Asianet Suvarna News Asianet Suvarna News

ಹಬ್ಬದ ಪ್ರಯುಕ್ತ ಯಮಹಾ ಸ್ಕೂಟರ್ ಮೇಲೆ ಭರ್ಜರಿ ಆಫರ್!

  • ಹಬ್ಬದ ಕಾರಣ ಯಮಹಾ ದ್ವಿಚಕ್ರ ವಾಹನಕ್ಕೆ ರಿಯಾಯಿತಿ ಸೇರಿ ಹಲವು ಕೊಡುಗೆ
  • ಸೆಪ್ಟೆಂಬರ್ ತಿಂಗಳ ಆಫರ್ ಘೋಷಿಸಿದ ಯಮಹಾ ಇಂಡಿಯಾ
  • ಯಮಹಾ ಆಫರ್ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ
Yamaha Motor India announced special offers during festive season in September 2021 ckm
Author
Bengaluru, First Published Sep 11, 2021, 3:58 PM IST
  • Facebook
  • Twitter
  • Whatsapp

ನವದೆಹಲಿ(ಸೆ.11): ಯಮಹಾ ಮೋಟಾರ್ ಇಂಡಿಯಾ ಹಬ್ಬದ ಪ್ರಯುಕ್ತ ವಿಶೇಷ ಆಫರ್ ಘೋಷಿಸಿದೆ. ಈ ಆಫರ್ ಸೆಪ್ಟೆಂಬರ್ ತಿಂಗಳಿಗೆ ಮಾತ್ರ ಅನ್ವಯವಾಗಲಿದೆ. ಯಮಹಾ ಯಾವುದೇ ಸ್ಕೂಟರ್ ಖರೀದಿಸುವ ಗ್ರಾಹಕರಿಗೆ ಆಫರ್ ಲಭ್ಯವಿದೆ. ಪ್ರತಿ ಸ್ಕೂಟರ್‌ಗೆ ವಿಶೇಷ ಕೊಡುಗೆ ನೀಡಲಾಗಿದೆ.

ಹೊಸ ರೂಪ, ಹಲವು ಬದಲಾವಣೆ; ಭಾರತದಲ್ಲಿ ಬಿಡುಗಡೆಯಾಗುತ್ತಿದೆ 1980ರ ದಶಕದ LML ಸ್ಕೂಟರ್!

ಯಮಹಾ ಫಾಸಿನೋ 125 Fi ಹೈಬ್ರಿಡ್, ಯಮಹಾ ರೇZಡ್ಆರ್ 125 Fi ಹೈಬ್ರಿಡ್, ಯಮಹಾ ರೇZಡ್ಆರ್ ಸ್ಟ್ರೀಟ್ ರ್ಯಾಲಿ 125 Fi ಮತ್ತು ಯಮಹಾ ಫಾಸಿನೋ 125 Fi ಹೈಬ್ರಿಡ್ ಸ್ಕೂಟರ್ ಮೇಲೆ ವಿಶೇಷ ಆಫರ್ ಘೋಷಿಸಲಾಗಿದೆ.  ದೇಶದ ಎಲ್ಲಾ ರಾಜ್ಯಗಳಲ್ಲಿ ಈ ಕೊಡುಗೆ ಇರಲಿದೆ. ಸೆಪ್ಟೆಂಬರ್ 30ಕ್ಕೆ ವಿಶೇಷ ಆಫರ್ ಅಂತ್ಯವಾಗಲಿದೆ.

ಯಮಹಾ ಫಾಸಿನೋ 125 Fi ಹೈಬ್ರಿಡ್(ನಾನ್ ಹೈಬ್ರಿಡ್) ಹಾಗೂ ಯಮಹಾ ರೇZR Fi (ನಾನ್ ಹೈಬ್ರಿಡ್) ಸ್ಕೂಟರ್‌ಗೆ 3,876 ರೂಪಾಯಿ ವಿಮೆ ಸೌಲಭ್ಯ ಅಥವಾ ಕೇವಲ 999 ರೂಪಾಯಿ ಡೌನ್‌ಪೇಮೆಂಟ್ ಸೌಲಭ್ಯ ಘೋಷಿಸಲಾಗಿದೆ. ಇದರ ಜೊತೆಗೆ ಸ್ಕ್ರಾಚ್ ಕಾರ್ಡ್ ಲಭ್ಯವಿದ್ದು 2,999 ರೂಪಾಯಿ ಗಿಫ್ಟ್ ಗೆಲ್ಲುವ ಅವಕಾಶವಿದೆ. ಈ ಆಫರ್ ತಮಿಳುನಾಡಿನಲ್ಲಿ ಲಭ್ಯವಿಲ್ಲ. 

ಓಲಾ ಕಂಪನಿಯ ಬಹು ನಿರೀಕ್ಷಿತ ಎಲೆಕ್ಟ್ರಿಕ್‌ ಸ್ಕೂಟರ್‌ ಬಿಡುಗಡೆ

ಯಮಹಾ ಇಂಡಿಯಾ 5,000 ರೂಪಾಯಿ ಕ್ಯಾಶ್‌ಬ್ಯಾಕ್ ಅಥವಾ 999 ರೂಪಾಯಿ ಅಥವಾ ಎಕ್ಸ್‌ಚೇಂಜ್ ಬೆನಿಫಿಟ್ 6,000 ರೂಪಾಯಿ ಆಫರ್ ನೀಡಲಾಗಿದೆ. 

ಕೊರೋನಾ ವೈರಸ್ ಹೊಡೆತದಿಂದ ಚೇತರಿಸಿಕೊಂಡಿರುವ ಭಾರತದ ಆಟೋಮೊಬೈಲ್ ಕ್ಷೇತ್ರ ಇದೀಗ ಹಬ್ಬದ ಸೀಸನ್‌ಗೆ ಭರ್ಜರಿ ಆಫರ್ ನೀಡುವ ಪ್ರಕ್ರಿಯೆ ಮತ್ತೆ ಚಾಲನೆಗೆ ಬಂದಿದೆ. ಯಮಹಾ ಹಬ್ಬದ ಆಫರ್ ಘೋಷಿಸಿದ್ದರೆ, ಇದೀಗ ಇತರ ಕೆಲ ಆಟೋಮೊಬೈಲ್ ಕಂಪನಿಗಳು ತಮ್ಮ ವಾಹನಗಳ ಮೇಲೆ ಭರ್ಜರಿ ಡಿಸ್ಕೌಂಟ್ ಆಫರ್ ನೀಡಲು ಮುಂದಾಗಿದೆ. ಈ ಮೂಲಕ ಹಬ್ಬದ ಸೀಸನ್‌ನಲ್ಲಿ ಮಾರಾಟ ಹೆಚ್ಚಿಸಿಕೊಳ್ಳಲು ಮುಂದಾಗಿದೆ.

Follow Us:
Download App:
  • android
  • ios