Asianet Suvarna News Asianet Suvarna News

TVS Scooter ಆಕರ್ಷಕ ಬೆಲೆಗೆ ಅತ್ಯಾಕರ್ಷಕ ಟಿವಿಎಸ್ NTORQ 125 ರೇಸ್ ಎಡಿಶನ್ ಸ್ಕೂಟರ್ ಬಿಡುಗಡೆ!

ಟಿವಿಎಸ್  NTORQ 125 ಸ್ಕೂಟರ್ ಹೊಸ ಅವತಾರದಲ್ಲಿ ಬಿಡುಗಡೆಯಾಗಿದೆ. NTORQ 125 ರೇಸ್ ಎಡಿಶನ್ ಸ್ಕೂಟರ್ ಬೇಹುಗಾರಿಕೆ ವಿಮಾನದ ವಿನ್ಯಾಸದಿಂದ ಪ್ರೇರಿತಗೊಂಡು ಈ ಸ್ಕೂಟರ್ ವಿನ್ಯಾಸಗೊಳಿಸಲಾಗಿದೆ. ಕೈಗೆಟುಕುವ ದರದಲ್ಲಿ ಈ ಸ್ಕೂಟರ್ ಲಭ್ಯವಿದೆ
 

TVS Motor Company launch  all new Marine Blue colour for NTORQ 125 Race Edition with stealth aircraft Inspired design ckm
Author
First Published Sep 12, 2022, 5:28 PM IST

ಬೆಂಗಳೂರು(ಸೆ.12):  TVS ಮೋಟಾರ್ ಕಂಪನಿಯ ಅತ್ಯಂತ ಜನಪ್ರಿಯ ಹಾಗೂ ಅತೀ ಹೆಚ್ಚು ಮಾರಾಟವಾಗುತ್ತಿರುವ NTORQ 125 ಇದೀಗ ಹೊಸ ಅವತಾರದಲ್ಲಿ ಬಿಡುಗಡೆಯಾಗಿದೆ. ಮರೀನ್ ಬ್ಲೂ ಬಣ್ಣದಲ್ಲಿ ಹೊಚ್ಚ ಹೊಸ ಟಿವಿಎಸ್ NTORQ 125 ರೇಸ್ ಎಡಿಶನ್ ಬೈಕ್ ಬಿಡುಗಡೆ ಮಾಡಿದೆ. ಹಲವಾರು ವರ್ಷಗಳಿಂದ ಹೊಸ ತಲೆಮಾರಿನವರಿಂದ ವ್ಯಾಪಕವಾಗಿ ಮೆಚ್ಚುಗೆಗೆ ಪಾತ್ರವಾಗಿರುವ ಕೆಂಪು ಬಣ್ಣದ ರೇಸ್ ಆವೃತ್ತಿಯ ಸ್ಕೂಟರ್ ಜೊತೆಗೆ ಈ ಅತ್ಯಾಕರ್ಷಕ ಮತ್ತೊಂದು ಬ್ಲೂ ಮರೀನ್ ಕಲರ್ ಸೇರಿಕೊಂಡಿದೆ.  ವೈವಿಧ್ಯಮಯ ಬಣ್ಣಗಳ ಗ್ರಾಫಿಕ್ಸ್ನೊಂದಿಗೆ ವಿಭಿನ್ನ ಶೈಲಿಯ ಗಮನ ಸೆಳೆಯುವ ನೋಟ ಒಳಗೊಂಡಿದ್ದು, ಸ್ಕೂಟರ್‌ಗೆ ಇನ್ನಷ್ಟು ಹೊಸತನವನ್ನು ತಂದು ಕೊಟ್ಟಿದೆ. ಬ್ಲ್ಯಾಕ್, ಮೆಟ್ಯಾಲಿಕ್ ಬ್ಲ್ಯಾಕ್ ಮತ್ತು ಮೆಟ್ಯಾಲಿಕ್ ಬ್ಲ್ಯೂ ಬಣ್ಣಗಳ ವಿಶಿಷ್ಟ ಬಗೆಯ ಸಂಯೋಜನೆಯು ನಿಸ್ಸಂದಿಗ್ಧವಾಗಿ ವಿಭಿನ್ನ ಬಗೆಯ ಅನುಭವ ನೀಡಲಿದ್ದು, ಸ್ಕೂಟರ್ ಸವಾರರನ್ನು ಇತರರಿಂದ ಭಿನ್ನವಾಗಿ ಕಾಣುವಂತೆ ಮಾಡುತ್ತದೆ. ನೂತನ ಸ್ಕೂಟರ್ ಬೆಲೆ 87,011 ರೂಪಾಯಿ(ಎಕ್ಸ್  ಶೋ ರೂಂ)

 ಈ ಸ್ಕೂಟರ್ ವಿನ್ಯಾಸದಲ್ಲಿ ಒಂದು ವಿಶೇಷತೆ ಇದೆ. ಹೊಚ್ಚ ಹೊಸ ಟಿವಿಎಸ್ NTORQ 125 ರೇಸ್ ಎಡಿಶನ್ ಸ್ಕೂಟರ್, ಬೇಹುಗಾರಿಕೆ ಉದ್ದೇಶಕ್ಕೆ ಬಳಕೆಯಾಗುವ ವಿಮಾನದ ವಿನ್ಯಾಸದಿಂದ ಪ್ರೇರಿತಗೊಂಡು NTORQ 125 ರೇಸ್ ಎಡಿಶನ್ ಸ್ಕೂಟರ್ ನಿರ್ಮಿಸಲಾಗಿದೆ. ವಿಶಿಷ್ಟ ಶೈಲಿಯ ಎಲ್‌ಇಡಿ ಟೇಲ್ ಮತ್ತು ಹೆಡ್‌ಲ್ಯಾಂಪ್‌ನೊಂದಿಗೆ ತೀಕ್ಷ್ಣ ಮತ್ತು ಆಕ್ರಮಣಕಾರಿ ಶೈಲಿಯ ನೋಟ ಹೊಂದಿದೆ. ಸ್ಕೂಟರ್‌ನಲ್ಲಿರುವ ವಿಶಿಷ್ಟವಾದ 'ರೇಸ್ ಆವೃತ್ತಿ'ಯ ಲಾಂಛನವು ಟಿವಿಎಸ್ ರೇಸಿಂಗ್ ವಂಶಾವಳಿಯ ತಳಿಯು ಎದ್ದು ಕಾಣುವಂತೆ ಮಾಡುತ್ತದೆ. ಸ್ಪೋರ್ಟಿ ಸ್ಟಬ್ ಮಫ್ಲರ್, ಟೆಕ್ಶರ್ಡ್ ಫ್ಲೋರ್‌ಬೋರ್ಡ್ ಮತ್ತು ಮಿಶ್ರ ಲೋಹದ ಡೈಮಂಡ್ ಕಟ್ ಚಕ್ರಗಳು ಸ್ಕೂಟರ್‌ನ ಬಾಹ್ಯ ನೋಟದ ಅಂದವನ್ನು ಮತ್ತಷ್ಟು ಹೆಚ್ಚಿಸಿವೆ. 

 

ಆಧುನಿಕ-ರೆಟ್ರೋ ಶೈಲಿಯ TVS ರೋನಿನ್ ಬೈಕ್ ಬಿಡುಗಡೆ!

ಟಿವಿಎಸ್ NTORQ 125 ರೇಸ್ ಎಡಿಶನ್ ಸ್ಕೂಟರ್   TVS SmartXonnectTM ಹೊಂದಿದೆ. ಈ ಫೀಚರ್ಸ್‌ನಿಂದ ಸ್ಕೂಟರ್ ಸವಾರ ತನ್ನ ಮೊಬೈಲ್ ಫೋನ್‌ನ್ನು ಸ್ಕೂಟರ್ ಜೊತೆ ಸಂಪರ್ಕಿಸಬಹುದು. ಇದರಿಂದ ಹಲವು ಫೀಚರ್ಸ್ ಸುಲಭವಾಗಿ ಬಳಕೆ ಮಾಡಲು ಸಾಧ್ಯವಾಗಲಿದೆ. ಇದು ಸ್ಮಾರ್ಟ್ ಸಾಧನಗಳ ಜೊತೆ ಸಂಪರ್ಕ ಕಲ್ಪಿಸುವ ಹಲವಾರು ವಿಶೇಷ ಸೌಲಭ್ಯಗಳನ್ನು ಒದಗಿಸುತ್ತದೆ. 60 ಕ್ಕೂ ಹೆಚ್ಚು ವೈಶಿಷ್ಟ್ಯಗಳನ್ನು ಒಳಗೊಂಡಿರುವ ಸಂಪೂರ್ಣ ಡಿಜಿಟಲ್ ಸಾಧನಗಳ ಗುಚ್ಛದ ಮೂಲಕ ಇವುಗಳ ಪ್ರಯೋಜನ ದೊರೆಯಲಿದೆ.

ಟಿವಿಎಸ್ NTORQ 125 ರೇಸ್ ಆವೃತ್ತಿಯು 124.8 ಸಿಸಿ ಸಾಮರ್ಥ್ಯದ ಸಿಂಗಲ್-ಸಿಲಿಂಡರ್, 4-ಸ್ಟ್ರೋಕ್, 3-ವಾಲ್ವ್, ಏರ್-ಕೂಲ್ಡ್ SOHC ಫ್ಯುಯಲ್ ಇಂಜೆಕ್ಟೆಡ್ ಎಂಜಿನ್‌ನಿಂದ ಚಾಲಿತವಾಗಿದೆ, ಇದು  6.9 kW@7,000rpm / 9.38 PS @7,000 rpm ಗರಿಷ್ಠ ಮಟ್ಟದ ಶಕ್ತಿ ಹೊರಹೊಮ್ಮಿಸುತ್ತದೆ. ಗರಿಷ್ಠ ಮಟ್ಟದ 10.5 Nm@5,500 rpm  ಒದಗಿಸುತ್ತದೆ. ರೇಸ್ ಆವೃತ್ತಿ ಸ್ಕೂಟರ್ ಗರಿಷ್ಠ ವೇಗ 95 kmph.  ಕೇವಲ 9 ಸೆಕೆಂಡುಗಳಲ್ಲಿ  0-60 kmph  ನಷ್ಟು ವೇಗ ಪಡೆಯಲಿದೆ.  

 

ಗರಿಷ್ಠ ಮೈಲೇಜ್ , ಹೊಸ ತಂತ್ರಜ್ಞಾನ, ಹೊಚ್ಚ ಹೊಸ ಟಿವಿಎಸ್ ರೆಡಿಯಾನ್ ರಿಫ್ರೆಶ್ ಲಾಂಚ್!

ಪಾಸ್ ಬೈ ಸ್ವಿಚ್, ಡ್ಯುಯಲ್ ಸೈಡ್ ಸ್ಟೀರಿಂಗ್ ಲಾಕ್, ಪಾರ್ಕಿಂಗ್ ಬ್ರೇಕ್ ಮತ್ತು ಎಂಜಿನ್ ಕಿಲ್ ಸ್ವಿಚ್‌ನಂತಹ ಪ್ರಮುಖ ವೈಶಿಷ್ಟ್ಯಗಳು ಈ ಸ್ಕೂಟರ್‌ನ ಅನುಕೂಲತೆಯನ್ನು ಹೆಚ್ಚಿಸಲಿವೆ. ಇದರ ಜೊತೆಗೆ, ಟಿವಿಎಸ್ NTORQ 125 ಆವೃತ್ತಿಯು ಬಾಹ್ಯ ಇಂಧನ ಭರ್ತಿ ಸೌಲಭ್ಯ, ಯುಎಸ್‌ಬಿ ಚಾರ್ಜರ್, ಸೀಟ್‌ನ ಕೆಳಭಾಗದಲ್ಲಿ ದೊಡ್ಡ ಗಾತ್ರದ  20-ಲೀಟರ್ ಸಂಗ್ರಹ ಸಾಮರ್ಥ್ಯದ ಟ್ಯಾಂಕ್ ಮತ್ತು ಟಿವಿಎಸ್ ಪೇಟೆಂಟ್ ಹೊಂದಿರುವ EZ ಸೆಂಟರ್ ಸ್ಟ್ಯಾಂಡ್ ಹೊಂದಿರಲಿದೆ.

ಸಾಗರ ನೀಲಿ ಬಣ್ಣದಲ್ಲಿ ಹೊಸ ಟಿವಿಎಸ್ NTORQ 125  ಆವೃತ್ತಿಯ ಬೆಲೆ ರೂ 87,011 (ಎಕ್ಸ್ ಶೋ ರೂಂ). ಭಾರತದಾದ್ಯಂತ ಟಿವಿಎಸ್ ಮೋಟರ್ ಕಂಪನಿಯ ಅಧಿಕೃತ ಡೀಲರ್‌ಶಿಪ್‌ಗಳಲ್ಲಿ ಹೊಸ ವರ್ಣದ ಸ್ಕೂಟರ್‌ನ ಬುಕ್ಕಿಂಗ್ ಈಗ ಪ್ರಾರಂಭವಾಗಿದೆ.

Follow Us:
Download App:
  • android
  • ios