ಓಲಾ ಎಲೆಕ್ಟ್ರಿಕ್ ಸ್ಕೂಟರ್ ಟೆಸ್ಟ್ ರೈಡ್‌ಗೆ ತಯಾರಿ ಟೆಸ್ಟ್ ರೈಡ್‌ಗೂ ಮುನ್ನ ಓಲಾ ಹೈಪರ್ ಚಾರ್ಜರ್ ಲಾಂಚ್ ಹೈಪರ್ ಚಾರ್ಜರ್ ಮೂಲಕ 18 ನಿಮಿಷದಲ್ಲಿ ಶೇ.50 ರಷ್ಟು ಚಾರ್ಜ್

ಬೆಂಗಳೂರು(ಅ.24): ದೇಶದಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ವಿಭಾಗದಲ್ಲಿ ಓಲಾ(Ola Electric Scooter) ಭಾರಿ ಸಂಚಲನ ಮೂಡಿಸಿದೆ. ಅತ್ಯಧಿಕ ಮೈಲೇಜ್ ಹಾಗೂ ಬ್ಯಾಟರಿ ಬ್ಯಾಕ್‌ಅಪ್ ಹೊಂದಿರುವ ನೂತನ ಸ್ಕೂಟರ್ ಇದೀಗ ಗ್ರಾಹಕರಿಗೆ ಟೆಸ್ಟ್ ರೈಡ್ ನೀಡಲು ಸಜ್ಜಾಗಿದೆ. ಇದಕ್ಕೂ ಮುನ್ನ ಓಲಾ ಮೊದಲ ಹೈಪರ್ ಚಾರ್ಜರ್( Hypercharger) ಲಾಂಚ್ ಮಾಡಿದೆ. ಈ ಹೈಪರ್ ಚಾರ್ಜರ್ ಮೂಲಕ ಸುಲಭವಾಗಿ ಹಾಗೂ ವೇಗವಾಗಿ ಸ್ಕೂಟರ್ ಚಾರ್ಜ್ ಮಾಡಿಕೊಳ್ಳಲು ಸಾಧ್ಯವಿದೆ.

ಒಲಾ ಎಲೆಕ್ಟ್ರಿಕ್ ಸ್ಕೂಟರ್ ಲಾಂಚ್; ಆರಂಭಿಕ ಬೆಲೆ 99,999 ರೂಪಾಯಿ!

ಓಲಾ ಮೊದಲ ಹೈಪರ್ ಚಾರ್ಜರ್ ಲಾಂಚ್ ಕುರಿತು ಸಿಇಒ ಭವಿಷ್ ಅಗರ್ವಾಲ್(Bhavish Aggarwal) ಟ್ವಿಟರ್ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ. ಹಳದಿ ಬಣ್ಣದ ಓಲಾ ಸ್ಕೂಟರ್‌ನ್ನು ಹೈಪರ್ ಚಾರ್ಜರ್ ಮೂಲಕ ಚಾರ್ಜ್ ಮಾಡಿಕೊಳ್ಳುತ್ತಿರುವ ಫೋಟೋ ಹಂಚಿಕೊಂಡಿರುವ ಅಗರ್ವಾಲ್, ಮುಂಜಾನೆ ಟ್ರಿಪ್ ಬಳಿಕ ನನ್ನ ಓಲಾ S1 ಸ್ಕೂಟರ್ ಹೈಪರ್ ಚಾರ್ಜರ್ ಮೂಲಕ ಚಾರ್ಜ್ ಮಾಡಿಕೊಳ್ಳುತ್ತಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ. 

Scroll to load tweet…

ಹೈಪರ್ ಚಾರ್ಜರ್ ಮೂಲಕ ಸ್ಕೂಟರ್ ಚಾರ್ಜ್ ಮಾಡುತ್ತಿರುವ ವಿಡಿಯೋ ಕೂಡ ಅಗರ್ವಾಲ್ ಹಂಚಿಕೊಂಡಿದ್ದಾರೆ. ಪ್ಲಗ್ ಸಾಕೆಟ್‌ನಿಂದ ಚಾರ್ಚರ್ ತೆಗೆದು, ಸ್ಕೂಟರ್‌ ಚಾರ್ಜ್ ಮಾಡಿಕೊಳ್ಳುತ್ತಿರು ವಿಡಿಯೋ ಶೇರ್ ಮಾಡಿದ್ದಾರೆ. ಈ ಮೂಲಕ ಸರಳವಾಗಿ ಚಾರ್ಜ್ ಮಾಡಲು ಸಾಧ್ಯವಿದೆ ಅನ್ನೋದನ್ನು ತೋರಿಸಿದ್ದಾರೆ.

Scroll to load tweet…

ಮತ್ತೊಂದು ಗುಡ್‌ನ್ಯೂಸ್ ನೀಡಿದ ಓಲಾ ಎಲೆಕ್ಟ್ರಿಕ್ ಸ್ಕೂಟರ್; 10 ಆಕರ್ಷಕ ಬಣ್ಣಗಳಲ್ಲಿ ಲಭ್ಯ!

ನವೆಂಬರ್‌ನಲ್ಲಿ ಟೆಸ್ಟ್ ರೈಡ್:
ಓಲಾ ಎಲೆಕ್ಟ್ರಿಕ್ ಬುಕ್ ಮಾಡಿದ ಗ್ರಾಹಕರಿಗೆ ಸ್ಕೂಟರ್ ವಿತರಿಸಲು ಸಜ್ಜಾಗಿದೆ. ಆದರೆ ಅದಕ್ಕಿಂತ ಮೊದಲು ಬುಕ್ ಮಾಡಿದ ಗ್ರಾಹಕರಿಗೆ ಟೆಸ್ಟ್ ರೈಡ್ ಅವಕಾಶ ನೀಡುತ್ತಿದೆ. ನವೆಂಬರ್ 10 ರಿಂದ ಬುಕಿಂಗ್ ಮಾಡಿದ ಗ್ರಾಹಕರಿಗೆ ಟೆಸ್ಟ್ ರೈಡ್ ಆರಂಭಗೊಳ್ಳಲಿದೆ. ಟೆಸ್ಟ್ ರೈಡ್ ಬಳಿಕ ಗ್ರಾಹಕರು ತಮ್ಮ ಬುಕ್ ಮಾಡಿದ ಓಲಾ ಸ್ಕೂಟರ್ ಖರೀದಿ ಪ್ರಕ್ರಿಯೆಯನ್ನು ಮುಂದುವರಿಸಬಹುದು. ಒಂದು ವೇಳೆ ಟೆಸ್ಟ್ ರೈಡ್ ವೇಳೆ ಓಲಾ ಸ್ಕೂಟರ್ ಖರೀದಿಸುವ ಆಲೋಚನೆಯಿಂದ ಹಿಂದೆ ಸರಿದರೆ, ಬುಕಿಂಗ್ ವೇಳೆ ನೀಡಿದ ಸಂಪೂರ್ಣ ಹಣವನ್ನು ಓಲಾ ಹಿಂತಿರುಗಿಸಲಿದೆ. ಟೆಸ್ಟ್ ರೈಡ್ ಆರಂಭಕ್ಕೂ ಮುನ್ನ ಓಲಾ ದೇಶದ ಪ್ರಮುಖ ನಗರಗಳಲ್ಲಿ ಹೈಪರ್ ಚಾರ್ಜರ್ ಅಳವಡಿಸುವುದಾಗಿ ಘೋಷಿಸಿದೆ.

ದೇಶದ 400 ನಗರಗಳಲ್ಲಿ 1 ಲಕ್ಷಕ್ಕೂ ಅಧಿಕ ಹೈಪರ್ ಚಾರ್ಜರ್ ಸ್ಟೇಶನ್ ಅಳವಡಿಸುವುದಾಗಿ ಓಲಾ ಘೋಷಿಸಿದೆ. ಇದೀಗ ಇದರ ಮೊದಲ ಹಂತದವಾಗಿ ಮೊದಲ ಹೈಪರ್ ಚಾರ್ಜರ್ ಲಾಂಚ್ ಮಾಡಲಾಗಿದೆ. ಹೈಪರ್ ಚಾರ್ಜಿಂಗ್ ಮೂಲಕ ಸ್ಕೂಟರ್ ಕೇವಲ 18 ನಿಮಿಷದಲ್ಲಿ ಶೇಕಡಾ 50 ರಷ್ಟು ಬ್ಯಾಟರಿ ಚಾರ್ಜ್ ಆಗಲಿದೆ. ಇದರಿಂದ 75 ಕಿ.ಮೀ ಪ್ರಯಾಣ ಮಾಡಲು ಸಾಧ್ಯವಿದೆ. ಸಂಪೂರ್ಣ ಚಾರ್ಜ್ ಮಾಡಿದರೆ 150 ಕಿ.ಮೀ ಮೈಲೇಜ್ ನೀಡಲಿದೆ.

ಮೊದಲ ದಿನ 600 ಕೋಟಿ ಮೌಲ್ಯದ 80,000 ಸ್ಕೂಟರ್‌ ಮಾರಿದ ಓಲಾ!

ಓಲಾ ಸ್ಕೂಟರ್ ಬೆಲೆ ಹಾಗೂ ಮೈಲೇಜ್:
ಓಲಾ ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿ ಎರಡು ವೇರಿಯೆಂಟ್ ಲಭ್ಯವಿದೆ. ಓಲಾ S1 ಹಾಗೂ ಓಲಾ S1 ಪ್ರೋ ವೇರಿಯೆಂಟ್ ಲಭ್ಯವಿದೆ. ಆಗಸ್ಟ್ 15 ರಂದು ಎರಡು ವೇರಿಯೆಂಟ್ ಸ್ಕೂಟರ್ ಬಿಡುಗಡೆ ಮಾಡಲಾಗಿದೆ. ಓಲಾ S1 ಸ್ಕೂಟರ್ ಸಂಪೂರ್ಣ ಚಾರ್ಜ್‌ಗೆ 120 ಕಿ.ಮೀ ಮೈಲೇಜ್ ರೇಂಜ್ ನೀಡಲಿದೆ. ಇದರ ಬೆಲೆ 1 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). 

ಓಲಾ ಓಲಾ S1 ಪ್ರೋ ವೇರಿಯೆಂಟ್ ಸ್ಕೂಟರ್ ಫುಲ್ ಚಾರ್ಜ್‌ಗೆ 180 ಕಿ.ಮೀ ಮೈಲೇಜ್ ನೀಡಲಿದೆ. ಇದರ ಬೆಲೆ 1.30 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ಟಾಪ್ ಸ್ಪೀಡ್ 115 kmph. 

ಓಲಾ ಟೆಸ್ಟ್ ರೈಡ್ ನವೆಂಬರ್ 10 ರಿಂದ ಆರಂಭಗೊಳ್ಳುತ್ತಿದೆ. ಹೀಗಾಗಿ ಬುಕಿಂಗ್ ಮಾಡಿದ ಗ್ರಾಹಕರಿಗೆ ಓಲಾ ಸ್ಕೂಟರ್ ವಿತರಣೆ ಕೊಂಚ ವಿಳಂಬವಾಗಲಿದೆ. ಓಲಾ ಸ್ಕೂಟರ್ ಡಿಸೆಂಬರ್ 1 ರಿಂದ 31ರೊಳಗೆ ಡೆಲಿವರಿಯಾಗಿಲಿದೆ. ಇನ್ನು ಓಲಾ ಸ್ಕೂಟರ್ ಖರೀದಿ ಸಂಪೂರ್ಣವಾಗಿ ಆನ್‌ಲೈನ್ ಮೂಲಕ ನಡೆಯಲಿದೆ. ಬುಕಿಂಗ್, ಖರೀದಿ ಎಲ್ಲವೂ ಆನ್‌ಲೈನ್ ಮೂಲಕ ನಡೆಯಲಿದೆ. ಬುಕ್ ಮಾಡಿದ ಗ್ರಾಹಕರಿಗೆ ಮನೆ ಬಾಗಿಲಿಗೆ ಓಲಾ ಕಂಪನಿ ಸ್ಕೂಟರ್ ಡೆಲಿವರಿ ಮಾಡಲಿದೆ.