ಹೊಸ ರೂಪ, ಹಲವು ಬದಲಾವಣೆ; ಭಾರತದಲ್ಲಿ ಬಿಡುಗಡೆಯಾಗುತ್ತಿದೆ 1980ರ ದಶಕದ LML ಸ್ಕೂಟರ್!

  • 1972ರಿಂದ 1980, 1985ರಲ್ಲಿ ಭಾರತದಲ್ಲಿ ಸಂಚಲನ ಮೂಡಿಸಿದ್ದ LML ಸ್ಕೂಟರ್
  • ಮತ್ತೆ ಬಿಡುಗಡೆಯಾಗುತ್ತಿದೆ ರೆಟ್ರೋ ಸ್ಕೂಟರ್, ಹಲವು ಬದಲಾವಣೆ
  • ಎಲೆಕ್ಟ್ರಿಕ್ ಸ್ಕೂಟರ್ ಮೂಲಕ  LML ಭಾರತಕ್ಕೆ ಕಮ್‌ಬ್ಯಾಕ್
Iconic LML brand  decided to re enter Indian two wheeler market with electric scooter ckm

ನವದೆಹಲಿ(ಸೆ.08): ದಶಕಗಳ ಹಿಂದೆ ಭಾರತದಲ್ಲಿ ಮೋಡಿ ಮಾಡಿದ್ದ ಹಲವು ವಾಹನಗಳು ಹೊಸ ರೂಪದಲ್ಲಿ ಬಿಡುಗಡೆಯಾಗಿದೆ. ಜೊತೆಗೆ ದಾಖಲೆ ಬರೆದಿದೆ. ಮಹೀಂದ್ರ ಜೊತೆಗೂಡಿ ಬಂದ ಜಾವಾ, ಚೇತಕ್‌ಗಗೆ ಹೊಸ ಸ್ಪರ್ಶ ನೀಡಿದ ಬಜಾಜ್ ಸೇರಿದಂತೆ ಹಲವು ಉದಾಹರಣೆಗಳು ಕಣ್ಣ ಮುಂದಿದೆ. ಇದೀಗ 1980ರ ದಶಕದಲ್ಲಿ ಸಂಚಲನ ಮೂಡಿಸಿದ್ದ LML(ಎಲ್ಎಂಎಲ್)ಸ್ಕೂಟರ್ ಭಾರತದಲ್ಲಿ ಮತ್ತೆ ಬಿಡುಗಡೆಯಾಗುತ್ತಿದೆ. 

ಮತ್ತೊಂದು ಗುಡ್‌ನ್ಯೂಸ್ ನೀಡಿದ ಓಲಾ ಎಲೆಕ್ಟ್ರಿಕ್ ಸ್ಕೂಟರ್; 10 ಆಕರ್ಷಕ ಬಣ್ಣಗಳಲ್ಲಿ ಲಭ್ಯ!

ಲೋಹಿಯಾ ಮಶಿನರಿ ಲಿಮಿಟೆಡ್(LML)ಸ್ಕೂಟರ್ ಇದೀಗ ಹೊಸ ರೂಪ, ಹೊಸ ವಿನ್ಯಾಸ ಹಾಗೂ ಹಲವು ಬದಲಾವಣೆಯೊಂದಿಗೆ ಸ್ಕೂಟರ್ ಬಿಡುಗಡೆ ಮಾಡುತ್ತಿದೆ. ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಲು ಮುಂದಾಗಿರುವ LML, ದೇಶದ ಎಲೆಕ್ಟ್ರಿಕ್ ಸ್ಕೂಟರಿ ವಿಭಾಗದಲ್ಲಿ ಹೊಸ ಸಂಚಲನ ಮೂಡಿಸುವ ವಿಶ್ವಾಸದಲ್ಲಿದೆ.

1972ರಲ್ಲಿ ಇಟಲಿ ಮೂಲದ ಪಿಯಾಗ್ಗಿಯೋ ವೆಸ್ಪಾ ಜೊತೆ ಒಪ್ಪಂದ ಮಾಡಿಕೊಂಡು ಸ್ಕೂಟರ್ ಬಿಡುಗಡೆ ಮಾಡಿದ LML ದೇಶದ ಜನಪ್ರಿಯ ಸ್ಕೂಟರ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಇನ್ನು ಬಜಾಜ್ ಕಂಪನಿ ಚೇತಕ್ ಸ್ಕೂಟರ್ ಬಿಡುಗಡೆ ಮಾಡಿ ಪ್ರತಿಸ್ಪರ್ಧೆ ಒಡ್ಡಿತ್ತು. LML ಕಂಪನಿ ಜನಪ್ರಿಯತೆ ಕಳೆದುಕೊಂಡು ಮೂಲೆ ಸೇರಿತು. ಇದೀಗ ಬಜಾಜ್ ಚೇತಕ್ ಸ್ಕೂಟರನ್ನು ಎಲೆಕ್ಟ್ರಿಕ್ ಸ್ಕೂಟರ್ ಆಗಿ ಬಿಡುಗಡೆ ಮಾಡಿದೆ. ಇದರ ಬೆನ್ನಲ್ಲೇ ಚೇತಕ್ ಸೇರಿದಂತೆ ಭಾರತೀಯ ಎಲೆಕ್ಟ್ರಿಕ್ ಮಾರುಕಟ್ಟೆಯಲ್ಲಿ ಪೈಪೋಟಿ ನೀಡಲು LML ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಲು ಮುಂದಾಗಿದೆ.

240 ಕಿ.ಮೀ ಮೈಲೇಜ್, ಬೆಂಗಳೂರಿನ ಸಿಂಪಲ್ ಒನ್ ಎಲೆಕ್ಟ್ರಿಕ್ ಸ್ಕೂಟರ್  ಬಿಡುಗಡೆ!

ನಾವು ಹೊಚ್ಚ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಲು ಉತ್ಸುಕರಾಗಿದ್ದೇವೆ. ಸ್ಕೂಟರ್ ಕ್ಷೇತ್ರದಲ್ಲಿ ನಮ್ಮ ಕಂಪನಿ ಅಸಾಧಾರಣ ಜನಪ್ರಿಯತೆ ಯಶಸ್ಸು ಗಳಿಸಿದೆ. ಈಗಲೂ LML ಬ್ರ್ಯಾಂಡ್ ಮೇಲೆ ಭಾರತೀಯರಿಗೆ ವಿಶೇಷ ಒಲವಿದೆ. ಭಾರತದಲ್ಲಿ  ಎಲೆಕ್ಟ್ರಿಕ್ ವಾಹನಕ್ಕೆ ಬೇಡಿಕೆ ಹೆಚ್ಚುತ್ತಿದೆ. ಹೀಗಾಗಿ ಹೆಚ್ಚಾಗಿರುವ ಬೇಡಿಕೆಯನ್ನು LML ಸರಿದೂಗಿಸಲಿದೆ ಎಂದು LML ಸ್ಕೂಟರ್ ಕಂಪನಿ ವ್ಯವಸ್ಥಾಪಕ ನಿರ್ದೇಶಕ, ಸಿಇಒ ಯೋಗೇಶ್ ಭಾಟಿಯಾ ಹೇಳಿದ್ದಾರೆ.

ಭಾರತದಲ್ಲಿ  ಎಲೆಕ್ಟ್ರಿಕ್ ಸ್ಕೂಟರ್ ನಿರ್ಮಾಣ ಹೆಚ್ಚುತ್ತಿದೆ. ಇತ್ತೀಚೆಗೆ ಒಲಾ ಎಲೆಕ್ಟ್ರಿಕ್ ಸ್ಕೂಟರ್ ಹಾಗೂ ಸಿಂಪಲ್ ಒನ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಿದೆ. ಎರಡೂ ಸ್ಕೂಟರ್ ಅತೀ ಹೆಚ್ಚು ಮೈಲೇಜ್ ನೀಡುವ ಮೂಲಕ ಭಾರಿ ಸದ್ದು ಮಾಡಿದೆ. ಇದಕ್ಕೂ ಮೊದಲು ಎಥರ್ ಎನರ್ಜಿ, ಬಜಾಜ್ ಚೇತಕ್, ಟಿವಿಎಸ್ ಐಕ್ಯೂಬ್ ಸೇರಿದಂತೆ ಹಲವು ಎಲೆಕ್ಟ್ರಿಕ್ ಸ್ಕೂಟರ್ ಭಾರತದಲ್ಲಿ ಬಿಡುಗಡೆಯಾಗಿ ಯಶಸ್ಸು ಗಳಿಸಿದೆ.

Latest Videos
Follow Us:
Download App:
  • android
  • ios