Asianet Suvarna News Asianet Suvarna News

ಬೆಂಗಳೂರಿನಲ್ಲಿ ಯಮಹಾ ಬ್ಲೂ ಸ್ಕ್ವಾಯರ್ ಶೋರೂಮ್ ಆರಂಭ!

  • ದಿ ಕಾಲ್ ಆಫ್ ದಿ ಬ್ಲೂ ಅಭಿಯಾನದೊಂದಿಗೆ ಸಕ್ರಿಯ ಅನುಭವ 
  • ಬೆಂಗಳೂರಿನಲ್ಲಿ ಎರಡು ಶೋರೂಂ ತೆರೆದ ಯಮಹಾ
  • ಕರ್ನಾಟಕದಲ್ಲಿ 6 ಮಳಿಗೆಗಳನ್ನು ಹೊಂದಿದ ಖ್ಯಾತಿ
Yamaha strengthen retail footprint in Indian market opened Blue Square Premium Outlet in Bengaluru ckm
Author
Bengaluru, First Published Jul 5, 2022, 9:27 PM IST

ಬೆಂಗಳೂರು(ಜು.03): ಯಮಹಾ ತನ್ನ ಮಾರಾಟ ಜಾಲ ವಿಸ್ತರಿಸುತ್ತಿದೆ. ವಿಶೇಷವಾಗಿ ಬೆಂಗಳೂರಿನಲ್ಲಿ ಯಮಹಾ ಗ್ರಾಹಕರ ಸಂಖ್ಯೆ ಹೆಚ್ಚಾಗಿದೆ. ಜೊತೆಗೆ ಬೇಡಿಕೆಯೂ ಹೆಚ್ಚಾಗುತ್ತಿದೆ. ಹೀಗಾಗಿ ಯಮಹಾ ಬೆಂಗಳೂರಿನಲ್ಲಿ ಹೊಸ ಎರಡು ಪ್ರಿಮಿಯಂ ಮಳಿಗೆ ಆರಂಭಿಸಿದೆ. ದಿ ಕಾಲ್ ಆಫ್ ದಿ ಬ್ಲೂ ಅಭಿಯಾನದೊಂದಿಗೆ ಬ್ಲೂ ಸ್ಕ್ವಾಯರ್ ಮಳಿಗೆ ಆರಂಭಗೊಂಡಿದೆ. 

ವೈಟ್‌ಫೀಲ್ಡ್ ಮೋಟರ್ಸ್’ ಬ್ಯಾನರ್ ಅಡಿಯಲ್ಲಿ ಪ್ರಾರಂಭವಾಗಿರುವ ಮೊದಲ ಶೋರೂಂ  ಮಹದೇವಪುರದಲ್ಲಿದ.  ಎರಡನೆಯ ಶೋರೂಂ `ಗೀತಾ ಮೋಟರ್ಸ್’ ಬ್ಯಾನರ್ ಅಡಿಯಲ್ಲಿ ನೆಲಮಂಗಲದಲ್ಲಿ 1600 ಚದರ ಅಡಿ ವಿಸ್ತೀರ್ಣದಲ್ಲಿ ಪ್ರಾರಂಭಿಸಲಾಗಿದೆ.  ಎರಡೂ `ಬ್ಲೂ ಸ್ಕ್ವಯರ್’ ಶೋರೂಂಗಳು 3ಎಸ್ ಸೌಲಭ್ಯಗಳನ್ನು ಒದಗಿಸುತ್ತಿದ್ದು ಅದರಲ್ಲಿ ಸಮಗ್ರ ಮಾರಾಟ, ಸೇವೆ ಮತ್ತು ಬಿಡಿಭಾಗಗಳ ಬೆಂಬಲ ಹೊಂದಿವೆ; ಮತ್ತು ಉತ್ಸಾಹ, ಸ್ಟೈಲ್ ಮತ್ತು ಕ್ರೀಡಾತನದ ಯಮಾಹಾದ ರೇಸಿಂಗ್ ಡಿಎನ್‌ಎ ಮೈವೆತ್ತಿವೆ.

 

ಬೆಂಗಳೂರಿನಲ್ಲಿ ಯಮಹಾ ಕಾಲ್ ಆಫ್ ದಿ ಬ್ಲೂ ವೀಕೆಂಡ್ ಕಾರ್ಯಕ್ರಮ!

ಯಮಾಹಾದ `ಬ್ಲೂ ಸ್ಕ್ವಯರ್’ ಶೋರೂಂಗಳನ್ನು ಸಮುದಾಯದ ಭಾವನೆ ಮೂಡಿಸಲು ವಿನ್ಯಾಸಗೊಳಿಸಲಾಗಿದ್ದು ಗ್ರಾಹಕರಿಗೆ ಬ್ರಾಂಡ್‌ನ ತತ್ವಗಳೊಂದಿಗೆ ಸಂಪರ್ಕ ಹೊಂದಲು ಸ್ಥಳಾವಕಾಶ ಸೃಷ್ಟಿಸುತ್ತದೆ. `ಬ್ಲೂ ಸ್ಕ್ವಯರ್’ ಅನ್ನು ಬ್ರಾಂಡ್‌ನ ರೇಸಿಂಗ್ ಡಿಎನ್‌ಎಯ ಲಕ್ಷಣವನ್ನು ತೋರಿಸುವ ಜಾಗತಿಕ ಮೋಟಾರ್‌ಸ್ಪೋರ್ಟ್ಸ್ ಪರಂಪರೆಯನ್ನು ವ್ಯಾಖ್ಯಾನಿಲು ವಿನ್ಯಾಸಗೊಳಿಸಲಾಗಿದ್ದು `ನೀಲಿ’ ಬ್ರಾಂಡ್‌ನ ರೇಸಿಂಗ್ ಡಿಎನ್‌ಎ ಪ್ರತಿನಿಧಿಸಿದರೆ `ಚೌಕ’ವು ಯಮಾಹಾ ವಿಶ್ವಕ್ಕೆ ಪ್ರವೇಶವನ್ನು ವ್ಯಾಖ್ಯಾನಿಸುತ್ತದೆ. ‘ಬ್ಲೂ ಸ್ಕ್ವಯರ್’ ಮಳಿಗೆಯು ಯಮಾಹಾದ ರೇಸಿಂಗ್ ಡಿಎನ್‌ಎಯನ್ನು ಮಳಿಗೆಯ ಹೊರಾಂಗಣದ ಪೋರ್ಟಿಕೊಗಳಲ್ಲಿ ಮತ್ತು ಬ್ಲೂ-ಥೀಮ್ಡ್ ಇಂಟೀರಿಯರ್‌ನಲ್ಲಿ ದೃಶ್ಯ ಮತ್ತು ಪ್ರದರ್ಶಕ ಹೊರಾವರಣದಲ್ಲಿ ತಂದಿದೆ.

ದಿ ಕಾಲ್ ಆಫ್ ದಿ ಬ್ಲೂ’ ಬ್ರಾಂಡ್ ಅಭಿಯಾನದ ಭಾಗವಾಗಿ ಯಮಾಹಾ ಬೆಂಗಳೂರಿನಲ್ಲಿ 2 ಹೊಸ ಬ್ಲೂ ಸ್ಕ್ವಯರ್ ಶೋರೂಂಗಳನ್ನು ಪ್ರಾರಂಭಿಸಲು ಬಹಳ ಉತ್ಸುಕವಾಗಿದೆ. ಕರ್ನಾಟಕ ಮಾರುಕಟ್ಟೆಯು ಯಮಾಹಾಗೆ ಅತ್ಯಂತ ಮುಖ್ಯವಾಗಿದೆ ಮತ್ತು ಈ ಪ್ರೀಮಿಯಂ ಮಳಿಗೆಗಳು ಈ ಪ್ರದೇಶದಲ್ಲಿ ಸದೃಢ ರೀಟೇಲ್ ಜಾಲ ನಿರ್ಮಿಸಲು ಅವಕಾಶ ಕಲ್ಪಿಸಲಿವೆ. ಈ ಬ್ಲೂ ಸ್ಕ್ವಯರ್ ಶೋರೂಂಗಳ ಮೂಲಕ ನಾವು ಪ್ರತಿಯೊಬ್ಬ ಗ್ರಾಹಕರೂ ಅಂತಾರಾಷ್ಟ್ರೀಯ ಮೋಟಾರ್‌ ಸ್ಪೋರ್ಟ್ಸ್ ನಲ್ಲಿ  ಯಮಾಹಾದ ಶ್ರೀಮಂತ ಪರಂಪರೆಯಲ್ಲಿ ಸೇರಿರುವ ಭಾವನೆ ಹೊಂದಲು ಬಯಸಿದ್ದೇವೆ. ಈ ಪ್ರೀಮಿಯಂ ಮಳಿಗೆಗಳು ಗ್ರಾಹಕರಿಗೆ ಬ್ರಾಂಡ್‌ನೊಂದಿಗೆ ಸಂವಹನ ನಡೆಸಲು, ಉತ್ಪನ್ನ ಮಾಹಿತಿ ಪಡೆಯಲು ಮತ್ತು ಯಮಾಹಾ ಅಕ್ಸೆಸರಿಗಳು ಮತ್ತು ಅಪೇರೆಲ್‌ಗಳ ಶ್ರೇಣಿಯನ್ನು ಪರೀಕ್ಷಿಸುವ ಮೂಲಕ ಅವರಿಗೆ ವಿಶಿಷ್ಟ ಖರೀದಿ ಮತ್ತು ಮಾಲೀಕತ್ವ ಅನುಭವ ನೀಡುತ್ತವೆ ಎಂದು ಯಮಾಹಾ ಮೋಟಾರ್ ಇಂಡಿಯಾ ಕಂಪನಿಗಳ ಸಮೂಹದ ಅಧ್ಯಕ್ಷ ಐಶಿನ್ ಚಿಹಾನಾ ಹೇಳಿದ್ದಾರೆ.

Upcoming Scooter ಪೈಪೋಟಿ ಸಜ್ಜಾದ ಯಮಹಾ , ಶೀಘ್ರದಲ್ಲೇ ಎಲೆಕ್ಟ್ರಿಕ್ ಸ್ಕೂಟರ್ ಲಾಂಚ್!

ಹೊಸದಾಗಿ ಪ್ರಾರಂಭವಾದ ಮಳಿಗೆಗಳಿಂದ ಯಮಾಹಾ ಪ್ರಸ್ತುತ ಬೆಂಗಳೂರಿನಲ್ಲಿ 3 ಬ್ಲೂ ಸ್ಕ್ವಯರ್ ಶೋರೂಂಗಳನ್ನು ಹೊಂದಿದ್ದು ಕರ್ನಾಟಕದಲ್ಲಿ 6 ಮಳಿಗೆಗಳನ್ನು ಹೊಂದಿದೆ. ಭಾರತದಾದ್ಯಂತ 70 ಮಳಿಗೆಗಳಿದ್ದು ತಮಿಳುನಾಡು, ಕರ್ನಾಟಕ, ಪಶ್ಚಿಮ ಬಂಗಾಳ, ಜಾರ್ಖಂಡ, ಒಡಿಶಾ, ಅಸ್ಸಾಂ, ಮಧ್ಯಪ್ರದೇಶ, ತೆಲಂಗಾಣ, ಆಂಧ್ರ ಪ್ರದೇಶ, ಮಹಾರಾಷ್ಟ್ರ, ಜಮ್ಮು ಮತ್ತು ಕಾಶ್ಮೀರ, ಛತ್ತೀಸಗಢ, ಬಿಹಾರ, ದೆಹಲಿ ಮತ್ತು ಇತರೆ ಈಶಾನ್ಯ ರಾಜ್ಯಗಳಲ್ಲಿ ಶೋರೂಂಗಳನ್ನು ಹೊಂದಿದೆ.

Follow Us:
Download App:
  • android
  • ios