ವಿಶ್ವದ ಅತಿದೊಡ್ಡ ಫಾಸ್ಪೇಟ್ ನಿಕ್ಷೇಪ ಪತ್ತೆಯಾಗಿದ್ದು, ಇದರ ಮೌಲ್ಯ ₹1,01,67,492 ಮಿಲಿಯನ್ ಎಂದು ಅಂದಾಜಿಸಲಾಗಿದೆ. ಈ ನಿಕ್ಷೇಪವು ಹಸಿರು ತಂತ್ರಜ್ಞಾನಕ್ಕೆ ಮಹತ್ವದ್ದಾಗಿದೆ. 

ನವದೆಹಲಿ: ಅತಿದೊಡ್ಡ ಜಾಕ್‌ಪಾಟ್ ದೇಶವೊಂದಕ್ಕೆ ಲಭ್ಯವಾಗಿದೆ. ಈ ಜಾಕ್‌ಪಾಟ್ ಮೌಲ್ಯ ಕೇಳಿ ಇಡೀ ಜಗತ್ತು ಹೈರಾಣು ಆಗಿದೆ. ಅಮೆರಿಕಾ, ಚೀನಾ, ಜಪಾನ್, ಭಾರತಕ್ಕೆ ಈ ಜಾಕ್‌ಪಾಟ್ ಸಿಕ್ಕಿಲ್ಲ. ಯುರೋಪಿಯನ್ ರಾಷ್ಟ್ರವಾಗಿರುವ ನಾರ್ವೆಗೆ (Norway, European Country) ಜಗತ್ತಿನ ಅತಿದೊಡ್ಡ ಜಾಕ್‌ಪಾಟ್ ಲಭ್ಯವಾಗಿದೆ. ವರದಿಗಳ ಪ್ರಕಾರ, ದಕ್ಷಿಣ ನಾರ್ವೆಯಲ್ಲಿ ವಿಶ್ವದ ಅತಿದೊಡ್ಡದಾದ ಫಾಸ್ಪೇಟ್‌ ನಿಕ್ಷೇಪಗಳು (Phosphate Reserve) ಪತ್ತೆಯಾಗಿವೆ. ಈ ನಿಕ್ಷೇಪಗಳ ಮೌಲ್ಯ 1,01,67,492 ಮಿಲಿಯನ್ ರೂಪಾಯಿ ಎಂದು ಹೇಳಲಾಗುತ್ತಿದೆ. ಈ ಫಾಸ್ಟೇಪ್ ನಿಕ್ಷೇಪ ಭವಿಷ್ಯದಲ್ಲಿ ಹಸಿರು ತಂತ್ರಜ್ಞಾನಕ್ಕೆ (Green Technology) ಬಳಕೆಯಾಗಲಿದೆ ಎಂದು ಅಂದಾಜಿಸಲಾಗುತ್ತಿದೆ.

ಒಟ್ಟು 70 ಬಿಲಿಯನ್ ಟನ್ ಫಾಸ್ಟೇಟ್ ನಾರ್ವೆ (Norway) ದೇಶದಲ್ಲಿ ಪತ್ತೆಯಾಗಿದೆ. ಈ ಹೊಸ ನಿಕ್ಷೇಪಗಳಿಂದಾಗಿ ನಾರ್ವೆಯಲ್ಲಿ ವಿದ್ಯುತ್ ಚಾಲಿತ ವಾಹನಗಳ ಬ್ಯಾಟರಿ, ಸೌರ ಫಲಕಗಳ ನಿರ್ಮಾಣ, ರಸಗೊಬ್ಬರಗಳಲ್ಲಿ ಬಳಕೆ ಮಾಡಲಾಗುವ ಅಯಾನ್‌ ಪೂರೈಕೆಯಲ್ಲಿ ಯಾವುದೇ ಕೊರತೆಯನ್ನು ಅನುಭವಿಸಲ್ಲ. ಈ ವರ್ಷದ ಆರಂಭದಲ್ಲಿ ನಾರ್ಜ್ ಮೈನಿಂಗ್ ಹೆಸರಿನ ಕಂಪನಿ ಅತಿದೊಡ್ಡದಾದ ಫಾಸ್ಪೇಟ್ ನಿಕ್ಷೇಪವನ್ನು ಪತ್ತೆ ಮಾಡಿತ್ತು.

ನೈಸರ್ಗಿಕ ಸಂಪನ್ಮೂಲಗಳ ಕೊರತೆಯನ್ನು ಅನುಭವಿಸುತ್ತಿರುವ ಯುರೋಪ್ ಖಂಡಕ್ಕೆ ಫಾಸ್ಪೇಟ್‌ನ ಅವಿಷ್ಕಾರ ನಿಟ್ಟುಸಿರು ಬಿಡುವಂತೆ ಮಾಡಿದೆ. ಈ ಅವಿಷ್ಕಾರ ಹೆಚ್ಚಿನ ಮಹತ್ವವನ್ನು ಹೊಂದಿದೆ. ಫಾಸ್ಪೇಟ್ ವಿಷಯದಲ್ಲಿ ಯುರೋಪ್ ಸ್ವಾವಲಂಬಿಯಾಗಲಿದೆ ಎಂದು ಹೇಳಲಾಗುತ್ತಿದೆ. ಸ್ವಾವಲಂಬಿಯಾಗುತ್ತಾ ಯುರೋಪ್ ಮತ್ತಷ್ಟು ಅವಿಷ್ಕಾರವನ್ನು ನಡೆಸುತ್ತಿದೆ.

ಇದನ್ನೂ ಓದಿ: ಮನೆಯಲ್ಲೇ 1kg ಈ ಬೆಳೆ ಬೆಳೆಯಿರಿ; 50 ಗ್ರಾಂ ಚಿನ್ನ ಖರೀದಿ ಮಾಡೋವಷ್ಟು ದುಡ್ಡು ಮಾಡಿ! ಸಿಂಪಲ್‌ ವಿಧಾನಗಳಿವು

ಫಾಸ್ಪೇಟ್ ಏಕೆ ಮುಖ್ಯ?
ಯುರೋನ್ಯೂಸ್ ವರದಿ ಪ್ರಕಾರ, 2018ರಲ್ಲಿಯೇ ನಾರ್ವೆಯ ನೈಋತ್ಯ ಪ್ರದೇಶದಲ್ಲಿ ಫಾಸ್ಪೇಟ್ ನಿಕ್ಷೇಪವನ್ನು ಪತ್ತೆ ಮಾಡಲಾಗಿತ್ತು. ಇತ್ತೀಚೆಗೆ ಕಂಪನಿ, ಈ ನಿಕ್ಷೇಪ ಸುಮಾರು 70 ಬಿಲಿಯನ್ ಟನ್ ಫಾಸ್ಪೇಟ್ ಹೊಂದಿದೆ ಎಂದು ಹೇಳಿಕೆಯನ್ನು ಬಿಡುಗಡೆ ಮಾಡಿದೆ. ಈ ಹೇಳಿಕೆ ಬಳಿಕ ಯುರೋಪ್ ರಾಷ್ಟ್ರ ಮುಂದಿನ 50 ವರ್ಷಗಳವರೆಗೆ ಫಾಸ್ಟೇಟ್‌ನಲ್ಲಿ ಸ್ವಾವಲಂಬಿಯಾಗಲಿದ್ದು, ಯಾವುದೇ ಕೊರತೆ ಉಂಟಾಗಲ್ಲ ಎಂದು ಅಂದಾಜಿಸಲಾಗಿದೆ. ಹಾಗಾಗಿ ಇದನ್ನು ಜಾಕ್‌ಪಾಟ್ ಎಂದು ಕರೆಯಲಾಗುತ್ತಿದೆ. ಫಾಸ್ಪೇಟ್ ಇಂದು ಅನೇಕ ಉತ್ಪನ್ನಗಳಲ್ಲಿ ಬಳಕೆಯಾಗುತ್ತಿದೆ. ಫಾಸ್ಪೇಟ್ ಬಳಕೆ ಹಸಿರು ತಂತ್ರಜ್ಞಾನದ ಉತ್ಪಾದನೆಗೆ ಉತ್ತೇಜನ ನೀಡಲಿದೆ. 

ವಿದ್ಯುತ್ ವಾಹನಗಳಲ್ಲಿ ಬಳಸುವ ಬ್ಯಾಟರಿಗಳ ಉತ್ಪಾದನೆಯಿಂದ ಹಿಡಿದು ಸೌರ ಫಲಕಗಳು ಮತ್ತು ಸಸ್ಯಗಳಿಗೆ ಗೊಬ್ಬರಗಳವರೆಗೆ, ಇದನ್ನು ಹಲವು ಪ್ರಮುಖ ಉದ್ದೇಶಗಳಿಗಾಗಿ ಬಳಸಲಾಗುತ್ತದೆ. ಜಗತ್ತು ಈಗ ಸುಸ್ಥಿರ ಇಂಧನದತ್ತ ಸಾಗುತ್ತಿರುವುದರಿಂದ, ಫಾಸ್ಪೇಟ್ ಬಳಕೆಯ ಪ್ರಾಮುಖ್ಯತೆ ಇನ್ನಷ್ಟು ಹೆಚ್ಚಾಗಿದೆ. 

ಈ ನಿಕ್ಷೇಪದ ಆವಿಷ್ಕಾರದೊಂದಿಗೆ ನಾರ್ವೆ ಈಗ ಚೀನಾ, ಮೊರಾಕೊ ಮತ್ತು ರಷ್ಯಾದಂತಹ ದೇಶಗಳೊಂದಿಗೆ ಸ್ಪರ್ಧಿಸಲು ಸಿದ್ಧವಾಗಿದೆ ಏಕೆಂದರೆ ಇಲ್ಲಿಯವರೆಗೆ ಯುರೋಪ್ ಫಾಸ್ಫೇಟ್ ಪೂರೈಕೆಗಾಗಿ ಈ ದೇಶಗಳ ಮೇಲೆ ಅವಲಂಬಿತವಾಗಿತ್ತು. ಉಕ್ರೇನ್‌ನಲ್ಲಿ ಯುದ್ಧ ಪ್ರಾರಂಭವಾದಾಗಲೆಲ್ಲಾ ಪೂರೈಕೆಯಲ್ಲಿ ಕೆಲವು ಅಥವಾ ಇತರ ಅಡಚಣೆಗಳು ಉಂಟಾದಾಗ, ಫಾಸ್ಫೇಟ್ ಪೂರೈಕೆಯ ಮೇಲೆ ಪರಿಣಾಮ ಬೀರಿತ್ತು. ಈ ಸಮಯದಲ್ಲಿ ಫಾಸ್ಪೇಟ್‌ಗಾಗಿ ಯುರೋಪ ತೀವ್ರ ಹುಡುಕಾಟವನ್ನು ನಡೆಸಿತ್ತು. ರಷ್ಯಾ ಮತ್ತು ಉಕ್ರೇನ್ ನಡುವೆ ಯುದ್ಧದ ತೀವ್ರತೆ ಹೆಚ್ಚಾದಾಗ ಯುರೋಪ್ ಪರ್ಯಾಯ ಮೂಲಗಳನ್ನು ಹುಡುಕಿತ್ತು. ಇದೀಗ ಫಾಸ್ಟೇಟ್‌ನಲ್ಲಿ ಯುರೋಪ್ ಸ್ವಾವಲಂಬನೆಯನ್ನು ಸಾಧಿಸಲಿದೆ.

ಇದನ್ನೂ ಓದಿ: 8889 ಕೋಟಿ ರೂಪಾಯಿ ಡೀಲ್‌, ಜಪಾನ್‌ನ SMBC ಕಂಪನಿಗೆ Yes Bank ಷೇರು ಮಾರಲಿರುವ SBI