Asianet Suvarna News Asianet Suvarna News

ಆಗಸ್ಟ್ 15ಕ್ಕೆ ಓಲಾ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ; 50 ಸಾವಿರ ರೂ ಸಬ್ಸಿಡಿ ಸಾಧ್ಯತೆ!

  • ದೇಶದಲ್ಲಿ ಭಾರಿ ಸಂಚಲನ ಸೃಷ್ಟಿಸಿರುವ ಓಲಾ ಎಲೆಕ್ಟ್ರಿಕ್ ಸ್ಕೂಟರ್
  • ಆಗಸ್ಟ್ 15ರಂದು ಓಲಾ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ
  • ಕೇಂದ್ರದ FAME-II ಯೋಜನೆಯಡಿ ಸ್ಕೂಟರ್‌ಗೆ  50 ಸಾವಿರ ಸಬ್ಸಡಿ ಸಾಧ್ಯತೆ
Ola electric scooter set to laucnh on Independence day 2021 CEO hints full specifications soon ckm
Author
Bengaluru, First Published Aug 3, 2021, 5:11 PM IST
  • Facebook
  • Twitter
  • Whatsapp

ಬೆಂಗಳೂರು(ಆ.03): ಎಲೆಕ್ಟ್ರಿಕ್ ಸ್ಕೂಟರ್ ವಿಭಾಗದಲ್ಲಿ ಭಾರಿ ಸಂಚಲ ಸೃಷ್ಟಿಸಿರುವ ಓಲಾ ಎಲೆಕ್ಟ್ರಿಕ್ ಸ್ಕೂಟರ್ ಇದೀಗ ಬಿಡುಗಡೆಗೆ ಸಜ್ಜಾಗಿದೆ. ಕಡಿಮೆ ಬೆಲೆ, 150 ಕಿ.ಮೀ ಮೈಲೇಜ್ ಸೇರಿದಂತೆ ಹಲವು ವಿಶೇಷತೆಗಳು ಈ ಸ್ಕೂಟರ್‌ನಲ್ಲಿದೆ. ಇದೀಗ ಓಲಾ ಎಲೆಕ್ಟ್ರಿಕ್ ಸ್ಕೂಟರ್ ಆಗಸ್ಟ್ 15ರ ಸ್ವಾತಂತ್ರ್ಯ ದಿನಾಚರಣೆಯಂದು ಬಿಡುಗಡೆ ಮಾಡಲು ಸಿದ್ಧತೆ ನಡೆಯುತ್ತಿದೆ.

ಮತ್ತೊಂದು ಗುಡ್‌ನ್ಯೂಸ್ ನೀಡಿದ ಓಲಾ ಎಲೆಕ್ಟ್ರಿಕ್ ಸ್ಕೂಟರ್; 10 ಆಕರ್ಷಕ ಬಣ್ಣಗಳಲ್ಲಿ ಲಭ್ಯ!

ಓಲಾ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಕುರಿತು ಓಲಾ ಗ್ರೂಪ್ ಚೇರ್ಮೆನ್ ಭವಿಶ್ ಅಗರ್ವಾಲ್ ಟ್ವಿಟರ್ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ.  ಓಲಾ ಎಲೆಕ್ಟ್ರಿಕ್ ಸ್ಕೂಟರ್ ಬುಕಿಂಗ್ ಮಾಡಿದ ಎಲ್ಲಾ ಗ್ರಾಹಕರಿಗೆ ಧನ್ಯವಾದ. ಆಗಸ್ಟ್ 15 ರಂದು ಓಲಾ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡುವ ಕುರಿತು ಸಿದ್ಧತೆಗಳು ನಡೆಯುತ್ತಿದೆ. ಶೀಘ್ರದಲ್ಲೇ ಸ್ಕೂಟರ್ ಫೀಚರ್ಸ್, ಬೆಲೆ,ಬಿಡುಗಡೆ ದಿನಾಂಕ ಸೇರಿದಂತೆ ಹೆಚ್ಚಿನ ಮಾಹಿತಿ ಹಂಚಿಕೊಳ್ಳುತ್ತೇನೆ ಎಂದು ಭವಿಶ್ ಅಗರ್ವಾಲ್ ಟ್ವೀಟ್ ಮಾಡಿದ್ದಾರೆ.

 

ನೂತನ ಸ್ಕೂಟರ್‌ ಕೇಂದ್ರದ FEMA-II ಎಲೆಕ್ಟ್ರಿಕ್ ವಾಹನ ಯೋಜನೆಯಡಿ 50 ರಿಂದ 52,000 ರೂಪಾಯಿ ಸಬ್ಸಡಿ ಪಡೆಯವ ಸಾಧ್ಯತೆ ಹೆಚ್ಚಿದೆ. ಈ ಸ್ಕೂಟರ್ ಕೇಂದ್ರದ ಯೋಜನೆಗೆ ಅನುಗುಣವಾಗಿರುವ ಕಾರಣ ಹೆಚ್ಚಿನ ಸಬ್ಸಡಿ ಪಡೆಯಲಿದೆ. ಹೀಗಾಗಿ ಸ್ಕೂಟರ್ ಬೆಲೆ 1 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ) ಆಸುಪಾಸಿನಲ್ಲಿರಲಿದೆ. 

ಒಂದೇ ದಿನಕ್ಕೆ 1 ಲಕ್ಷ ಬುಕಿಂಗ್; ದಾಖಲೆ ಬರೆದ ಓಲಾ ಎಲೆಕ್ಟ್ರಿಕ್ ಸ್ಕೂಟರ್!

ಸಬ್ಸಿಡಿ ರಹಿತ ಸ್ಕೂಟರ್ ಬೆಲೆ 1.50 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ. ಇನ್ನು ಒಂದು ಬಾರಿ ಚಾರ್ಜ್ ಮಾಡಿದರೆ 150 ಕಿ.ಮೀ ಮೈಲೇಜ್ ನೀಡಲಿದೆ ಎಂದು ಕಂಪನಿ ಹೇಳಿದೆ. ಇದು ಸದ್ಯ ಮಾರುಕಟ್ಟೆಯಲ್ಲಿ ಲಭ್ಯವಿರುವ ಎಲೆಕ್ಟ್ರಿಕ್ ಸ್ಕೂಟರ್‌ಗಳ ಪೈಕಿ ಗರಿಷ್ಠವಾಗಿದೆ. 

ಮತ್ತೊಂದು ವಿಶೇಷ ಅಂದರೆ 18 ನಿಮಿಷ ಚಾರ್ಜ್ ಮಾಡಿದರೆ ಸುಮಾರು 75 ಕಿ.ಮೀ ಪ್ರಯಾಣ ಮಾಡುವ ಸಾಮರ್ಥ್ಯ ಈ ಸ್ಕೂಟರ್‌ಗಿದೆ.  ಬ್ಯಾಟರಿ ಪ್ಯಾಕ್ ಅನುಗುಣವಾಗಿ ಓಲಾ S, S1 ಹಾಗೂ  S1 Pro ಎಂಬು ಮೂರು ವೇರಿಯೆಂಟ್ ಸ್ಕೂಟರ್ ಲಭ್ಯವಿದೆ. ಮೂರು ಸ್ಕೂಟರ್ ಮೈಲೇಜ್ ಹಾಗೂ ಬೆಲೆಯಲ್ಲೂ ವ್ಯತ್ಯಾಸವಾಗಲಿದೆ. 

ಭಾರತದ 100 ನಗರಗಳಲ್ಲಿ 5,000 ಚಾರ್ಚಿಂಗ್ ಸ್ಟೇಶನ್ ನಿರ್ಮಿಸಲು ಓಲಾ ಸಜ್ಜಾಗಿದೆ. ಮೊದಲ ವರ್ಷದಲ್ಲೇ ಓಲಾ ಚಾರ್ಜಿಂಗ್ ಸ್ಟೇಶನ್ ಹಾಕಲಿದೆ. 

Follow Us:
Download App:
  • android
  • ios