Asianet Suvarna News Asianet Suvarna News

ದೀಪಾವಳಿಗೆ 80,000 ರೂ. ಓಲಾ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ: ಸಿಇಓ ಟ್ವೀಟ್

ಈ ವರ್ಷದ ದೀಪಾವಳಿಗೆ 80,000 ರೂ. ಮೌಲ್ಯದ ಇನ್ನೊಂದು ಉಪ ಎಲೆಕ್ಟ್ರಿಕ್‌ ಸ್ಕೂಟರ್‌ ಬಿಡುಗಡೆಗೊಳಿಸುವುದಾಗಿ OLA ಪ್ರಕಟಿಸಿದೆ.

Ola to launch new sub electric scooter in this diwali
Author
First Published Oct 11, 2022, 4:10 PM IST

ಓಲಾ ಎಲೆಕ್ಟ್ರಿಕ್ (Ola electric) ದೇಶದಲ್ಲಿ ಅತಿ ಹೆಚ್ಚು ಮಾರಾಟವಾಗುವ ಪ್ರೀಮಿಯಂ ಇ-ಸ್ಕೂಟರ್‌ಗಳಲ್ಲಿ ಒಂದಾಗಿದೆ. ಭಾರತವು ವಿಶ್ವದ ಅತಿದೊಡ್ಡ ದ್ವಿಚಕ್ರ ಮಾರುಕಟ್ಟೆಗಳಲ್ಲಿ ಒಂದಾಗಿದ್ದು, ಭಾರತ ಸರ್ಕಾರ ನೀಡಿರುವ ಫೇಮ್ 2 (FAME II) ಸಬ್ಸಿಡಿಗಳಿಂದಾಗಿ ದ್ವಿಚಕ್ರ ವಾಹನ ತಯಾರಿಸುವ ಕಂಪನಿಗಳ ಸಂಖ್ಯೆ ಹೆಚ್ಚಾಗುತ್ತಿವೆ. ಸರ್ಕಾರ FAME II ಯೋಜನೆಯನ್ನು  2024 ಮಾರ್ಚ್ 31ರವರೆಗೆ ವಿಸ್ತರಿಸಿದೆ. ಇದರ ನಡುವೆಯೇ, ಹೀರೋ ವಿಡಾ (Hero Vida) ಮತ್ತು ಹೋಂಡಾ (Honda) ಶೀಘ್ರದಲ್ಲೇ  ಅಖಾಡಕ್ಕೆ ಇಳಿಯುವ ಸಾಧ್ಯತೆಯಿದೆ. ಇದರಿಂದ ಸ್ಪರ್ಧೆ ಗಣನೀಯವಾಗಿ ಹೆಚ್ಚಾಗಲಿದೆ.  2022ರ ಆಗಸ್ಟ್ 15 ರಂದು ಬಿಡುಗಡೆಯಾದ 99,999 ರೂ. ಮೌಲ್ಯದ ಎಸ್1 (S1) ಸ್ಕೂಟರ್ನೊಂದಿಗೆ, Ola ಹಲವು ವೈಶಿಷ್ಟ್ಯಗಳನ್ನು ನೀಡಿತ್ತು. ಈ ವರ್ಷದ ದೀಪಾವಳಿಗೆ 80,000 ರೂ. ಮೌಲ್ಯದ ಇನ್ನೊಂದು ಉಪ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಗೊಳಿಸುವುದಾಗಿ ಕಂಪನಿ ಪ್ರಕಟಿಸಿದೆ. 

ಓಲಾ ಕಂಪನಿಯ ಸಿಇಓ (Ola CEO) ಭವಿಶ್ ಅಗರ್ವಾಲ್ ಟ್ವಿಟರಿನಲ್ಲಿ  (Twitter) ಈ ಸ್ಕೂಟರ್ನ ಬಿಡುಗಡೆ ದಿನಾಂಕವನ್ನು ಘೋಷಿಸಿದ್ದಾರೆ. ಅಕ್ಟೋಬರ್ 22ರಂದು ಹೊಸ ಸ್ಕೂಟರ್ ಬಿಡುಗಡೆಗೊಳಿಸಲಾಗುವುದು ಎಂದು ಅವರು ತಿಳಿಸಿದ್ದಾರೆ. "ಈ ತಿಂಗಳು ನಮ್ಮ ಬಿಡುಗಡೆ ಕಾರ್ಯಕ್ರಮಕ್ಕಾಗಿ ದೊಡ್ಡದಾಗಿರುವುದೇನನ್ನೋ ಯೋಜಿಸಲಾಗಿದೆ! ಎಂದಿರುವ ಅವರು, "#ಇದು EndICEAge ಕ್ರಾಂತಿಯನ್ನು ಕನಿಷ್ಠ 2 ವರ್ಷಗಳವರೆಗೆ ವೇಗಗೊಳಿಸಲಿದೆ" ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

47 ಸಾವಿರ ರೂಗೆ GT ಫೋರ್ಸ್ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ!

ಓಲಾ ದೇಶದಲ್ಲಿ ಅತ್ಯಂತ ಕೈಗೆಟುಕುವ ಪ್ರೀಮಿಯಂ ಎಲೆಕ್ಟ್ರಿಕ್ ಸ್ಕೂಟರ್ಗಳಲ್ಲಿ  (Premium electric Scooter) ಒಂದನ್ನು ಬಿಡುಗಡೆ ಮಾಡುವ ಗುರಿಯನ್ನು ಹೊಂದಿದೆ. ಹೊಸ ಎಲೆಕ್ಟ್ರಿಕ್ ಸ್ಕೂಟರ್ನ ಬೆಲೆಯು 80,000 ರೂ.ಗಳಿಗಿಂತ ಕಡಿಮೆಯಾಗುವ ಸಾಧ್ಯತೆಯಿದೆ. ಅಗರ್ವಾಲ್ ಅವರು ಈ ಹೊಸ ಬಿಡುಗಡೆಗೆ ಸಂಬಂಧಿಸಿದ ಹೆಚ್ಚಿನ ವಿವರಗಳನ್ನು ನೀಡಲಿಲ್ಲ. ಆದರೆ,  ಓಲಾ ಎಲೆಕ್ಟ್ರಿಕ್ ಪ್ರಕಾರ, ಎಲೆಕ್ಟ್ರಿಕ್ ಸ್ಕೂಟರ್ ಮಾರಾಟ ಮತ್ತಷ್ಟು ವೇಗ ಪಡೆದುಕೊಳ್ಳುತ್ತದೆ. 

ಈ ಹೊಸ ಸ್ಕೂಟರ್ ಕಡಿಮೆ ವೆಚ್ಚದೊಂದಿಗೆ, ಕಡಿಮೆ ಸ್ಪೆಕ್ಸ್ ಮತ್ತು ಕಡಿಮೆ ವೈಶಿಷ್ಟ್ಯಗಳೊಂದಿಗೆ ಬರಲಿದೆ ಎನ್ನಲಾಗುತ್ತಿದೆ. ಈ ಹೊಸ ಸ್ಕೂಟರ್, Ola S1 ಎಲೆಕ್ಟ್ರಿಕ್ ಸ್ಕೂಟರ್ಗಿಂತ ಕಡಿಮೆ ದರ ಹೊಂದಿರುವುದರಿಂದ, ಕಡಿಮೆ ವೈಶಿಷ್ಟ್ಯಗಳನ್ನು ನಿರೀಕ್ಷಿಸಬಹುದು. S1 ಪ್ರೊಗೆ ವ್ಯತಿರಿಕ್ತವಾಗಿ S1 ಸ್ಕೂಟರ್ ಕಡಿಮೆ ವೈಶಿಷ್ಟ್ಯಗಳನ್ನು ಹೊಂದಿದೆ. ಮುಂಬರುವ ಹೀರೋ ವಿಡಾ ಮತ್ತು ಹೋಂಡಾ ಎಲೆಕ್ಟ್ರಿಕ್ ಸ್ಕೂಟರ್ಗಳ ಜೊತೆಗೆ ಏಥರ್ (Ather), ಸಿಂಪಲ್ (Simple), ಓಕಿನಾವಾ (okinava), ಟಿವಿಎಸ್ (TVS), ಚೇತಕ್ (Chethak) ಮತ್ತು ಪ್ರಸ್ತುತ ವಿಭಾಗದ ನಾಯಕ ಹೀರೋ ಎಲೆಕ್ಟ್ರಿಕ್ಗಳಿಗೆ (Hero electric) ಇದು ಸ್ಪರ್ಧೆಯೊಡ್ಡುವ ಸಾಧ್ಯತೆಯಿದೆ. 
Ola S1 ವಿತರಣೆಗಳು ಸೆಪ್ಟೆಂಬರ್ 7 ರಿಂದ ದೇಶಾದ್ಯಂತ ಪ್ರಾರಂಭವಾಗಿದೆ.  ಇದು 3 kWh ಬ್ಯಾಟರಿ ಪ್ಯಾಕ್ ಹೊಂದಿದ್ದು, S1 ಪ್ರೊನ ಬ್ಯಾಟರಿ ಪ್ಯಾಕ್ಗಿಂತ ಚಿಕ್ಕದಾಗಿದೆ. ಇದರಲ್ಲಿ 4 kWh ಬ್ಯಾಟರಿ ಪ್ಯಾಕ್ ನೀಡಲಾಗಿದೆ. ಸಣ್ಣ ಬ್ಯಾಟರಿಯ Ola S1 ಒಂದೇ ಚಾರ್ಜ್ನಿಂದ 141 ಕಿಮೀ ವ್ಯಾಪ್ತಿಯನ್ನು ನೀಡುತ್ತದೆ. ಇದರ ಮೋಟಾರ್ S1 ಪ್ರೊನಂತೆಯೇ ಇದ್ದು, ಇತರ ಪ್ರೀಮಿಯಂ ಎಲೆಕ್ಟ್ರಿಕ್ ಸ್ಕೂಟರ್ಗಳೊಂದಿಗೆ ಹೆಚ್ಚಿನ ಮಟ್ಟದಲ್ಲಿದೆ.
 

 

ಎಲೆಕ್ಟ್ರಿಕ್ ದ್ವಿಚಕ್ರ ವಾಹನದಲ್ಲಿ ಮೇಲುಗೈ ಕಾಯ್ದುಕೊಂಡ ಹೀರೋ ಎಲೆಕ್ಟ್ರಿಕ್

ಓಲಾ ಈ ತಿಂಗಳ ತಮ್ಮ ಈವೆಂಟ್ನಲ್ಲಿ ಹೊಸ ಉತ್ಪನ್ನಗಳ ಬಗ್ಗೆ ಹೆಚ್ಚಿನ ವಿವರಗಳನ್ನು ನೀಡಲಿದೆ. ಆದರೆ, ಈಗಾಗಲೇ ಈ ಸ್ಕೂಟರ್ ಕುರಿತು ಆಟೊಮೊಬೈಲ್ ವಲಯದಲ್ಲಿ ಇದರ ದರ ಹಾಗೂ ವೈಶಿಷ್ಟ್ಯಗಳ ಬಗ್ಗೆ  ಸಾಕಷ್ಟು ಊಹಾಪೋಹಗಳು ಹರಿದಾಡುತ್ತಿವೆ.

Follow Us:
Download App:
  • android
  • ios