Asianet Suvarna News Asianet Suvarna News

ಹೊಸ ಎಪ್ರಿಲಿಯಾ ಎಸ್‌ಆರ್ 160, 125 ಸ್ಕೂಟರ್ ಲಾಂಚ್

ಈಗಾಗಲೇ ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಸ್ಪೋರ್ಟ್ಸ್ ಸ್ಟೈಲ್ ಸ್ಕೂಟರ್‌ಗಳ ಮೂಲಕ ಹೆಚ್ಚಿನ ಗ್ರಾಹಕರನ್ನು ಸೆಳೆಯಲು ಯಶಸ್ವಿಯಾಗಿರುವ ಪಿಯಾಜಿಯೊ ಕಂಪನಿಯು ಇದೀಗ ಹೊಸ 2022 ಎಪ್ರಿಲಿಯಾ ಎಸ್ಆರ್ 160 ಮತ್ತು 125 ಸ್ಕೂಟರ್‌ಗಳನ್ನು ಲಾಂಚ್ ಮಾಡಿದೆ. ಈ ಸ್ಕೂಟರ್‌ಗಳು ಹಳೆಯ ಸ್ಕೂಟರ್‌ಗಳ ಅಪ್‌ಡೇಟ್ ವರ್ಷನ್ ಆಗಿದ್ದು, ಸಾಕಷ್ಟು ಬದಲಾವಣೆಗಳನ್ನು ಕಾಣಬಹುದಾಗಿದೆ.

Piaggio launched Aprilia SR 160 and 125 to Indian market
Author
Bengaluru, First Published Nov 17, 2021, 4:43 PM IST
  • Facebook
  • Twitter
  • Whatsapp

ಭಾರತೀಯ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಎಪ್ರಿಲಿಯಾ (Aprilia) ಸ್ಕೂಟರ್‌ಗಳು ತಮ್ಮ ಪ್ರದರ್ಶನ ಹಾಗೂ ಪವರ್‌ಫುಲ್ ಎಂಜಿನ್‌ಗಳಿಂದಾಗಿ ಹೆಚ್ಚು ಪ್ರಸಿದ್ಧಿಯಾಗುತ್ತಿವೆ. ಈ ಕಾರಣದಿಂದಲೇ ಸಾಕಷ್ಟು ಗ್ರಾಹಕರು ಎಪ್ರಿಲಿಯಾಗೆ ಮಾರು ಹೋಗುತ್ತಿದ್ದಾರೆ. ತನ್ನ ಗ್ರಾಹಕ ವಲಯವನ್ನು ಮತ್ತಷ್ಟು ವಿಸ್ತರಿಸಿಕೊಳ್ಳುವ ನಿಟ್ಟಿನಲ್ಲಿ ಪಿಯಾಜಿಯೊ ಇಂಡಿಯಾ (Piaggio), 2022 ಎಪ್ರಿಲಿಯಾ ಎಸ್ಆರ್ 160 (Aprilia SR 160) ಹಾಗೂ ಎಪ್ರಿಲಿಯಾ ಎಸ್ಆರ್ 125 (Aprilila SR 125) ಸ್ಕೂಟರ್‌ನ ಅಪ್‌ಡೇಟ್ ವರ್ಷನ್ ಬಿಡುಗಡೆ ಮಾಡಿದೆ. ಭಾರತೀಯ ದ್ವಿಚಕ್ರವಾಹನ ಮಾರುಕಟ್ಟೆಗೆ ಬಿಡುಗಡೆಯಾಗಿರುವ ಎಪ್ರಿಲಿಯಾ ಎಸ್ ಆರ್ 160 (Aprilia SR 160) ಸ್ಕೂಟರ್ ಬೆಲೆ 1.17 ಲಕ್ಷ ರೂ.ನಿಂದ ಆರಂಭವಾಗುತ್ತದೆ. ಇದು ಪುಣೆ (Pune) ಶೋ ರೂಂ ಬೆಲೆಯಾಗಿದ್ದು, ದೇಶದ ಬೇರೆ ಬೇರೆ ಭಾಗಗಳಲ್ಲಿ ಈ ಬೆಲೆಯಲ್ಲಿ ವ್ಯತ್ಯಾಸವಾಗುವ ಸಾಧ್ಯತೆಗಳಿರುತ್ತವೆ. ಹಳೆಯ ಎಪ್ರಿಲಿಯಾ ಎಸ್ಆರ್ 160ಗೆ ಹೋಲಿಸಿದರೆ, ಹೊಸ ಎಪ್ರಿಲಿಯಾ ಎಸ್‌ಆರ್ 160 ಬೆಲೆಯಲ್ಲಿ 10,533 ರೂಪಾಯಿ ಹೆಚ್ಚಾಗಿರುವುದನ್ನು ಗಮನಿಸಬಹುದಾಗಿದೆ. ಕಂಪನಿಯು ಇದರ ಜೊತಗೆ ಅಪ್‌ಡೆಟೆಡ್ ಎಪ್ರಿಲಿಯಾ ಎಸ್ಆರ್ 125 (Aprilia SR 125) ಸ್ಕೂಟರ್ ಕೂಡ ಲಾಂಚ್ ಮಾಡಿದೆ. ಈ ಸ್ಕೂಟರ್ ಬೆಲೆ 1.07 ಲಕ್ಷ ರೂ. ಆಗಿದೆ. 

ಈ ಎರಡೂ ಸ್ಕೂಟರ್‌ (Scooter) ಗಳಿಗೆ ಈಗಾಗಲೇ ಬುಕ್ಕಿಂಗ್ (Booking) ಕೂಡ ಆರಂಭವಾಗಿದೆ. ಆಸಕ್ತ ಗ್ರಾಹಕರು ಅಧಿಕೃತ ಡೀಲರ್‌ಗಳ ಮೂಲಕ ಮುಂಗಡ ಕಾಯ್ದಿರಿಸಿಕೊಳ್ಳಹುದು. ಹಾಗೆಯೇ, ಕಂಪನಿಯ ಅಧಿಕೃತ ವೆಬ್‌ಸೈಟ್ ಮೂಲಕ ಗ್ರಾಹಕರು ಪ್ರಿ ಬುಕ್ಕಿಂಗ್ ಮಾಡಿಕೊಳ್ಳಬಹುದಾಗಿದೆ. ಇದಕ್ಕಾಗಿ ಅವರು 5000 ರೂ. ನೀಡಬೇಕಾಗುತ್ತದೆ. ಅಂದ ಹಾಗೆ, ಎಪ್ರಿಲಿಯಾ ಎಸ್‌ಆರ್ 160 ಅಪ್‌ಡೇಟೆಡ್ ಸ್ಕೂಟರ್ ಗ್ರಾಹಕರಿಗೆ ಬಿಳಿ (White), ನೀಲಿ (Blue), ಗ್ರೇ (Grey) ಮತ್ತು ರೆಡ್ (Red), ಮ್ಯಾಟ್ ಬ್ಲ್ಯಾಕ್‌ (Matt Black) ಬಣ್ಣಗಳಲ್ಲಿ ದೊರೆಯಲಿದೆ.

ಈ ಹೊಸ ಎಪ್ರಿಲಿಯಾ ಎಸ್‌ಆರ್ 160 ಸ್ಕೂಟರ್ ಬಹಳಷ್ಟು ಅಪ್‌ಡೇಟ್‌ಗಳೊಂದಿಗೆ ಬಿಡುಗಡೆಯನ್ನು ಕಾಣುತ್ತಿದೆ. ಹೆಡ್‍ಲ್ಯಾಂಪ್, ಏಪ್ರಾನ್‌ ಹೊಸ ವಿನ್ಯಾಸ ಹಿಡಿದು ಬಹಳಷ್ಟು  ಬದಾವಣೆಗಳನ್ನು ಗ್ರಾಹಕರು ಗುರುತಿಸಬಹುದಾಗಿದೆ. ಹಳೆಯ ಎಪ್ರಿಲಿಯಾದಲ್ಲಿ ಹಾಲೋಜೆನ್ ಹೆಡ್‌ಲ್ಯಾಂಪ್ ಇತ್ತು, ಕಂಪನಿ ಅದರ ಬದಲಿಗೆ ಎಲ್ಇಡಿ ಹೆಡ್‌ಲ್ಯಾಂಪ್ ಬಳಸಿದೆ. ಸ್ಕೂಟರ್‌ನ ಹ್ಯಾಂಡಲ್ ಬಾರ್ ಕಾವಲ್ ಕೂಡ ಮರು ವಿನ್ಯಾಸಗೊಳಿಸಲಾಗಿದೆ.

EV Two Wheelers Launch: ಬೂಮ್ ಕಾರ್ಬೆಟ್ ಅನ್ನು ಇಎಂಐ ಮೂಲಕ ಖರೀದಿಸಿ!

ಈ ಹೊಸ ಎಪ್ರಿಲಿಯಾ ಸ್ಕೂಟರ್‌ನಲ್ಲೂ 160 ಸಿಸಿ, ಏರ್ ಕೂಲ್ಡ್, ಮೂರು ವಾಲ್ವ್ ಎಂಜಿನ್ (Engine) ನೀಡಲಾಗಿದೆ. ಈ ಎಂಜಿನ್ 7600 ಆರ್‌ಪಿಎಂ (RPM) ನಲ್ಲಿ ಗರಿಷ್ಠ 10.84 ಬಿಎಚ್‌ಪಿ (BHP) ಪವರ್ ಉತ್ಪಾದಿಸಿದರೆ, 6000 ಆರ್‌ಪಿಎಂನಲ್ಲಿ  11.6 ಎನ್ಎಂ ಟಾರ್ಕ್ (Torque) ಉತ್ಪಾದಿಸುತ್ತದೆ.

ಇತರೆ ಫೀಚರ್‌ಗಳ ಬಗ್ಗೆ ಹೇಳುವುದಾದರೆ ಈ ಸ್ಕೂಟರ್‌ನಲ್ಲಿ ಕಂಪನಿಯು ಯುಎಸ್‌ಬಿ ಚಾರ್ಜರ್ (USB Charger), ಬೂಟ್ ಲೈಟ್, ಪೂರ್ಣ ಪ್ರಮಾಣದ ಡಿಜಿಟಲ್ (Digital) ಇನ್ಸುಟ್ರುಮೆಂಟ್ ಕಾನ್ಸೋಲ್ ನೀಡಲಾಗಿದೆ. ಈ ಕ್ಲಸ್ಟರ್‌ನಲ್ಲಿ ನೀವು ಆರ್‌ಪಿಎಂ (RPM), ಮೈಲೇಜ್ (Mileage), ಸರಾಸರಿ ವೇಗ, ಟಾಪ್ ಸ್ಪೀಡ್ (Top Speed), ಇಂಧನ ಪ್ರಮಾಣ, ಓಡೋಮೀಟರ್ (Odometer) ಮತ್ತು ಟೈಮ್ ಇತ್ಯಾದಿ ಮಾಹಿತಿಗಳನ್ನು ಕಾಣಬಹುದಾಗಿದೆ. 

ಸುರಕ್ಷತೆಯ ಬಗ್ಗೆ ಹೇಳುವುದಾದರೆ, ಎಪ್ರಿಲಿಯಾ ಈ ಹೊಸ ಸ್ಕೂಟರ್‌ನಲ್ಲಿ ಎಂದಿನಂತೆ ಮುಂದಗಡೆ ಟೆಲೆಸ್ಕಾಪಿಕ್ ಫೋರ್ಕ್ಸ್ ಮತ್ತು ಹಿಂಬದಿಯಲ್ಲಿ ಮೋನೋಶಾಕ್‌ ಅನ್ನು ಅಳವಡಿಸಲಾಗಿದೆ. ಹಾಗೆಯೇ, ಹಿಂಬದಿ ಮತ್ತು ಮುಂಬದಿ ಚಕ್ರಗಳಿಗೆ ಸಿಂಗಲ್ ಚಾನೆಲ್ ಎಬಿಎಸ್ (ABS) ಬ್ರೇಕಿಂಗ್ ವ್ಯವಸ್ಥೆಯನ್ನು ಅಳವಡಿಸಲಾಗಿದೆ. 14 ಇಂಚಿನ ಅಲಾಯ್ ವ್ಹೀಲ್‌ಗಳನ್ನು ಕಂಪನಿ ಒದಗಿಸಿದೆ.

GIIASನಲ್ಲಿ ಹೊಸ ಹುಂಡೈ ಕ್ರೆಟಾ ಫೇಸ್‌ಲಿಫ್ಟ್ ಎಸ್‌ಯುವಿ ಲಾಂಚ್

Follow Us:
Download App:
  • android
  • ios