ವಿವಿಧ ಕ್ಷೇತ್ರಗಳ ಗಣ್ಯರಿಗೆ 650 ಸಿಸಿ ರಾಯಲ್‌ ಎನ್‌ಫೀಲ್ಡ್‌ ವಿಶೇಷ ವಾಹನಗಳ ವಿತರಣೆ

120 ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಬಿಡುಗಡೆಗೊಳಿಸಿದ್ದ 650 ಸಿಸಿ ವಾಹನಗಳನ್ನು ಗ್ರಾಹಕರಿಗೆ ವಿತರಣೆ ಮಾಡಿದ ರಾಯಲ್‌ ಎನ್‌ಫೀಲ್ಡ್‌

Royal enfiled 650 cc motorcycle delivered to sportsmen and artists

Auto Desk: ರಾಯಲ್ ಎನ್‌ಫೀಲ್ಡ್ (Royal Enfield) ತಮ್ಮ 120 ನೇ ವಾರ್ಷಿಕ ಆವೃತ್ತಿ ಅಂಗವಾಗಿ ಕಳೆದ ವರ್ಷ ಇಂಟರ್‌ಸೆಪ್ಟರ್ 650 ಮತ್ತು ಕಾಂಟಿನೆಂಟಲ್ GT 650 ನ ಅನಾವರಣಗೊಳಿಸಿತ್ತು. ಈಗ  ಚೆನ್ನೈ ಮೂಲದ ತಯಾರಕರು ವಿಶೇಷ ಆವೃತ್ತಿಯ ಮೋಟಾರ್‌ಸೈಕಲ್‌ಗಳ ವಿತರಣೆ ಪ್ರಾರಂಭಿಸಿದ್ದಾರೆ. ಏಸ್ ಶೂಟರ್ (Ace Shooter) ಮತ್ತು ಒಲಿಂಪಿಯನ್ ಗಗನ್ ನಾರಂಗ್,  ಮಾರ್ಚ್ 21 ರಂದು ಇಂಟರ್‌ಸೆಪ್ಟರ್ 650 ಅನ್ನು ಪಡೆದುಕೊಂಡಿದ್ದಾರೆ.

ಜೊತೆಗೆ ಕಳೆದ ವಾರ, ಮಲಯಾಳಂ ಚಲನಚಿತ್ರ ನಟ ಮತ್ತು ನಿರ್ದೇಶಕ ಧ್ಯಾನ್ ಶ್ರೀನಿವಾಸನ್ ಕೂಡ ಕೊಚ್ಚಿಯ ಕಂಪನಿ ಶೋರೂಮ್‌ನಲ್ಲಿ ಸೀಮಿತ ಆವೃತ್ತಿಯ (Limited edition) ಇಂಟರ್‌ಸೆಪ್ಟರ್ 650 (Interceptor 650) ವಿತರಣೆ ಪಡೆದುಕೊಂಡರು.

ಇದನ್ನೂ ಓದಿ: ರಾಯಲ್ ಎನ್‌ಫೀಲ್ಡ್‌ನಲ್ಲಿ ಸಂಪೂರ್ಣ ಅಂಟಾರ್ಟಿಕಾ ಸವಾರಿ, ಕನ್ನಡಿಗ ಸಂತೋಷ್ ಸಾಧನೆಗೆ ಮೆಚ್ಚುಗೆಯ ಸುರಿಮಳೆ!

ರಾಯಲ್ ಎನ್‌ಫೀಲ್ಡ್ ಒಟ್ಟು 480 ಇಂಟರ್ಸೆಪ್ಟರ್ ಮತ್ತು ಕಾಂಟಿನೆಂಟಲ್ ಜಿಟಿ 650 (Interceptor and Continental GT650)  ವಿಶೇಷ ವಾಹನಗಳನ್ನು ತಯಾರಿಸಿತ್ತು. ಈ ಪೈಕಿ 120 ವಾಹನಗಳನ್ನು ಭಾರತೀಯ ಮಾರುಕಟ್ಟೆಗೆ ಬಿಡುಗಡೆಗೊಳಿಸಲಾಗಿದೆ. ಇದನ್ನು ಆನ್‌ಲೈನ್‌ನಲ್ಲಿ ಮೊದಲು ಬಂದವರಿಗೆ ಮೊದಲು ಸೇವೆಯ ಆಧಾರದ ಮೇಲೆ ವಿತರಣೆ ಮಾಡಲಾಗುತ್ತಿದೆ. ಎಲ್ಲಾ ವಾಹನಗಳು ಬುಕಿಂಗ್‌ ಆರಂಭಗೊಂಡ ಮೊದಲ 2 ನಿಮಿಷಗಳಲ್ಲಿ ಮಾರಾಟವಾದವು. ‘001’ ಲಿಮಿಟೆಡ್ ಎಡಿಷನ್ ಇಂಟರ್‌ಸೆಪ್ಟರ್ 650 ಅನ್ನು ಭಾರತೀಯ ನೌಕಾಪಡೆಯ ರಿಯರ್ ಅಡ್ಮಿರಲ್ ಫಿಲಿಪೋಸ್ ಜಿ ಪೈನುಮೂಟಿಲ್ ಖರೀದಿಸಿದ್ದಾರೆ.

ರಾಯಲ್‌ ಎನ್‌ಫೀಲ್ಡ್‌ ತಯಾರಕರು ತಮ್ಮ ಮೊದಲ ಮೋಟಾರ್‌ಸೈಕಲ್ ಅನ್ನು ನವೆಂಬರ್ 1901 ರಲ್ಲಿ ಲಂಡನ್‌ನಲ್ಲಿ ನಡೆದ ಸ್ಟಾನ್ಲಿ ಸೈಕಲ್ ಶೋನಲ್ಲಿ ಬಿಡುಗಡೆ ಮಾಡಿದ್ದರು. ಈ ಮೋಟರ್‌ಸೈಕಲ್‌ಗಳನ್ನು ಕಪ್ಪು ಕ್ರೋಮ್‌ಗಳನ್ನು ಹೊಂದಿದೆ. ಇದರ ಪೇಂಟ್ ಸ್ಕೀಮ್‌ಗೆ ಪೂರಕವಾಗಿ, ಹ್ಯಾಂಡಲ್‌ಬಾರ್, ಎಕ್ಸಾಸ್ಟ್‌ಗಳು, ಇಂಜಿನ್‌ಗಳು ಮತ್ತು ಇತರ ಅಂಶಗಳಂತಹ ಉಳಿದ ಭಾಗಗಳಿಗೆ ಕಪ್ಪು ಬಣ್ಣದ ಫಿನಿಷ್ ನೀಡಲಾಗಿದೆ. ಈ ಮೋಟಾರ್‌ಸೈಕಲ್‌ಗಳ ಅತ್ಯಂತ ವಿಶೇಷ ವಿಷಯವೆಂದರೆ ಇಂಧನ ಟ್ಯಾಂಕ್. ಇದು ಕೈಯಿಂದ ತಯಾರಿಸಲ್ಪಟ್ಟಿದೆ. ಜೊತೆಗೆ, ಇದು ಡೈ-ಕಾಸ್ಟ್ ಬ್ಯಾಡ್ಜ್ ಅನ್ನು ಹೊಂದಿದ್ದು, ಅದರಲ್ಲಿ ಕೂಡ ಕೈಯಿಂದ ಮಾಡಿದ ಪಿನ್‌ಸ್ಟ್ರೈಪ್‌ಗಳನ್ನು ಕಾಣಬಹುದು.

ಇದನ್ನೂ ಓದಿ: ನಗರ, ಆಫ್‌ರೋಡ್‌ ಸವಾರಿಗೆ ರಾಯಲ್ ಎನ್‌ಫೀಲ್ಡ್ ಸ್ಕ್ರಾಮ್ 411 ADV ಕ್ರಾಸ್ಓವರ್ ಬೈಕ್ ಬಿಡುಗಡೆ!

ಇಂಜಿನ್‌ ಸಾಮರ್ಥ್ಯ ಸೇರಿದಂತೆ ಇತರ ವಿಚಾರಗಳಲ್ಲಿ ಈ ಮೋಟಾರಸೈಕಲ್‌ಗಳಲ್ಲಿ ಯಾವುದೇ ಬದಲಾವಣೆಯಿಲ್ಲ. 648 ಸಿಸಿ ಬೈಕ್‌ ಸಮಾನಾಂತರ-ಟ್ವಿನ್ ಎಂಜಿನ್‌ ಹೊಂದಿದ್ದು, 47.45 ಪಿಎಸ್‌ ಗರಿಷ್ಠ ಪವರ ಮತ್ತು 52 Nm ನ ಗರಿಷ್ಠ ಟಾರ್ಕ್ ಉತ್ಪಾದಿಸುತ್ತದೆ. ಎಂಜಿನ್ ಅನ್ನು 6-ಸ್ಪೀಡ್ ಗೇರ್‌ಬಾಕ್ಸ್‌ಗೆ ಜೋಡಿಸಲಾಗಿದೆ ಅದು ಸ್ಲಿಪ್, ಅಸಿಸ್ಟ್ ಕ್ಲಚ್‌ ಹಾಗೂ ಎಂಜಿನ್ ಕೌಂಟರ್ ಬ್ಯಾಲೆನ್ಸರ್ ಹೊಂದಿದೆ. ಇದು ವಿಭಾಗದಲ್ಲಿನ ಮೃದುವಾದ ಎಂಜಿನ್‌ಗಳಲ್ಲಿ ಒಂದಾಗಿದೆ.

ಇಂಟರ್ಸೆಪ್ಟರ್ ಮತ್ತು ಕಾಂಟಿನೆಂಟಲ್ ಜಿಟಿ 650 ನಲ್ಲಿ ಉತ್ತಮ ಬ್ರೇಕಿಂಗ್ ಒದಗಿಸಲು ಮುಂಭಾಗದಲ್ಲಿ 320 ಎಂಎಂ ಡಿಸ್ಕ್ ಮತ್ತು ಹಿಂಭಾಗದಲ್ಲಿ 240 ಎಂಎಂ ಡಿಸ್ಕ್ ನೀಡಲಾಗಿದೆ. ರಾಯಲ್ ಎನ್‌ಫೀಲ್ಡ್ ಡ್ಯುಯಲ್-ಚಾನೆಲ್ ಎಬಿಎಸ್ ಒಳಗೊಂಡಿದೆ.

ರಾಯಲ್ ಎನ್‌ಫೀಲ್ಡ್ ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್‌ಗಳನ್ನು ಮತ್ತು ಹಿಂಬದಿಯಲ್ಲಿ ಒಂದು ಜೋಡಿ ಶಾಕ್ ಅಬ್ಸಾರ್ಬರ್‌ಗಳನ್ನು ಬಳಸುತ್ತಿದ್ದು, ಪ್ರೀ ಲೋಡ್ ಹೊಂದಾಣಿಕೆ ಮತ್ತು ಗ್ಯಾಸ್ ಚಾರ್ಜ್ ಆಗಿರುತ್ತದೆ. ಇದು ಯುಕೆಯ ಹ್ಯಾರಿಸ್ ಪರ್ಫಾರ್ಮೆನ್ಸ್ ನಿಂದ ಮಾಡಲ್ಪಟ್ಟ ಡಬಲ್-ಕ್ರೇಡಲ್ ಫ್ರೇಮ್ನ ಚಾಸಿಸ್‌ ಹೊಂದಿದ್ದು, ಇದು 202 ಕೆಜಿ ತೂಕವಿವೆ. ರಾಯಲ್ ಎನ್‌ಫೀಲ್ಡ್ ಇಂಟರ್‌ಸೆಪ್ಟರ್ 650 ಬೆಲೆಯು 2.85 ಲಕ್ಷ ರೂ. ಮತ್ತು 3.10 ಲಕ್ಷ ರೂ.ಗಳಷ್ಟಿದೆ. ಕಾಂಟಿನೆಂಟಲ್ GT 650ರ ಬೆಲೆ 3.02 ಲಕ್ಷ ಮತ್ತು ರೂ. 3.26 ಲಕ್ಷ ರೂ.ಗಳವರೆಗೆ ಇದೆ.

Latest Videos
Follow Us:
Download App:
  • android
  • ios