ಆಕರ್ಷಕ ಬೆಲೆಗೆ ಮಾನ್‌ಸ್ಟರ್ ಎನರ್ಜಿ ಬೈಕ್-ಸ್ಕೂಟರ್ ಪರಿಚಯಿಸಿದ ಯಮಹಾ ಇಂಡಿಯಾ!
ಮಾನ್‌ಸ್ಟರ್ ಎನರ್ಜಿ ಯಮಹಾ ಮೋಟೋಜಿಪಿ ಸೀಮಿತ ಆವೃತಿ ಮಾದರಿಯು - YZF-R15M, MT-15 V2.0, ಮತ್ತು Ray ZR 125 Fi ಹೈಬ್ರಿಡ್ ಬೈಕ್ ಆಗಿದೆ. ಲಿಮಿಡೆಡ್ ಎಡಿಶನ್ ಬೈಕ್ ಹಾಗೂ ಸ್ಕೂಟರ್ ಇದಾಗಿದ್ದು, ಬೆಲೆ ಹಾಗೂ ಇತರ ಮಾಹಿತಿ ಇಲ್ಲಿದೆ.
ಬೆಂಗಳೂರು(ಸೆ.30): ದಿ ಕಾಲ್ ಆಫ್ ದಿ ಬ್ಲೂ'ನ ಭಾಗವಾಗಿ ಇಂಡಿಯಾ ಯಮಹಾ ಮೋಟಾರ್ ಪ್ರೈ. ಲಿಮಿಟೆಡ್ 023 ಮಾನ್‌ಸ್ಟರ್ ಎನರ್ಜಿ ಯಮಹಾ ಮೋಟೋಜಿಪಿ ಆವೃತ್ತಿಯ ಮಾದರಿಗಳ ಅತ್ಯಾಕರ್ಷಕ ವೇರಿಯೆಂಟ್ ಪರಿಚಯಿಸಿದೆ. ಈ ಮಾದರಿಗಳಲ್ಲಿ SuperSport YZF-R15M, ಡಾರ್ಕ್ ವಾರಿಯರ್ MT-15 V2.0, ಮತ್ತು Ray ZR 125 Fi ಹೈಬ್ರಿಡ್ ಸ್ಕೂಟರ್ ಸೇರಿವೆ. ಮಾನ್ಸ್‌ಟರ್ ಎನರ್ಜಿ ಯಮಹಾ ಮೋಟೋಜಿಪಿ ಆವೃತ್ತಿಯ ಮಾದರಿ ಶ್ರೇಣಿಯು ಸೆಪ್ಟೆಂಬರ್ 3 ನೇ ವಾರದಿಂದ ಭಾರತದ ಎಲ್ಲಾ ಪ್ರೀಮಿಯಂ ಬ್ಲೂ ಸ್ಕ್ವೇರ್ ಔಟ್‌ಲೆಟ್‌ಗಳಲ್ಲಿ ಲಭ್ಯವಿರುತ್ತದೆ. Maxi-ಸ್ಪೋರ್ಟ್ಸ್ ಸ್ಕೂಟರ್‌ಗಾಗಿ ವಿಶೇಷ MotoGP ಆವೃತ್ತಿ, AEROX 155 ಅನ್ನು ಸಹ ಶೀಘ್ರದಲ್ಲೇ ಪರಿಚಯಿಸಲಾಗುವುದು.
2023 MotoGP ಆವೃತಿಗಳು
YZF-R15M: 197,200 ರೂಪಾಯಿ (ಎಕ್ಸ್ ಶೋ ರೂಂ)
MT-15 V2.0: 172,700 (ಎಕ್ಸ್ ಶೋ ರೂಂ)
Ray ZR 125 Fi Hybrid: 92,330(ಎಕ್ಸ್ ಶೋ ರೂಂ)
ಯಮಹಾ ಬೈಕ್ ಕ್ರೇಜ್ ನಿಮಗಿದೆಯಾ? ಈ YZF-R1 ಸ್ಪೆಷಲ್ ಎಡಿನ್ ಬೈಕ್ ಬೆಲೆ 1.44 ಕೋಟಿ ರೂ!
YZF-R15M & MT-15 V2.0 ನ 2023 ಮಾನ್‌ಸ್ಟರ್ ಎನರ್ಜಿ ಯಮಹಾ ಮೋಟೋಜಿಪಿ ಆವೃತ್ತಿಯು ಯಮಹಾ ಮೋಟೋಜಿಪಿ ಲೈವರಿಯನ್ನು ಟ್ಯಾಂಕ್ ಕವಚಗಳು, ಇಂಧನ ಟ್ಯಾಂಕ್ ಮತ್ತು ಸೈಡ್ ಪ್ಯಾನೆಲ್‌ಗಳ ಮೇಲೆ ಪ್ರದರ್ಶಿಸುತ್ತ, ಅದರ ರೇಸಿಂಗ್ ಹಿನ್ನೆಲೆಯನ್ನು ವಿವರಿಸುತ್ತದೆ. ಆದರೆ AEROX 155 ಮತ್ತು ರೇ ZR ಮಾದರಿಗಳು ಒಟ್ಟಾರೆ ದೇಹದ ಮೇಲೆ ಯಮಹಾ MotoGP ಲಿವರಿಯನ್ನು ಪಡೆಯುತ್ತವೆ. ಮಾನ್ಸ್‌ಟರ್ ಎನರ್ಜಿ ಯಮಹಾ MotoGP ಆವೃತ್ತಿ ಮಾದರಿ ಶ್ರೇಣಿಯನ್ನು ಸೀಮಿತ ಸಂಖ್ಯೆಯಲ್ಲಿ ನೀಡಲಾಗುವುದು.
ಭಾರತದಲ್ಲಿ ಮೊಟ್ಟಮೊದಲ MotoGP ರೇಸ್ ಅನ್ನು ವೀಕ್ಷಿಸಲು ಯಮಹಾ ಅಭಿಮಾನಿಗಳಲ್ಲಿ ಹೆಚ್ಚಿನ ಉತ್ಸಾಹವಿದೆ. ಇಂದು ಮಾನ್ಸ್‌ಟರ್ ಎನರ್ಜಿ ಯಮಹಾ ಬಿಡುಗಡೆಯೊಂದಿಗೆ MotoGP ಆವೃತ್ತಿಯ ಮಾದರಿ ಶ್ರೇಣಿ, ಇದು ಅವರ ಉತ್ಸಾಹವನ್ನು ಮತ್ತಷ್ಟು ಹೆಚ್ಚಿಸುತ್ತದೆ ಎಂದು ನಾವು ನಂಬುತ್ತೇವೆ. 2023 ರ MotoGP ಆವೃತ್ತಿಯ ಬಿಡುಗಡೆಯು ಯಮಹಾದ ಶ್ರೀಮಂತ ರೇಸಿಂಗ್ ಪರಂಪರೆಯನ್ನು ಪ್ರತಿನಿಧಿಸುವ ಅತ್ಯಾಕರ್ಷಕ, ಸೊಗಸಾದ ಮತ್ತು ಸ್ಪೋರ್ಟಿ ಮಾದರಿ ಶ್ರೇಣಿಯನ್ನು ಭಾರತೀಯ ಗ್ರಾಹಕರಿಗೆ ನೀಡಬೇಕೆನ್ನುವ ನಮ್ಮ ಬದ್ಧತೆಯನ್ನು ಬಲಪಡಿಸುತ್ತದೆ. ಭಾವೋದ್ರಿಕ್ತ MotoGP ಅಭಿಮಾನಿಗಳು ಸೇರಿದಂತೆ ನಮ್ಮ ಯುವ ಗ್ರಾಹಕರ ಆಕಾಂಕ್ಷೆಗಳನ್ನು ಪೂರೈಸಲು ಯಮಹಾ ನಿರಂತರ ಪ್ರಯತ್ನಗಳನ್ನು ಕೈಗೊಳ್ಳುತ್ತದೆ ಎನ್ನುವುದಕ್ಕೆ ಈ ವಿಶೇಷ ಶ್ರೇಣಿಯು ಸಾಕ್ಷಿಯಾಗಿದೆ ಎಂದು ಯಮಹಾ ಮೋಟಾರ್ ಇಂಡಿಯಾ ಗ್ರೂಪ್ ಆಫ್ ಕಂಪನಿ ಚೇರ್ಮನ್ ಐಶಿನ್ ಚಿಹಾನಾ ಹೇಳಿದ್ದಾರೆ.
ಯಮಹಾದಿಂದ FZS ಸೀರಿಸ್ ಬೈಕ್ ಬಿಡುಗಡೆ, ಭಾರತದ ಮಾರುಕಟ್ಟೆಯಲ್ಲಿ ಸಂಚಲನ!