ಓಲಾ ಎಲೆಕ್ಟ್ರಿಕ್ ಕಂಪನಿಯು ಶೀಘ್ರದಲ್ಲಿ ಇ-ಸ್ಕೂಟರ್‌ಗಳು ಉತ್ಪಾದನೆಯನ್ನು ಆರಂಭಿಸಲಿದೆ. ಈ ಸಂಬಂಧ ಇತ್ತೀಚೆಗೆ ಟೀಸರ್ ಬಿಡುಗಡೆ ಮಾಡಿರುವ ಕಂಪನಿ, ಬೆಂಗಳೂರಿನ ರಸ್ತೆಗಳಲ್ಲಿ ಓಲಾ ಇ ಸ್ಕೂಟರ್‌ ಸಿಇಒ ಓಡಿಸುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. ಓಲಾ ಇ ಸ್ಕೂಟರ್‌ಗಳು ಶೀಘ್ರವೇ ಮಾರುಕಟ್ಟೆಗೆ ಪ್ರವೇಶ ನೀಡಲಿವೆ.

ಕ್ಯಾಬ್‌ ಸೇವೆಯಲ್ಲಿ ಕ್ರಾಂತಿಯನ್ನೇ ಸೃಷ್ಟಿಸಿದ್ದ ಓಲಾ ಕ್ಯಾಬ್ ಕಂಪನಿ ಇದೀಗ ಮತ್ತೊಂದು ಕ್ಷೇತ್ರದಲ್ಲಿ ಅದೇ ಜಾದೂ ಮಾಡಲು ಹೊರಟಿದೆ. ದೇಶದಲ್ಲಿ ಇತ್ತೀಚಿನ ವರ್ಷಗಳಲ್ಲಿ ಎಲೆಕ್ಟ್ರಿಕ್ ಸ್ಕೂಟರ್‌ಗಳ, ದ್ವಿಚಕ್ರವಾಹನಗಳ ಬೇಡಿಕೆ ನಿಧಾನವಾಗಿ ಹೆಚ್ಚಾಗುತ್ತಿದೆ. ಇದೇ ಅವಕಾಶವನ್ನು ಬಳಸಿಕೊಳ್ಳಲು ಓಲಾ ಕಂಪನಿ ಮುಂದಾಗಿದೆ.

ಬೆಂಗಳೂರಿನಲ್ಲಿ ಕೇಂದ್ರ ಕಚೇರಿ ಹೊಂದಿರುವ ಓಲಾ ಈಗಾಗಲೇ, ಎಲೆಕ್ಟ್ರಿಕ್ ಸ್ಕೂಟರ್‌ಗಳ ಉತ್ಪಾದನಾ ಘಟಕವನ್ನು ತಮಿಳುನಾಡಲು ಆರಂಭಿಸುತ್ತದೆ. ಮೊದಲ ಹಂತದ ಉತ್ಪಾದನಾ ಘಟಕ ಬಹುತೇಕ ಪೂರ್ತಿಗೊಂಡಿದ್ದು, ಶೀಘ್ರವೇ ಕಾರ್ಯಾಚರಣೆ ನಡೆಸುವ ಸಾಧ್ಯತೆ ಇದೆ. 

ಬಿಎಂಡಬ್ಲೂ ಆರ್ 1250 ಜಿಎಸ್, 1250 ಜಿಎಸ್ ಅಡ್ವೆಂಚರ್ ಬೈಕ್‌ ಲಾಂಚ್, ಬೆಲೆ ಎಷ್ಟಿದೆ?

ಇದರ ನಡುವೆ, ದೇಶದ ಬಹುದೊಡ್ಡ ಸಾರಿಗೆ ವೇದಿಕೆಯಾಗಿರುವ ಓಲಾ, ತನ್ನ ಎಲೆಕ್ಟ್ರಿಕ್ ಸ್ಕೂಟರ್‌ನ ಟೀಸರ್ ಅನ್ನು ಅನಾವರಣ ಮಾಡಿದೆ. ವಿಶೇಷ ಎಂದರೆ, ಕಂಪನಿಯ ಸಿಇಒ ಮತ್ತು ಸಹ ಸಂಸ್ಥಾಪಕ ಭಾವಿಷ್ ಅಗ್ರವಾಲ್ ಅವರು ಎಲೆಕ್ಟ್ರಿಕ್ ಸ್ಕೂಟರ್ ಟೀಸರ್ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದಾರೆ. ಮಾರುವೇಷದಲ್ಲಿ ಓಲಾ ಸ್ಕೂಟರ್ ಅನ್ನು ಭಾವಿಷ್ ಅಗ್ರವಾಲ್ ಅವರು ಬೆಂಗಳೂರು ರಸ್ತೆಗಳಲ್ಲಿ ಓಡಿಸುತ್ತಿರುವುದನ್ನು ನೀವು ಕಾಣಬಹುದು.

56 ಸೆಕೆಂಡ್‌ನ ಈ ಟೀಸರ್ ಅನ್ನು ಅಗ್ರವಾಲ್ ಅವರು ತಮ್ಮ ಟ್ವಿಟರ್‌ ಹ್ಯಾಂಡಲ್‌ನಲ್ಲಿ ಹಂಚಿಕೊಂಡಿದ್ದು, ಅದು ವೈರಲ್ ಆಗಿದೆ. ಈ ಟೀಸರ್‌ನಲ್ಲಿ ಕಂಪನಿ ಓಲಾ ಉತ್ಪಾದಿಸಲಿರುವ ಎಲೆಕ್ಟ್ರಿಕ್ ಸ್ಕೂಟರ್‌ನ ವಿಶೇಷತೆಗಳನ್ನೂ ಹಂಚಿಕೊಳ್ಳಲಾಗಿದೆ. 

Scroll to load tweet…

ಎರ್ಗೋನಾಮಿಕ್ ಸೀಟಿಂಗ್, ಸೂಪರಿಯರ್ ಕಾರ್ನರಿಂಗ್, ಅತ್ಯುತ್ತಮ ದರ್ಜೆಯ ಆಕ್ಸ್‌ಲರೇಷನ್, ದೊಡ್ಡದಾದ ಅವಳಿ ಹೆಡ್‌ಲ್ಯಾಂಪ್ ಕ್ಲಸ್ಟರ್, ಬೂಟ್ ಸ್ಪೇಸ್ ಸೇರಿ ಇತರ ಫೀಚರ್‌ಗಳನ್ನು ನೀವು ಟೀಸರ್ ವಿಡಿಯೋದಲ್ಲಿ ಗಮನಿಸಬಹುದಾಗಿದೆ. ಸ್ಕೂಟರ್‌ನ ವೇಗ, ಶ್ರೇಣಿ, ಕುಶಲತೆ, ತಂತ್ರಜ್ಞಾನ ಮತ್ತು ನಿರ್ವಹಣೆಯಿಂದಾಗಿ ಇ ಸ್ಕೂಟರ್ ಗೇಮ್‌ಚೇಂಜರ್ ಆಗಲಿದೆ ಎಂಬುದು ಅಗ್ರವಾಲ್ ಅವರ ಅಭಿಪ್ರಾಯವಾಗಿದೆ. 

ಓಲಾ ಕಂಪನಿ ಹೊರತರಲಿರುವ ಎಲೆಕ್ಟ್ರಾನಿಕ್ ಸ್ಕೂಟರ್‌ಗಳು ಬ್ಲ್ಯಾಕ್ ಶೇಡ್‌ ಬಣ್ಣದಲ್ಲಿ ಇರಲಿವೆ ಎಂದು ಹೇಳಲಾಗುತ್ತಿತ್ತು. ಆದರೆ, ಕಂಪನಿಯು ಹೇಳಿಕೊಂಡಿರುವ ಪ್ರಕಾರ, ಇನ್ನೂ ಹೆಚ್ಚಿನ ಬಣ್ಣಗಳ ಆಯ್ಕೆಯಲ್ಲಿ ಓಲಾ ಸ್ಕೂಟರ್‌ ಗ್ರಾಹಕರಿಗೆ ಸಿಗಲಿದೆ. 

ಹೆದ್ದಾರಿಗಳಗುಂಟ 600 ಚಾರ್ಚಿಂಗ್ ಸ್ಟೇಷನ್ ಸ್ಥಾಪಿಸಲು ಪ್ಲ್ಯಾನ್

ಕಂಪನಿ ಈ ಮೊದಲು ಘೋಷಣೆ ಮಾಡಿರುವ ಪ್ರಕಾರ, ಎಲೆಕ್ಟ್ರಿಕ್ ಸ್ಕೂಟರ್‌ಗಳಿಗೆ ಅಗತ್ಯವಾಗಿರುವ ಚಾರ್ಜಿಂಗ್ ಸ್ಟೇಷನ್‌ಗಳ ಕೊರತೆ ಇದೆ. ಈ ಹಿನ್ನೆಲೆಯಲ್ಲಿ ಕಂಪನಿಯು ದೇಶದ ಸುಮಾರು 400 ನಗರಗಳಲ್ಲಿ ಅಂದಾಜು 1 ಲಕ್ಷಕ್ಕೂ ಅಧಿಕ ಚಾರ್ಜಿಂಗ್ ಸ್ಟೇಷನ್‌ಗಳನ್ನು ಆರಂಭಿಸಲಿದೆ. ಆರಂಭದ ಮೊದಲ ವರ್ಷದಲ್ಲಿ 5000 ಚಾರ್ಜಿಂಗ್ ಸ್ಟೇಷನ್‌ಗಳು ತಲೆ ಎತ್ತಲಿವೆ. ನಂತರ ದಿನಗಳಲ್ಲಿ ಇವುಗಳ ಪ್ರಮಾಣವನ್ನು ಹೆಚ್ಚಿಸುತ್ತಾ ಹೋಗಲಾಗುತ್ತದೆ. ಕೆಲವು ವರದಿಗಳ ಪ್ರಕಾರ, ಓಲಾ ಸ್ಕೂಟರ್ ಅನ್ನು ನೀವು 36 ನಿಮಿಷಗಳವರೆಗೆ ಚಾರ್ಜ್ ಮಾಡಿದರೆ, ಅದು 150 ಕಿ.ಮೀ.ವರೆಗೂ ಓಡುತ್ತದೆ. 

ಏತನ್ಮಧ್ಯೆ, ಓಲಾ ಎಲೆಕ್ಟ್ರಿಕ್ 10 ಕೋಟಿ ಡಾಲರ್ ಮೊತ್ತ ಒಗ್ಗೂಡಿಸಲು ಬ್ಯಾಂಕ್ ಆಫ್ ಬರೋಡದೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಕಂಪನಿ ತನ್ನ ಪ್ರಕಟಣೆಯೊಂದರಲ್ಲಿ ಇದು ಭಾರತದ ಎಲೆಕ್ಟ್ರಿಕ್ ವೆಹಿಕಲ್ ಇಂಡಸ್ಟ್ರಿಯಲ್ಲಿ ಅತೀ ದೊಡ್ಡ ಲಾಂಗ್‌ ಟರ್ಮ್ ಡೇಟ್ ಫೈನಾನ್ಸಿಂಗ್ ಎಗ್ರೀಮೆಂಟ್ ಆಗಿದೆ. ಈ ಹಣವನ್ನು ಓಲಾ ಫ್ಯೂಚರ್‌ಫ್ಯಾಕ್ಟ್ರಿ ಮೊದಲನೇ ಹಂತಕ್ಕೆ ಬಳಕೆ ಮಾಡಲಾಗುತ್ತದೆ. ಹತ್ತು ವರ್ಷದ ಅವಧಿಗೆ ಈ ಸಾಲ ತೆಗೆದುಕೊಳ್ಳಲಾಗಿದೆ. ದ್ವಿಚಕ್ರ ವಾಹನ ಕಾರ್ಖಾನೆಯ ಮೊದಲ ಹಂತಕ್ಕೆ 2,400 ಕೋಟಿ ರೂ. ಹೂಡಿಕೆ ಮಾಡುವುದಾಗಿ ಓಲಾ ಈ ಹಿಂದೆ ಡಿಸೆಂಬರ್‌ನಲ್ಲಿ ಘೋಷಿಸಿತ್ತು.

ಮತ್ತೊಂದು ಇವಿ ದ್ವಿಚಕ್ರವಾಹನ ಲಾಂಚ್; ಗ್ರಾವ್ಟನ್ ಕ್ವಾಂಟಾ ಬೆಲೆ 99,000 ರೂ.

ಓಲಾ ತನ್ನ ಮುಂದಿನ(ಭವಿಷ್ಯದ) ಕಾರ್ಖಾನೆ ತಮಿಳುನಾಡಿನ 500 ಎಕರೆ ಪ್ರದೇಶದಲ್ಲಿ ಆರಂಭಿಸಲಿದೆ. ಇದು ವರ್ಷಕ್ಕೆ 10 ಮಿಲಿಯನ್ ವಾಹನಗಳ ಸಾಮರ್ಥ್ಯ ಹೊಂದಿರುವ ವಿಶ್ವದ ಅತಿದೊಡ್ಡ ದ್ವಿಚಕ್ರ ವಾಹನ ಕಾರ್ಖಾನೆಯಾಗಲಿದೆ. ಓಲಾ ಫ್ಯೂಚರ್‌ಫ್ಯಾಕ್ಟರಿಯ ಮೊದಲ ಹಂತವು ಶೀಘ್ರದಲ್ಲೇ ಪೂರ್ಣಗೊಳ್ಳಲಿದೆ. ಓಲಾ ಭಾರತದ ಅತಿದೊಡ್ಡ ಮೊಬಿಲಿಟಿ ಪ್ಲಾಟ್‌ಫಾರಂ ಆಗಿದೆ ಮತ್ತು ವಿಶ್ವದ ಅತಿದೊಡ್ಡ ರೈಡ್ಹೇಲಿಂಗ್ ಕಂಪನಿಗಳಲ್ಲಿ ಒಂದಾಗಿದೆ.