ಮತ್ತೊಂದು ಗುಡ್‌ನ್ಯೂಸ್ ನೀಡಿದ ಓಲಾ ಎಲೆಕ್ಟ್ರಿಕ್ ಸ್ಕೂಟರ್; 10 ಆಕರ್ಷಕ ಬಣ್ಣಗಳಲ್ಲಿ ಲಭ್ಯ!

  • ಓಲಾ ಎಲೆಕ್ಟ್ರಿಕ್ ಸ್ಕೂಟರ್ 10 ಆಕರ್ಷಕ ಬಣ್ಣಗಳಲ್ಲಿ ಲಭ್ಯ
  • ಕಳೆದ ವಾರ ಬುಕಿಂಗ್ ಆರಂಭಿಸಿದ ಓಲಾ ಎಲೆಕ್ಟ್ರಿಕ್ ಸ್ಕೂಟರ್
  • 499 ರೂಪಾಯಿ ನೀಡಿ ನೂತನ ಸ್ಕೂಟರ್ ಬುಕ್ ಮಾಡೋ ಅವಕಾಶ
Good News for customers Ola Electric scooter available in 10 unique and vibrant colours ckm

ಬೆಂಗಳೂರು(ಜು.22) ಬಹು ನಿರೀಕ್ಷಿತ ಓಲಾ ಎಲೆಕ್ಟ್ರಿಕ್ ಸ್ಕೂಟರ್‌ ವಿಭಾಗದಲ್ಲಿ ಭಾರಿ ಸಂಚಲನ ಮೂಡಿಸಿರುವ ಓಲಾ ಇದೀಗ ಮತ್ತೊಂದು ಸಿಹಿ ಸುದ್ದಿ ನೀಡಿದೆ. ನೂತನ ಓಲಾ ಎಲೆಕ್ಟ್ರಿಕ್ ಸ್ಕೂಟರ್ 10 ಬಣ್ಣಗಳಲ್ಲಿ ಲಭ್ಯವಿದೆ. ಈ ಕುರಿತು   ಓಲಾದ ಅಧ್ಯಕ್ಷ ಮತ್ತು ಸಿಇಓ ಭವಿಷ್ ಅಗರ್‌ವಾಲ್ ಟ್ವೀಟ್ ಮೂಲಕ ಮಾಹಿತಿ ಬಹಿರಂಗ ಪಡಿಸಿದ್ದಾರೆ. ನೂತನ ಸ್ಕೂಟರ್ ಬೆಲೆ 1 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ. ಎಲೆಕ್ಟ್ರಿಕ್ ವಾಹನಕ್ಕೆ ಕೇಂದ್ರ ಸಬ್ಸಿಡಿ ನೀಡುತ್ತಿದೆ. ಹೀಗಾಗಿ ಓಲಾ ಎಲೆಕ್ಟ್ರಿಕ್ ಸ್ಕೂಟರ್ ಬೆಲೆ ಮತ್ತಷ್ಟು ಕಡಿಮೆಯಾಗಲಿದೆ.

ಒಂದೇ ದಿನಕ್ಕೆ 1 ಲಕ್ಷ ಬುಕಿಂಗ್; ದಾಖಲೆ ಬರೆದ ಓಲಾ ಎಲೆಕ್ಟ್ರಿಕ್ ಸ್ಕೂಟರ್!

ನೀಲಿ , ಕಪ್ಪು, ಕೆಂಪು, ಪಿಂಕ್, ಹಳದಿ, ಬಿಳಿ, ಸಿಲ್ವರ್‌, ಮೆಟ್ಟೆ ಮತ್ತು ಗ್ಲೋಸ್ ಶೇಡ್‌ಗಳಲ್ಲಿ ನೂತನ ಓಲಾ ಎಲೆಕ್ಟ್ರಿಕ್ ಸ್ಕೂಟರ್ ಲಭ್ಯ ವಿದೆ. ಓಲಾ ಸ್ಕೂಟರ್ ತನ್ನ ಗ್ರಾಹಕರಿಗೆ ಸರಿಸಾಟಿ ಇಲ್ಲದ ಸ್ಕೂಟರ್ ಅನುಭವವನ್ನು ಒದಗಿಸುತ್ತದೆ. ಗ್ರಾಹಕರು ವೈವಿಧ್ಯಮಯ ಶ್ರೇಣಿಯ ಬಣ್ಣಗಳಿಂದ ಆಯ್ಕೆ ಮಾಡಿಕೊಳ್ಳಲು ಅವಕಾಶವಿದೆ. ಇದರ ಜತೆಗೆ ಇಡೀ ವರ್ಗದಲ್ಲೇ ಅತಿ ಹೆಚ್ಚಿನ ವೇಗ, ಅಭೂತಪೂರ್ವ ಶ್ರೇಣಿ, ಅತಿದೊಡ್ಡ ಬೂಟ್ ಸ್ಥಳಾವಕಾಶ, ಜಾಗತಿಕ ವಿನ್ಯಾಸ ಮತ್ತು ಅತ್ಯಾಧುನಿಕ ತಂತ್ರಜ್ಞಾನ  ಒಳಗೊಂಡಿದೆ.

 

ಕಳೆದ ವಾರ ಓಲಾ ಸ್ಕೂಟರ್ ಬುಕಿಂಗ್ ಆರಂಭಿಸಿದೆ. 24 ಗಂಟೆಗಳಲ್ಲಿ 1 ಲಕ್ಷಕ್ಕೂ ಅಧಿಕ ಸ್ಕೂಟರ್ ಬುಕಿಂಗ್ ಆಗೋ ಮೂಲಕ ವಿಶ್ವ ದಾಖಲೆ ಬರೆದಿತ್ತು. ಕೇವಲ 499 ರೂಪಾಯಿ ನೀಡಿದ ಓಲಾ ಸ್ಕೂಟರ್ ಬುಕ್ ಮಾಡಿಕೊಳ್ಳಬಹುದು.  ಓಲಾ ಸ್ಕೂಟರ್ ಬಿಡುಗಡೆಯಾದ ಬಳಿಕ ಹೀಗೆ ಕಾಯ್ದಿರಿಸಿದ ಗ್ರಾಹಕರು ಮನೆಬಾಗಿಲಿಗೆ ವಿತರಣೆ ಪಡೆಯಲಿದ್ದಾರೆ.

499 ರೂಪಾಯಿ ಕೊಟ್ಟು Ola Electric ಸ್ಕೂಟರ್ ಬುಕ್ ಮಾಡ್ಕೊಳ್ಳಿ!

ಸಿಇಎಸ್‌ನಲ್ಲಿ ಐಎಚ್‌ಎಸ್ ಮೆರಿಟ್ ಇನೋವೇಶನ್ ಅವಾರ್ಡ್ ಮತ್ತು ಜರ್ಮನ್ ಡಿಸೈನ್ ಅವಾರ್ಡ್ ಸೇರಿದಂತೆ ಓಲಾ ಸ್ಕೂಟರ್ ಈಗಾಗಲೇ ಹಲವು ಪ್ರತಿಷ್ಠಿತ ಪ್ರಶಸ್ತಿಗಳನ್ನು ಗೆದ್ದುಕೊಂಡಿದೆ. ಓಲಾ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಸರಣಿಯಲ್ಲಿ ಮೊದಲನೆಯದಾದ ಓಲಾ ಸ್ಕೂಟರನ್ನು  ತಮಿಳುನಾಡಿನ 500 ಎಕರೆ ಪ್ರದೇಶದಲ್ಲಿ ನಿರ್ಮಿಸಲಾದ ವಿಶ್ವದ ಅತಿದೊಡ್ಡ, ಅತ್ಯಾಧುನಿಕ ಮತ್ತು ಸುಸ್ಥಿರ ದ್ವಿಚಕ್ರವಾಹನ ಫ್ಯಾಕ್ಟರಿ ಎನಿಸಿದ ಓಲಾ ಫ್ಯೂಚರ್ ಫ್ಯಾಕ್ಟರಿಯಲ್ಲಿ ಉತ್ಪಾದಿಸಲಾಗುತ್ತದೆ.

ಓಲಾ ಸ್ಕೂಟರ್ ಫ್ಯಾಕ್ಟರಿಯ ಮೊದಲ ಹಂತ ವಾರ್ಷಿಕವಾಗಿ 20 ಲಕ್ಷ ವಾಹನಗಳ ಉತ್ಪಾದನಾ ಸಾಮರ್ಥ್ಯದೊಂದಿಗೆ ಶೀಘ್ರವೇ ಕಾರ್ಯಾರಂಭ ಮಾಡಲಿದೆ. ಮುಂದಿನ ವರ್ಷದ ವೇಳೆಗೆ ಇದು ಪೂರ್ಣಪ್ರಮಾಣದಲ್ಲಿ ಸಜ್ಜಾದಾಗ ವಾರ್ಷಿಕ ಒಂದು ಕೋಟಿ ವಾಹನಗಳನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಲಿದೆ.

Latest Videos
Follow Us:
Download App:
  • android
  • ios