ರಿವರ್ಸ್ ಗೇರ್‌ನಲ್ಲಿಯೂ ಓಡಲಿದೆ ಓಲಾ ಸ್ಕೂಟರ್, ಪರಿಚಯಿಸುತ್ತಿದೆ ರಿವರ್ಸ್ ಮೋಡ್!
ಆಗಸ್ಟ್ 15ರಂದು ಲಾಂಚ್ ಆಗಲಿರುವ ಓಲಾ ಸ್ಕೂಟರ್‌ನಲ್ಲಿ ರಿವರ್ಸ್ ಮೋಡ್ ಪರಿಚಯಿಸಲಾಗುತ್ತಿದೆ. ಪರಿಣಾಮ ಸವಾರರು ಈ ಸ್ಕೂಟರ್ ಅನ್ನು ಹಿಂಬರ್ಕಿಯೂ ಓಡಿಸಬಹುದು. ಈ ಮೋಡ್ ದ್ವಿಚಕ್ರವಾಹನಗಳಲ್ಲಿ ಹೊಸದಾಗಿದೆ. ಈಗಾಗಲೇ ಕಂಪನಿಯು ಈ ಸ್ಕೂಟರ್‌ಗೆ ಸಂಬಂಧಿಸಿದಂತೆ ಬುಕ್ಕಿಂಗ ಆರಂಭಿಸಿದ್ದು, ಸಿಕ್ಕಾಪಟ್ಟೆಪ್ರತಿಕ್ರಿಯೆ ಸಿಕ್ಕಿದೆ.
ರಸ್ತೆಗಿಳಿಯುವ ಮುಂಚೆಯೇ ದೇಶದಲ್ಲಿ ಭಾರಿ ಸಂಚಲನ ಸೃಷ್ಟಿಸಿರುವ ಓಲಾ ಎಲೆಕ್ಟ್ರಿಕ್ ಸ್ಕೂಟರ್ ವಿಶಿಷ್ಟವಾದ ಫೀಚರ್‌ವೊಂದನ್ನು ಒಳಗೊಂಡಿದೆ. ವಿಶೇಷ ಏನೆಂದರೆ, ಈವರೆಗೆ ಯಾವುದೇ ದ್ವಿಚಕ್ರವಾಹನ, ಸ್ಕೂಟರ್‌ನಲ್ಲಿ ಈ ಫೀಚರ್ ಇರಲಿಲ್ಲ. ಇದೇ ಮೊದಲ ಬಾರಿಗೆ ಅಂಥ ಪ್ರಯತ್ನವನ್ನು ಒಲಾ ಎಲೆಕ್ಟ್ರಿಕ್ ಕಂಪನಿ ತನ್ನ ಸ್ಕೂಟರ್‌ಗಳಲ್ಲಿ ಅಳವಡಿಸಿ ಯಶಸ್ವಿಯಾಗಿದೆ
ಸಾಮಾನ್ಯವಾಗಿ ನಾಲ್ಕು ಚಕ್ರ, ತ್ರಿಚಕ್ರವಾಹನಗಳಲ್ಲಿ ರಿವರ್ಸ್(ಹಿಂಬರಿಕಿ) ಹೋಗುವ ಗೇರ್ ಇರುತ್ತದೆ. ಆದರೆ, ಸಾಂಪ್ರದಾಯಿಕ ಇಂಧನಾಧರಿತ ಸ್ಕೂಟರ್ ಆಗಲಿ, ದ್ವಿಚಕ್ರವಾಹನದಲ್ಲಾಗಲಿ ಈ ಗೇರ್ ಇರುವುದಿಲ್ಲ. ಆದರೆ, ಆಗಸ್ಟ್ 15ರಂದು ಮಾರುಕಟ್ಟೆಗೆ ಲಾಂಚ್ ಆಗಲಿರುವ ಓಲಾ ಎಲೆಕ್ಟ್ರಿಕ್ ಸ್ಕೂಟರ್ ರಿವರ್ಸ್ ಮೋಡ್ ಕೂಡ ಹೊಂದಿರಲಿದೆ.
ಹಿಟ್ & ರನ್ ಪ್ರಕರಣ ಸಂತ್ರಸ್ತರಿಗೆ 2 ಲಕ್ಷ ಪರಿಹಾರ ಮೊತ್ತ ಏರಿಕೆ ಪ್ರಸ್ತಾಪ
ಓಲಾದ ಈ ವಿಶಿಷ್ಟ ಮೋಡ್‌ನಿಂದ ಸವಾರರು ಹಿಂಬರ್ಕಿಯೂ ಗಾಡಿಯನ್ನು ಓಡಿಸಬಹುದಾಗಿದೆ. ಈ ವಿಷಯವನ್ನು ಓಲಾ ಎಲೆಕ್ಟ್ರಿಕ್ ಸಿಇಒ ಭವಿಶ್ ಅಗ್ರವಾಲ್ ಅವರೇ ಹಂಚಿಕೊಂಡಿದ್ದಾರೆ. ಓಲಾ ಎಲೆಕ್ಟ್ರಿಕ್ ಟ್ವಿಟರ್ ಖಾತೆಯಲ್ಲೂ ಇದಕ್ಕೆ ಸಂಬಂಧಿಸಿದ ಮಾಹಿತಿಯನ್ನ ಷೇರ್ ಮಾಡಲಾಗಿದೆ.
ಆದರೆ, ಕಂಪನಿಯ ರಿವರ್ಸ್ ಮೋಡ್ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ಷೇಪವೂ ವ್ಯಕ್ತವಾಗಿದೆ. ಓಲಾ ಎಲೆಕ್ಟ್ರಿಕ್ ಅಧಿಕೃತ ಟ್ವಿಟರ್ ಖಾತೆಯಲ್ಲಿ ಷೇರ್ ಮಾಡಲಾಗಿರುವ ಮಾಹಿತಿಗೆ ಹಲವರು ಕಮೆಂಟ್ ಮಾಡಿದ್ದು, ಇದು ಅಪಯಾಕಾರಿ ಮೋಡ್ ಆಗಲಿದೆ. ಇದರಿಂದ ಮತ್ತಷ್ಟು ಅಪಘಾತಗಳು ಹೆಚ್ಚಾಗಬಹುದು ಅಭಿಪ್ರಾಯಪಟ್ಟಿದ್ದಾರೆ.
ಸವಾರರು ಇ-ಸ್ಕೂಟರ್‌ನಲ್ಲಿ ರಿವರ್ಸ್ ಮೋಡ್ ಅನ್ನು ಹೆಚ್ಚಿನ ವೇಗದಲ್ಲಿ ನಿರ್ವಹಿಸಲು ಸಾಧ್ಯವಾಗುತ್ತದೆ ಎಂದು ಕಂಪನಿ ಸುಳಿವು ನೀಡಿದೆ. ನೀವು ಓಲಾ ಸ್ಕೂಟರ್ ಅನ್ನು ನಂಬಲಾಗದ ವೇಗದಲ್ಲಿ ರಿವರ್ಸ್ ಮಾಡಬಹುದು ಎಂದು ಅದು ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ ಬರೆದಿದೆ.
ಪ್ರಸ್ತುತ ಮರುಪಾವತಿಸಬಹುದಾದ 499 ರೂ. ಟೋಕನ್ ಮೊತ್ತದಲ್ಲಿ ಬುಕಿಂಗ್‌ಗೆ ಲಭ್ಯವಿದೆ. ಕಂಪನಿಯು ಜುಲೈ ಅಂತ್ಯದಲ್ಲಿ ಬುಕ್ಕಿಂಗ್ ಆರಂಭಿಸಿದಾಗಿನಿಂದ ಇದುವರೆಗೆ ದೇಶಾದ್ಯಂತ 1,000 ನಗರಗಳಿಂದ ಬುಕಿಂಗ್‌ಗಳನ್ನು ಸ್ವೀಕರಿಸಿದೆ. ಸ್ಕೂಟರ್ ಬೆಲೆ ಸುಮಾರು ಒಂದು ಲಕ್ಷ ರೂ. ಎಂದು ನಿರೀಕ್ಷಿಸಲಾಗಿದೆ ಮತ್ತು ಇದು ರಾಜ್ಯ ಮಟ್ಟದ ಸಬ್ಸಿಡಿಗಳೊಂದಿಗೆ ಮತ್ತಷ್ಟು ಕಡಿಮೆಯಾಗಬಹುದು.
ಆಗಸ್ಟ್ 15ಕ್ಕೆ ಲಾಂಚ್ ಆಗಲಿದ ಓಲಾ ಸ್ಕೂಟರ್
ಎಲೆಕ್ಟ್ರಿಕ್ ಸ್ಕೂಟರ್ ವಿಭಾಗದಲ್ಲಿ ಭಾರಿ ಸಂಚಲ ಸೃಷ್ಟಿಸಿರುವ ಓಲಾ ಎಲೆಕ್ಟ್ರಿಕ್ ಸ್ಕೂಟರ್ ಇದೀಗ ಬಿಡುಗಡೆಗೆ ಸಜ್ಜಾಗಿದೆ. ಕಡಿಮೆ ಬೆಲೆ, 150 ಕಿ.ಮೀ ಮೈಲೇಜ್ ಸೇರಿದಂತೆ ಹಲವು ವಿಶೇಷತೆಗಳು ಈ ಸ್ಕೂಟರ್‌ನಲ್ಲಿದೆ. ಇದೀಗ ಓಲಾ ಎಲೆಕ್ಟ್ರಿಕ್ ಸ್ಕೂಟರ್ ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆಯಂದು ಬಿಡುಗಡೆ ಮಾಡಲು ಸಿದ್ಧತೆ ನಡೆಯುತ್ತಿದೆ.
2020ರಲ್ಲಿ 3,66,138 ಆಕ್ಸಿಡೆಂಟ್, 1,31,714 ದುರ್ಮರಣ!
ಓಲಾ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಕುರಿತು ಓಲಾ ಗ್ರೂಪ್ ಚೇರ್ಮೆನ್ ಭವಿಶ್ ಅಗರ್ವಾಲ್ ಟ್ವಿಟರ್ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ. ಓಲಾ ಎಲೆಕ್ಟ್ರಿಕ್ ಸ್ಕೂಟರ್ ಬುಕಿಂಗ್ ಮಾಡಿದ ಎಲ್ಲಾ ಗ್ರಾಹಕರಿಗೆ ಧನ್ಯವಾದ. ಆಗಸ್ಟ್ 15 ರಂದು ಓಲಾ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡುವ ಕುರಿತು ಸಿದ್ಧತೆಗಳು ನಡೆಯುತ್ತಿದೆ. ಶೀಘ್ರದಲ್ಲೇ ಸ್ಕೂಟರ್ ಫೀಚರ್ಸ್, ಬೆಲೆ,ಬಿಡುಗಡೆ ದಿನಾಂಕ ಸೇರಿದಂತೆ ಹೆಚ್ಚಿನ ಮಾಹಿತಿ ಹಂಚಿಕೊಳ್ಳುತ್ತೇನೆ ಎಂದು ಭವಿಶ್ ಅಗರ್ವಾಲ್ ಟ್ವೀಟ್ ಮಾಡಿದ್ದಾರೆ.
ಸಬ್ಸಿಡಿ ರಹಿತ ಸ್ಕೂಟರ್ ಬೆಲೆ 1.50 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ. ಇನ್ನು ಒಂದು ಬಾರಿ ಚಾರ್ಜ್ ಮಾಡಿದರೆ 150 ಕಿ.ಮೀ ಮೈಲೇಜ್ ನೀಡಲಿದೆ ಎಂದು ಕಂಪನಿ ಹೇಳಿದೆ. ಇದು ಸದ್ಯ ಮಾರುಕಟ್ಟೆಯಲ್ಲಿ ಲಭ್ಯವಿರುವ ಎಲೆಕ್ಟ್ರಿಕ್ ಸ್ಕೂಟರ್‌ಗಳ ಪೈಕಿ ಗರಿಷ್ಠವಾಗಿದೆ.
ಮತ್ತೊಂದು ವಿಶೇಷ ಅಂದರೆ 18 ನಿಮಿಷ ಚಾರ್ಜ್ ಮಾಡಿದರೆ ಸುಮಾರು 75 ಕಿ.ಮೀ ಪ್ರಯಾಣ ಮಾಡುವ ಸಾಮರ್ಥ್ಯ ಈ ಸ್ಕೂಟರ್‌ಗಿದೆ. ಬ್ಯಾಟರಿ ಪ್ಯಾಕ್ ಅನುಗುಣವಾಗಿ ಓಲಾ S, S1 ಹಾಗೂ S1 Pro ಎಂಬು ಮೂರು ವೇರಿಯೆಂಟ್ ಸ್ಕೂಟರ್ ಲಭ್ಯವಿದೆ. ಮೂರು ಸ್ಕೂಟರ್ ಮೈಲೇಜ್ ಹಾಗೂ ಬೆಲೆಯಲ್ಲೂ ವ್ಯತ್ಯಾಸವಾಗಲಿದೆ.
#IndependenceDayಯಿಂದ ಹಿಡಿದು ಬರೋ ಹಬ್ಬಕ್ಕೆ ಯಾವ ಕಾರು ಲಾಂಚ್ ಆಗುತ್ತೋ ನೋಡಿ!