RoadKing Yezdi is Back: ಶೀಘ್ರವೇ ಹೊಸತಲೆಮಾರಿನ ಬೈಕ್ ರಿಲಾಂಚ್?
ಭಾರತೀಯ ರಸ್ತೆಗಳಲ್ಲಿ ರಾಜನಂತೆ ಮೆರೆದಿದ್ದ ರೋಡ್ ಕಿಂಗ್ ಯಜ್ಡಿ(Yezdi) ಮತ್ತೆ ರಸ್ತೆಗಿಳಿಯಲು ಸಿದ್ಧತೆ ಮಾಡಿಕೊಳ್ಳುತ್ತಿದೆ. ಹೊಸ ತಲೆಮಾರಿನ ಯಜ್ಡಿ ಮೋಟಾರ್ ಸೈಕಲ್ ಸ್ಪೈ ಚಿತ್ರಗಳು ಈಗಾಗಲೇ ವೈರಲ್ ಆಗಿವೆ. ಏತನ್ಮಧ್ಯೆ, ಯಜ್ಡಿ ಇನ್ನು ಮುಂದೆ ಜಾವಾ(Jawa) ಮೋಟಾರ್‌ಸೈಕಲ್ ಭಾಗವಾಗಿರುವುದಿಲ್ಲ ಎಂದು ಘೋಷಿಸಿಕೊಂಡಿದೆ.
ಐಕಾನಿಕ್ ಜಾವಾ (Jawa) ಮೋಟಾರ್‌ಸೈಕಲ್ ಮರು ಬಿಡುಗಡೆಯೊಂದಿಗೆ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಇದೀಗ ಯಜ್ಡಿ ಮೋಟಾರ್‌ಸೈಕಲ್ (Yezdi) ಬ್ರ್ಯಾಂಡಿನ ಸರದಿ. ರಿಲಾಂಚ್ ಆಗಲಿರುವ ರೋಡ್‌ಕಿಂಗ್ ಯಜ್ಡಿ ಸ್ಪೈ ಚಿತ್ರಗಳು ಈಗಾಗಲೇ ಆನ್‌ಲೈನ್‌ನಲ್ಲಿ ಹರಿದಾಡುತ್ತಿರುವುದನ್ನು ಕಾಣಬಹುದು. ಒಂದು ಕಾಲದಲ್ಲಿ ಭಾರತೀಯ ರಸ್ತೆಗಳ ತುಂಬ ಯಜ್ಡಿ ಮೋಟಾರ್‌ಸೈಕಲ್‌ನ ಸದ್ದೇ ಇತ್ತು. ಬಹುತೇಕ ಎಲ್ಲರ ಅಚ್ಚುಮೆಚ್ಚಿನ ಬೈಕ್ ಆಗಿತ್ತು. ಆದರೆ, ಕಾಲಾಂತರದಲ್ಲಿ ಹೊಸ ತಂತ್ರಜ್ಞಾನ, ಹೊಸ ಫೀಚರ್‌ಗಳ ಬೈಕ್‌ಗಳು ರಸ್ತೆಗಿಳಿಯುತ್ತಿದ್ದಂತೆ ರೋಡ್‌ಕಿಂಗ್ ಯಜ್ಡಿ ಆಗಲೀ, ಜಾವಾ ಆಗಲೀ ತಮ್ಮ ವೈಭವವನ್ನು ಕಾಯ್ದುಕೊಳ್ಳಲು ಸಾಧ್ಯವಾಗಲಿಲ್ಲ. ಇದೀಗ ಅದೇ ಬ್ರ್ಯಾಂಡಿನ ಮೋಟಾರ್‌ಸೈಕಲ್‌ಗಳು ಅತ್ಯಾಧುನಿಕ ಫೀಚರ್‌ಗಳು, ಆಧುನಿಕ ಶೈಲಿಯೊಂದಿಗೆ ಮತ್ತೆ ಬರುತ್ತಿವೆ. ಈ ಮೊದಲು ಜಾವಾ ಇಂಥ ಪ್ರಯತ್ನ ಮಾಡಿತ್ತು. ಇದೀಗ ಯಜ್ಡಿ ಬೈಕ್‌ನ ಸರಿಯಾಗಿದೆ.
2018ರಲ್ಲಿ ಜಾವಾ (Jawa) ರಿಲಾಂಚ್ ಆಗಿತ್ತು. ಇದೀಗ ಕಂಪನಿಯು ಹೊಸ ತಲೆಮಾರಿನ ಯಜ್ಡಿ ಮೋಟಾರ್‌ಸೈಕಲ್ ಅನ್ನು ನವೆಂಬರ್ 2022ರಲ್ಲಿ ರಿಲಾಂಚ್ ಮಾಡಲು ಮುಂದಾಗಿದೆ. ಸಾರ್ವಜನಿಕ ರಸ್ತೆಗಳಲ್ಲಿ ಈಗಾಗಲೇ ಈ ಹೊಸ ಬೈಕ್ ಪ್ರಯೋಗಾರ್ಥ ಸಂಚರಿಸಿದ್ದನ್ನು ಕಂಡಿರಬಹುದು. ಜಾವಾ ಮೋಟಾರ್‌ಸೈಕಲ್, ಸೋಷಿಯಲ್ ಮೀಡಿಯಾದ ತನ್ನ ಅಧಿಕೃತ ಹ್ಯಾಂಡಲ್‌ನಲ್ಲಿ ಯಜ್ಡಿ ಮರು ಲಾಂಚ್ ಬಗ್ಗೆ ಮಾಹಿತಿ ಷೇರ್ ಮಾಡಿಕೊಂಡಿದೆ. ಈಗ ಟೀಸರ್ (Teaser) ಕೂಡ ಬಿಡುಗಡೆ ಮಾಡಲಾಗಿದೆ. ಆದರೆ, ಹೊಸ ತಲೆಮಾರಿನ ಯಜ್ಡಿ ಬಿಡುಗಡೆಯ ಬಗ್ಗೆ ಯಾವುದೇ ಮಾಹಿತಿಯನ್ನು ನೀಡಿಲ್ಲ. ಆದರೆ, ಹೊಸ ಯಜ್ಡಿ ಈ ತಿಂಗಳಲ್ಲೇ ಅನಾವರಣಗೊಳ್ಳುವ ಸಾಧ್ಯತೆ ಇದೆ.
ಜಾವಾದಿಂದ ಬೇರ್ಪಟ್ಟ ಯಜ್ಡಿ
ಐಕಾನಿಕ್ ಬ್ರ್ಯಾಂಡ್ ಯಡ್ಡಿ ಇನ್ನು ಮುಂದೆ ಜಾವಾ ಮೋಟಾರ್‌ಸೈಕಲ್ ಕಂಪನಿಯ ಭಾಗವಾಗಿರುವುದಿಲ್ಲ ಬುಧವಾರ ಘೋಷಿಸಿದೆ. ಇನ್ನು ಮುಂದೆ ಯಜ್ಡಿ ಬ್ರ್ಯಾಂಡ್ ಸ್ವಂತವಾಗಿ ಕಾರ್ಯನಿರ್ವಹಿಸಲಿದೆ ಎಂದು ಜಾವಾ ಮೋಟಾರ್‌ಸೈಕಲ್ ತನ್ನ ಟ್ವಿಟರ್ ಖಾತೆಯಲ್ಲಿ ಖಚಿತಪಡಿಸಿದೆ.
50 ಲಕ್ಷ TVS ಸ್ಕೂಟಿ ಮಾರಾಟ; ಭಾರತೀಯ ಆಟೋಮೊಬೈಲ್ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು!
ಕ್ಲಾಸಿಕ್ ಲೆಜೆಂಡ್ಸ್ (Classic Legends) ಸಹ ಸಂಸ್ಥಾಪಕ ಅನುಪಮ್ ಥರೇಜಾ (Anupam Thareja) ಅವರು ಟ್ವೀಟ್ ಮಾಡಿ, ಮತ್ತೊಬ್ಬ ಸಹೋದರರನ್ನು(ಯಜ್ಡಿ) ಮರಳಿ ತರಲು ಈಗ ಸಮಯ ಬಂದಿದೆ ಎಂದು ಬರೆದುಕೊಂಡಿದ್ದರು. ಈಗಾಗಲೇ ಯಜ್ಡಿ ಮರು ಲಾಂಚ್ ಬಗ್ಗೆ ಅನೇಕ ಸುದ್ದಿಗಳಾಗಿವೆ. ಬಹುಶಃ ಈ ಯಜ್ಡಿ ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಅಡ್ವೆಂಚರ್ ಬೈಕ್ ರೀತಿಯಲ್ಲೇ ಇರಲಿದ್ದು ಮತ್ತು ಅದೇ ಸೆಗ್ಮೆಂಟ್‌ನಲ್ಲಿರುವುದರಿಂದ ಬೆಲೆಯನ್ನೂ ಊಹಿಸಬಹುದಾಗಿದೆ.
ಮುಂಬರುವ ಈ ಯಜ್ಡಿ ಎಡಿವಿ ಬೈಕ್, ಈಗಾಗಲೇ ಚಾಲ್ತಿಯಲ್ಲಿರುವ ಜಾವಾ ಎಂಜಿನ್ ಹೊಂದಿರುವ ಸಾಧ್ಯತೆ ಇದೆ. ಹಾಗಾಗಿ, ಜಾವಾ ಪೆರಾಕ್ 334 ಸಿಸಿ, ಸಿಂಗಲ್ ಸಿಲಿಂಡರ್ ಲಿಕ್ವಿಡ್ ಕೂಲ್ಡ್ ಎಂಜಿನ್ ಹೊಂದಿದೆ. ಹಾಗಾಗಿ ಈ ಎಂಜಿನ್ ಅನ್ನು ನೀವು ಯಜ್ಡಿಯಲ್ಲೂ ನಿರೀಕ್ಷಿಸಬಹುದು. ಈ ಎಂಜಿನ್ ಗರಿಷ್ಠ 30 ಬಿಎಚ್‌ಪಿ ಪವರ್ ಹಾಗೂ ಗರಿಷ್ಠ 32.7 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ.
ಫುಲ್ ಎಲ್‌ಇಡಿ ಲೈಟನಿಂಗ್, ಡಿಜಿಟಲ್ ಇನ್ಸುಟ್ರುಮೆಂಟಲ್ ಕ್ಲಸ್ಟರ್, ಬ್ಲೂಟೂಥ್ ಕನೆಕ್ಟಿವಿಟಿ, ಡುಯಲ್ ಚಾನೆಲ್ ಎಬಿಎಸ್, ವೈರ್-ಸ್ಪೋಕ್ ವ್ಹೀಲ್, ಟೆಲೆಸ್ಕಾಪಿಕ್ ಫ್ರಂಟ್ ಫೋರ್ಕ್ಸ್, ರಿಯರ್ ಮೋನೋ ಶಾಕ್‌ಅಬ್ಸವರ್ ಮತ್ತು ಡಿಸ್ಕ್‌ಬ್ರೇಕ್‌ಗಳನ್ನು ನೋಡಬಹುದಾಗಿದೆ. ಇದೆಲ್ಲವೂ ಸೋರಿಕೆಯಾದ ಮಾಹಿತಿಗಳಷ್ಟೇ. ಆದರೆ, ರೋಡ್ ಕಿಂಗ್ ಯಜ್ಡಿ ಯಾವ ರೀತಿಯಲ್ಲಿ ಮರು ಲಾಂಚ್ ಆಗಲಿದೆ ಎಂಬುದು ಅದು ಬಿಡುಗಡೆಗೊಂಡ ಬಳಿಕಷ್ಟವೇ ಸ್ಪಷ್ಟವಾಗಿ ಗೊತ್ತಾಗಲಿದೆ.
ಹೊಚ್ಚ ಹೊಸ ಪಲ್ಸರ್ N250 ಹಾಗೂ F250 ಬೈಕ್ ಬಿಡುಗಡೆ !