EV Manufacturing Unit ದಕ್ಷಿಣ ಭಾರತದಲ್ಲಿ ಒನ್ ಮೋಟೋ ಎಲೆಕ್ಟ್ರಿಕ್ ಸ್ಕೂಟರ್ ಉತ್ಪಾದನಾ ಘಟಕ ಸ್ಥಾಪನೆ!

  • ಭಾರತದಲ್ಲಿ ಇತ್ತೀಚೀಗೆ ಒನ್ ಮೋಟೋ ಹೈಸ್ಪೀಡ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ
  • ತೆಲಂಗಾಣದಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಉತ್ಪಾದನಾ ಘಟಕ ಸ್ಥಾಪನೆ
  • ವಿಪುಲ ಉದ್ಯೋಗವಕಾಶ ಸೃಷ್ಟಿ, 15 ಎಕರೆ ಸ್ಥಳದಲ್ಲಿ ಘಟಕ ಸ್ಥಾಪನೆ
     
One Moto signs Mou with Telangana government to set up Electric Vehilce manufacturing unit ckm

ಹೈದರಾಬಾದ್(ಜ.03):  ಭಾರತದಲ್ಲಿ ಇತ್ತೀಚೆಗೆ ಬ್ರಿಟೀಷ್ ಬ್ರ್ಯಾಂಡ್ ಒನ್ ಮೋಟೋ ಎಲೆಕ್ಟ್ರಿಕ್ ಸ್ಕೂಟರ್ ಅನಾವರಣ ಮಾಡಲಾಗಿದೆ. ಎಲೆಕ್ಟಾ ಎಂಬ ಹೈಸ್ಪೀಡ್ ಎಲೆಕ್ಟ್ರಿಕ್ ಸ್ಕೂಟರ್ ಬೆಲೆ 2 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ಹಲವು ಅತ್ಯಾಧುನಿಕ ಫೀಚರ್ಸ್ ಜೊತೆಗೆ ಸ್ಕೂಟರ್ ಬಿಡುಗಡೆ ಮಾಡಿದೆ. ಇದೀಗ ಗ್ರಾಹಕರ ಬೇಡಿಕೆಗೆ ತಕ್ಕಂತೆ ಸ್ಕೂಟರ್ ಉತ್ಪಾದನೆ ಮಾಡಲು ತೆಲಂಗಾಣದಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಘಟಕ ಸ್ಥಾಪಿಸುತ್ತಿದೆ.

ಹೈದರಾಬಾದ್ ಹೊರವಲಯದಲ್ಲಿ ಒನ್ ಮೋಟೋ ಎಲೆಕ್ಟ್ರಿಕ್ ಸ್ಕೂಟರ್ ಉತ್ಪಾದನಾ ಘಟಕ ತಲೆ ಎತ್ತಲಿದೆ. ಈ ಕುರಿತು ಒನ್ ಮೋಟೋ ತೆಲಂಗಾಣ ಸರ್ಕಾರದ ಜೊತೆ ಒಪ್ಪಂದ ಮಾಡಿಕೊಂಡಿದೆ. ಸ್ಥಳ, ವಿದ್ಯುತ್, ನೀರು ಸೇರಿದಂತೆ ಮೂಲಭೂತ ಸೌಕರ್ಯ ಒದಗಿಸುವುದಾಗಿ ತೆಲಂಗಾಣ ಸರ್ಕಾರ ಭರವಸೆ ನೀಡಿದೆ. ಇದೇ ವೇಳೆ ಅತ್ಯಾಧುನಿಕ ಘಟಕ ಸ್ಥಾಪಿಸುವುದಾಗಿ ಒನ್ ಮೋಟೋ ಹೇಳಿದೆ.

Ola S1 Pro Range Test ಒಲಾ S1 ಪ್ರೋ ಸ್ಕೂಟರ್ ನಿಜವಾದ ಮೈಲೇಜ್ ರೇಂಜ್ ಎಷ್ಟು?

ಹೈದರಾಬಾದ್ ಹೊರವಲಯದಲ್ಲಿ 250 ಕೋಟಿ ರೂಪಾಯಿ ವಚ್ಚದಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಘಟಕ ನಿರ್ಮಾಣ ಮಾಡಲು ಒನ್ ಮೋಟೋ ಮುಂದಾಗಿದೆ. ಅತ್ಯಾಧುನಿಕ ಮಶಿನ್, ಸೆಮಿ ರೊಬೊಟಿಕ್ ಸೇರಿದಂತೆ ಹೊಸ ವಿಧಾನದಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಘಟಕ ಕಾರ್ಯನಿರ್ವಹಿಸಲಿದೆ ಎಂದು ಒನ್ ಮೋಟೋ ಹೇಳಿದೆ. ಇನ್ನು 15 ಎಕರೆ ಸ್ಥಳದಲ್ಲಿ ಘಟಕ ತಲೆ ಎತ್ತಲಿದೆ.

ಹೊಸ ಘಟಕ ಸ್ಥಾಪನೆಯಿಂದ ವಿಪುಲವಾದ ಉದ್ಯೋಗವಕಾಶ ಸೃಷ್ಟಿಯಾಗಲಿದೆ. ಈ ಘಟಕಿಂದ 500 ನೇರ ಉದ್ಯೋಗ ಹಾಗೂ 2,000 ಪರೋಕ್ಷ ಉದ್ಯೋಗ ಸೃಷ್ಟಿಯಾಗಲಿದೆ. ಘಟಕದಲ್ಲಿ ಉದ್ಯೋಗಿಗಳ ನೇಮಕಕ್ಕೆ ಕೌಶಲ್ಯದ ಹುಡುಕಾಟ ನಡೆಸಲಿದೆ. ಅರ್ಹರಿಗೆ ಉದ್ಯೋಗವಕಾಶ ಸಿಗಲಿದೆ ಎಂದು ಒನ್ ಮೋಟೋ ಹೇಳಿದೆ.

Electric Bike 120 ಕಿ.ಮೀ ಮೈಲೇಜ್ ನೀಡಬಲ್ಲ ಆಕರ್ಷಕ ಸೈಬಾರ್ಗ್ ಯೋದಾ ಎಲೆಕ್ಟ್ರಿಕ್ ಕ್ರ್ಯೂಸರ್ ಬೈಕ್ ಅನಾವರಣ!

ಭಾರತದಲ್ಲಿ ಒನ್ ಮೋಟೋ ಈಗಾಗಲೇ ಎರಡು ಎಲೆಕ್ಟ್ರಿಕ್ ವಾಹನ ಬಿಡುಗಡೆ ಮಾಡಿದೆ. ನವೆಂಬರ್ ತಿಂಗಳಲ್ಲಿ ಕಮ್ಯೂಟಾ ಹಾಗೂ ಬೈಕಾ ವಾಹನವನ್ನು ಬಿಡುಗಡೆ ಮಾಡಿದೆ. ಇತ್ತೀಚೆಗೆ ದೆಹಲಿಯ ಗ್ರೇಟರ್ ನೋಯ್ಡಾದಲ್ಲಿ ನಡೆದ ಆಟೋ ಎಕ್ಸ್‌ಪೋದಲ್ಲಿ ಒನ್ ಮೋಟೋ ಎಲೆಕ್ಟಾ ಸ್ಕೂಟರ್ ಅನಾವರಣ ಮಾಡಿದೆ. ಈ ವಿಶೇಷ ಅಂದರೆ ಒನ್ ಮೋಟೋ ಎಲೆಕ್ಟ್ರಿಕ್ ವಾಹನಗಳು ಜಿಯೋ ಫೆನ್ಸಿಂಗ್, ಐಒಟಿ ಹಾಗೂ ಬ್ಲೂಟೂಥ್ ಫೀಚರ್ಸ್ ಹೊಂದಿದೆ.

ಎಲೆಕ್ಟಾ ಸ್ಕೂಟರ್ ಒಂದು ಬಾರಿ ಚಾರ್ಜ್ ಮಾಡಿದರೆ 150 ಕಿಲೋಮೀಟರ್ ಮೈಲೇಜ್ ನೀಡಲಿದೆ. 4 ಗಂಟೆಗಳಲ್ಲಿ ಸಂಪೂರ್ಣ ಚಾರ್ಜ್ ಆಗಲಿದೆ. ಎಲೆಕ್ಟಾ ಸ್ಕೂಟರ್ 72V ಹಾಗೂ 45A ಡಿಟ್ಯಾಚೇಬಲ್ ಲಿಥಿಯಂ ಐಯಾನ್ ಬ್ಯಾಟರಿ ಹೊಂದಿದೆ. ಸ್ಕೂಟರ್ ಗರಿಷ್ಠ ವೇಗ 100 ಕಿ.ಮೀ. ನೂತನ ಸ್ಕೂಟರ್ ರೆಟ್ರೋ ಶೈಲಿಯಲ್ಲಿ ವಿನ್ಯಾಸ ಮಾಡಲಾಗಿದೆ. ಕಂಪನಿ ಈಗಾಗಲೇ ಭಾರತದಲ್ಲಿ 75 ಡೀಲರ್‌ಶಿಪ್ ಹೊಂದಿದೆ. ಮೂರು ಚಕ್ರದ ವಾಹನ ಸೇರಿದಂತೆ ಎಲೆಕ್ಟ್ರಿಕ್ ವಾಹನಗಳನ್ನು ಬಿಡುಗಡೆ ಮಾಡಿರುವ ಒನ್ ಮೋಟೋ ಭಾರತದ ಎಲೆಕ್ಟ್ರಿಕ್ ವಾಹನ ಮಾರುಕಟ್ಟೆ ಆಕ್ರಮಿಸಿಕೊಳ್ಳಲು ಮುಂದಾಗಿದೆ. 

Electric Vehicle ಭಾರತದಲ್ಲಿ ಅತೀ ವೇಗದ ಎಲೆಕ್ಟಾ ಸ್ಕೂಟರ್ ಬಿಡುಗಡೆ ಮಾಡಿದ ಬ್ರಿಟೀಷ್ ಬ್ರ್ಯಾಂಡ್ ಒನ್-ಮೋಟೋ

ಭಾರತದಲ್ಲಿ ಒಂದರ ಮೇಲೊಂದರಂತೆ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಯಾಗುತ್ತಿದೆ. ಇದೀಗ ವಿಶ್ವದಲ್ಲಿ ಭಾರತ ಎಲೆಕ್ಟ್ರಿಕ್ ಸ್ಕೂಟರ್‌ಗಳ ಹಬ್ ಆಗಿ ಮಾರ್ಪಡುತ್ತಿದೆ. ಇತ್ತೀಚೆಗೆ ಭಾರತದಲ್ಲಿ ಒಲಾ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡಯಾಗಿದೆ. ಎದರ್ ಎನರ್ಜಿ ಸ್ಕೂಟರ್, ಒಕಿನಾವಾ, ಬೌನ್ಸ್ ಇನ್ಫಿನಿಟಿ ಸೇರಿದಂತೆ  15ಕ್ಕೂ ಹೆಚ್ಚು ಎಲೆಕ್ಟ್ರಿಕ್ ಸ್ಕೂಟರ್ ಲಭ್ಯವಿದೆ. ಎಲೆಕ್ಟ್ರಿಕ್ ಕಾರುಗಳ ಉತ್ಪಾದನೆಯಲ್ಲೂ ಭಾರತ ಮುಂಚೂಣಿಯಲ್ಲಿದೆ. ಈಗಾಗಲೇ ಟಾಟಾ ನೆಕ್ಸಾನ್ ಎಲೆಕ್ಟ್ರಿಕ್ ಹಾಗೂ ಟಾಟಾ ಟಿಗೋರ್ ಎಲೆಕ್ಟ್ರಿಕ್ ಕಾರು ಮಾರುಕಟ್ಟೆಯಲ್ಲಿ ಭಾರಿ ಸದ್ದು ಮಾಡುತ್ತಿದೆ. ಇನ್ನು ಹ್ಯುಂಡೈ ಕೋನಾ, ಎಂಜಿ ಮೋಟಾರ್ಸ್ ZS ಕಾರುಗಳ ಲಭ್ಯವಿದೆ.

Latest Videos
Follow Us:
Download App:
  • android
  • ios