ಡಿ.22ರೊಳಗೆ TVS ಐಕ್ಯೂಬ್ ಸ್ಕೂಟರ್ ಖರೀದಿಸಿದರೆ ಶೇ.100ರಷ್ಟು ಕ್ಯಾಶ್‌ಬ್ಯಾಕ್ ಚಾನ್ಸ್!
ಟಿವಿಎಸ್ ಯಾರು ನೀಡದ, ಹಿಂದೆಂದೂ ಇರದ ಹೊಸ ಆಫರ್ ಘೋಷಿಸಿದೆ. ಡಿಸೆಂಬರ್ 22ರೊಳಗೆ ಟಿವಿಎಸ್ ಐಕ್ಯೂಬ್ ಸ್ಕೂಟರ್ ಖರೀದಿಸುವ ಗ್ರಾಹಕರಿಗೆ ಶೇಕಡಾ 100 ರಷ್ಟು ಕ್ಯಾಶ್‌ಬ್ಯಾಕ್ ಆಫರ್ ಚಾನ್ಸ್ ಇದೆ.
ನವದೆಹಲಿ(ಡಿ.12) ಟಿವಿಎಸ್ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ ಬೇಡಿಕೆ ಹೆಚ್ಚಾಗುತ್ತಿದೆ. ಈಗಾಗಲೇ ಕಂಪನಿ 4.5 ಲಕ್ಷ ಸ್ಕೂಟರ್ ಮಾರಾಟ ಮಾಡಿದ ದಾಖಲೆ ಬರೆದಿದೆ. ಇದೀಗ ಟಿವಿಎಸ್ ಐಕ್ಯೂಬ್ ಹೊಸ ಆಫರ್ ಘೋಷಿಸಿದೆ. ಈ ಡಿಸೆಂಬರ್ 22ರೊಳಗೆ ಸ್ಕೂಟರ್ ಖರೀದಿಸುವ ಗ್ರಾಹಕರಿಗೆ ಶೇಕಡಾ 100 ರಷ್ಟು ಕ್ಯಾಶ್ಆಫರ್ ಆಫರ್ ಗೆಲ್ಲುವ ಚಾನ್ಸ್ ಇದೆ. ಇದರ ಜೊತೆಗೆ 30,000 ರೂಪಾಯಿ ಡಿಸ್ಕೌಂಟ್ ಆಫರ್ ಕೂಡ ಲಭ್ಯವಾಗಲಿದೆ.
ಟಿವಿಎಸ್ ಐಕ್ಯೂಬ್ ಮಿಡ್‌ನೈಟ್ ಕಾರ್ನಿವಲ್ ಫೆಸ್ಟಿವಲ್ ಘೋಷಿಸಿದೆ. ಡಿಸೆಂಬರ್ 12ರಿಂದ ಡಿಸೆಂಬರ್ 22ರ ವರೆಗೆ 10 ದಿನಗಳ ಕಾಲ ನಡೆಯಲಿದೆ. ಈ 10 ದಿನದಲ್ಲಿ ಸ್ಕೂಟರ್ ಖರೀದಿಸುವ ಗ್ರಾಹಕರಿಗೆ ಈ ಶೇಕಡಾ 100 ರಷ್ಟು ಕ್ಯಾಶ್‌ಬ್ಯಾಕ್ ಗೆಲ್ಲುವ ಚಾನ್ಸ್ ಅನ್ವಯವಾಗಲಿದೆ. ಮಿಡ್‌ನೈಟ್ ಕಾರ್ನಿವಲ್ ಫೆಸ್ಟಿವಲ್‌ನಲ್ಲಿ ಐಕ್ಯೂಬ್ ಸ್ಕೂಟರ್ ಖರೀದಿಸುವ ಗ್ರಾಹಕರಿಗೆ ಇದು ಭರ್ಜರಿ ಆಫರ್. ಕಾರಣ ಪ್ರತಿ ದಿನ ಒಬ್ಬರನ್ನು ಲಕ್ಕಿ ವಿನ್ನರ್ ಆಗಿ ಆಯ್ಕೆ ಮಾಡಲಿದೆ. ಹೀಗೆ 10 ದಿನಗಳ ಕಾಲ 10 ಲಕ್ಕಿ ವಿನ್ನರ್ ಆಯ್ಕೆಯಾಗಲಿದೆ. ಲಕ್ಕಿ ವಿನ್ನರ್ ಆಗುವ ಗ್ರಾಹಕರಿಗೆ ಸಂಪೂರ್ಣ ಕ್ಯಾಶ್ ವಾಪಸ್ ಆಗಲಿದೆ.
ಭಾರತದಲ್ಲಿದೆ ಅತೀ ದುಬಾರಿ ಸ್ಕೂಟರ್, ಇಲ್ಲಿದೆ ಕಾರಿಗಿಂತ ಹೆಚ್ಚಿನ ಬೆಲೆಯ 5 ದ್ವಿಚಕ್ರ ವಾಹನ!
ಟಿವಿಎಸ್ ಡೀಲರ್‌ಶಿಪ್, ಟಿವಿಎಸ್ ವೆಬ್‌ಸೈಟ್ ಹಾಗೂ ಹಚ್ಚುವರಿಯಾಗಿ ಹಾಕಿರುವ ಅಧಿಕೃತ ಸ್ಟಾಲ್ ಮೂಲಕ ಸ್ಕೂಟರ್ ಖರೀದಿಸುವ ಗ್ರಾಹಕರಿಗೆ ಈ ಆಫರ್ ಅನ್ವಯವಾಗಲಿದೆ. ವಿಶೇಷ ಅಂದರೆ ಈಗಾಗಲೇ ಬುಕ್ ಮಾಡಿರುವ ಗ್ರಾಹಕರಿಗೂ ಶೇಕಡಾ 100 ರಷ್ಟು ಕ್ಯಾಶ್‌ಬ್ಯಾಕ್ ಗೆಲ್ಲುವ ಅವಕಾಶವಿದೆ. ಈಗಾಗಲೇ ಬುಕ್ ಮಾಡಿರುವ ಗ್ರಾಹಕರು ಮಿಡ್‌ನೈಟ್ ಕಾರ್ನಿವಲ್ ಫೆಸ್ಟಿವಲ್ ಅವಧಿಯಲ್ಲಿ ಖರೀದಿ ಮಾಡಿದರೆ ಕ್ಯಾಶ್‌ಬ್ಯಾಕ್ ಆಫರ್ ಅನ್ವಯವಾಗಲಿದೆ.
ಪ್ರತಿ ದಿನ ಒಬ್ಬ ಗ್ರಾಹಕನಿಗೆ ಶೇಕಡಾ 100 ರಷ್ಟು ಕ್ಯಾಶ್‌ಬ್ಯಾಕ್ ಆಫರ್ ಚಾನ್ಸ್ ಇದ್ದರೆ, ಇತರರ ಗ್ರಾಹಕರಿಗೆ 30,000 ರೂಪಾಯಿ ಡಿಸ್ಕೌಂಟ್ ಆಫರ್ ಲಭ್ಯವಿದೆ. ಹೆಚ್ಚುವರಿಯಾಗಿ 3.4 kWh ವೇರಿಯೆಂಟ್ ಸ್ಕೂಟರ್ ಖರೀಸುವ ಗ್ರಾಹಕರಿಗೆ ಉಚಿತ ವಾರೆಂಟಿ 5 ವರ್ಷ ಅಥವಾ 70,000 ಕಿಲೋಮೀಟರ್, 2.2 kWh ವೇರಿಯೆಂಟ್ ಖರೀದಿಸುವ ಗ್ರಾಹಕರಿಗೆ 5 ವರ್ಷ ಅಥವಾ 50,000 ಕಿಲೋಮೀಟರ್ ವಾರೆಂಟಿ ಸಿಗಲಿದೆ.
ಟಿವಿಎಸ್ ಐಕ್ಯೂಬ್ 2.2 kWh , 3.4 kWh ಹಾಗೂ 5.1 kWh ಬ್ಯಾಟರಿ ಪ್ಯಾಕ್ ವೇರಿಯೆಂಟ್ ಸ್ಕೂಟರ್ ಲಭ್ಯವಿದೆ. ಇದರ ಬೆಲೆ 1.29 ಲಕ್ಷ ರೂಪಾಯಿಂದ(ಎಕ್ಸ್ ಶೋ ರೂಂ) ಆರಂಭಗೊಳ್ಳುತ್ತಿದ್ದು, ಟಾಪ್ ಮಾಡೆಲ್ ಬೆಲೆ 1.85 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ಇನ್ನು ಬ್ಯಾಟರಿ ಪ್ಯಾಕ್ ಅನುಗುಣವಾಗಿ ಮೈಲೇಜ್ ರೇಂಜ್ ಬದಲಾಗಿದೆ. ಐಕ್ಯೂಬ್ ಒಂದು ಸಂಪೂರ್ಣ ಚಾರ್ಜ್‌ಗೆ 75 ಕಿಲೋಮೀಟರ್‌ನಿಂದ 150 ಕಿಲೋಮೀಟರ್ ವರೆಗೆ ಮೈಲೇಜ್ ನೀಡಲಿದೆ. ಆಫರ್ ಮೂಲಕ ಸ್ಕೂಟರ್ ಖರೀದಿಸಲು ಬಯಸುವ ಗ್ರಾಹಕರು ಹತ್ತಿರದ ಡೀಲರ್ ಬಳಿ ಆಫರ್ ಖಚಿತಪಡಿಸಿಕೊಳ್ಳಿ.
ಟಿವಿಎಸ್ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ 2020ರಲ್ಲಿ ಬಿಡುಗಡೆಯಾಗಿದೆ. ಭಾರತದಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಬೇಡಿಕೆ ಹೆಚ್ಚಾಗುತ್ತಿದ್ದಂತೆ ಐಕ್ಯೂಬ್ ಮಾರುಕಟ್ಟೆಗೆ ಪ್ರವೇಶ ಪಡೆದಿತ್ತು. ಭಾರತದಲ್ಲಿ ಐಕ್ಯೂಬ್ ಎಲೆಕ್ಟ್ರಿಕ್ ಸ್ಕೂಟರ್ ವಿಭಾಗದಲ್ಲಿ ಹೊಸ ಅಧ್ಯಾಯ ಬರೆದಿತ್ತು. ಪ್ರಮುಖವಾಗಿ ವಿನ್ಯಾಸದಲ್ಲಿ ಐಕ್ಯೂಬ್, ಇತರ ಇಂಧನ ಸ್ಕೂಟರ್‌ಗೆ ಹೆಚ್ಚಿನ ಹೋಲಿಕೆ ಇದೆ. ಈ ಮೂಲಕ ಎಲೆಕ್ಟ್ರಕ್ ಸ್ಕೂಟರ್ ವಿನ್ಯಾಸವನ್ನು ಪ್ರಶ್ನಿಸುತ್ತಿದ್ದ ಹಲವರಿಗೆ ಐಕ್ಯೂಬ್ ಉತ್ತರವಾಗಿತ್ತು. ಜೊತೆಗೆ ಹೆಚ್ಚಿನ ಸುರಕ್ಷತಾ ಫೀಚರ್, ಅತ್ಯಾಕರ್ಷಕ ಬಣ್ಣಗಳಲ್ಲೂ ಐಕ್ಯೂಬ್ ಬಿಡುಗಡೆಯಾಗಿತ್ತು.