Asianet Suvarna News Asianet Suvarna News

Simple Electric Scooter ಓಲಾ ಹಿಂದಿಕ್ಕಿಲು ಸಿಂಪಲ್ ಎನರ್ಜಿ ಪ್ಲಾನ್, ಆರಂಭವಾಗುತ್ತಿದೆ ವಿಶ್ವದ ಅತೀ ದೊಡ್ಡ ಉತ್ಪಾದನಾ ಘಟಕ!

  • ಬೆಂಗಳೂರು ಮೂಲದ ಸಿಂಪಲ್ ಎನರ್ಜಿ ಸ್ಕೂಟರ್ ಕಂಪನಿಯಿಂದ ಮಹತ್ವದ ಹೆಜ್ಜೆ
  • ಓಲಾಗಿಂತ ದೊಡ್ಡ, ವಿಶ್ವದ ಅತೀ ದೊಡ್ಡ ಎಲೆಕ್ಟ್ರಿಕ್ ಸ್ಕೂಟರ್ ಉತ್ಪದಾನ ಘಟಕ
  • ಮೈಲೇಜ್‌, ಬೆಲೆಯಲ್ಲಿ ಓಲಾ ಹಿಂದಿಕ್ಕಿರುವ ಸಿಂಪಲ್ ಒನ್ ಸ್ಕೂಟರ್, ನಿರ್ಮಾಣದಲ್ಲೂ ನಂ.1
Simple energy invest up to Rs 2500 crore to set up world largest electic scooter production unit ckm
Author
Bengaluru, First Published Dec 11, 2021, 5:32 PM IST

ಬೆಂಗಳೂರು(ಡಿ.11):  ಎಲೆಕ್ಟ್ರಿಕ್ ಸ್ಕೂಟರ್(Electric Scooter) ವಿಭಾಗದಲ್ಲಿ ಭಾರತ ಕ್ರಾಂತಿ ಮಾಡುತ್ತಿದೆ. ಹೊಸ ಹೊಸ ಸ್ಕೂಟರ್, ಗರಿಷ್ಠ ಮೈಲೇಜ್ ರೇಂಜ್, ಕಡಿಮೆ ಬೆಲೆ, ಸುಲಭ ಚಾರ್ಜಿಂಗ್ ಸೇರಿದಂತೆ ಹಲವು ಆವಿಷ್ಕಾರಗಳು ಗ್ರಾಹಕರ ಹೊರೆ ಕಡಿಮೆ ಮಾಡುತ್ತಿದೆ. ಇದೀಗ ಬೆಂಗಳೂರು(Bengaluru) ಮೂಲದ ಸಿಂಪಲ್ ಎನರ್ಜಿ ಸ್ಕೂಟರ್(Simple Energy) ಕಂಪನಿ, ವಿಶ್ವದ ಅತೀ ದೊಡ್ಡ ಎಲೆಕ್ಟ್ರಿಕ್ ಸ್ಕೂಟರ್ ಘಟಕ ನಿರ್ಮಾಣಕ್ಕೆ ಮುಂದಾಗಿದೆ. ಈ ಮೂಲಕ ಓಲಾ(Ola Electric scooter) ಹಿಂದಿಕ್ಕಿಲು ರಡಿಯಾಗಿದೆ.

ಸದ್ಯ ಓಲಾ ಅತೀ ದೊಡ್ಡ ಎಲೆಕ್ಟ್ರಿಕ್ ಸ್ಕೂಟರ್ ಘಟಕ ಹೊಂದಿದೆ. ಇದೀಗ ಓಲಾ ಸ್ಕೂಟರ್ ಘಟಕವನ್ನು ಹಿಂದಿಕ್ಕಬಲ್ಲ ಅತೀ ದೊಡ್ಡ ಎಲೆಕ್ಟ್ರಿಕ್ ಸ್ಕೂಟರ್ ಘಟಕವನ್ನು ಸಿಂಪಲ್ ಎನರ್ಜಿ ನಿರ್ಮಾಣ ಮಾಡಲು ರೆಡಿಯಾಗಿದೆ. ಇದಕ್ಕಾಗಿ ತಮಿಳುನಾಡು(Tamil Nadu) ಸರ್ಕಾರದ ಜೊತೆ ಒಪ್ಪಂದ ಮಾಡಿಕೊಂಡಿದೆ. ತಮಿಳುನಾಡಿನಲ್ಲಿ ಸಿಂಪಲ್ ಎನರ್ಜಿ ಎಲೆಕ್ಟ್ರಿಕ್ ಸ್ಕೂಟರ್ ಘಟಕ ತಲೆ ಎತ್ತಲಿದೆ.

240 ಕಿ.ಮೀ ಮೈಲೇಜ್, ಬೆಂಗಳೂರಿನ ಸಿಂಪಲ್ ಒನ್ ಎಲೆಕ್ಟ್ರಿಕ್ ಸ್ಕೂಟರ್

ಸಿಂಪಲ್ ಎನರ್ಜಿ ಬಿಡುಗಡೆ ಮಾಡಿರುವ ಸಿಂಪಲ್ ಒನ್(Simple one Scooter) ಸ್ಕೂಟರ್ ಬೆಲೆ  1,09,999 ರೂಪಾಯಿ(ಎಕ್ಸ್ ಶೋ ರೂಂ). ಇದು ಓಲಾ ಸ್ಕೂಟರ್‌ಗಿಂತ ಕಡಿಮೆ. ಇನ್ನು ಇದರ ಮೈಲೇಜ್ ಬರೊಬ್ಬರಿ 230 ಕಿ.ಮೀ. ಇದು ಭಾರತದಲ್ಲಿ ಲಭ್ಯವಿರುವ ಗರಿಷ್ಠ ಮೈಲೇಜ್ ನೀಡಬಲ್ಲ ಸ್ಕೂಟರ್ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ. ಆಗಸ್ಟ್ 15, 2021ಕ್ಕೆ ಸಿಂಪಲ್ ಎನರ್ಜಿ, ಸಿಂಪಲ್ ಒನ್ ಸ್ಕೂಟರ್ ಬಿಡುಗಡೆ ಮಾಡಿದೆ. 

ಇದೀಗ ಬರೋಬ್ಬರಿ 2,500 ಕೋಟಿ ರೂಪಾಯಿ ಹೂಡಿಕೆ ಮಾಡುತ್ತಿದೆ. ತಮಿಳುನಾಡಿನ ಧರ್ಮಪುರಿಯಲ್ಲಿ 2ನೇ ಸ್ಕೂಟರ್ ಉತ್ಪದನಾ ಘಟಕ ತೆರೆಯಲಾಗುತ್ತಿದೆ. ಹೊಸೂರಿನಲ್ಲಿ ಸಿಂಪಲ್ ಒನ್ ಮೊದಲ ಸ್ಕೂಟರ್ ಉತ್ಪದನಾ ಘಟಕ ತಲೆ ಎತ್ತಿದೆ. ಮುಂದಿನ ವರ್ಷ ಅಂದರೆ 2022ರಿಂದ ಈ ಘಟಕ ಕಾರ್ಯನಿರ್ವಹಿಸಲಿದೆ. ಹೊಸುರು ಘಟಕದಲ್ಲಿ ವಾರ್ಷಿಕ  10 ಲಕ್ಷ ಸ್ಕೂಟರ್  ಉತ್ಪಾದನೆ ಮಾಡುವ ಸಾಮರ್ಥ್ಯ ಹೊಂದಿದೆ.  2023ರಲ್ಲಿ ಎರಡನೆ ಸ್ಕೂಟರ್ ಉತ್ಪಾದನಾ ಘಟಕ ಕಾರ್ಯಾರಂಭಗೊಳ್ಳಲಿದೆ.

ಬರುತ್ತಿದೆ ಬೆಂಗಳೂರಿನ ಸಿಂಪಲ್ ಎನರ್ಜಿ ಎಲೆಕ್ಟ್ರಿಕ್ ಸ್ಕೂಟರ್, 230 KM ಮೈಲೇಜ್!

ಹೊಸ ಘಟಕದಿಂದ ಉದ್ಯೋಗ ಸಷ್ಟಿಯಾಗಲಿದೆ. ತಮಿಳುನಾಡು ಸರ್ಕಾರ ಜೊತೆ ಒಪ್ಪಂದ ಮಾಡಿಕೊಂಡಿರುವ  ಸಿಂಪಲ್ ಒನ್, ಸಂಪನ್ಮೂಲವನ್ನು ಸೂಕ್ತವಾಗಿ ಬಳಸಿ, ಗ್ರಾಹಕರಿಗೆ ಅತ್ಯುತ್ತಮ ಸ್ಕೂಟರ್ ನೀಡಲು ಸಜ್ಜಾಗಿದೆ. ಹೆಚ್ಚಿನ ಉತ್ಪಾದನೆಯಾದರೆ ವೆಚ್ಚವೂ ಕಡಿಮೆಯಾಗಲಿದೆ. ಇದರಿಂದ ಗ್ರಾಹಕರಿಗೆ ಕೈಗೆಟುಕುವ ಬೆಲೆಯಲ್ಲಿ ಗರಿಷ್ಠ ಮೈಲೇಜ್ ನೀಡಬಲ್ಲ ಸಿಂಪಲ್ ಒನ್ ಸ್ಕೂಟರ್ ಖರೀದಿ ಸಾಧ್ಯವಾಗಲಿದೆ ಎಂದು ಸಿಂಪಲ್ ಎನರ್ಜಿ ಹೇಳಿದೆ

ಕರ್ನಾಟಕ(Karnataka), ತಮಿಳುನಾಡು, ಆಂಧ್ರ ಪ್ರದೇಶ, ತೆಲಂಗಾಣ, ಮಹಾರಾಷ್ಟ್ರ, ಮಧ್ಯಪ್ರದೇಶ, ದೆಹಲಿ, ರಾಜಸ್ಥಾನ, ಗೋವಾ, ಉತ್ತರ ಪ್ರದೇಶ, ಗುಜರಾತ್ ಪಂಜಾಬ್ ಸೇರಿದಂತೆ 13 ರಾಜ್ಯಗಳಲ್ಲಿ ಸಿಂಪಲ್ ಒನ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಯಾಗಿದೆ. ಮುಂದಿನ 7 ತಿಂಗಳಲ್ಲಿ 300ಕ್ಕೂ ಹೆಚ್ಚು ಚಾರ್ಜಿಂಗ್ ಸ್ಟೇಶನ್ ಅಳವಡಿಸಲು ಸಿಂಪಲ್ ಎನರ್ಜಿ ಮುಂದಾಗಿದೆ. ಆದರೆ ಸ್ಕೂಟರ್ ಬಿಡುಗಡೆಯಾಗಿ ಭಾರಿ ಸಂಚಲನ ಸೃಷ್ಟಿಸಿರುವ ಸಿಂಪಲ್ ಒನ್ ಇನ್ನೂ ವಿತರಣೆ ಆರಂಭಗೊಂಡಿಲ್ಲ. ಸರಿಸುಮಾರು ಅರ್ಧವರ್ಷಗಳೇ ಉರುಳಿದೆ.

ಸಿಂಪಲ್ ಒನ್ ಸ್ಕೂಟರ್‌ನ್ನು 1,947 ರೂಪಾಯಿ ನೀಡಿ ಬುಕಿಂಗ್ ಮಾಡಿಕೊಳ್ಳಬಹುದು. ಇನ್ನು ಸ್ಕೂಟರ್ ವಿತರಣೆ ಕುರಿತು ಯಾವುದೇ ಸ್ಪಷ್ಟತೆ ಇಲ್ಲ. ಸದ್ಯ ಉತ್ಪಾದನೆಯಲ್ಲಿ ತೊಡಗಿರುವ ಸಿಂಪಲ್ ಎನರ್ಜಿ ಶೀಘ್ರದಲ್ಲೇ ಬುಕಿಂಗ್ ಮಾಡಿದ ಗ್ರಾಹಕರಿಗೆ ಸ್ಕೂಟರ್ ವಿತರಿಸುವ ಸಾಧ್ಯತೆ ಇದೆ. 3.6 ನಿಮಿಷದಲ್ಲಿ 50 ಕಿಲೋಮೀಟರ್ ವೇಗ ತಲುಪಲಿದೆ. ಇನ್ನು 1 ನಿಮಿಷ ಚಾರ್ಜ್ ಮಾಡಿದರೆ 2.5 ಕಿಲೋಮೀಟರ್ ಪ್ರಯಾಣಿಸಬಹುದು. 

Follow Us:
Download App:
  • android
  • ios