ಬೆಂಗಳೂರಿನಲ್ಲಿ ರಾಯಲ್ ಎನ್‌ಫೀಲ್ಡ್ ಜಿಮ್‌ಖಾನ ಆರಂಭ, ಇಲ್ಲಿ ಆಫ್ ರೋಡ್, ಡ್ರಿಫ್ಟ್, ಜಂಪಿಂಗ್, ಕಂಟ್ರೋಲ್ ಸೇರಿದಂತೆ ಎಲ್ಲಾ ಸ್ಕಿಲ್ ಕಲಿಯಲು ಸಾಧ್ಯವಿದೆ. ಏನಿದು ರಾಯಲ್ ಎನ್‌ಫೀಲ್ಡ್ ಜಿಮ್‌ಖಾನ?
ಬೆಂಗಳೂರು (ಜ.29) ರಾಯಲ್ ಎನ್‌ಫೀಲ್ಡ್ ಬೈಕ್‌ಗಳಿಗೆ ದೇಶದಲ್ಲಿ ಭಾರಿ ಬೇಡಿಕೆ ಇದೆ. ಎಲ್ಲಾ ವಯೋಮಾನದವರೂ ರಾಯಲ್ ಎನ್‌ಫೀಲ್ಡ್ ಬೈಕ್ ಇಷ್ಟಪಡುತ್ತಾರೆ. ರಾಯಲ್ ಗತ್ತು, ಅಷ್ಟೇ ಉತ್ತಮ ಪವರ್ ಸೇರಿದಂತೆ ಹಲವು ವಿಶೇಷತೆಗಳು ರಾಯಲ್ ಎನ್‌ಫೀಲ್ಡ್ ಬೈಕ್‌ನಲ್ಲಿದೆ. ಮಧ್ಯಮ ಗಾತ್ರದ ಮೋಟಾರ್ ಸೈಕಲ್ ವಲಯದಲ್ಲಿ ಜಾಗತಿಕ ಮುಂಚೂಣಿಯ ರಾಯಲ್ ಎನ್ಫೀಲ್ಡ್ ಇದೀಗ ಬೆಂಗಳೂರಿನಲ್ಲಿ ಜಿಮ್‌ಖಾನ್ ಕೌಶಲ್ಯ ಅಭಿವೃದ್ಧಿ ಆರಂಭಿಸಿದೆ.
ವಿನೂತನ ಬಗೆಯ ರಾಯಲ್ ಎನ್ಫೀಲ್ಡ್ ಜಿಮ್ ಖಾನಾ ಪ್ರಾರಂಭಿಸಿದ್ದು ಇದು ಯಾವುದೇ ಬಗೆಯ ದ್ವಿಚಕ್ರ ವಾಹನ ಹೊಂದಿದವರಿಗೂ ಸುಧಾರಿತ ರೈಡಿಂಗ್ ತರಬೇತಿ ಲಭ್ಯವಾಗುವಂತೆ ಕೌಶಲ್ಯವೃದ್ಧಿಯ ಮಾಡ್ಯೂಲ್ ಗಳನ್ನು ವಿನ್ಯಾಸಗೊಳಿಸಲಾಗಿದೆ. ಪರಿಣಿತರ ತರಬೇತಿ, ಪ್ರಗತಿಯ ಮಟ್ಟಗಳು ಮತ್ತು ಪ್ರಮಾಣೀಕರಣಗಳು ಮತ್ತು ಸ್ಪರ್ಧೆಗಳನ್ನು ಹೊಂದಿರುವ ಜಿಮ್ ಖಾನಾ ನೈಜ ವಿಶ್ವದ ಕೌಶಲ್ಯಗಳನ್ನು ತೀಕ್ಷ್ಣಗೊಳಿಸಿಕೊಳ್ಳಲು ಸುರಕ್ಷಿತ ಮತ್ತು ನಿಯಂತ್ರಿತ ಪರಿಸರ ನೀಡುತ್ತದೆ.
ರೈಡಿಂಗ್ ಸ್ಕಿಲ್ ಅಭಿವೃದ್ಧಿ
ಈ ಕಾರ್ಯಕ್ರಮವು ಎರಡು ಗಂಟೆಯ ಸರ್ಟಿಫಿಕೇಷನ್ ಮಾಡ್ಯೂಲ್ ಗಳನ್ನು ಹೊಂದಿದ್ದು ಭಾಗವಹಿಸುವವರ ತರಬೇತಿ ಮತ್ತು ಸ್ಪರ್ಧೆಯನ್ನು ಆರು ವಿವಿಧ ಟ್ರ್ಯಾಕ್ ಗಳಲ್ಲಿ ನಡೆಸಿತು ಮತ್ತು ನಾಲ್ಕು ವಿಭಿನ್ನ ಮೋಟಾರ್ ಸೈಕಲ್ ಗಳಲ್ಲಿ ಕೌಶಲ್ಯದ ಸವಾಲುಗಳನ್ನು ಎದುರಿಸುವ ಅವಕಾಶ ನೀಡುತ್ತದೆ. ಜಿಮ್ ಖಾನಾ ಮೂಲಕ ರಾಯಲ್ ಎನ್ಫೀಲ್ಡ್ ರೈಡರ್ ಗಳಲ್ಲಿ ವಿಶ್ವಾಸ, ನಿಯಂತ್ರಣ ನಿರ್ಮಿಸಿಕೊಳ್ಳಲು ಮತ್ತು ರಸ್ತೆಯ ಮೇಲೆ ಎಲ್ಲಾ ಸವಾಲುಗಳ ಮೆಟ್ಟಿನಿಂತು ರೈಡಿಂಗ್ ಮಾಡುಲ ಸ್ಕಿಲ್ ಇಲ್ಲಿ ನೀಡಲಾಗುತ್ತದೆ.
ರೈಡರ್ ಗಳು ಉದ್ದೇಶಕ್ಕಾಗಿ ನಿರ್ಮಿಸಲಾದ ಅರೇನಾಗಳನ್ನು ಆವಿಷ್ಕರಿಸಿದ್ದು ಪ್ರತಿಯೊಂದನ್ನೂ ವಿವಿಧ ಮಾದರಿಗಳಲ್ಲಿ ವಿವಿಧ ಬಗೆಯ ರೈಡಿಂಗ್ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಿಕೊಳ್ಳಲು ವಿನ್ಯಾಸಗೊಳಿಸಲಾಗಿದೆ. ಡ್ರಿಫ್ಟ್ ಅಂಡ್ ಡ್ರಾಗ್ ಗೆರಿಲ್ಲಾ 450ರಲ್ಲಿ ಮತ್ತು ಆಫ್-ರೋಡ್ ರೈಡ್ ಗಳನ್ನು ಹಿಮಾಲಯನ್ 450ಯಲ್ಲಿ, ಹಸಲ್ ಅರೇನಾದಲ್ಲಿ ಹಂಟರ್ 350 ಮತ್ತು ಅರ್ಬನ್ ಎಂಡುರೊವನ್ನು ಸ್ಕ್ರಾಮ್ 440ರಲ್ಲಿ ನಿರ್ವಹಿಸಲಾಯಿತು. ಪ್ರತಿಯೊಂದನ್ನೂ ಹಲವು ರೈಡಿಂಗ್ ಸನ್ನಿವೇಶಗಳು ಮತ್ತು ಮೋಟಾರ್ ಸೈಕಲ್ ಗಳಲ್ಲಿ ರೈಡರ್ ಗಳಿಗೆ ನಿಯಂತ್ರಣ, ವಿಶ್ವಾಸ ಮತ್ತು ವೈವಿಧ್ಯತೆ ನಿರ್ಮಿಸಲು ನೆರವಾಗುವಂತೆ ರೂಪಿಸಲಾಹಿದೆ.
ವಿಶೇಷ ಆಫ್-ರೋಡ್ ಮತ್ತು ಟಾರ್ಮಾಕ್ ಟ್ರ್ಯಾಕ್ ಗಳಿಂದ ರಾಯಲ್ ಎನ್ಫೀಲ್ಡ್ ಜಿಮ್ ಖಾನಾ ಮೋಟಾರ್ ಸೈಕ್ಲಿಂಗ್ ಗೆ ಆಟದ ಮೈದಾನವಾಗಿದ್ದು ಅಲ್ಲಿ ಭಾಗವಹಿಸುವವರು ಅವರ ಮಿತಿಗಳನ್ನು ಪರೀಕ್ಷಿಸಿದ್ದಾರೆ.


