ದಸರಾ ಮುನ್ನ ಟಿವಿಎಸ್‌ನಿಂದ ಮತ್ತೊಂದು ಹೊಸ ಸ್ಕೂಟರ್: ಅದು Jupiter 125 ನಾ?
ಟಿವಿಎಸ್ ಮೋಟಾರ್ ಕಂಪನಿಯು ಹಲವು ದ್ವಿಚಕ್ರವಾಹನ ಮತ್ತು ಸ್ಕೂಟರ್‌ಗಳ ಮೂಲಕ ಭಾರತೀಯ ಮಾರುಕಟ್ಟೆಯಲ್ಲಿ ತನ್ನದೇ ಆದ ಗ್ರಾಹಕ ವರ್ಗವನ್ನು ಸಂಪಾದಿಸಿಕೊಂಡಿದೆ. ಕಂಪನಿಯು ದಸರಾ ಮುನ್ನ ಅಂದರೆ ಅಕ್ಟೋಬರ್ 7ರಂದು ಮತ್ತೊಂದು ಹೊಸ ಸ್ಕೂಟರ್ ಲಾಂಚ್ ಮಾಡಲಿದೆ. ಅದು ಜುಪಿಟರ್ 125 ಸಿಸಿ ಇರಬಹುದು ಎಂದು ಹೇಳಲಾಗುತ್ತಿದೆ.
ದೇಶದ ಪ್ರಮುಖ ದ್ವಿಚಕ್ರವಾಹನ ಉತ್ಪಾದನಾ ಕಂಪನಿಯಾಗಿರುವ ಟಿವಿಎಸ್ ಮೋಟಾರ್(TVS Motor Company) ಕಂಪನಿಯು ಈ ದಸರಾ ಹಬ್ಬಕ್ಕೆ ಮತ್ತೊಂದು ಸ್ಕೂಟರ್(Scooter) ಅನ್ನು ಮಾರುಕಟ್ಟೆಗೆ ಪರಿಚಯಿಸುವ ಸಾಧ್ಯತೆ ಇದೆ. ಈಗಾಗಲೇ ಈ ಬಗ್ಗೆ ಸಾಕಷ್ಟು ಸುದ್ದಿಯಾಗುತ್ತದೆ. ಆದರೆ, ಯಾವ ಸ್ಕೂಟರ್ ಅನ್ನು ಮಾರುಕಟ್ಟಗೆ ಪರಿಚಯಿಸಿದೆ ಎಂಬ ಖಚಿತವಾದ ಮಾಹಿತಿ ಇಲ್ಲ
ಯಮಹಾ ಏರಾಕ್ಸ್ 155: ಬಿಡುಗಡೆಯಾದ ಪವರ್‌ಫುಲ್ ಸ್ಕೂಟರ್!
ಕೆಲವು ರೂಮರ್‌ಗಳ ಪೈಕಿ ಟಿವಿಎಸ್(TVS) ಮೋಟಾರ್ ಕಂಪನಿಯು ಅಕ್ಟೋಬರ್ 7ರಂದು 125 ಸಿಸಿ ಸ್ಕೂಟರ್ ಇರಬಹುದು ಎಂದು ಅಂದಾಜಿಸಲಾಗುತ್ತಿದೆ. ಅದು ಬಹುಶಃ ಜುಪಿಟರ್ 125(Jupiter 125) ಆಗಿರಬಹುದು ಎಂದು ಹೇಳಲಾಗುತ್ತಿದೆ. ಆದರೆ, ಈ ಬಗ್ಗೆ ಕಂಪನಿಯು ಯಾವುದೇ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ.
ಇತ್ತೀಚೆಗಷ್ಟೇ ಟಿವಿಎಸ್ ಮೋಟಾರ್ ಕಂಪನಿಯು ರೈಡರ್ 125(Raider 125) ದ್ವಿಚಕ್ರವಾಹನವನ್ನು ಮಾರುಕಟ್ಟೆಗೆ ಬಿಡುಗಡೆ ಎಲ್ಲರ ಹುಬ್ಬೇರಿಸಿದೆ. ರೈಡರ್ ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಮತ್ತೊಂದು ಹೂಸ ಸ್ಕೂಟರ್ ಅನ್ನು ಲಾಂಚ್ ಮಾಡಲಿದೆ ಎಂಬ ಸುದ್ದಿ ಬಹಳಷ್ಟು ಕುತೂಹಲವನ್ನು ಸೃಷ್ಟಿಸಿದೆ. ಅಕ್ಟೋಬರ್ 7ರಂದು ಬಿಡುಗಡೆಯಾಗಲಿರುವ ಸ್ಕೂಟರ್ 125 ಸಿಸಿ ಸ್ಕೂಟರ್ ಎಂದು ಹೇಳಲಾಗುತ್ತಿದೆ. ಆದರೆ, ಕಂಪನಿಯು ಈ ಬಗ್ಗೆ ಯಾವುದೇ ಮಾಹಿತಿಯನ್ನ ಬಿಟ್ಟುಕೊಟ್ಟಿಲ್ಲ. ಎಲ್ಲವೂ ರೂಮರ್.
ಹಾಗೊಂದು ವೇಳೆ ಈಗ ಎದ್ದಿರುವ ವದಂತಿಗಳು ನಿಜವೇ ಆದರೆ ಕಂಪನಿಯು ಜುಪಿಟರ್ 125(Jupiter 125) ಸಿಸಿ ಸ್ಕೂಟರ್, ಮಾರುಕಟ್ಟೆಯಲ್ಲಿ ಈಗಾಗಲೇ ಚಾಲ್ತಿಯಲ್ಲಿರುವ ತನ್ನ ಎದುರಾಳಿ ಹೋಂಡಾ ಆಕ್ಟಿವಾ 125(Honda Activa 125), ಹಿರೋ ಮಿಸ್ಟ್ರೋ ಎಡ್ಜ್ 125(Hero Maestro Edge 125) ಹಾಗೂ ಸುಜುಕಿ ಅಕ್ಸೆಸ್ 125(Suzuki Access 125) ಸ್ಕೂಟರ್‌ಗಳಿಗೆ ಸಖತ್ ಸ್ಪರ್ಧೆಯನ್ನು ನೀಡಲಿದೆ ಎಂದು ಹೇಳಬಹುದು.
ಮಾರುಕಟ್ಟೆಗೆ ಬಂತು ಸ್ಪೋರ್ಟ್ಸ್ ಸ್ಟೈಲಿಶ್ ಟಿವಿಎಸ್ ರೈಡರ್ 125
ಕಂಪನಿಯು ತನ್ನ ಮುಂಬರುವ ದ್ವಿಚಕ್ರ ವಾಹನದ ಆಹ್ವಾನಕ್ಕಾಗಿ 'ಹೆಚ್ಚು ಅನುಭವವನ್ನು ಪಡೆಯಿರಿ' ಎಂಬ ಅಡಿಬರಹವನ್ನು ಬಳಸಿದೆ. ಇದು ಜುಪಿಟರ್ 125(Jupiter 125) ಸಿಸಿ ಸ್ಕೂಟರ್ ಆಗಿರಬಹುದು ಎಂಬ ಸೂಚನೆಯನ್ನು ನೀಡಿದೆ. ಈ ಹೊಸ ಸ್ಕೂಟರ್‌ನಲ್ಲಿ ಗ್ರಾಹಕರು ಹೆಚ್ಚು ಪವರ್, ಟಾರ್ಕ್, ವೈಶಿಷ್ಟ್ಯಗಳು ಸೇರಿದಂತೆ ಎಲ್ಲವನ್ನೂ 'ಹೆಚ್ಚು' ಪಡೆಯುವ ಸೂಚನೆಯಾಗಿರಬಹುದು ಎಂದು ಹೇಳಲಾಗುತ್ತದೆ. ಬಿಡುಗಡೆಯಾಗಲಿರುವ ಸ್ಕೂಟರ್ ವಾಹನದ ಎಲ್ಇಡಿ(LED) ಡಿಆರ್‌ಎಲ್(DRL)ಗಳನ್ನು ವಿವರಿಸುವ ಟೀಸರ್ ಚಿತ್ರವನ್ನು ಹಂಚಿಳ್ಳಲಾಗಿದೆ. ಈ ಡಿಆರ್‌ಎಲ್(DRL)ಗಳನ್ನು ಸ್ಕೂಟರ್ ನ ಮುಂಭಾಗದ ಏಪ್ರನ್ ಮೇಲೆ ಇರಿಸಬಹುದು.
ಟಿವಿಎಸ್ ಕಂಪನಿಯ ಮುಂಬರುವ ಸ್ಕೂಟರ್‌ನಲ್ಲಿ 124.8 CC ಸಿಂಗಲ್ ಸಿಲಿಂಡರ್ ಫ್ಯುಯೆಲ್ ಇಂಜೆಕ್ಟೆಡ್ ಎಂಜಿನ್ ಹೊಂದಲಿದೆ. ಬಹುಶಃ ಇದುಂ ಎನ್‌ಟಾರ್ಕ್ 125(NTorq 125) ಎಂಜಿನ್ ಆಗಿರಬಹುದು. ಈ ಎಂಜಿನ್ ಗರಿಷ್ಠ 7,000 rpmನಲ್ಲಿ 9.1 bhp ಪವರ್ ಉತ್ಪಾದಿಸುತ್ತದೆ. ಹಾಗೆಯೇ, ಗರಿಷ್ಠ 5,500 rpmನಲ್ಲಿ 10.5 Nm ಟಾರ್ಕ್ ಉತ್ಪಾದಿಸಲಿದೆ. ಈ ಎಂಜಿನ್ CVT gearbox ಹೊಂದಿರಲಿದೆ.
ಅಕ್ಟೋಬರ್ 7ಕ್ಕೆ ಬಿಡಗುಡೆಯಾಗಲಿದೆ ಎನ್ನಲಾಗುವ ಹೊಸ ಸ್ಕೂಟರ್(ಜುಪಿಟರ್ 125?)ನಲ್ಲಿ ಡಿಜಿಟಲ್ ಸ್ಕ್ರೀನ್(Digital Screen), ಎಕ್ಸ್ಟರ್ನಲ್ ಫ್ಯೂಯೆಲ್ ಫಿಲ್ಲರ್, ಸೈಲೆಂಟ್ ಸ್ಟಾರ್ ಮತ್ತು ಟಿವಿಎಸ್ ಕನೆಕ್ಟ್(TVS Connect) ಮೊಬೈಲ್ ಆಪ್ ಅನ್ನು, ನ್ಯಾವೇಗಷನ್ ಅಸಿಸ್ಟ್, ಟಾಪ್ ಸ್ಪೀಡ್ ರೆಕಾರ್ಡರ್ ಮತ್ತು ಇನ್‌ಬಿಲ್ಟ್ ಲ್ಯಾಪ್ ಟೈಮರ್ ಇತ್ಯಾದಿಗಳಿಗೆ ಬಳಸಬಹುದಾಗಿದೆ.
ಮಿಡ್‌ಸೈಜ್ SUV ಆಸ್ಟರ್ ಪರಿಚಯಿಸಿದ ಎಂಜಿ ಹೆಕ್ಟರ್!
ಟಿವಿಎಸ್ ಮೋಟಾರ್ ಕಂಪನಿ(TVS Motor Company) ಭಾರತದ ಪ್ರಮುಖ ದ್ವಿಚಕ್ರವಾಹನ ತಯಾರಿಕಾ ಕಂಪನಿಯಾಗಿದ್ದು, ಹಲವು ಮಾಡೆಲ್‌ಗಳ ಮೂಲಕ ಗ್ರಾಹಕರನ್ನು ಸೆಳೆಯಲು ಯಶಸ್ವಿಯಾಗಿದೆ. ಕಂಪನಿಯು ಈಗಾಗಲೇ ಜುಪಿಟರ್ ಸ್ಕೂಟರ್ ಮೂಲಕ ಈ ಸೆಗ್ಮೆಂಟ್‌ನಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿದೆ. ಈಗ ಹೊಸ ಸ್ಕೂಟರ್ ಮೂಲಕ ಮತ್ತೊಂದು ಹಂತಕ್ಕೆ ಲಗ್ಗೆ ಹಾಕುವ ಸಾಧ್ಯತೆ ಎಂದು ಹೇಳಬಹುದು.