Union Budget 2022 ಮೊಬೈಲ್ ಉತ್ಪಾದನೆಯಲ್ಲಿ ಭಾರತ 2ನೇ ಅತೀದೊಡ್ಡ ದೇಶ, ಮೇಕ್ ಇಂಡಿಯಾ ಶ್ಲಾಘಿಸಿದ ರಾಷ್ಟ್ರಪತಿ!

  • ಕೇಂದ್ರ ಬಜೆಟ್ ಅಧಿವೇಶನದಲ್ಲಿ ರಾಷ್ಟ್ರಪತಿ ಭಾಷಣ
  • ಮೊಬೈಲ್ ತಯಾರಿಕೆಯಲ್ಲಿ ಅತೀ ದೊಡ್ಡ 2ನೇ ದೇಶ
  • ಮೇಕ್ ಇನ್ ಇಂಡಿಯಾದಿಂದ ಭಾರತದ ಹೊಸ ಹೆಜ್ಜೆ
     
Union Budget 2022 India emerged 2nd largest Mobile manufacturer in world says President Kovind ckm

ನವದೆಹಲಿ(ಜ.31): ಕೇಂದ್ರ ಬಜೆಟ್ ಅಧಿವೇಶನ(Union Budget Session) ಆರಂಭಗೊಂಡಿದೆ. ಫೆಬ್ರವರಿ 1 ರಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್(Nirmala sitharaman) ಮುಂದಿನ ಆರ್ಥಿಕ ವರ್ಷಕ ಆಯವ್ಯಯ ಬಜೆಟ್(Budget 2022) ಮಂಡಿಸಲಿದ್ದಾರೆ. ಇದಕ್ಕೂ ಮುನ್ನ ನಡೆದ ಬಜೆಟ್ ಅಧಿವೇಶನದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಭಾರತದ ಪ್ರಗತಿ ಹಾಗೂ ಆರ್ಥಿಕ ಬೆಳವಣಿಯಲ್ಲಿನ ಸರ್ಕಾರದ ಕ್ರಮಗಳನ್ನು ಕೊಂಡಿದ್ದಾರೆ. ಇದೇ ವೇಳೆ ಮೇಕ್ ಇನ್ ಇಂಡಿಯಾ(Make In India) ಯೋಜನೆ ಹೊಸ ಭಾರತ ನಿರ್ಮಾಣಕ್ಕೆ ಕಾರಣವಾಗಿದೆ. ಪರಿಣಾಮ ಭಾರತ ಇಂದು ವಿಶ್ವದಲ್ಲಿ ಎರಡನೇ ಅತೀ ದೊಡ್ಡ ಮೊಬೈಲ್ ತಯಾರ ದೇಶವಾಗಿ ಹೊರಹೊಮ್ಮಿದೆ ಎಂದು ರಾಮನಾಥ್ ಕೋವಿಂದ್ ಹೇಳಿದ್ದಾರೆ.

ರಾಮನಾಥ್ ಕೋವಿಂದ್ ತಮ್ಮ ಭಾಷಣದಲ್ಲಿ ಕೇಂದ್ರ ಸರ್ಕಾರದ ಸತತ ಪ್ರಯತ್ನ ಹಾಗೂ ಹೊಸ ಯೋಜನೆ ಮೇಕ್ ಇನ್ ಇಂಡಿಯಾದಿಂದ ದೇಶ ಹೊಸ ದಿಕ್ಕಿನಲ್ಲಿ ಸಾಗುತ್ತಿದೆ ಎಂದರು. ಮೇಕ್ ಇನ್ ಇಂಡಿಯಾದಿಂದ ಭಾರತ  ಉತ್ಪಾದನಾ ವಲಯಕ್ಕೆ ಹೊಸ ಚೈತನ್ಯ ಸಿಕ್ಕಿದೆ. ಇದರಿಂದ ವಿದೇಶಿ ಕಂಪನಿಗಳು ಭಾರತದಲ್ಲಿ ಘಟಕ ಸ್ಥಾಪಿಸಿ ಮೇಕ್ ಇನ್ ಇಂಡಿಯಾ ಮೂಲಕ ಉತ್ಪನ್ನಗಳನ್ನು ಉತ್ಪಾದಿಸುತ್ತಿದೆ. ಇಷ್ಟೇ ಅಲ್ಲ ವಿದೇಶಕ್ಕೂ ರಫ್ತು ಮಾಡಲಾಗುತ್ತಿದೆ ಎಂದು ರಾಷ್ಟ್ರಪತಿ ಹೇಳಿದರು. ಇದರಲ್ಲಿ ಮೊಬೈಲ್ ಉತ್ಪಾದನೆ(manufacturer of mobile) ದೇಶದ ಮೇಕ್ ಇನ್ ಇಂಡಿಯಾಗೆ ಹಿಡಿದ ಕನ್ನಡಿಯಾಗಿದೆ ಎಂದು ರಾಮನಾಥ್ ಕೋವಿಂದ್ ಹೇಳಿದ್ದಾರೆ(President Ram Nath Kovind)

Union Budget 2022 ಆರ್ಥಿಕ ಸಮೀಕ್ಷೆಯಲ್ಲಿ ಶೇ.8.5 ಜಿಡಿಪಿ ಪ್ರಗತಿ ಸೂಚಿಸಿದ ಬೆನ್ನಲ್ಲೇ ಷೇರು ಸೂಚ್ಯಂಕ 1,000 ಅಂಕ ಏರಿಕೆ!

ರಾಷ್ಟ್ರಪತಿ ತಮ್ಮ ಭಾಷದಲ್ಲಿ ಉಲ್ಲೇಖಿಸಿದಂತೆ ಭಾರತ ಇತರ ಎಲ್ಲಾ ದೇಶಗಳನ್ನು ಹಿಂದಿಕ್ಕಿ ಮೇಕ್ ಇನ್ ಇಂಡಿಯಾದಲ್ಲಿ ಹೊಸ ದಾಖಲೆ ಬರೆಯುತ್ತಿದೆ. ಅದರಲ್ಲೂ 2014ರಲ್ಲಿ ಅಂದರೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಅಧಿಕಾರಕ್ಕೇರಿದಾಗ ದೇಶದಲ್ಲಿ ಕೇವಲ 2 ಮೊಬೈಲ್ ಉತ್ಪಾದನೆ ಘಟಕಗಳಿದ್ದವು. 2021ರ ವೇಳೆ ಭಾರತದಲ್ಲಿ 200 ಮೊಬೈಲ್ ಉತ್ಪಾದನೆ ಘಟಕಗಳು ಕಾರ್ಯನಿರ್ವಹಿಸುತ್ತಿದೆ.

2014-15ರ ಸಾಲಿನಲ್ಲಿ ಭಾರತದಲ್ಲಿ ಮೊಬೈಲ್ ಉತ್ಪಾದನೆ 6 ಕೋಟಿ. 2020-21ರಲ್ಲಿ ಭಾರತ ಸರಿಸುಮಾರು 30 ಕೋಟಿ ಮೊಬೈಲ್ ಉತ್ಪಾದನೆ ಮಾಡುತ್ತಿದೆ, ವಿದೇಶಕ್ಕೂ ರಫ್ತು ಮಾಡುತ್ತಿದೆ. ಈ ಸಂಖ್ಯೆ 2026ರ ವೇಳೆ ಗಣನೀಯವಾಗಿ ಏರಿಕೆಯಾಗಲಿದೆ. 2026ರಲ್ಲಿ ಎಲೆಕ್ಟ್ರಾನಿಕ್ಸ್ ವಸ್ತುಗಳ ಉತ್ಪಾದನೆ ಹಾಗೂ ರಫ್ತು ಬರೋಬ್ಬರಿ 300 ಬಿಲಿಯನ್ ಅಮರಿಕನ್ ಡಾಲರ್ ತಲುಪಲಿದೆ ಎಂದು ಅಂಕಿ ಅಂಶ ಹೇಳುತ್ತಿದೆ. ಸದ್ಯ 75 ಬಿಲಿಯನ್ ಅಮೆರಿಕನ್ ಡಾಲರ್ ಮೊತ್ತದಷ್ಟು ಎಲೆಕ್ಟ್ರಾನಿಕ್ ಉತ್ಪನ್ನ ರಫ್ತು ಮಾಡುತ್ತಿದೆ.

Budget Session 11 ಕೋಟಿ ರೈತರಿಗೆ PM ಕಿಸಾನ್, ಜೀವ ಉಳಿಸಿಲು ಲಸಿಕೆ, ಅಭಿವೃದ್ಧಿ ಭಾರತ ಅಭಿನಂದಿಸಿದ ರಾಷ್ಟ್ರಪತಿ!

ಮೊಬೈಲ್ ಉತ್ಪಾದನೆ ಜೊತೆಗೆ ಭಾರತ ಟಿವಿ, ಲ್ಯಾಪ್‌ಟಾಪ್, ಐಟಿ ಹಾರ್ಡ್‌ವೇರ್, LED ಲೈಟ್, ಎಲೆಕ್ಟ್ರಾನಿಕ್ ಕಾಂಪೋನೆಂಟ್ಸ್, ಟೆಲಿಕಾಂ ಉತ್ಪನ್ನಗಳನ್ನು ಭಾರತ ಉತ್ಪಾದನೆಯಾಗುತ್ತಿದೆ. ಮುಂದಿನ 5 ವರ್ಷದಲ್ಲಿ ಭಾರತದಲ್ಲಿನ ದೇಸಿ ಉತ್ಪನ್ನ ಉತ್ಪಾದನೆ 65 ಬಿಲಿಯನ್ ಅಮರಿಕನ್ ಡಾಲರ್ ಮೊತ್ತದಿಂದ 180 ಬಿಲಿಯನ್ ಅಮೆರಿಕ ಡಾಲರ್‌ಗೆ ಏರಿಕೆಯಾಗಲಿದೆ ಎಂದು ಅಂಕಿ ಅಂಶಗಳು ಹೇಳುತ್ತಿದೆ.

 

Union Budget 2022 India emerged 2nd largest Mobile manufacturer in world says President Kovind ckm

ಕೇಂದ್ರ ಬಜೆಟ್ ಅಧಿವೇಶನಕ್ಕೂ ಮುನ್ನ ರಾಷ್ಟ್ರಪತಿ ತಮ್ಮ ಭಾಷಣದಲ್ಲಿ ಭಾರತದ ಈ ಸಾಧನೆಯನ್ನು ಉಲ್ಲೇಖಿಸಿದ್ದಾರೆ. ವಿಶಕ್ಕೆ ಇದೀಗ ಭಾರತ ಮೊಬೈಲ್ ಪೂರೈಕೆ ಮಾಡುತ್ತಿದೆ. ಇಷ್ಟೇ ಅಲ್ಲ ಈಗಾಗಲೇ ಹಲವು ಮೊಬೈಲ್ ಉತ್ಪಾದನೆ ಕಂಪನಿಗಳು ಭಾರತದಲ್ಲಿ ಘಟಕ ಆರಂಭಿಸಲು ಹಣ ಹೂಡಿಕೆ ಮಾಡಿದೆ. ಇದು ಕೇವಲ ಉತ್ಪಾದನೆ ಮಾತ್ರವಲ್ಲ ವಿಪುಲ ಉದ್ಯೋಗವಕಾಶವನ್ನೂ ಸೃಷ್ಟಿಸಿದೆ.
 

Latest Videos
Follow Us:
Download App:
  • android
  • ios