Asianet Suvarna News Asianet Suvarna News

Motorbike: ಸುಜುಕಿ ಅವೆನಿಸ್ 125 ಸ್ಕೂಟರ್ ಲಾಂಚ್, ಬೆಲೆ ಎಷ್ಟು?

ದೇಶದ ದ್ವಿಚಕ್ರವಾಹನ ತಯಾರಿಕಾ ಕಂಪನಿಗಳಲ್ಲಿ ಒಂದಾಗಿರುವ ಸುಜುಕಿ ಮೋಟಾರಸೈಕಲ್ ಇಂಡಿಯಾ (Suzuki Motorcycle India),  ಅವೆನಿಸ್ 125 (Suzuki Avenis 125) ಎಂಬ ಹೊಸ ಸ್ಕೂಟರ್ ಅನ್ನು ಲಾಂಚ್ ಮಾಡಿದೆ. ಈ ಸ್ಕೂಟರ್‌ಗೆ ಬುಕ್ಕಿಂಗ್ ಆರಂಭವಾಗಿದೆ. ನಾಲ್ಕು ಬಣ್ಣಗಳ ಆಯ್ಕೆಯಲ್ಲಿ ದೊರೆಯಲಿರುವ ಸ್ಕೂಟರ್ ಸ್ಪೂರ್ಟಿ ಲುಕ್ ಹೊಂದಿರುವ ಕಾರಣ ಹೆಚ್ಚು ಅತ್ಯಾಕರ್ಷಕವಾಗಿದೆ.

Suzuki Avenis 125 Scooter launched and check details
Author
Bengaluru, First Published Nov 19, 2021, 2:01 PM IST
  • Facebook
  • Twitter
  • Whatsapp

ತನ್ನ ಪ್ರೀಮಿಯಂ ಹಾಗೂ ಬಜೆಟ್ ಸ್ಕೂಟರ್, ದ್ವಿಚಕ್ರವಾಹನ ಮೂಲಕ ಭಾರತೀಯ ಮಾರುಕಟ್ಟೆಯಲ್ಲಿ ಭದ್ರ ಸ್ಥಾನವನ್ನು ಪಡೆದುಕೊಂಡಿರುವ ಸುಜುಕಿ ಮೋಟಾರ್‌ಸೈಕಲ್ ಇಂಡಿಯಾ (Suzuki Motorcycle India) ಮತ್ತೊಂದು ಸ್ಕೂಟರ್ ಅನ್ನು ಸದ್ದಿಲ್ಲದೇ ಬಿಡುಗಡೆ ಮಾಡಿದೆ. 2021 ಸುಜುಕಿ ಅವೆನಿಸ್ 125 (Suzuki Avenis 125) ಸ್ಪೋರ್ಟಿ ಸ್ಕೂಟರ್ ಭಾರತೀಯ (India) ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಸುಜುಕಿ ಮೋಟಾರ್‌ಸೈಕಲ್ ಇಂಡಿಯಾ (Suzuki Motorcycle India) ಕಂಪನಿಯ ಹೊಸ ಸ್ಕೂಟರ್ ಆಗಿದೆ. ನೋಡಲು ಸಾಕಷ್ಟು ಆಕರ್ಷಕವಾಗಿರುವ ಈ ಸ್ಕೂಟರ್ ತನ್ನ ವಿಶೇಷತೆಗಳಿಂದಾಗಿಯೂ ಗಮನ ಸೆಳೆಯುತ್ತದೆ. ಈ ಹೊಸ ಸುಜುಕಿ ಅವೆನಿಸ್ 125 (Suzuki Avenis 125) ಸ್ಕೂಟರ್‌ನ ಫೀಚರ್, ಸ್ಟೈಲ್, ಡಿಸೈನ್‌ ಎಲ್ಲವನ್ನು ವಿಶ್ಲೇಷಿಸಿದರೆ, ಸುಜುಕಿ ಮೋಟಾರ್‌ಸೈಕಲ್ ಇಂಡಿಯಾ ಕಂಪನಿಯು, ಟಿವಿಎಸ್‌ನ ಎನ್ಟಾರ್ಕ್ (TVS NTorq), ಹೀರೋ ಮಿಸ್ಟ್ರೋ ಎಡ್ಜ್ (Hero Maestro Edge), ಹೋಂಡಾ ಗ್ರಾಜಿಯಾ 125 (Honda Grazia 125) ಮತ್ತು ಎಪ್ರಿಲಿಯಾ ಎಸ್ಆರ್ 125 (Aprilia SR 125) ಸ್ಕೂಟರ್‌ಗಳಿಗೆ ತೀವ್ರ ಸ್ಪರ್ಧೆಯನ್ನು ಒಡ್ಡಲಿದೆ ಎಂಬುದು ಮೇಲ್ನೋಟಕ್ಕೆ ಪಕ್ಕಾ ಆಗುತ್ತದೆ.

ಈ ಸುಜುಕಿ ಅವೆನಿಸ್ 125 ಸ್ಕೂಟರ್  ಬೆಲೆ 86,700 ಆರಂಭಿಕ ಬೆಲೆಯಾಗಿದ್ದು ಅದು 87,000 ರೂ.ವರೆಗೂ ಏರಿಕೆಯಾಗಬಹುದು. ಇದು ಶೋರೂಂ ಬೆಲೆಯಾಗಿದೆ. ಸುಜುಕಿ ಅಕ್ಸೆಸ್ 125 (Suzuki Access 125) ಮತ್ತು ಬರ್ಗ್‌ಮ್ಯಾನ್ ಸ್ಟ್ರೀಟ್ 125 (Burgman Street 125) ಜೊತೆಗೆ ಈ ಅವೆನಿಸ್ 125 (Avenis 125) ಸ್ಕೂಟರ್‌ ಅನ್ನು ಕಂಪನಿಯು ಮಾರಾಟ ಮಾಡಲಿದೆ.

 

 

ಸುಜುಕಿ ಅವೆನಿಸ್ 125 ಸ್ಕೂಟರ್ 125 ಸಿಸಿ ಸಿಂಗಲ್ ಸಿಲಿಂಡರ್, ಏರ್ ಕೂಲ್ಡ್ ಫುಯೆಲ್ ಇಂಜೆಕ್ಟಡ್ ಎಂಜಿನ್‌ನೊಂದಿಗೆ ಬರುತ್ತದೆ. ಈ ಎಂಜಿನ್ 6750 ಆರ್‌ಪಿಎಂನಲ್ಲಿ ಗರಿಷ್ಠ  8.6 ಬಿಎಚ್‌ಪಿ ಪವರ್ ಉತ್ಪಾದಿಸಿದರೆ, 5,500 ಆರ್‌ಪಿಎಂನಲ್ಲಿ ಗರಿಷ್ಠ 10 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಹಾಗಾಗಿ, ಎಂಜಿನ್ ಎಳೆಯುವ ಶಕ್ತಿಯನ್ನು ಹೆಚ್ಚಿದೆ ಎಂದು ಹೇಳಬಹುದು. ಅಂದಾಜು 106 ಕೆಜಿಯಷ್ಟು ತೂಕವನ್ನು ಈ ಸ್ಕೂಟರ್ ಹೊಂದಿದೆ. ಎಂಜಿನ್ ಸಿವಿಟಿ ಯುನಿಟ್‌ನೊಂದಿಗೆ ಸಂಯೋಜಿತಗೊಂಡಿದೆ. 

EV Two Wheelers Launch: ಬೂಮ್ ಕಾರ್ಬೆಟ್ ಅನ್ನು ಇಎಂಐ ಮೂಲಕ ಖರೀದಿಸಿ!

ಮಸ್ಕಲರ್ ಫ್ರಂಟ್ ಏಪ್ರಾನ್‌ನೊಂದಿಗೆ ಸ್ಕೂಟರ್‌ನ ಮುಂಬದಿ ಲುಕ್ ಸ್ಪೋರ್ಟಿಯಾಗಿದೆ. ಟ್ರೆಪ್‌ಯೋಡಿಲ್ ಹೆಡ್‌ಲ್ಯಾಂಪ್ (Headlamp) ಸೌಂದರ್ಯವನ್ನು ಹೆಚ್ಚಿಸಿವೆ. ಸ್ಕೂಟರ್‌ ಮುಂಬದಿಯಿಲ್ಲಿ ಟೆಲೆಸ್ಕಾಪಿಕ್ ಫೋರ್ಕ್ಸ್ ಮತ್ತು ಹಿಂಬದಿಯಲ್ಲಿ ಸಿಂಗಲ್ ಶಾಕ್‌ಅಬ್ಸವರ್ ಹೊಂದಿದೆ. ಹ್ಯಾಂಡಲ್‌ಬಾರ್ ಕಾವಲ್‌ನಲ್ಲಿ ಟರ್ನ್ ಇಂಡಿಕೇಟರ್‌ಗಳನ್ನು ಅಳವಡಿಸಲಾಗಿದೆ. ಸೈಡ್ ಪ್ಯಾನಲ್‌ಗಳು ಚರುಕುನೋಟವನ್ನು ಹೊಂದಿವೆ. ಮೋಟಾರ್‌ಸೈಕಲ್ ಪ್ರೇರಿತ ಟರ್ನ್ ಇಂಡಿಕೇಟರ್‌ಗಳೊಂದಿಗೆ ಎಲ್‌ಇಡಿ (LED) ಟೇಲ್ ಲೈಟ್ಸ್ ಸ್ಕೂಟರ್‌  ಹಿಂಬದಿಯ ಲುಕ್ ಅನ್ನು ಹೆಚ್ಚಿಸಿವೆ. 

ಪವರ್‌ಫುಲ್ ಎಂಜಿನ್ ಜೊತೆಗೆ ಅವೆನಿಸ್ 125 ಸ್ಕೂಟರ್ ಹಲವು ವಿಶಿಷ್ಟ ಫೀಚರ್‌ಗಳನ್ನು ಹೊಂದಿದೆ ಎಂದು ಹೇಳಬಹುದು.  ಸುಜುಕಿ ರೈಡ್ ಕನೆಕ್ಟ್ (Suzuki Raid Connect) ಮೂಲಕ ಬ್ಲೂಟೂತ್‌ನೊಂದಿಗೆ ಪೂರ್ಣ ಪ್ರಮಾಣದ ಡಿಜಿಟಲ್ ಕ್ಲಸ್ಟರ್ ಒಳಗೊಂಡಿದೆ. ಈ ಯುನಿಟ್‌ ಅನ್ನು ಮಾಲೀಕರ ಸ್ಮಾರ್ಟ್‌ಪೋನ್ ಜತೆಗೆ ಸಂಪರ್ಕಿಸಬಹುದು. ಆ ಮೂಲಕ ಟರ್ನ್ ಬೈ ಟರ್ನ್ ನ್ಯಾವಿಗೇಷನ್, ಮೆಸೆಜ್, ಕಾಲ್ ಅಲರ್ಟ್‌ಗಳನ್ನು ಪಡೆದುಕೊಳ್ಳಲು ಸಾಧ್ಯವಾಗಲಿದೆ.

ಸುಜುಕಿ ಅವೆನಿಸ್ 125 ಸ್ಪೋರ್ಟಿ ಸ್ಕೂಟರ್ ಸೀಟ್ ಉದ್ದವಾಗಿದೆ. ಅದರ ಕೆಳಗೆ ಸಾಕಷ್ಟು ಸ್ಪೇಸ್ ಇದ್ದು, ಯುಎಸ್‌ಬಿ ಚಾರ್ಜರ್ ಮತ್ತು ಸೈಡ್ ಸ್ಟ್ಯಾಂಡ್ ಇಂಟರ್‌ಲಾಕ್ ನೀಡಲಾಗಿದೆ. ಕಂಪನಿಯು ಈ ಹೊಸ ಸ್ಕೂಟರ್ ಅನ್ನು ಗ್ರಾಹಕರಿಗೆ ನಾಲ್ಕು ಬಣ್ಣಗಳಲ್ಲಿ ಮಾರಾಟ ಮಾಡಲಿದೆ. ಅವು- ಬೂದು (Grey), ಆರೇಂಜ್ (Orange), ವೈಟ್ (White) ಮತ್ತು ಬ್ಲೂ (Blue). ನೋಡಲು ಅತ್ಯಾಕರ್ಷಕವಾಗಿರುವ ಈ ಸ್ಕೂಟರ್ ಅನ್ನು ಗ್ರಾಹಕರು ಯಾವ ರೀತಿ ಸ್ವೀಕರಿಸುತ್ತಾರೆ ಕಾದು ನೋಡಬೇಕು.

RoadKing Yezdi is Back: ಶೀಘ್ರವೇ ಹೊಸತಲೆಮಾರಿನ ಬೈಕ್ ರಿಲಾಂಚ್?

Follow Us:
Download App:
  • android
  • ios