ನವದೆಹಲಿ(ಏ.06): ರಾಯಲ್ ಎನ್‌ಫೀಲ್ಡ್ ಹಾಗೂ ನಾಕ್ಸ್ ಕಂಪೆನಿಗಳ ಸಹಯೋಗದಲ್ಲಿ ಸಿಇ ಪ್ರಮಾಣೀಕೃತ ಮೊಣಕಾಲಿನ ರಕ್ಷಾ ಕವಚ, ರೈಡಿಂಗ್ ಜಾಕೆಟ್, ಗ್ಲೌಸ್, ರೈಡಿಂಗ್ ಟ್ರೌಸರ್ಸ್‌ ಬಿಡುಗಡೆಯಾಗಿದೆ. ಸೇಫ್ ಹಾಗೂ ರೈಡಿಂಗ್‌ನ ರಿಯಲ್ ಅನುಭವ ಪಡೆಯಲು ಈ ಆಕ್ಸೆಸರೀಸ್ ಬಹಳ ಪ್ರಯೋಜನಕಾರಿ’ ಎಂದು ರಾಯಲ್ ಎನ್‌ಫೀಲ್ಡ್‌ನ ಬ್ಯುಸಿನೆಸ್ ಹೆಡ್ ಪುನೀತ್ ಸೂದ್ ತಿಳಿಸಿದ್ದಾರೆ.

CE ಲೆವೆಲ್ 2 ಪ್ರಮಾಣೀಕರಿಸಿದ ನಾಕ್ಸ್ ರಕ್ಷಾಕವಚ ಮತ್ತು ಮೊಣಕಾಲಿನವರೆಗಿನ ಗಾರ್ಡ್, ಹಾಗೂ ಮೂರು ಹೊಸ ಜಾಕೆಟ್ ಹೊಂದಿದ ಕಿಟ್ ಬಿಡುಗಡೆ ಮಾಡಲಾಗಿದೆ.  ಈ ಸಹಭಾಗಿತ್ವದ ಮೂಲಕ ಗ್ರಾಹಕರಿಗೆ ತಮಗೆ ಬೇಕಾದ ಹಾಗೂ ಸುರಕ್ಷತೆಯ ರೈಡಿಂಗ್‌ಗೆ ಅಗತ್ಯವಿರುವ ಪರಿಕರಗಳನ್ನು ಒದಗಿಸುತ್ತದೆ.  

ಅತ್ಯಾಧುನಿಕ ತಂತ್ರಜ್ಞಾನದ ನೂತನ ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಬಿಡುಗಡೆ!.

ಕೈಗೆಟುಕುವ ಬೆಲೆಯಲ್ಲಿ ಆದರೆ ಸಿಇ ಪ್ರಮಾಣೀಕೃತ ವಸ್ತುಗಳ ಪೂರೈಸುವ ಮೂಲಕ ಗುಣಮಟ್ಟ ಮತ್ತು ಸುರಕ್ಷತೆಯಲ್ಲಿ ರಾಜಿಯಾಗಿಲ್ಲ. ರಾಯಲ್ ಎನ್‌ಫೀಲ್ಡ್ ಸವಾರರು ಮಾತ್ರವಲ್ಲದೆ ಇಡೀ ಬೈಕಿಂಗ್ ಸಮುದಾಯವು ಉಡುಪು ಮತ್ತು ಸವಾರಿ ಗೇರ್‌ಗಳಿಗಾಗಿ ಮೋಟಾರ್‌ಸೈಕ್ಲಿಂಗ್ ಜಗತ್ತಿನಲ್ಲಿ ಹೆಜ್ಜೆ ಹಾಕುವ ಗ್ರಾಹಕರಿಗೆ ಇದು ಉಪಯುಕ್ತವಾಗಿದೆ . 

 

ರಾಯಲ್ ಎನ್‌ಫೀಲ್ಡ್ ಬಿಡುಗಡೆ ಮಾಡಿದ ಸುರಕ್ಷತಾ ಸಾಧನ ಕಿಟ್ ಬೆಲೆ  2,250 ರೂಪಾಯಿಂದ ಆರಂಭಗೊಳ್ಳುತ್ತಿದೆ