Ola S1 ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸಿದ ಗ್ರಾಹಕರಿಗೆ ಅಪ್‌ಗ್ರೇಡ್ ಸಿಹಿ ಸುದ್ದಿ ನೀಡಿ ಜೇಬಿಗೆ ಕತ್ತರಿ ಹಾಕಿದ ಒಲಾ!
- ಒಲಾ S1 ಸ್ಕೂಟರ್ ಖರೀದಿಸಿದ ಗ್ರಾಹಕರಿಗೆ ಉಚಿತ ಅಪ್‌ಗ್ರೇಡ್ ಘೋಷಿಸಿದ ಒಲಾ
- S1 ಬೇಸ್ ಮಾಡೆಲ್ ಸ್ಕೂಟರನ್ನು S1 ಪ್ರೋ ಸ್ಕೂಟರ್ ಆಗಿ ಅಪ್‌ಗ್ರೇಡ್
- ಆದರೆ ಸಾಫ್ಟ್‌ವೇರ್ ಫೀಚರ್ಸ್ ಪಡೆಯಲು 30,000 ಪಾವತಿಸಿ ಎಂದು ಒಲಾ
ಬೆಂಗಳೂರು(ಡಿ.30): ಒಲಾ ಎಲೆಕ್ಟ್ರಿಕ್ ಸ್ಕೂಟರ್(Ola Electric Scooter) ವಿತರಣೆ ವಿಳಂಬವಾದರೂ ಗ್ರಾಹಕರ ಕೈಸೇರುತ್ತಿದೆ. ಕೆಲ ಗ್ರಾಹಕರು ಸ್ಕೂಟರ್ ವಿರುದ್ಧ ದೂರು ದಾಖಲಿಸಿದ್ದಾರೆ. ಇದರ ನಡುವೆ ಒಲಾ ಮಹತ್ವದ ಘೋಷಣೆ ಮಾಡಿದೆ. ಒಲಾ S1 ಬೇಸ್ ಮಾಡೆಲ್ ಸ್ಕೂಟರ್ ಖರೀದಿಸಿದ ಗ್ರಾಹಕರಿಗೆ ಉಚಿತವಾಗಿ S1 ಪ್ರೋ ಸ್ಕೂಟರ್ ಆಗಿ ಹಾರ್ಡವೇರನ್ನು ಅಪ್‌ಗ್ರೇಡ್(Upgrade) ಮಾಡಿಕೊಡಲಾಗುತ್ತದೆ ಎಂದಿದೆ. ಇದು ಉಚಿತ(Free) ಎಂದಿದೆ. ಆದರೆ ಗ್ರಾಹಕರು ಉಚಿತವಾಗಿ ಕೇವಲ ಹಾರ್ಡ್‌ವೇರ್(Hardware) ಅಪ್‌ಗ್ರೇಡ್ ಪಡೆಯಲಿದ್ದಾರೆ. ಓಲಾ S1 ಪ್ರೋ ಸ್ಕೂಟರ್ ಸಾಫ್ಟ್‌ವೇರ್ ಹಾಗೂ ಫೀಚರ್ಸ್ ಪಡೆಯಲು 30,000 ರೂಪಾಯಿ ಆಗಲಿದೆ ಎಂದಿದೆ.
ಓಲಾ ಎರಡು ವೇರಿಯೆಂಟ್ ಸ್ಕೂಟರ್ ಬಿಡುಗಡೆ ಮಾಡಿದೆ. ಒಲಾ S1 ಹಾಗೂ ಒಲಾ S1 ಪ್ರೋ ಮಾಡೆಲ್ ಸ್ಕೂಟರ್. ಎರಡೂ ಎಲೆಕ್ಟ್ರಿಕ್ ಸ್ಕೂಟರ್‌ನಲ್ಲಿ ಫೀಚರ್ಸ್, ಮೈಲೇಜ್ ರೇಂಜ್ ಸೇರಿದಂತೆ ಹಲವು ವ್ಯತ್ಯಾಸಗಳಿವೆ. ಒಲಾ S1 ಎಲೆಕ್ಟ್ರಿಕ್ ಸ್ಕೂಟರ್ ಬೆಲೆ 1 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ಇನ್ನು ಒಲಾ S1 ಪ್ರೋ ಸ್ಕೂಟರ್ ಬೆಲೆ 1.30 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ಮೈಲೇಜ್ ಸೇರಿದಂತೆ ಹಲವು ಕಾರಣಗಳಿಗಾಗಿ ಗ್ರಾಹಕರು ಓಲಾ S1 ಪ್ರೋ ಟಾಪ್ ಮಾಡೆಲ್ ಖರೀದಿಸುತ್ತಿದ್ದಾರೆ. ಹೀಗಾಗಿ S1 ಬೇಸ್ ಮಾಡೆಲ್ ಖರೀದಿಸಿದ ಗ್ರಾಹಕರಿಗೆ ಉಚಿತವಾಗಿ ಹಾರ್ಡ್‌ವೇರ್ ಅಪ್‌ಗ್ರೇಡ್ ಮಾಡಲು ಒಲಾ ಮುಂದಾಗಿದ್ದು, ಗ್ರಾಹಕರು(Customer) ಗೊಂದಲದಲ್ಲಿ ಮುಳುಗಿದ್ದಾರೆ.
Ola Electric Scooter ಮುಂದಿನ ವಾರದಿಂದ ಹೊಸ ನಗರ, ಪಟ್ಟಣದಲ್ಲಿ ಸ್ಕೂಟರ್ ಲಭ್ಯ!
ಓಲಾ S1 ಸ್ಕೂಟರ್ ಹಾರ್ಡ್‌ವೇರ್ ಅಪ್‌ಗ್ರೇಡ್ ಆಟೋಮ್ಯಾಟಿಕ್ ಆಗಿ ಆಗಲಿದೆ. ಗ್ರಾಹಕರಿಗೆ ಇಷ್ಟವಿದೆಯೋ ಇಲ್ಲವೋ ಹಾರ್ಡ್‌ವೇರ್ ಅಪ್‌ಗ್ರೇಡ್ ಮೂಲಕ ಓಲಾ S1 ಸ್ಕೂಟರ್ S1 ಪ್ರೋ ಸ್ಕೂಟರ್ ಆಗಿ ಅಪ್‌ಗ್ರೇಡ್ ಆಗಲಿದೆ. ಆದರೆ ಇದು ಕೇವಲ ಹಾರ್ಡ್‌ವೇರ್ ಅಪ್‌ಗ್ರೇಡ್, ಈ ಕಾರ್ಯದಲ್ಲಿ S1 ಪ್ರೋ ಸ್ಕೂಟರ್‌ನ ಯಾವುದೇ ಫೀಚರ್ಸ್ ಬೇಸ್ ಮಾಡಲಲ್ಲಿ ಇರುವುದಿಲ್ಲ. ಆದರೆ S1 ಸ್ಕೂಟರ್ ಖರೀದಿಸಿದ ಗ್ರಾಹಕರು ಟಾಪ್ ಮಾಡೆಲ್ S1 ಪ್ರೋ ಸ್ಕೂಟರ್ ಫೀಚರ್ಸ್ ಹಾಗೂ ಮೈಲೇಜ್ ರೇಂಜ್ ಬಯಸಿದರೆ 30,000 ರೂಪಾಯಿ ನೀಡಿ ಮಾಡಿಸಿಕೊಳ್ಳಬಹುದು.
18 ನಿಮಿಷದಲ್ಲಿ ಶೇ.50 ರಷ್ಟು ಚಾರ್ಚ್; ಓಲಾ ಸ್ಕೂಟರ್ ಮೊದಲ ಹೈಪರ್ ಚಾರ್ಚರ್ ಲಾಂಚ್!
30,000 ರೂಪಾಯಿ ನೀಡಿ ಅಪ್‌ಗ್ರೇಡ್ ಮಾಡಿದರೆ S1 ಪ್ರೋ ಸ್ಕೂಟರ್‌ನಲ್ಲಿರುವ ಹೈಪರ್ ಮೊಡ್ ರೈಡ್ S1 ಸ್ಕೂಟರ್‌ನಲ್ಲೂ ಆಯ್ಕೆ ಸಿಗಲಿದೆ. ಕ್ರ್ಯೂಸ್ ಕಂಟ್ರೋಲ್, ವಾಯ್ಸ್ ಅಸಿಸ್ಟೆನ್ಸ್ ಸೇರಿದಂತೆ ಇಚರ ಫೀಚರ್ಸ್ ಆಯ್ಕೆ ಸಿಗಲಿದೆ. ಮತ್ತೊಂದು ವಿಷಯ ಇಲ್ಲಿ ಗಮನಿಸಬೇಕು. ಒಲಾ S1 ಸ್ಕೂಟರ್ ಒಂದು ಬಾರಿ ಚಾರ್ಜ್ ಮಾಡಿದರೆ 121 ಕಿಲೋಮೀಟರ್ ಮೈಲೇಜ್ ನೀಡಲಿದೆ ಎಂದು ಕಂಪನಿ ಹೇಳಿದೆ. ಇನ್ನು ಒಲಾ S1 ಪ್ರೋ ಸ್ಕೂಟರ್ ಒಂದು ಬಾರಿ ಚಾರ್ಜ್ ಮಾಡಿದರೆ 181 ಕಿಲೋಮೀಟರ್ ಮೈಲೇಜ್ ನೀಡಲಿದೆ ಎಂದು ಕಂಪನಿ ಹೇಳಿದೆ. ಈ ಮೈಲೇಜ್ ಹಾಗೂ ಕಡಿಮ ಸಮಯದಲ್ಲಿ ಚಾರ್ಜ್ ಮಾಡಲು ಸ್ಕೂಟರ್ ಅಪ್‌ಗ್ರೇಡೇಶನ್ ಮುಖ್ಯವಾಗಿದೆ. ಆದರೆ ಈ ಅಪ್‌ಗ್ರೇಡೇಶನ್ ಉಚಿತವಲ್ಲ. ಕೇವಲ ಹಾರ್ಡವೇರ್ ಅಪ್‌ಗ್ರೇಡ್ ಉಚಿತ. ಇದರಿಂದ ಗ್ರಾಹಕರ ರೈಡಿಂಗ್‌ನಲ್ಲಿ, ಚಾರ್ಜಿಂಗ್, ಮೈಲೇಜ್, ಫೀಚರ್ಸ್ ಯಾವ ಬದಲಾವಣಯೂ ಆಗುವುದಿಲ್ಲ. ಸಾಫ್ಟ್‌ವೇರ್ ಅಪ್‌ಗ್ರೇಡ್‌ಗೆ ಪಾವತಿಸಬೇಕು.
ಬೆಂಗಳೂರು ಮೂಲಕ ಓಲಾ ಸ್ಕೂಟರ್ ದೇಶದಲ್ಲೇ ಸೆಂಚಲನ ಸೃಷ್ಟಿಸಿದೆ. ಆಗಸ್ಟ್ 15 ರಂದು ಓಲಾ ಭಾರತದ ಮಾರುಕಟ್ಟೆಗೆ ಓಲಾ S1 ಹಾಗೂ S1 ಪ್ರೋ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಿತ್ತು. ಸೆಪ್ಟೆಂಬರ್ ತಿಂಗಳಿನಿಂದ ಓಲಾ ಸ್ಕೂಟರ್ ಡೆಲವರಿ ಮಾಡಲಾಗುತ್ತದೆ ಎಂದಿತ್ತು. ಆದರೆ ಹಲವು ಕಾರಣಗಳಿಂದ ಅಕ್ಟೋಬರ್, ನವೆಂಬರ್ ತಿಂಗಳಿದೆ ಮುಂದೂಡಿತ್ತು. ರೋಸಿ ಹೋದ ಗ್ರಾಹಕರು ಬುಕಿಂಗ್ ಕ್ಯಾನ್ಸಲ್ ಮಾಡಲು ಆರಂಭಿಸಿದ್ದರು. ತರಾತುರಿಯಲ್ಲಿ ಓಲಾ ಡಿಸೆಂಬರ್ 15 ರಿಂದ ಡೆಲಿವರಿ ಆರಂಭಿಸಿತು. ಇದಕ್ಕೂ ಮುನ್ನ ನವೆಂಬರ್ ತಿಂಗಳಲ್ಲಿ ಓಲಾ ಟೆಸ್ಟ್ ರೈಡ್ ನಡೆಸಿತ್ತು. ಬುಕಿಂಗ್ ಮಾಡಿದ ಗ್ರಾಹಕರಿಗೆ ಟೆಸ್ಟ್ ರೈಡ್ ನೀಡಿತ್ತು.