ಸ್ಕೂಟರ್‌ಗೂ ಬಂತು ರಿವರ್ಸ್‌ ಗೇರ್‌: ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕ ಟೀಕೆ!

* 1 ಲಕ್ಷ ರು. ಬೆಲೆಯ ಓಲಾ ಎಲೆಕ್ಟ್ರಿಕ್‌ ಸ್ಕೂಟರ್‌ನಲ್ಲಿ ಹೊಸ ವಿಶೇಷ ಸೌಕರ್ಯ

* ಸ್ಕೂಟರ್‌ಗೂ ಬಂತು ರಿವರ್ಸ್‌ ಗೇರ್‌

* ದ್ವಿಚಕ್ರ ವಾಹನಕ್ಕೆ ರಿವರ್ಸ್‌ ಗೇರ್‌ ಏಕೆ? ವ್ಯಾಪಕ ಟೀಕೆ

Ola S1 electric scooter launched with few car like features pod

ಬೆಂಗಳೂರು(ಆ.16): ಕಾರು, ಬಸ್ಸು, ಲಾರಿ, ಆಟೋಗಳಲ್ಲಿ ರಿವರ್ಸ್‌ ಗೇರ್‌ ಇರುವುದು ಹೊಸದಲ್ಲ. ಆದರೆ ಇದೇ ಮೊದಲ ಬಾರಿಗೆ ಸ್ಕೂಟರ್‌ನಲ್ಲೂ ರಿವರ್ಸ್‌ ಗೇರ್‌ ಅವಕಾಶ ಕಲ್ಪಿಸಲಾಗಿದೆ. ಹೌದು, ಕ್ಯಾಬ್‌ ಸೇವೆ ಒದಗಿಸುವ ಬೆಂಗಳೂರು ಮೂಲದ ಸ್ಟಾರ್ಟಪ್‌ ಕಂಪನಿ ಓಲಾ, ಭಾನುವಾರ ತನ್ನ ಇಲೆಕ್ಟ್ರಿಕ್‌ ಸ್ಕೂಟರ್‌ ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಅದರಲ್ಲಿ ಬಳಕೆದಾರರಿಗೆ ರಿವರ್ಸ ಗೇರ್‌ ಸೌಲಭ್ಯ ಕಲ್ಪಿಸಲಾಗಿದೆ.

ಸ್ವಾತಂತ್ರ್ಯ ದಿನಾಚರಣೆಗೆ ಒಲಾ ಎಲೆಕ್ಟ್ರಿಕ್ ಸ್ಕೂಟರ್ ಲಾಂಚ್; ಆರಂಭಿಕ ಬೆಲೆ 99,999 ರೂಪಾಯಿ!

ಸಾಮಾನ್ಯವಾಗಿ ದೊಡ್ಡ ವಾಹನಗಳನ್ನು ಪಾರ್ಕಿಂಗ್‌ ಸ್ಥಳದಿಂದ ಹಿಂದಕ್ಕೆ ಸರಿಸಲು ಅಥವಾ ಅನಿವಾರ್ಯ ಕಾರಣಗಳಿಂದ ಹಿಂದಕ್ಕೆ ಸರಿಸಲು ರಿವರ್ಸ್‌ ಗೇರ್‌ ಸೌಲಭ್ಯ ಕಲ್ಪಿಸಲಾಗಿರುತ್ತದೆ. ಆದರೆ ಬೈಕ್‌ಗಳನ್ನು ಸಣ್ಣ ಜಾಗದಲ್ಲೇ ತಿರುಗಿಸುವ ಅವಕಾಶ ಇರುವ ಕಾರಣ ಮತ್ತು ಸುಲಭವಾಗಿ ಹಿಂದಕ್ಕೆ ಸರಿಸಬಹುದಾದ ಕಾರಣ, ಅದರಲ್ಲಿ ಇದುವರೆಗೆ ರಿವರ್ಸ್‌ ಗೇರ್‌ನ ಸೌಲಭ್ಯ ಕಲ್ಪಿಸಿರಲಿಲ್ಲ. ಇದೀಗ ಓಲಾ ಕಂಪನಿ ತನ್ನ ಹೊಸ ಸ್ಕೂಟರ್‌ನಲ್ಲಿ ಅಂಥದ್ದೊಂದು ಅವಕಾಶವನ್ನು ಕಲ್ಪಿಸಿದೆ. ಈ ಹೊಸ ಸೌಲಭ್ಯದ ಬಗ್ಗೆ ಟ್ವೀಟ್‌ ಮಾಡಿರುವ ಕಂಪನಿಯ ಅಧ್ಯಕ್ಷ ಭವೀಶ್‌ ಅಗರ್‌ವಾಲ್‌, ‘ನಂಬಲಸಾಧ್ಯವಾದ ವೇಗದಲ್ಲಿ ಓಲಾ ಸ್ಕೂಟರ್‌ ಅನ್ನು ರಿವರ್ಸ್‌ ಗೇರ್‌ನಲ್ಲಿ ಓಡಿಸಬಹುದು. ಹವಾಮಾನ ಬದಲಾವಣೆಯನ್ನು ರಿವರ್ಸ್‌ ಮಾಡುವಲ್ಲಿ ಇದು ಕ್ರಾಂತಿಕಾರಕ’ ಎನ್ನುವ ಮೂಲಕ ಕುತೂಹಲ ಮೂಡಿಸಿದ್ದಾರೆ.

ಓಲಾ ಸ್ಕೂಟರ್‌ನ ಈ ಹೊಸ ಸೌಲಭ್ಯವನ್ನು ಹಲವರು ಸ್ವಾಗತಿಸಿದ್ದರೆ, ಇನ್ನು ಹಲವರು ಸಾಮಾಜಿಕ ಜಾಲತಾಣಗಳಲ್ಲಿ ಇದರ ಅವಶ್ಯಕತೆಯನ್ನು ಪ್ರಶ್ನಿಸುವ ಮೂಲಕ ಟೀಕಿಸಿದ್ದಾರೆ.

ಬಿಡುಗಡೆ: ಭಾನುವಾರ ಬೆಂಗಳೂರಿನಲ್ಲಿ ಸ್ಕೂಟರ್‌ ಬಿಡುಗಡೆ ಮಾಡಿ ಮಾತನಾಡಿದ ಭವೀಶ್‌ ಅಗರ್‌ವಾಲ್‌, ‘ಇ-ಸ್ಕೂಟರ್‌ ಖರೀದಿಗೆ ಇಚ್ಛಿಸುವ ಗ್ರಾಹಕರು 499 ರು. ನೀಡಿ ಸೆ.8ರವರೆಗೆ ಮುಂಗಡ ಬುಕ್‌ ಮಾಡಬಹುದು. ಅಕ್ಟೋಬರ್‌ ವೇಳೆಗೆ ದೇಶದ 1000 ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ಏಕಕಾಲದಲ್ಲಿ ಓಲಾ ಸ್ಕೂಟರ್‌ ಬಿಡುಗಡೆ ಮಾಡಲಾಗುತ್ತದೆ’ ಎಂದು ಹೇಳಿದರು.

ರಿವರ್ಸ್ ಗೇರ್‌ನಲ್ಲಿಯೂ ಓಡಲಿದೆ ಓಲಾ ಸ್ಕೂಟರ್, ಪರಿಚಯಿಸುತ್ತಿದೆ ರಿವರ್ಸ್ ಮೋಡ್!

ಓಲಾ ಕಂಪನಿಯು ಎಸ್‌-1 ಮತ್ತು ಎಸ್‌-1 ಪ್ರೋ ಹೆಸರಿನ ಸ್ಕೂಟರ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಿದ್ದು, ಎಸ್‌-1 ಸ್ಕೂಟರ್‌ಗೆ 99,999 ರು. ಮತ್ತು ಎಸ್‌-1 ಪ್ರೋ ಸ್ಕೂಟರ್‌ಗೆ 1,29,999 ರು.ಗೆ ದರ ನಿಗದಿಪಡಿಸಲಾಗಿದೆ.

ಸ್ಕೂಟರ್‌ನ ವಿಶೇಷವೇನು?

* ಗಂಟೆಗೆ ಗರಿಷ್ಠ 115 ಕಿ.ಮೀ ವೇಗವಾಗಿ ಚಲಿಸುವ ಸಾಮಥ್ರ್ಯ

* ಸ್ಕೂಟರ್‌ಗೆ ಮನೆಯಲ್ಲೇ ಹಾಕಬಹುದಾದ ಚಾರ್ಜರ್‌ ವ್ಯವಸ್ಥೆ

* ಫಾಸ್ಟ್‌ ಚಾರ್ಜರ್‌ಗಳಿಂದ ಕೇವಲ 40 ನಿಮಿಷಗಳಲ್ಲಿ ಪೂರ್ತಿ ಚಾಜ್‌ರ್‍

* ಸ್ಕೂಟರ್‌ನಲ್ಲಿ ರಿವರ್ಸ್‌, ಹಿಲ್‌ ಹೋಲ್ಡ್‌ ಫಂಕ್ಷನ್‌, ಡ್ರೈವಿಂಗ್‌ ಮೋಡ್‌

* ಕೀ ಇಲ್ಲದೆ ಲಾಕಿಂಗ್‌ ವ್ಯವಸ್ಥೆ

* ಕಳವಿಗೆ ಯತ್ನಿಸಿದರೆ ಎಚ್ಚರಿಸುವ ವ್ಯವಸ್ಥೆ

* 10 ಬಣ್ಣಗಳಲ್ಲಿ ಲಭ್ಯ

Latest Videos
Follow Us:
Download App:
  • android
  • ios