಏಕೈಕ ಕಾರ್ಡ್ ಆಗಿ ಆಧಾರ್ ಕಾರ್ಡ್ ದಿನೇ ದಿನೇ ಬದಲಾಗುತ್ತಿದೆ. ಒಬ್ಬ ವ್ಯಕ್ತಿಯ ಇಡೀ ಜೀವನಚಕ್ರವನ್ನು ದಾಖಲು ಮಾಡುವ ಪ್ರಯತ್ನವನ್ನು (cover entire lifecycle data) ಯುನಿಕ್ ಐಡೆಂಟಿಫಿಕೇಶನ್ ಅಥಾರಿಟಿ ಆಫ್ ಇಂಡಿಯಾ (UIDAI) ಮಾಡುತ್ತಿದೆ. ಅದರಂತೆ ಇನ್ನು ಮುಂದೆ ಜನನ (Birth) ಹಾಗೂ ಮರಣ (Death) ದಾಖಲೆಗಳನ್ನೂ ಆಧಾರ್ ಕಾರ್ಡ್ ಗೆ (Aadhaar Card) ಲಿಂಕ್ ಮಾಡುವ ವಗ್ಗೆ ವರದಿಯಾಗಿದೆ.

ವರದಿಯ ವರದಿಯ ಪ್ರಕಾರ, ಭಾರತದಲ್ಲಿನ ಎಲ್ಲಾ ಆಧಾರ್-ಸಂಬಂಧಿತ ಸೇವೆಗಳನ್ನು ನಿರ್ವಹಿಸುವ ಜವಾಬ್ದಾರಿ ಹೊಂದಿರುವ ಶಾಸನಬದ್ಧ ಸಂಸ್ಥೆಯಾದ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ), ಹುಟ್ಟಿನಿಂದ ಸಾವಿನ ಡೇಟಾವನ್ನು ನಾಗರಿಕರ 12-ಅಂಕಿಯ ಆಧಾರ್ ಸಂಖ್ಯೆಗೆ ಲಿಂಕ್ ಮಾಡುವ ಎರಡು ಪ್ರಾಯೋಗಿಕ ಕಾರ್ಯಕ್ರಮಗಳನ್ನು ಪ್ರಾರಂಭಿಸಲು ತಯಾರಿ ನಡೆಸುತ್ತಿದೆ. 

ನವಜಾತ ಶಿಶುಗಳಿಗೆ (Newbornss) ತಾತ್ಕಾಲಿಕ ಆಧಾರ್ ಸಂಖ್ಯೆಯನ್ನು ನೀಡಲು ಯುಐಡಿಎಐ ಯೋಜಿಸಿದೆ ಎಂದು ವರದಿ ಹೇಳಿದೆ. ಅವರು ವಯಸ್ಕರಾದ ಬಳಿಕ, ಬಯೋಮೆಟ್ರಿಕ್ ಡೇಟಾದೊಂದಿಗೆ (biometric data) ಆಧಾರ್ ಸಂಖ್ಯೆಯನ್ನು ನವೀಕರಿಸಲಾಗುತ್ತದೆ ಎಂದು ಉನ್ನತ ಅಧಿಕಾರಿಗಳು ತಿಳಿಸಿದ್ದಾರೆ.

ವ್ಯಕ್ತಿಯ ಸಂಪೂರ್ಣ ಜೀವನಚಕ್ರದ ಡೇಟಾವನ್ನು ಆಧಾರ್‌ಗೆ ಲಿಂಕ್ ಮಾಡುವ ಹಿಂದಿನ ಉದ್ದೇಶವು ದುರುಪಯೋಗವನ್ನು ಸರಿಪಡಿಸುವುದು ಮತ್ತು ದೇಶಾದ್ಯಂತ ಅದರ ವ್ಯಾಪ್ತಿಯನ್ನು ಹೆಚ್ಚಿಸುವುದು. ಜನನದಿಂದ ಮರಣದ ದತ್ತಾಂಶವನ್ನು ಸಂಯೋಜಿಸುವುದರಿಂದ ಕಲ್ಯಾಣ ಯೋಜನೆಗಳ ದುರುಪಯೋಗವನ್ನು ತಡೆಯಬಹುದು ಮತ್ತು ಸಾಮಾಜಿಕ ಭದ್ರತಾ ಜಾಲದಿಂದ ಯಾರೂ ಹೊರಗುಳಿಯುವುದಿಲ್ಲ ಎಂದು ಸರ್ಕಾರ ಹೇಳಿದೆ.

2010 ರಲ್ಲಿ ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಅವರು ಆಧಾರ್ ಅನ್ನು ಪ್ರಾರಂಭಿಸಿದರು. ಪ್ರಪಂಚದ ಅತಿ ದೊಡ್ಡ ಬಯೋಮೆಟ್ರಿಕ್ ಐಡೆಂಟಿಟಿ ಡೇಟಾಬೇಸ್ ಎಂದು ಹೇಳಲಾಗಿದ್ದು, ಇದು ಭಾರತದ ಬಹುತೇಕ ಎಲ್ಲಾ ವಯಸ್ಕ ಜನಸಂಖ್ಯೆಯನ್ನು ಈಗಾಗಲೇ ತನ್ನ ಡೇಟಾಬೇಸ್ ನಲ್ಲಿ ದಾಖಲಿಸಿಕೊಂಡಿದೆ.

ಹಿಂದುಳಿದ ವರ್ಗವನ್ನು ಸಾಮಾಜಿಕ ಭದ್ರತೆಯ ಅಡಿಯಲ್ಲಿ ತರಲು ಮೋದಿ ಸರ್ಕಾರವು ಆಧಾರ್ ಅನ್ನು ವ್ಯಾಪಕವಾಗಿ ಬಳಸಿದೆ. ಕಳೆದ ಎಂಟು ವರ್ಷಗಳಲ್ಲಿ, ವ್ಯವಸ್ಥೆಯಲ್ಲಿನ ಸೋರಿಕೆಯನ್ನು ಸರಿ ಮಾಡಲು ಮತ್ತು ಬಡವರು, ರೈತರು ಮತ್ತು ಇತರರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಹಣವನ್ನು ವರ್ಗಾಯಿಸಲು ಆಧಾರ್ ಸಹಾಯ ಮಾಡಿದೆ ಎಂದು ಸರ್ಕಾರ ಹೇಳಿಕೊಂಡಿದೆ.

ಪ್ಯಾನ್-ಆಧಾರ್ ಲಿಂಕ್ ಮಾಡಲು ಪ್ರಯತ್ನಿಸುತ್ತಿದ್ದೀರಾ? ದಂಡ ಪಾವತಿಸೋದು ಹೇಗೆ, ಎಲ್ಲಿ ಗೊತ್ತಾಗ್ತ ಇಲ್ವಾ? ಇಲ್ಲಿದೆ ಮಾಹಿತಿ

ಆಧಾರ್ ಪಾನ್ ಕಾರ್ಡ್ ಲಿಂಕ್: ಈಗಾಗಲೇ ದೇಶಾದ್ಯಂತ ಆಧಾರ್ ಹಾಗೂ ಪಾನ್ ಕಾರ್ಡ್ ಲಿಂಕ್ ಅನ್ನುಬಹುತೇಕವಾಗಿ ಕೇಂದದ್ರ ಸರ್ಕಾರ ಮಾಡಿ ಮುಗಿಸಿದೆ. ಆಧಾರ್ ನೊಂದಿಗೆ  (Aadhar) ಪ್ಯಾನ್ ಕಾರ್ಡ್ (PAN Card) ಲಿಂಕ್   ಮಾಡಲು  2022ರ ಏಪ್ರಿಲ್  1ರ ಬಳಿಕ 500ರೂ. ದಂಡ ವಿಧಿಸಲಾಗುವುದು ಎಂದು ನೇರ ತೆರಿಗೆಗಳ ಕೇಂದ್ರೀಯ ಮಂಡಳಿ  ಈ ಹಿಂದೆಯೇ ತಿಳಿಸಿತ್ತು. ಆದ್ರೆ ಜುಲೈ 1ರ ಬಳಿಕ ಈ ಕೆಲ್ಸ ಮಾಡಲು 500ರೂ. ಅಲ್ಲ 1000ರೂ. ದಂಡ  ಪಾವತಿಸಬೇಕಾಗುತ್ತದೆ ಎಂದು ಕೂಡ ಸಿಬಿಡಿಟಿ ತಿಳಿಸಿದೆ.

ಕೊನೆಗೂ SSLC ಟಾಪರ್‌ಗೆ ಸಿಕ್ತು ಆಧಾರ್ ಕಾರ್ಡ್, ಬಸವಲೀಲಾಗೆ 'ಆಧಾರ'ವಾದ ಕೊಪ್ಪಳ ಜಿಲ್ಲಾಡಳಿತ

ಕೇಂದ್ರ ಸರ್ಕಾರ ಪ್ಯಾನ್ -ಆಧಾರ್ ಜೋಡಣೆ ಅಂತಿಮ ಗಡುವನ್ನು  2023ರ ಮಾರ್ಚ್ 31ರ ತನಕ ವಿಸ್ತರಿಸಿದೆ. ಈ ಹಿಂದೆ ಈ ವರ್ಷದ ಮಾರ್ಚ್ 31ರ ತನಕ ಗಡುವು ನೀಡಲಾಗಿತ್ತು. ಆದ್ರೆ ಈ ವರ್ಷದ ಏಪ್ರಿಲ್ 1ರಿಂದ ತೆರಿಗೆದಾರರು ಆಧಾರ್-ಪ್ಯಾನ್ ಜೋಡಣೆಗೆ ದಂಡ ಪಾವತಿಸಬೇಕಿದೆ. ಈ ಸಿಬಿಡಿಟಿ  ಹೊರಡಿಸಿರುವ ಸುತ್ತೋಲೆಯಲ್ಲಿ 2022 ರ ಏಪ್ರಿಲ್ 1ರಿಂದ ಜೂನ್ 30ರ ತನಕ ತೆರಿಗೆದಾರರು ಆಧಾರ್ ಜೊತೆ ಪ್ಯಾನ್ ಲಿಂಕ್ ಮಾಡಿದ್ರೆ  500ರೂ. ವಿಳಂಬ ಶುಲ್ಕ  ಪಾವತಿಸಬೇಕು. ಇನ್ನು ಜುಲೈ 1ರ ಬಳಿಕ ಆಧಾರ್-ಪ್ಯಾನ್ ಜೋಡಣೆಗೆ  1000 ರೂ. ದಂಡ ಪಾವತಿಸಬೇಕು ಎಂದು ಪ್ರಕಟಣೆಯಲ್ಲಿ ಹೇಳಿದೆ.

Latest Videos
Follow Us:
Download App:
  • android
  • ios