Union Budget 2022 ಬಜೆಟ್ಟಿಗೆ ಬ್ಯಾಂಕ್, ಉದ್ಯಮ, ಮಾರುಕಟ್ಟೆ ದಿಗ್ಗಜರ ಪ್ರತಿಕ್ರಿಯೆ!

  • ಕೇಂದ್ರ ಮಂಡಿಸಿದ ಬಜೆಟ್‌ಗೆ ಉತ್ತಮ ಪ್ರತಿಕ್ರಿಯೆ
  • ಅಭಿವೃದ್ಧಿ ಪೂರಕ ಬಜೆಟ್ ಎಂದ ಉದ್ಯಮ ಕ್ಷೇತ್ರದ ದಿಗ್ಗಜರು
  • ಬಜೆಟ್ ಕುರಿತು ಕೈಗಾರಿಕೆ, ಉದ್ಯಮ ಸೇರಿದಂತೆ ವಿವಿಧ ಕ್ಷೇತ್ರದ ಪ್ರತಿಕ್ರಿಯೆ
     
How banks industry business community reacted to union budget 2022 ckm

ನವದೆಹಲಿ(ಫೆ.01):  ಸಮಸ್ತ ಭಾರತ ಕಾಯುತ್ತಿದ್ದ ಕೇಂದ್ರ ಬಜೆಟ್ 2022 ಮಂಡನೆಯಾಗಿದೆ. ಸಮಗ್ರ ಭಾರತದ ಅಭಿವೃದ್ಧಿ ದೃಷ್ಟಿಯಲ್ಲಿ ಅಳೆದು ತೂಗಿ ಬಜೆಟ್(Union Budget 2022) ತಯಾರಿಸಿ ಮಂಡಿಸಲಾಗಿದೆ. ಎಲ್ಲಾ ಕ್ಷೇತ್ರಗಳನ್ನು ಗಣನೆಗೆ ತೆಗೆದುಕೊಂಡು, ಅಗತ್ಯ ನೆರವಿನ ಕ್ಷೇತ್ರಗಳಿಗೆ ಹೊಸ ಯೋಜನೆ ಮೂಲಕ ಭಾರತದ ಅರ್ಥ ವ್ಯವಸ್ಥೆ ಚೇತರಿಕೆ ನೀಡುವ ಬಜೆಟ್ ಮಂಡಿಸಲಾಗಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್(Nirmala Sitharaman) ಮಂಡಿಸಿದ ಬಜೆಟ್‌ಗೆ ಉದ್ಯಮ, ಬ್ಯಾಂಕಿಂಗ್, ಆರೋಗ್ಯ, ಕೈಗಾರಿಕೋದ್ಯಮಿಗಳು ಸೇರಿದಂತೆ ಹಲವು ಕ್ಷೇತ್ರದ ದಿಗ್ಗಜರು ಉತ್ತಮ ಪ್ರತಿಕ್ರಿಯೆ(Budget Reactions) ನೀಡಿದ್ದಾರೆ.

ದೇಶದ ಪ್ರತಿಷ್ಠಿತ ಉದ್ಯಮ ಕ್ಷೇತ್ರದ ದಿಗ್ಗಜರು, ಕೈಗಾರಿಕೋದ್ಯಮಿಗಳು ಸೇರಿದಂತೆ ಹಲವು ಪ್ರಮುಖರು ಕೇಂದ್ರ ಬಜೆಟ್ ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇವುಗಳ ವಿವರ ಇಲ್ಲಿವೆ.

Madhavan Menon
Managing Director, Thomas Cook (India) Limited

ಕೇಂದ್ರ ಮಂಡಿಸಿದ 2022-23ರ ಬಜೆಟ್ ದೇಶದ ಅಭಿವೃದ್ಧಿ ಮತ್ತು ಹೂಡಿಕೆಯ ದೃಷ್ಟಿಕೋನವನ್ನು ಪ್ರತಿಬಿಂಬಿಸುತ್ತದೆ.  ಹೂಡಿಕೆ ದೇಶದ ಜಿಡಿಪಿ ಮೇಲೆ ನೇರ ಕೊಡುಗೆ ನೀಡಲಿದೆ. ಅದರಲ್ಲೂ ವಿದೇಶಿ ವಿನಿಮಯ ಗಳಿಕೆಗೆ ಉತ್ತೇಜನ ನೀಡುವ ಉದ್ಯೋಗ, ಕೌಶಲ್ಯ ಅಭಿವೃದ್ಧಿ ಯೋಜನೆಗಳು ದೇಶದ ಆರ್ಥಿಕ ಪ್ರಗತಿಗೆ ಕಾರಣವಾಗಲಿದೆ. ಮೂಲಭೂತ ಸೌಕರ್ಯ, ತಂತ್ರಜ್ಞಾನ, ಆರೋಗ್ಯ ಕ್ಷೇತ್ರ, ಕೌಶಲ್ಯ ಅಭಿವೃದ್ಧಿ ಕ್ಷೇತ್ರಗಳಲ್ಲಿ ಈ ಬಜೆಟ್ ಹೊಸ ಅಧ್ಯಾಯ ಬರೆಯಲಿದೆ. ಆದರೆ ಪ್ರಯಾಣ ಹಾಗೂ ಪ್ರವವಾಸೋದ್ಯಮ ಕ್ಷೇತ್ರಕ್ಕೆ ನಿರಾಸೆ ತಂದಿದೆ ಎಂದು ಥಾಮಸ್ ಕುಕ್ ಇಂಡಿಯಾ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕ ಮಾಧವನ್ ಮೆನನ್ ಹೇಳಿದ್ದಾರೆ.

Ajay Srinivasan, 
Chief Executive, Aditya Birla Capital

ಕೇಂದ್ರ ಹಣಕಾಸು ಸಚೆವೆ ಮಂಡಿಸಿದ ಬಜೆಟ್ ಪ್ರಗತಿ ಪರ ಹಾಗೂ ಮುಂದಾಲೋಚನೆ ಬಜೆಟ್ ಆಗಿದೆ. ಸಾಮಾಜಿಕ ಕಲ್ಯಾಣ ಜೊತೆ ದೇಶದ ಅಭಿವೃದ್ಧಿಯನ್ನು ಪ್ರಗತಿಪಥದಲ್ಲಿ ಸಾಗಿಸುವ ಬಜೆಟ್, ಹಣಕಾಸಿನ ವೃದ್ಧಿಗೂ ಸಹಕಾರಿಯಾಗಿದೆ. ಡಿಜಿಟಲ್ ಎಕಾನಮಿ, ಸ್ಟಾರ್ಟ್ಅಪ್ ಸೇರಿದಂತೆ ಹಲವು ಆಧುನಿಕ ಕ್ಷೇತ್ರಗಳನ್ನು ಒಳಗೊಂಡಿದೆ. ಮೂಲಸೌಕರ್ಯದ ಆಧುನೀಕರಣ ಹಾಗೂ ಆರ್ಥಿಕ ಚೇತರಿಕೆ ನೆರವು ನೀಡವು ಬಜೆಟ್ ಆಗಿದೆ ಎಂದು ಆದಿತ್ಯ ಬಿರ್ಲಾ ಕ್ಯಾಪಿಟಲ್ಸ್ ಚೀಫ್ ಎಕ್ಸ್‌ಕ್ಯೂಟೀವ್ ಅಜಯ್ ಶ್ರೀನಿವಾಸನ್ ಹೇಳಿದ್ದಾರೆ.

Rakesh Sharma,
MD & CEO, IDBI Bank

ಇದು ಬೆಳವಣಿಗೆ ಅಧಾರಿತ, ಅಭಿವೃದ್ಧಿಪೂರಕ ಬಜೆಟ್ ಆಗಿದೆ. 9.2 ಶೇಕಡಾ ಆರ್ಥಿಕ ಬೆಳವಣಿಗೆ ಸೂಚಿಸಿರುವ ಈ ಬಜೆಟ್ ಕೊರೋನಾ ನಡುವೆ ಗಮನಾರ್ಹ ಸಾಧನೆಯಾಗಿದೆ. ಕೊರೋನಾದಿಂದ ಸೃಷ್ಟಿಯಾಗಿರುವ ಆರ್ಥಿಕ ಒತ್ತಡ ನಿಭಾಯಿಸಲು ಸಣ್ಣ ವ್ಯವಹಾರಗಳ ಮೇಲಿನ  ECLGS ಮಾರ್ಚ್ 2023 ರವರೆಗೆ ವಿಸ್ತರಣೆ ಸೇರಿದಂತೆ ಹಲವು ಯೋಜನೆ ಘೋಷಿಸಲಾಗಿದೆ.  CGTMSE ಗ್ಯಾರೆಂಟಿ ಕವರ್ ವಿಸ್ತರಣೆ MSME ವರದಾನವಾಗಿದೆ. ಆತ್ಮನಿರ್ಭರ ಭಾರತ ಗುರಿ ಸಾಧಿಸಲು ಬಜೆಟ್ ನೆರವಾಗಲಿದೆ ಎಂದು ಐಡಿಬಿಐ ಬ್ಯಾಂಕ್ ಎಂಡಿ ಹಾಗೂ ಸಿಇಒ ರಾಕೇಶ್ ಶರ್ಮಾ ಹೇಳಿದ್ದಾರೆ.

Vijay Chandok,
MD & CEO, ICICI Securities

ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯುವ ಹಾಗೂ ಭಾರತವನ್ನು ಪರಿವರ್ತಿಸುವ ಬಜೆಟ್ ಇದಾಗಿದೆ. ಆರ್ಥಿಕ ಬೆಳವಣಿಗೆ, 7.5 ಲಕ್ಷ ಕೋಟಿಗಳ ಬಂಡವಾಳ ವೆಚ್ಚದ ಹೊರಹರಿವು, ಉದ್ಯೋಗ ಸೃಷ್ಟಿ ಸೇರಿದಂತೆ ಹಲವು ಪ್ರಗತಿ ನಿರೀಕ್ಷಿಸಲಾಗಿದೆ. ಕೊರೋನಾ ಕಾರಣ ಯೋಜಿತ ವಿತ್ತಿಯ ಕೊರತೆಗಿಂತ ಕಡಿಮೆಯಾಗುವ ಸಾಧ್ಯತೆಯಿದೆ ಎಂದು ಐಸಿಐಸಿ ಸೆಕ್ಯೂರಿಟೀಸ್ ಎಂಡಿ ಹಾಗೂ ಸಿಇಒ ವಿಜಯ್ ಚಂದೋಕ್ ಹೇಳಿದ್ದಾರೆ.

Zarin Daruwala,
Cluster CEO, India and South Asia markets

ಇದು ಭಾರತದ ಬೆಳವಣಿಗೆ ಆಧಾರಿತ ಬಜೆಟ್. ಲಭ್ಯವಿರುವ ಹಣಕಾಸಿನ ಸೂಕ್ತ ಬಳಕೆಯನ್ನು ತೋರಿಸಿದೆ. ಖಾಸಗಿ ವಲಯದ ಹೂಡಿಕೆ ಜೊತೆಗೆ 15 ವರ್ಷಗಳಿಗಿಂತ ಹೆಚ್ಚಿನ ಅವಧಿಯ ಕ್ಯಾಪೆಕ್ಸ್ ಮೇಲೆ ಪರಿಣಾಮ ಬೀರಲಿದೆ. ಸಮಾಜ ಮತ್ತು ಆರ್ಥಿಕತೆಯ ದುರ್ಬಲ ವಿಭಾಗಗಳನ್ನು ಬೆಂಬಲಿಸಿರುವ ಈ ಬಜೆಟ್ ದೇಶದ ಪ್ರಗತಿಗೆ ಪೂರಕವಾಗಿದೆ ಎಂದು ಕ್ಲಸ್ಟರ್ ಸಿಇಒ ಝರಿನ್ ದಾರುವಾಲ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Rajeev Ratan Srivastava,
CEO, Standard Chartered Securities (India) Ltd

ಭಾರತವು ಮ್ಯಾಕ್ರೋ-ಫಂಡಮೆಂಟಲ್ಸ್‌ನಲ್ಲಿ ನಿಂತಿದೆ. ಇದಕ್ಕೆ ಪೂರಕವಾದ ಬಜೆಟ್ ಮಂಡಿಸಲಾಗಿದೆ. ಈ ಬಜೆಟ್ ಬಿಎಫ್‌ಎಸ್‌ಐ, ಕ್ಯಾಪಿಟಲ್ ಗೂಡ್ಸ್, ಸಿಮೆಂಟ್, ಇನ್‌ಫ್ರಾ ಮುಂತಾದ ದೊಡ್ಡ ವಲಯಗಳಿಗೆ  ಚೇತರಿಕೆ ಹಾಗೂ ಅಭಿವೃದ್ಧಿಗೆ ಉತ್ತಮವಾಗಿದೆ ಎಂದು ಸ್ಟಾಂಡರ್ಟ್ ಚಾರ್ಟೆಡ್ ಸೆಕ್ಯೂರಿಟಿಸ್ ಸಿಇಒ ರಜೀವ್ ರತನ್ ಶ್ರೀವತ್ಸವ್ ಹೇಳಿದ್ದಾರೆ.

Anuj Mathur, 
MD and CEO, Canara HSBC OBC Life Insurance

ನಿರ್ಮಲಾ ಸೀತಾರಾಮನ್ ಮುಂದಿನ 25 ವರ್ಷಗಳ ಅಭಿವೃದ್ಧಿಯನ್ನು ಗಮನದಲ್ಲಿಟ್ಟು ಭವಿಷ್ಯದ ಬಜೆಟ್ ಮಂಡಿಸಿದ್ದಾರೆ. ಇನ್ಶೂರೆನ್ಸ್ ವಿಭಾಗಕ್ಕೆ ಯಾವುದೇ ನೇರ ಯೋಜನೆಗಳಿಲ್ಲ. ಆದರೆ ಮೂಲಸೌಕರ್ಯ, ಕೃಷಿ, ಎಂಎಸ್‌ಎಂಇ ಅಭಿವೃದ್ಧಿ, ನಗರ ಯೋಜನೆ, ಆತಿಥ್ಯ ಮತ್ತು ಡಿಜಿಟಲ್ ಪೇಮೆಂಟ್ ಸೇರಿದಂತ  ವಿವಿಧ ಕ್ಷೇತ್ರಗಳಲ್ಲಿ ಕ್ರಮಗಳನ್ನು ಕೈಗೊಳ್ಳಲಾಗಿದೆ. ಬೆಳಣಿಗೆ ಆಧಾರಿತ ಬಜೆಟ್ ಇದಾಗಿದ್ದು ಎಲ್ಲಾ ಕ್ಷೇತ್ರಗಳಿಗೆ ನೆರವು ನೀಡಿದೆ. ತೆರಿಗೆ ವಿನಾಯಿತಿ ಬದಲು ಸರಳೀಕರಣ ಮಾಡಿದೆ. ಇದು ದೀರ್ಘಾವಧಿಯ ಪ್ರಯೋಜನ ಹೊಂದಿದೆ. ಬಂಡವಾಳ ವೆಚ್ಚದಲ್ಲಿ ಗಣನೀಯ ಹೆಚ್ಚಳದ ಪ್ರಸ್ತಾಪ, ಉದ್ಯೋಗವನ್ನು ಸೃಷ್ಟಿಸಲಿದೆ ಎಂದು ಕೆನರಾ ಹೆಚ್ಎಸ್‌ಬಿಸಿ ಲೈಫ್ ಇನ್ಶೂರೆನ್ಸ್ ಎಂಡಿ ಹಾಗೂ ಸಿಇಒ ಅನೂಜ್ ಮಾಥೂರ್ ಹೇಳಿದ್ದಾರೆ.

Dr. Prathap C. Reddy,
Chairman, Apollo Hospitals Group

ಕೊರೋನಾ ಕಾರಣ ದೇಶ ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳ ಪರಿಹಾರಕ್ಕೆ ಕೇಂದ್ರ ಬಜೆಟ್ ಒತ್ತು ನೀಡಿದೆ. ಆರ್ಥಿಕತೆ ಜೊತೆಗೆ ಜನಸಾಮಾನ್ಯರು ಎದುರಿಸುತ್ತಿರುವ ಆರೋಗ್ಯ ಸೇರಿದಂತೆ ಹಲವು ಸಮಸ್ಯೆಗಳಿಗೆ ಉತ್ತರ ನೀಡಿದೆ. ಕೊರೋನಾ ಸಂದರ್ಭದಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಸ್ಟಾರ್ಟ್ಅಪ್ ಕೊಡುಗೆಗಳನ್ನು ನಾವು ನೋಡಿದ್ದೇವೆ. ಆರೋಗ್ಯ ಹಾಗೂ ತಂತ್ರಜ್ಞಾನಕ್ಕೆ ಒತ್ತು ನೀಡಲಾಗಿದೆ. ಆರೋಗ್ಯ ಸೌಲಭ್ಯಗಳ ಡಿಜಿಟಲ್ ದಾಖಲಾತಿ, ಪ್ರತಿ ವ್ಯಕ್ತಿಗೆ ವಿಶಿಷ್ಟ ಆರೋಗ್ಯ ಗುರುತು, ಟೆಲಿ ಮೆಂಟಲ್ ಆರೋಗ್ಯ ಪರಿಹಾರ ಸೇರಿದಂತೆ ಹಲವು ಯೋಜನೆಗಳು ಜನರ ಆರೋಗ್ಯ ಸಮಸ್ಯೆಗಳನ್ನು ಸುಲಭವಾಗಿ ಪರಿಹರಿಸಲು ನೆರವಾಗಲಿದೆ ಎಂದು ಅಪೋಲೋ ಆಸ್ಪತ್ರೆ ಗ್ರೂಪ್ ಮುಖ್ಯಸ್ಥ ಡಾ. ಪ್ರತಾಪ್ ಸಿ ರೆಡ್ಡಿ ಹೇಳಿದ್ದಾರೆ.
 

Latest Videos
Follow Us:
Download App:
  • android
  • ios