ಯಮಹಾ ಬೈಕ್ ಕ್ರೇಜ್ ನಿಮಗಿದೆಯಾ? ಈ YZF-R1 ಸ್ಪೆಷಲ್ ಎಡಿನ್ ಬೈಕ್ ಬೆಲೆ 1.44 ಕೋಟಿ ರೂ!
ಈ ಯಮಹಾ ಬೈಕ್ ಬೆಲೆ ಮರ್ಸಿಡಿಸ್ ಬೆಂಜ್, ಆಡಿ ಕಾರಿಗೆ ಸಮಾನವಾಗಿದೆ. ಕಾರಣ ಯಮಹಾ YZF-R1 ಸ್ಪೆಷಲ್ ಎಡಿಶನ್ ಬೈಕ್ ಎಕ್ಸ್ ಶೋ ರೂ ಬೆಲೆ 1.44 ಕೋಟಿ ರೂಪಾಯಿ. 25 ಬೈಕ್ ಮಾತ್ರ ಮಾರಾಟಕ್ಕೆ ಲಭ್ಯ. ದುಬಾರಿಯಾದ ಕಾರಣ ಕಡಿಮೆ ಮಾರಾಟವಾಗಲಿದೆ, ಹೀಗಾಗಿ 25 ಬೈಕ್ ಉತ್ಪಾದನೆ ಮಾಡಿದ್ದಾರೆ ಎಂದುಕೊಂಡರೆ ತಪ್ಪು. ಬುಕಿಂಗ್ ಆರಂಭಿಸಿದ ಕೆಲವೇ ನಿಮಿಷಗಳಲ್ಲಿ 25 ಬೈಕ್ ಸೋಲ್ಡ್ ಔಟ್ ಆಗಿದೆ.
ಬೆಂಗಳೂರು(ಜು.29) ಭಾರತದಲ್ಲಿ ಯಮಹಾ ಬೈಕ್ ಮಾಡಿದ ಮೋಡಿ ಅಷ್ಟಿಷ್ಟಲ್ಲ. RX 100 ಬೈಕ್‌ನಿಂದ ಹಿಡಿದು ಯಮಹಾ MT 15 V2, R15S ಸೇರಿದಂತೆ ಎಲ್ಲಾ ಯಮಹಾ ಬೈಕ್ ಭಾರಿ ಸಂಚಲನ ಸೃಷ್ಟಿಸಿದೆ. ಇದೀಗ ಯಮಹಾ 25ನೇ ವಾರ್ಷಿಕೋತ್ಸವದ ಸಂಭ್ರಮಕ್ಕೆ ಹೊಚ್ಚ ಹೊಸ ಯಮಹಾ YZF-R1 GYTR PRO ಸ್ಪೆಷಲ್ ಎಡಿಶನ್ ಬೈಕ್ ಬಿಡುಗಡೆ ಮಾಡಿದೆ. ಈ ಬೈಕ್ ಬೆಲೆ ಬರೋಬ್ಬರಿ 1.44 ಕೋಟಿ ರೂಪಾಯಿ. ಈ ಸ್ಪೆಷಲ್ ಮಾತ್ರವಲ್ಲ ಲಿಮಿಡೆಟ್ ಎಡಿಶನ್ ಬೈಕ್. ಕೇವಲ 25 ಬೈಕ್ ಮಾತ್ರ ಲಭ್ಯವಿದೆ. ಹೀಗಾಗಿ ಮೊದಲು ಬುಕ್ ಮಾಡಿದವರಿಗೆ ಮಾತ್ರ ಈ ಬೈಕ್ ಸಿಗಲಿದೆ. ಈ ದುಬಾರಿ ಬೈಕ್ ಯಾರು ಖರೀದಿಸುತ್ತಾರೆ, 25 ಬೈಕ್ ಮಾರಾಟವಾಗಲು ವರ್ಷವೇ ಬೇಕು ಅಂದುಕೊಂಡರೆ ತಪ್ಪು. ಕಾರಣ ಈ ಬೈಕ್ ಬುಕಿಂಗ್ ಆರಂಭಿಸಿದ ಕೆಲವೇ ನಿಮಿಷಗಳಲ್ಲಿ 25 ಲಿಮಿಡೆಟ್ ಎಡಿಶನ್ ಬೈಕ್ ಸೋಲ್ಡ್ ಔಟ್ ಆಗಿದೆ.
ನೂತನ ಯಮಹಾ YZF-R1 GYTR PRO ಸ್ಪೆಷಲ್ ಎಡಿಶನ್ ಬೈಕ್ ಯಾರು ಖರೀದಿಸಿದ್ದಾರೆ ಅನ್ನೋ ಕುತೂಹಲ ಹೆಚ್ಚಾಗಿದೆಯಾ? ಈ ಲಿಮಿಟೆಡ್ ಎಡಿಶನ್ ಬೈಕ್ ಬಿಡುಗಡೆಯಾಗಿದ್ದು ಯೂರೋಪ್‌ನಲ್ಲಿ. R1 ಯಮಹಾ ಬೈಕ್ ಡಿಸೈನ್‌ನಲ್ಲೇ ಈ ಸ್ಪೆಷಲ್ ಎಡಿಶನ್ ಬೈಕ್ ವಿನ್ಯಾಸ ಮಾಡಲಾಗಿದೆ. ಟ್ವಿನ್ ಪ್ರೊಜೆಕ್ಟರ್ ಹೆಡ್‌ಲ್ಯಾಂಪ್ಸ್ ಸೇರಿದಂತೆ ಬಹುತೇಕ ಡಿಸೈನ್ ಒಂದೇ ರೀತಿ ಇದೆ. ಈ ನೂತನ ಬೈಕ್ ಕಪ್ಪು, ಬಿಳಿ ಹಾಗೂ ಕೆಂಪು ಬಣ್ಣದಲ್ಲಿ ಲಭ್ಯವಿದೆ.
ಯಮಹಾದಿಂದ FZS ಸೀರಿಸ್ ಬೈಕ್ ಬಿಡುಗಡೆ, ಭಾರತದ ಮಾರುಕಟ್ಟೆಯಲ್ಲಿ ಸಂಚಲನ!
ಕೋಟಿ ಬೆಲೆಯ ಈ ಬೈಕ್‌ನಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಬಳಸಲಾಗಿದೆ. ಇದು ಮ್ಯಾಗ್ನೆಟಿ ಮರೇಲಿ ಇಸಿಯು, ರೇಸ್ ಸೆಟ್‌ಪ್ ಸ್ವಿಚ್ ಕ್ಯೂಬ್, ಹೊಸ ಟಿಎಫ್‌ಟಿ ಸ್ಕ್ರೀನ್ ಹೊಂದಿದೆ. ಇನ್ನು ಇದರ ಎಂಜಿನ್ 998 ಸಿಸಿ ಹೊಂದಿದೆ. ಅಂದರೆ 1.0 ಲೀಟರ್ ಕಾರು ಎಂಜಿನ್‌ಗೆ ಸರಿಸಮಾನಾಗಿದೆ. 6 ಸ್ಪೀಡ್ ಗೇರ್‌ಬಾಕ್ಸ್ ಜೊತೆಗೆ ಕ್ಲಚ್‌ಲೆಸ್ ಗೇರ್‌ಶಿಫ್ಟರ್ ಕೂಡ ಲಭ್ಯವಿದೆ. 4 ಸಿಲಿಂಡರ್ ಎಂಜಿನ್ ಹೊಂದಿದ್ದು, 200ಬಿಹೆಚ್‌ಪಿ ಪವರ್ ಜನರೇಟ್ ಮಾಡಲಿದೆ.
ವ್ಹೀಲ್ ಕಂಟ್ರೋಲ್, ಲಾಂಟ್ ಕಂಟ್ರೋಲ್, ಎಂಜಿನ್ ಬ್ರೇಕಿಂಗ್ ಸಿಸ್ಟಮ್, ಟ್ರಾಕ್ಷನ್ ಕಂಟ್ರೋಲ್, ಎಡ್ಜಸ್ಟೇಬಲ್ ಸಸ್ಪೆನ್ಶನ್, ಡಿಸ್ಕ್ ಬ್ರೇಕ್, ಎಬಿಎಸ್ ಬ್ರೇಕಿಂಗ್ ಸೇರಿದಂತೆ ಹಲವು ಫೀಚರ್ಸ್ ಈ ಬೈಕ್‌ನಲ್ಲಿದೆ. ಯೋರೋಪ್‌ನಲ್ಲಿ ಇದರ ಬೆಲೆ 159,000 ಯೋರೋ, ಭಾರತೀಯ ರೂಪಾಯಿಗಳಲ್ಲಿ 1.44 ಕೋಟಿ ರೂಪಾಯಿ(ಎಕ್ಸ್ ಶೋ ರೂಂ).
ಯಮಹಾ ಮಾನ್‌ಸ್ಟರ್ ಮೊಟೋ ಜಿಪಿ ಎಡಿಷನ್ ಬೈಕ್ ಬಿಡುಗಡೆ!
ಯಮಹಾದ ಎಫ್‌ಝಡ್‌ಎಸ್ - ಎಫ್‌ಐ ವಿ4 ಡಿಲಕ್ಸ್ ಬೈಕ್
ಭಾರತದಲ್ಲಿ ಯಮಹಾ ಇತ್ತೀಚೆಗೆ ವೈ ಕನೆಕ್ಟ್ ಮೂಲಕ ಬ್ಲ್ಯೂಟೂಥ್ ಕನೆಕ್ಟ್ ಮಾಡಬಹುದಾದ ಯಮಹಾ ಎಫ್‌ಝಡ್‌ಎಸ್-ಎಫ್‌ಐ ವಿ4 ಡೀಲಕ್ಸ್ ಬೈಕ್ ಬಿಡುಗಡೆ ಮಾಡಿದೆ. ಇದರ ಜೊತೆಗೆ ಯಮಹಾದ ಎಫ್ ಝಡ್-ಎಕ್ಸ್, ಎಂಟಿ-15 ವಿ2 ಡೀಲಕ್ಸ್ ಮತ್ತು ಆರ್15ಎಂ ಬೈಕ್‌ಗಳ ಹೊಸ ವರ್ಶನ್ ಬಿಡುಗಡೆಯಾಗಿವೆ. 149 ಸಿಸಿ ಎಂಜಿನ್ ಹೊಂದಿರುವ ಎಫ್‌ಝಡ್‌ಎಸ್-ಎಫ್‌ಐ ವಿ4 ಡೀಲಕ್ಸ್‌ನಲ್ಲಿ ಎಲ್‌ಇಡಿ ಹೆಡ್‌ಲೈಟ್ ಇದೆ. ಸಿಂಗಲ್ ಚಾನಲ್ ಎಬಿಸಿ, ಡಿಸ್ಕ್ ಬ್ರೇಕ್ ಹೊಂದಿದೆ.