Asianet Suvarna News Asianet Suvarna News

‘ಟಿಕ್‌ ಟಾಕ್‌’ ಸಂಸ್ಥಾಪಕ 6 ವರ್ಷದಲ್ಲಿ 6 ಲಕ್ಷ ಕೋಟಿ ಒಡೆಯ!

ಆ ಯುವಕ ಆರೇ ವರ್ಷದಲ್ಲಿ ಬರೋಬ್ಬರಿ 5.4 ಲಕ್ಷ ಕೋಟಿ ರು. ಮೌಲ್ಯದ, ವಿಶ್ವದಲ್ಲೇ ಅತ್ಯಂತ ಬೆಲೆಬಾಳುವ ಸ್ಟಾರ್ಟ್‌ಅಪ್‌ ಕಂಪನಿ ಒಡೆಯನಾಗಿದ್ದಾನೆ. ಈತ ಸ್ಥಾಪಿಸಿರುವ ಕಂಪನಿ, ವಿಶ್ವಾದ್ಯಂತ ಕ್ಯಾಬ್‌ ಸೇವೆ ಒದಗಿಸುತ್ತಿರುವ ಉಬರ್‌ ಅನ್ನೇ ಮೌಲ್ಯದಲ್ಲಿ ಹಿಂದಿಕ್ಕಿದೆ.

35 Year Old Unknown Creates the Worlds Most Valuable Startup
Author
Bengaluru, First Published Oct 1, 2018, 12:16 PM IST
  • Facebook
  • Twitter
  • Whatsapp

ಬೀಜಿಂಗ್‌: ಕೃತಕ ಬುದ್ಧಿಮತ್ತೆಯಿಂದ ಕೆಲಸ ಮಾಡುವ ಮೊಬೈಲ್‌ ಆ್ಯಪ್‌ ಅಭಿವೃದ್ಧಿಪಡಿಸುತ್ತೇನೆ ಎಂದು ಆ ಯುವಕ ತೀರ್ಮಾನಿಸಿದಾಗ, ಬಂಡವಾಳ ತೊಡಗಿಸಲು ಮುಂದಾಗಿದ್ದ ಕಂಪನಿಗಳು ಈತನ ಯಶಸ್ಸಿನ ಬಗ್ಗೆ ಅನುಮಾನಪಟ್ಟಿದ್ದವು. ಹಣ ಹೂಡಲು ಮರು ಯೋಚನೆ ಮಾಡಿದ್ದವು. ಆದರೆ ಈಗ ಆ ಯುವಕ ಆರೇ ವರ್ಷದಲ್ಲಿ ಬರೋಬ್ಬರಿ 5.4 ಲಕ್ಷ ಕೋಟಿ ರು. ಮೌಲ್ಯದ, ವಿಶ್ವದಲ್ಲೇ ಅತ್ಯಂತ ಬೆಲೆಬಾಳುವ ಸ್ಟಾರ್ಟ್‌ಅಪ್‌ ಕಂಪನಿ ಒಡೆಯನಾಗಿದ್ದಾನೆ. ಈತ ಸ್ಥಾಪಿಸಿರುವ ಕಂಪನಿ, ವಿಶ್ವಾದ್ಯಂತ ಕ್ಯಾಬ್‌ ಸೇವೆ ಒದಗಿಸುತ್ತಿರುವ ಉಬರ್‌ ಅನ್ನೇ ಮೌಲ್ಯದಲ್ಲಿ ಹಿಂದಿಕ್ಕಿದೆ.

ಹೆಸರು- ಝಾಂಗ್‌ ಯಿಮಿಂಗ್‌. ಈತನ ಕಂಪನಿ- ಬೈಟ್‌ಡ್ಯಾನ್ಸ್‌.

ಸುದ್ದಿ ಹಾಗೂ ವಿಡಿಯೋ ವಿನಿಮಯ ಸೇವೆ ಒದಗಿಸುವ ಹಲವು ಆ್ಯಪ್‌ಗಳನ್ನು ಬೈಟ್‌ಡಾನ್ಸ್‌ ಚೀನಾ ಹಾಗೂ ಮತ್ತಿತರ ದೇಶಗಳಲ್ಲಿ ಒದಗಿಸುತ್ತಿದೆ. ಭಾರತದಲ್ಲಿ ಈ ಕಂಪನಿಯ ‘ಟಿಕ್‌ಟಾಕ್‌’ ಎಂಬ ಆ್ಯಪ್‌ ಡಬ್‌ ಸ್ಮಾಶ್ ನಿಂದ ಭಾರಿ ಜನಪ್ರಿಯವಾಗಿದೆ. ಜನರಿಗೆ ಯಾವುದರಲ್ಲಿ ಆಸಕ್ತಿ ಇದೆಯೋ ಆ ಸುದ್ದಿಗಳನ್ನು ಅವರಿಗೆ ಕಳುಹಿಸಲೆಂದೇ ಚೀನಾದಲ್ಲಿ ಪ್ರತ್ಯೇಕ ಆ್ಯಪ್‌ ಅನ್ನು ಈ ಕಂಪನಿ ಹೊಂದಿದ್ದು, ಅದು ಭರ್ಜರಿ ಯಶಸ್ಸು ಕಂಡಿದೆ.

ಆರು ವರ್ಷಗಳ ಹಿಂದೆ 29 ವರ್ಷದವರಾಗಿದ್ದ ಝಾಂಗ್‌ ಯಿಮಿಂಗ್‌ ಅವರು ಸ್ಥಳೀಯವಾಗಿ ತರಬೇತಿ ಪಡೆದ ಸಾಫ್ಟ್‌ವೇರ್‌ ಎಂಜಿನಿಯರ್‌ ಆಗಿದ್ದರು. ಸುದ್ದಿಗೆ ಸಂಬಂಧಿಸಿದ, ಕೃತಕ ಬುದ್ಧಿಮತ್ತೆ ಆಧರಿತ ಸ್ಟಾರ್ಟಪ್‌ ಆರಂಭಿಸಲು ಅವರು ಯೋಚಿಸಿದಾಗ, ಗೂಗಲ್‌ ಕಂಪನಿಯೇ ಲಾಭ ಗಿಟ್ಟಿಸುತ್ತಿಲ್ಲ. ಇನ್ನು ಈತ ಏನು ಮಾಡಿಯಾನು ಎಂಬ ಅನುಮಾನಗಳು ವ್ಯಕ್ತವಾಗಿದ್ದವು. ಆದರೆ ಆರೇ ವರ್ಷದಲ್ಲಿ ಝಾಂಗ್‌ ಕಂಪನಿ 5.4 ಲಕ್ಷ ಕೋಟಿ ರು. ಮೌಲ್ಯ ಗಳಿಸಿದೆ. ಜಪಾನಿನ ಸಾಫ್ಟ್‌ಬ್ಯಾಂಕ್‌ 10800 ಕೋಟಿ ರು. ಬಂಡವಾಳ ಹೂಡಲು ಮುಂದಾಗಿದೆ.

Follow Us:
Download App:
  • android
  • ios