ಜಬರ್ದಸ್ತ್ ಪ್ರಿಮಿಯಂ ಬೈಕ್ ಟ್ರಯಂಫ್ ಟ್ರೈಡೆಂಟ್ ರೆಸ್ತೆಗಿಳಿಯಲು ಸಜ್ಜು

ಬ್ರಿಟಿಷ್ ಮೂಲದ ಟ್ರಯಂಫ್ ಮೋಟಾರ್ ಸೈಕಲ್ ಕಂಪನಿಯ ತನ್ನ ಮತ್ತೊಂದು ಜಬರ್ದಸ್ತ್ ಎನ್ನಬಹುದಾದ, ಪವರ್‌ಫುಲ್ ಮೋಟಾರ್ ಸೈಕಲ್ ಟ್ರೈಡೆಂಟ್ 660 ಅನ್ನು ಏಪ್ರಿಲ್ 6ರಂದು ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ. ಕಂಪನಿಯ ಬೈಕುಗಳಲ್ಲೇ ಈ ಬೈಕ್ ಕೈಗೆಟುಕುವ ದರದಲ್ಲಿ ಸಿಗುವ ಬೈಕ್ ಆಗಿದೆ. ಈಗಾಗಲೇ ಕಂಪನಿಯು ಭಾರತದಲ್ಲಿ ಕೆಲವು ಮಾಡೆಲ್‌ ಮೋಟಾರ್ ಸೈಕಲ್‌ಗಳನ್ನು ಮಾರಾಟ ಮಾಡುತ್ತಿದೆ.

Triumph Trident 660 bike will launch on April 6 2021

ಭಾರತೀಯ ರಸ್ತೆಗಿಳಿಯಲು ಮತ್ತೊಂದು ಜಬರ್ದಸ್ತ್ ಪ್ರೀಮಿಯಂ ದ್ವಿಚಕ್ರವಾಹನ ಸಜ್ಜಾಗಿದೆ. ಪವರ್‌ಫುಲ್ ದ್ವಿಚಕ್ರವಾಹನಗಳ ಉತ್ಪಾದನೆಯಲ್ಲಿ ಹೆಸರುವಾಸಿಯಾಗಿರುವ ಬ್ರಿಟನ್ ಮೂಲದ ಟ್ರಯಂಫ್ ಮೋಟಾರ್ ಸೈಕಲ್ ಕಂಪನಿಯು ಭಾರತದಲ್ಲಿ ತನ್ನ ಟ್ರೈಡೆಂಟ್ 660 ದ್ವಿಚಕ್ರವಾಹನ ಬಿಡುಗಡೆ ಮುಂದಾಗಿದೆ.

ಈ ಬೈಕ್ ಅನ್ನು ಜಾಗತಿಕ ಮಾರುಕಟ್ಟೆ ಬಿಡುಗಡೆ ಸಂಬಂಧ ಕಂಪನಿಯು ಕಳೆದ ವರ್ಷವಷ್ಟೇ ಘೋಷಣೆ ಮಾಡಿತ್ತು. ಇದೀಗ ಟ್ರಯಂಫ್ ಮೋಟಾರ್‌ಸೈಕಲ್ ಕಂಪನಿಯು ಭಾರತದಲ್ಲಿ ಏಪ್ರಿಲ್ 6ರಂದು ತನ್ನ ಪವರ್‌ಫುಲ್ ಮೋಟಾರ್‌ಸೈಕಲ್ ಅನ್ನು ಬಿಡುಗಡೆ ಮಾಡುತ್ತಿದೆ. ಟ್ರಯಂಫ್ ಕಂಪನಿಯ ಮಧ್ಯಮ ವ್ಯಾಪ್ತಿಯ ಮೋಟಾರ್ ಸೈಕಲ್ ಆಗಿದ್ದು, ಭಾರತದಲ್ಲಿ ಬಿಡುಡೆಯಾಗುತ್ತಿರುವ ಬೈಕ್, ಕಂಪನಿ ಉತ್ಪಾದಿಸುತ್ತಿರುವ ಬೈಕ್‌ಗಳ ಪೈಕಿ ಕೈಗೆಟುಕುವ ದರದಲ್ಲಿದೆ ಎಂದು ಹೇಳಿಕೊಂಡಿದೆ. ಹಾಗಂತ ತುಂಬಾ ಅಗ್ಗವಾಗಿದೆ ಎಂದೇನೂ  ಭಾವಿಸಬೇಕಿಲ್ಲ. ಈ ಟ್ರಯಂಪ್ ಟ್ರೈಡೆಂಟ್ 660 ಮೋಟಾರ್ ಸೈಕಲ್ ಬೆಲೆ ಅಂದಾಜು 6ರಿಂದ 7 ಲಕ್ಷ ರೂಪಾಯಿವರೆಗೂ ಇರಬಹುದು(ದಿಲ್ಲಿ ಎಕ್ಸ್ ಶೋರೂಮ್) ಎಂದು ಅಂದಾಜಿಸಲಾಗುತ್ತಿದೆ.

ಜಗತ್ತಿನ ಅತ್ಯಂತ ಡೇಂಜರಸ್ ರಸ್ತೆಗಳ ಪಟ್ಟಿಯಲ್ಲಿ ದಕ್ಷಿಣ ಆಫ್ರಿಕಾ ನಂ.1

ಭಾರತೀಯ ಮಾರುಕಟ್ಟೆಗೆ ಏಪ್ರಿಲ್ 6ರಂದು ಬಿಡುಗಡೆಯಾಗಲಿರುವ ಟ್ರಯಂಫ್ ಟ್ರೈಡೆಂಟ್ 660 ದ್ವಿಚಕ್ರವಾಹನವು, ಕವಾಸಕಿ ಝೆಡ್650, ಹೋಂಡಾ ಸಿಬಿ650ಆರ್‌ನಂಥ ಪವರ್‌ಫುಲ್ ಬೈಕ್‌ಗಳಿಗೆ ತೀವ್ರ ಪೈಪೋಟಿ ನೀಡಲಿದೆ ಎಂದು ಹೇಳಲಾಗುತ್ತಿದೆ. ಟ್ರಯಂಫ್ ಮೋಟಾರ್ ಸೈಕಲ್ ಈಗಾಗಲೇ ಅಧಿಕೃತ ಬುಕ್ಕಿಂಗ್ ಕೂಡ ಆರಂಭಿಸಿದೆ.

ಟ್ರಯಂಫ್‌ ಕಂಪನಿಯ ಒಟ್ಟು ಮೋಟಾರ್‌ ಸೈಕಲ್‌ಗಳ ಪೈಕಿ ಅಗ್ಗದ ಬೈಕ್ ಎನಿಸಿಕೊಂಡಿರುವ ಟ್ರೈಡೆಂಟ್ 660 ಸಿಸಿ, ಮೆಕ್ಯಾನಿಕಲ್ ಆಗಿಯಾಗಲಿ, ತಾಂತ್ರಿಕತೆಯಿಂದಾಗಲಿ, ವಿಶೇಷ ಫೀಚರ್‌ಗಳಿಂದಾಗಲಿ ಯಾವುದೇ ಕೊರತೆಯನ್ನು ಹೊಂದಿಲ್ಲ.

ಮೂರು ಸಿಲೆಂಡರ್ ಎಂಜಿನ್ ಹೊಂದಿರುವ ಈ ಟ್ರಯಂಫ್ ಟ್ರೈಡೆಂಟ್ ಮೋಟಾರ್ ಸೈಕಲ್ 660 ಸಿಸಿ ಪವರ್ ಉತ್ಪಾದಿಸುತ್ತದೆ. ಈ ಎಂಜಿನ್ ನಿಮಗೆ ಗರಿಷ್ಠ 79.8 ಬಿಎಚ್‌ಪಿ ಮತ್ತು ಗರಿಷ್ಠ 64 ನ್ಯೂಟನ್ ಮೀಟರ್ಸ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಪವರ್‌ಫುಲ್ ಎಂಜಿನ್‌ 6 ಸ್ಪೀಡ್ ಟ್ರಾನ್ಸಿಮಿಷನ್‌ನೊಂದಿಗೆ ಬರುತ್ತದೆ.

ಎಲೆಕ್ಟ್ರಾನಿಕ್ಸ್ ರೈಡರ್ ನೆರವು, ರೋಡ್ ಮತ್ತು ರೈನ್ ಮೋಡ್, ಟ್ರಾಕ್ಷನ್ ಕಂಟ್ರೋಲ್, ಥ್ರೋಟಲ್  ಬೈ ವೈರ್ ಸೇರಿದಂತೆ ಇನ್ನಿತರ ಫೀಚರ್‌ಗಳೊಂದಿಗೆ ಈ ಟ್ರಯಂಫ್ ಟ್ರೈಡೆಂಟ್ 660 ಮೋಟಾರ್ ಸೈಕಲ್ ಬರುತ್ತದೆ. ಇಷ್ಟು ಮಾತ್ರವಲ್ಲದೇ, ಬ್ಲೂಟೂಥ್ ಜೊತೆಗೆ ಫೋನ್, ಮೆಸೆಜ್‌ಗಾಗಿ ಈ ಮೋಟಾರ್ ಸೈಕಲ್ ಟಿಎಫ್‌ಟಿ ಸ್ಕ್ರೀನ್  ಹೊಂದಿದೆ. ಇದರ ಜೊತೆಗೆ, ಟ್ರಯಂಫ್ ಟ್ರೈಡೆಂಟ್ 660 ಮೋಟಾರ್ ಸೈಕಲ್, ಗೋಪ್ರೋ ಕಂಟ್ರೋಲ್ ಇದ್ದು, ಆಪ್ಷನಲ್ ಆಗಿದೆ.

4.10 ಕೋಟಿ ರೂ. ಬೆಲೆಯ ಬೆಂಟಗಾ ಐಷಾರಾಮಿ ಎಸ್‌ಯುವಿ ಭಾರತದಲ್ಲಿ ಬಿಡುಗಡೆ

ಭಾರತದಲ್ಲಿ ಬಿಡುಗಡೆಯಾಗಲಿರುವ ಟ್ರಯಂಫ್ ಟ್ರೈಡೆಂಟ್ 660 ಮೋಟಾರ್ ಸೈಕಲ್ ಹೊರ ಭಾಗದಲ್ಲಿ ಸಾಧಾರಣವಾದ ವಿನ್ಯಾಸವನ್ನು ಹೊಂದಿದ್ದು, ಆಕರ್ಷಕವಾಗಿದೆ. ಈ ಮೋಟಾರ್‌ ಸೈಕಲ್‌ನ ಮುಂಭಾಗದಲ್ಲಿ ವೃತ್ತಾಕಾರದ ಹೆಡ್‌ಲ್ಯಾಂಪ್ ನೀಡಲಾಗಿದೆ. ಈ ಹೆಡ್‌ಲ್ಯಾಂಪ್ ಎಲ್ಇಡಿ ಲೈಟ್‌ನಿಂಗ್‌ನೊಂದಿಗೆ ಬರುತ್ತದೆ.

ಇನ್ನು ಈ ಟ್ರಯಂಪ್ ಟ್ರೈಡೆಂಟ್ ಮೋಟಾರ್‌ಸೈಕಲ್‌ನ ಇಂಧನ ಟ್ಯಾಂಕ್ ಆಕರ್ಷಕವಾಗಿದ್ದು, ಬೈಕ್‌ನ ಸೀಟನೊಂದಿಗೆ ಸಂಯೋಜನೆಯನ್ನು ಹೊಂದಿದೆ. ಭಾರತದಲ್ಲಿ ಕಂಪನಿಯು ಟ್ರೈಡೆಂಟ್ 660 ಮೋಟಾರ್ ಸೈಕಲ್ ಅನ್ನು ನಾಲ್ಕು ಬಣ್ಣಗಳಲ್ಲಿ ಪರಿಚಯಿಸಲು ಮುಂದಾಗಿದೆ. ಮ್ಯಾಟ್ ಜೆಟ್ ಬ್ಲ್ಯಾಕ್ ಮತ್ತು ಮ್ಯಾಟ್ ಸಿಲ್ವರ್ ಐಸ್, ಕ್ರಿಸ್ಟಲ್ ವೈಟ್, ಸಿಲ್ವರ್ ಐಸ್ ಮ್ತತು ಡಿಯಬ್ಲೋ ರೆಡ್ ಹಾಗೂ ಸ್ಯಾಪ್ಪಹೈರ್ ಬ್ಲ್ಯಾಕ್ ಬಣ್ಣಗಳಲ್ಲಿ ಈ ಮೋಟಾರ್ ಸೈಕಲ್ ಬಳಕೆದಾರರಿಗೆ ಸಿಗಲಿದೆ.

Triumph Trident 660 bike will launch on April 6 2021

ಭಾರತದಲ್ಲಿ ಬಿಡುಗಡೆಯಾಗಲಿರುವ ಈ ಟ್ರೈಡೆಂಟ್ 660 ಮೋಟಾರ್ ಸೈಕಲ್ ಮಾರಾಟಕ್ಕೆ ಕಂಪನಿಯು ಈಗಾಗಲೇ ಬುಕ್ಕಿಂಗ್ ಕೂಡ ಆರಂಭಿಸಿದೆ. 50 ಸಾವಿರ ರೂಪಾಯಿ ಕೊಟ್ಟು ಬೈಕ್ ಮುಂಗಡವಾಗಿ  ಬುಕ್ಕಿಂಗ್ ಮಾಡಿಕೊಳ್ಳಬಹುದಾಗಿದೆ. ಭಾರತದಲ್ಲಿ ಟ್ರಯಂಫ್ ಮೋಟಾರ್ ಸೈಕಲ್ ಕಂಪನಿಯು ಸ್ಟ್ರೀಟ್ ಟ್ರಿಪಲ್ ಆರ್ ಎಸ್ ಮತ್ತು ಸ್ಟ್ರೀಟ್ ಟ್ರಿಪಲ್ ಆರ್ ಬೈಕ್‌ಗಳನ್ನು ಮಾರಾಟ ಮಾಡುತ್ತಿದೆ.

ಪೆಟ್ರೋಲ್, ಡೀಸೆಲ್ ವಾಹನ ಯುಗ ಮುಕ್ತಾಯ? ಎಲೆಕ್ಟ್ರಿಕ್ ವಾಹನಗಳ ಭರಾಟೆ ಶುರು

Latest Videos
Follow Us:
Download App:
  • android
  • ios