ದೇಶದಲ್ಲಿ ಇದೀಗ ಎಥೆನಾಲ್ ಮಿಶ್ರಿತ ಪೆಟ್ರೋಲ್ ಭಾರಿ ಸದ್ದು ಮಾಡುತ್ತಿದೆ. ಇದೀಗ ಯಮಹಾ ಭಾರತದಲ್ಲಿ ಕ್ರಾಂತಿ ಮಾಡಿದೆ. ಇ20 ಯಿಂದ ಇ85ವರೆಗೆ ಎಥೆನಾಲ್ ಇಂಧನದಲ್ಲಿ ಓಡಬಲ್ಲ ಯಮಹಾ FZ ಬ್ಲೂ ಬೈಕ್ ಲಾಂಚ್ ಆಗಿದೆ.
ಬೆಂಗಳೂರು (ಜು.10) ಪೆಟ್ರೋಲ್ ಆಮದು ಸಮಸ್ಯೆ, ವಿದೇಶಿ ವಿನಿಮಯ ಕೊರತೆಗಳಿಂದ ಭಾರತದಲ್ಲಿ ಎಥೆನಾಲ್ ಇಂಧನ ಭಾರಿ ಸದ್ದು ಮಾಡುತ್ತಿದೆ. ಸರ್ಕಾರ ಎಥೆನಾಲ್ ಇಂಧನಕ್ಕೆ ಹೆಚ್ಚಿನ ಉತ್ತೇಜನ ನೀಡುತ್ತಿದೆ. ಈಗಾಗಲೇ ಹಲವು ಫ್ಲೆಕ್ಸ್ ಫ್ಯೂಯೆಲ್ ವಾಹನಗಳು ಬಿಡುಗಡೆಯಾಗಿದೆ. ಇದೀಗ ಯಮಹಾ ಭಾರತದಲ್ಲಿ ಕ್ರಾಂತಿ ಮಾಡಿದೆ. ಫ್ಲೆಕ್ಸ್ ಫ್ಯೂಯೆಲ್ ಇಂಧನದ ಬೈಕ್ ಬಿಡುಗಡೆ ಮಾಡಿದೆ. ಇ20ಯಿಂದ ಇ85ವರೆಗಿನ ಎಥೆನಾಲ್ ಇಂಧನದಲ್ಲಿ ಚಲಿಸಬಲ್ಲ ಯಮಹಾ FZ ಬ್ಲೂ ಫ್ಲೆಕ್ಸ್ ಬೈಕ್ ಬಿಡುಗಡೆಯಾಗಿದೆ.
ಹೊಸ ಬೈಕ್ ಬೆಲೆ
ಅತ್ಯಾಧುನಿಕ ಫ್ಲೆಕ್ಸ್-ಫ್ಯೂಯಲ್ (Flex-Fuel) ತಂತ್ರಜ್ಞಾನದ ಹೊಸ FZ ಬ್ಲೂ ಫ್ಲೆಕ್ಸ್ ಬೈಕ್ ಭಾರತೀಯ ಮಾರುಕಟ್ಟೆಗೆ ಬಿಡುಗಡೆಯಾಗಿದೆ. ಭಾರತ ಸರ್ಕಾರದ 'ವಿಕ್ಷಿತ್ ಭಾರತ್' ದೂರದೃಷ್ಟಿ ಹಾಗೂ ಪರ್ಯಾಯ ಇಂಧನ ತಂತ್ರಜ್ಞಾನದ ಉತ್ತೇಜನಕ್ಕೆ ಪೂರಕವಾಗಿ ಈ ನೂತನ ಬೈಕ್ ಬಿಡುಗಡೆ ಮಾಡಲಾಗಿದೆ. ನೂತನ ಬೈಕ್ ಬೆಲೆ 1,24,240 ರೂಪಾಯಿ (ಎಕ್ಸ್ ಶೋ ಶೂ ರೂಂ ದೆಹಲಿ )
ನೂತನ FZ ಬ್ಲೂ ಫ್ಲೆಕ್ಸ್ ಬೈಕ್ 149 ಸಿಸಿ, ಏರ್ ಕೂಲ್ಡ್ ಫ್ಯುಯೆಲ್ ಇಂಜೆಕ್ಟ್ ಎಂಜಿನ್ ಹೊಂದಿದೆ. ಈ ಎಂಜಿನ್ ವಿಶೇಷವಾಗಿ ಎಥೆನಾಲ್ ಇಂಧನಕ್ಕೆ ಅನುಗುಣವಾಗಿ ಅಭಿವೃದ್ಧಿ ಮಾಡಲಾಗಿದೆ. ಹೀಗಾಗಿ ಶೇಕಡಾ 20 ರಿಂದ ಶೇಕಡಾ 85ರ ವರೆಗಿನ ಎಥೆನಾಲ್ ಇಂಧನದಲ್ಲಿ ಚಲಿಸುತ್ತದೆ. ಹೀಗಾಗಿ ಯಮಹಾ FZ ಬ್ಲೂ ಫ್ಲೆಕ್ಸ್ ಬೈಕ್ ಪೆಟ್ರೋಲ್ ಮೇಲಿನ ಅವಲಂಬನೆ ಕಡಿಮೆ ಮಾಡಲಿದೆ. ಜೊತೆಗೆ ಪರಿಸರಕ್ಕೂ ಪೂರಕವಾಗಿದ್ದು, ಮಾಲಿನ್ಯಗಳನ್ನು ತಗ್ಗಿಸಲಿದೆ.
ಹೊಚ್ಚ ಹೊಸ ಬೈಕ್ 8.6 kW ಪವರ್ ಮತ್ತು 12.8 Nm ಗರಿಷ್ಠ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. 5-ಸ್ಪೀಡ್ ಗೇರ್‌ಬಾಕ್ಸ್ ಹೊಂದಿದ್ದು, ಸುಲಭವಾಗಿ ಹಾಗೂ ಸ್ಟೆಡಿ ಹ್ಯಾಂಡ್ಲಿಂಗ್ ನೀಡಲಿದೆ. ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಸಸ್ಪೆನ್ಷನ್ ಹಾಗೂ ಹಿಂಭಾಗದಲ್ಲಿ ಸ್ವಿಂಗ್‌ಆರ್ಮ್ ಸಸ್ಪೆನ್ಷನ್ ನೀಡಲಾಗಿದೆ. ಸುರಕ್ಷಿತ ಬ್ರೇಕಿಂಗ್‌ಗಾಗಿ ಸಿಂಗಲ್ ಚಾನೆಲ್ ಎಬಿಎಸ್ (ABS) ತಂತ್ರಜ್ಞಾನವನ್ನು ಅಳವಡಿಸಲಾಗಿದೆ. ಈ FZ ಬ್ಲೂ ಫ್ಲೆಕ್ಸ್ ಬೈಕ್ ಆಕರ್ಷಕ ಮೆಟಾಲಿಕ್ ಬ್ಲ್ಯಾಕ್ ಬಣ್ಣದಲ್ಲಿ ಲಭ್ಯವಿದೆ ಕರ್ನಾಟಕ ಸೇರಿದಂತೆ ದೇಶದ ಯಮಹಾ ಬ್ಲೂ ಸ್ಕ್ವೇರ್ ಪ್ರೀಮಿಯಂ ಶೋರೂಂನಲ್ಲಿ ಲಭ್ಯವಿದೆ.
FZ ಜನಪ್ರಿಯ ಬೈಕ್‌ನಿಂದ ಸ್ಪೂರ್ತಿ
ಯಮಹಾ ಬೈಕ್ ಪೈಕಿ FZ ಅತ್ಯಂತ ಜನಪ್ರಿಯ ಹಾಗೂ ಬೇಡಿಕೆಯ ಬೈಕ್. ಇದೇ FZ ಬೈಕ್‌ನಿಂದ ಸ್ಪೂರ್ತಿ ಪಡೆದು FZ ಬ್ಲೂ ಫ್ಲೆಕ್ಸ್ ಬೈಕ್ ಅಭಿವೃದ್ಧಿ ಮಾಡಲಾಗಿದೆ. ಬೋಲ್ಡ್ ಫುಲ್-ಎಲ್ಇಡಿ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್ ಹಾಗೂ ಇಂಟಿಗ್ರೇಟೆಡ್ ಪೊಸಿಷನ್ ಲ್ಯಾಂಪ್‌ಗಳನ್ನು ಒಳಗೊಂಡಿದೆ. ಬೈಕಿನ ಮಸ್ಕುಲರ್ ಫ್ಯುಯಲ್ ಟ್ಯಾಂಕ್ ಏರೋಡೈನಾಮಿಕ್ ಶೈಲಿಯನ್ನು ಹೊಂದಿದ್ದು, ಫಾಕ್ಸ್ ಏರ್ ವೆಂಟ್‌ಗಳು ಮತ್ತು ಕಾಂಪ್ಯಾಕ್ಟ್ ಎಕ್ಸಾಸ್ಟ್ (ಸೈಲೆನ್ಸರ್) ವ್ಯವಸ್ಥೆಯನ್ನು ನೀಡಲಾಗಿದೆ. ಸವಾರರ ಅತ್ಯುತ್ತಮ ಕಂಫರ್ಟ್‌ಗಾಗಿ ಸಿಂಗಲ್-ಪೀಸ್ ಸೀಟ್ ಮತ್ತು ಸ್ಪೋರ್ಟಿ ಲುಕ್ ನೀಡಲು ಶಾರ್ಪ್ ಎಲ್ಇಡಿ ಟೇಲ್ ಲ್ಯಾಂಪ್‌ಗಳನ್ನು ಬಳಸಲಾಗಿದೆ.


