Bounce Infinity e1 ಎಲೆಕ್ಟ್ರಿಕ್ ಸ್ಕೂಟರ್ ಬ್ಯಾಟರಿ ವಿನಿಮಯ ಮತ್ತಷ್ಟು ಸುಲಭ, ನೋಬ್ರೋಕರ್ ಜೊತೆ ಒಪ್ಪಂದ!

  • 1 ಲಕ್ಷಕ್ಕೂ ಹೆಚ್ಚು ಸ್ಥಳಗಳಲ್ಲಿ ಬೌನ್ಸ್ ಸ್ಕೂಟರ್ ಬ್ಯಾಟರಿ ವಿನಿಮಯ ಕೇಂದ್ರ
  • ಒಂದು ನಿಮಿಷದಲ್ಲಿ ಬ್ಯಾಟರಿ ವಿನಿಮ, ಚಾರ್ಚ್‌ಗಾಗಿ ಕಾಯಬೇಕಿಲ್ಲ
  • ಬೌನ್ಸ್ ಎಲೆಕ್ಟ್ರಿಕ್ ಸ್ಕೂಟರ್ ಹಾಗೂ ನೋ ಬ್ರೋಕರ್ ಒಪ್ಪಂದ
Bounce Electric scooter partners with nobroker accelerates battery swapping infrastructure India ckm

ಬೆಂಗಳೂರು(ಡಿ.13) : ಬೌನ್ಸ್ ಎಲೆಕ್ಟ್ರಿಕ್ ಸ್ಕೂಟರ್(Bounce Electric scooter) ದೇಶದ ಮೊದಲ ಬ್ಯಾಟರಿ ವಿನಿಮಯ ಸ್ಕೂಟರ್ ಆಗಿದೆ. ಇದೀಗ ಮತ್ತೊಂದು ಗುಡ್‌ನ್ಯೂಸ್ ಇದೆ. ಗ್ರಾಹಕರು ಬ್ಯಾಟರಿ ವಿನಿಮಯ ಕೇಂದ್ರಕ್ಕಾಗಿ ಅಲೆದಾಡಬೇಕಿಲ್ಲ. ಹೆಜ್ಜೆ ಹೆಜ್ಜೆಗೂ ಬ್ಯಾಟರಿ ವಿನಿಮಯ(battery swapping) ಕೇಂದ್ರಗಳು ಸಿಗಲಿದೆ. ಇದಕ್ಕಾಗಿ ರಿಯಲ್ ಎಸ್ಟೇಟ್ ಕ್ಷೇತ್ರದಲ್ಲಿನ ಭಾರತದ ಮೊದಲ ಯೂನಿಕಾರ್ನ್ ಸ್ಟಾರ್ಟ್-ಅಪ್ ನೊಬ್ರೋಕರ್‌ಡಾಟ್‌ಕಾಮ್  ಜೊತೆ ಬೌನ್ಸ್ ಎಲೆಕ್ಟ್ರಿಕ್ ಸ್ಕೂಟರ್ ಹೊಸ ಪಾಲುದಾರಿಕೆ ಮಾಡಿಕೊಂಡಿದೆ.  ಈ ಪಾಲುದಾರಿಕೆಯೊಂದಿಗೆ ಬೌನ್ಸ್, ಭಾರತದಾದ್ಯಂತ ನೊಬ್ರೋಕರ್‌ಡಾಟ್‌ಕಾಮ್‌ನ 1 ಲಕ್ಷಕ್ಕೂ ಹೆಚ್ಚು ಸ್ಥಳಗಳಲ್ಲಿ ಅವಕಾಶ ಪಡೆಯಲಿದೆ. ಈ ವಿಶಿಷ್ಟ ಸೌಲಭ್ಯವು ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳಲ್ಲಿ (ಅಪಾರ್ಟ್ಮೆಂಟ್, ಸ್ವತಂತ್ರ ಕಟ್ಟಡಗಳು, ಗೇಟೆಡ್ ಸೊಸೈಟಿಗಳು ಇತ್ಯಾದಿ) ಹೆಚ್ಚಾಗಿ ಲಭ್ಯವಿರುತ್ತದೆ. ಗ್ರಾಹಕರು ತಮ್ಮ ಬೌನ್ಸ್ ಅಪ್ಲಿಕೇಷನ್‌ನಲಿ ತಮ್ಮ  ಹತ್ತಿರದ ಬ್ಯಾಟರಿ ವಿನಿಮಯ ಕೇಂದ್ರದ ಉಪಯೋಗ ಪಡೆಯಲು ಇದು ಹೆಚ್ಚಿನ ಅನುಕೂಲತೆ ಒದಗಿಸುತ್ತದೆ. 

ಭಾರತದಾದ್ಯಂತ 4,400 ಬ್ಯಾಟರಿ ವಿನಿಮಯ ಕೇಂದ್ರಗಳನ್ನು ಸ್ಥಾಪಿಸಲು ಪಾರ್ಕ್ +, ರೆಡಿಅಸಿಸ್ಟ್, ಕಿಚನ್ಸ್@, ಹೆಲೊವರ್ಲ್ಡ್ ಮತ್ತು ಗುಡ್‌ಬಾಕ್ಸ್ ಜೊತೆ ಬೌನ್ಸ್ ಈಗಾಗಲೇ ಪಾಲುದಾರಿಕೆ ಹೊಂದಿದೆ.  ಈ ಬ್ಯಾಟರಿ ವಿನಿಮಯ ಕೇಂದ್ರಗಳು ಪೆಟ್ರೋಲ್ ಪಂಪ್‌ಗಳ(Petrol Pump) ಕಾರ್ಯನಿರ್ವಹಣೆಯ ತತ್ವಗಳನ್ನು ಆಧರಿಸಿಯೇ ಕಾರ್ಯನಿರ್ವಹಿಸುತ್ತವೆ. ಇಲ್ಲಿರುವ ಬೌನ್ಸ್ ಬ್ಯಾಟರಿ ವಿನಿಮಯ ಕೇಂದ್ರಗಳು ಚಾರ್ಜ್ ಆಗಿರುವ ಮತ್ತು ಬಳಕೆಗೆ ಸಿದ್ಧವಾಗಿರುವ ಬ್ಯಾಟರಿಗಳನ್ನು ಹೊಂದಿರಲಿವೆ. ಗ್ರಾಹಕರು ತಮ್ಮ ಖಾಲಿ ಆಗಿರುವ ಬ್ಯಾಟರಿಗಳನ್ನು ಚಾರ್ಜ್ ಆಗಿರುವ ಬ್ಯಾಟರಿಗಳ ಜೊತೆ ಒಂದು ನಿಮಿಷದಲ್ಲಿ ಸುಲಭವಾಗಿ ವಿನಿಮಯ ಮಾಡಿಕೊಳ್ಳಬಹುದು. ಈ ಮೂಲಸೌಕರ್ಯದ ನೆರವಿನಿಂದಾಗಿ, ಗ್ರಾಹಕರು ಸ್ಕೂಟರ್(Electric Scooter) ಚಾರ್ಜ್ ಮಾಡಲು ಕಾಯಬೇಕಾಗಿಲ್ಲ. ಬ್ಯಾಟರಿ ಚಾರ್ಜ್(Charging) ಆಗಿರುವ ಪ್ರಮಾಣದ ಬಗ್ಗೆ ಚಿಂತಿಸುವ ಅಥವಾ ಬ್ಯಾಟರಿ ಚಾರ್ಜ್ ಮಾಡಬೇಕಾಗಿರುವುದನ್ನು ನೆನಪಿನಲ್ಲಿ ಇಟ್ಟುಕೊಳ್ಳುವ ಅಗತ್ಯವೂ ಇರುವುದಿಲ್ಲ.

Bounce Infinity E1‌ ಎಲೆಕ್ಟ್ರಿಕ್ ಸ್ಕೂಟರ್ ಲಾಂಚ್ : ಐದು ಅತ್ಯಾಕರ್ಷಕ ಬಣ್ಣಗಳಲ್ಲಿ ಲಭ್ಯ!

ಇಂತಹ ಪ್ರಮುಖ ಪಾಲುದಾರಿಕೆಗಳ ಮೂಲಕ, ನಗರ ವ್ಯಾಪ್ತಿಯಲ್ಲಿ ತನ್ನ ಗ್ರಾಹಕರು ಎಲ್ಲಿದ್ದರೂ ಅವರಿಗೆ ಒಂದು ಕಿಲೋಮೀಟರ್ ವ್ಯಾಪ್ತಿ ಒಳಗೆ ಬ್ಯಾಟರಿ ವಿನಿಮಯ ಕೇಂದ್ರಗಳನ್ನು ಒದಗಿಸುವ ಗುರಿಯನ್ನು ಬೌನ್ಸ್ ಹೊಂದಿದೆ.  ಮುಂದಿನ 24ತಿಂಗಳುಗಳಲ್ಲಿ 10 ಲಕ್ಷ ಸ್ಕೂಟರ್‌ಗಳಿಗೆ ಬ್ಯಾಟರಿ ವಿನಿಮಯ ಸೌಲಭ್ಯ ಒದಗಿಸಲು ಸದೃಢ ಬಗೆಯ ಬ್ಯಾಟರಿ ವಿನಿಮಯ ಮೂಲಸೌಕರ್ಯವನ್ನು  ಒದಗಿಸಲಿದೆ.  

ದೇಶದಲ್ಲಿ ಹತ್ತು ಲಕ್ಷಕ್ಕೂ ಹೆಚ್ಚು ಸ್ಕೂಟರ್‌ಗಳಿಗೆ ತ್ವರಿತವಾಗಿ ಬ್ಯಾಟರಿ ವಿನಿಮಯ ಮೂಲ ಸೌಕರ್ಯ ಒದಗಿಸಲು ನೊಬ್ರೋಕರ್ ಜೊತೆ ಪಾಲುದಾರಿಕೆ ಮಾಡಿಕೊಳ್ಳಲು ನಾವು ಹೆಚ್ಚು ಉತ್ಸುಕರಾಗಿದ್ದೇವೆ. ಈ ಪಾಲುದಾರಿಕೆಯು ಗ್ರಾಹಕರಿಗೆ ತಡೆರಹಿತ ಬ್ಯಾಟರಿ ವಿನಿಮಯ ಅನುಭವವನ್ನು ನೀಡಲಿದೆ. ನಮ್ಮ ಗುರಿಗಳನ್ನು ತ್ವರಿತವಾಗಿ ಕಾರ್ಯಗತಗೊಳಿಸುವುದಕ್ಕೂ ಇದು ನಮಗೆ ಅನುವು ಮಾಡಿಕೊಡುತ್ತದೆ ಎಂದು ಬೌನ್ಸ್  ಸಹ-ಸಂಸ್ಥಾಪಕ ಮತ್ತು ಸಿಇಒ ವಿವೇಕಾನಂದ ಹಳ್ಳೆಕೆರೆ ಹೇಳಿದ್ದಾರೆ.

Bounce Infinity Electric Vehicle : ಬೌನ್ಸ್‌ನಿಂದ ವಿದ್ಯುತ್ ಚಾಲಿತ ದ್ವಿಚಕ್ರ ವಾಹನ ಉತ್ಪಾದನೆ

ಈ ಪಾಲುದಾರಿಕೆ ಬಗ್ಗೆ  ನಾವು ಹೆಚ್ಚು ಉತ್ಸುಕರಾಗಿದ್ದೇವೆ. ಇದು ಪರಿಸರವನ್ನು ಹೆಚ್ಚು ಸುಸ್ಥಿರಗೊಳಿಸಲು ಸಹಾಯ ಮಾಡಲಿರುವುದರ ಜೊತೆಗೆ ನಮ್ಮ ನೊಬ್ರೋಕರ್ ನಿವಾಸಿಗಳಿಗೆ ಹೆಚ್ಚಿನ ಅನುಕೂಲತೆಯನ್ನು ಒದಗಿಸಲಿದೆ. ನೊಬ್ರೋಕರ್ ಈಗಾಗಲೇ 1 ಲಕ್ಷ ಸೊಸೈಟಿಗಳನ್ನು ತಲುಪಿದ್ದು, ಈ ಪಾಲುದಾರಿಕೆಯು ನಮ್ಮ ವಹಿವಾಟನ್ನು ಇನ್ನಷ್ಟು ವಿಸ್ತರಿಸಲು ನೆರವಾಗಲಿದೆ. ಮಹಾನಗರಗಳಲ್ಲಿ ಇಂಧನ ಮಾಲಿನ್ಯ ಮಟ್ಟ ತಗ್ಗಿಸಲು ನೆರವಾಗಲಿದೆ. ನೊಬ್ರೋಕರ್ ನಿವಾಸಿಗಳು ತೀವ್ರವಾಗಿ ಕಡಿಮೆಯಾಗುವ ಶಬ್ದ ಮತ್ತು ವಾಯು ಮಾಲಿನ್ಯದ ಪ್ರಯೋಜನಗಳನ್ನೂ ಪಡೆಯಲಿದ್ದಾರೆ ಎಂದು  ನೊಬ್ರೋಕರ್‌ನ ಸಹ ಸ್ಥಾಪಕ ಮತ್ತು ಸಿಇಒ ಅಮಿತ್ ಕುಮಾರ್ ಅಗರ್ವಾಲ್ ಹೇಳಿದ್ದಾರೆ.

Best electric scooters:ಎಲೆಕ್ಟ್ರಿಕ್ ಸ್ಕೂಟರ್ ಖರೀದಿಸುವ ಪ್ಲಾನ್ ನಿಮಗಿದೆಯಾ, ಇಲ್ಲಿದೆ ಟಾಪ್ 10 ಟು ವ್ಹೀಲರ್!

ಇತ್ತೀಚೆಗೆ ಬಿಡುಗಡೆಯಾದ ಗ್ರಾಹಕ ಎಲೆಕ್ಟ್ರಿಕ್ ಸ್ಕೂಟರ್, ಬೌನ್ಸ್ ಇನ್ಫಿನಿಟಿ ಇ೧ಗೆ (bounce infinity e1) ಪೂರಕವಾಗಿ ತನ್ನ ಬ್ಯಾಟರಿ ವಿನಿಮಯ ಜಾಲವನ್ನು ಹೆಚ್ಚಿಸಲು ಕ್ರಮ ಕೈಗೊಂಡಿದೆ. ಡಿಸೆಂಬರ್ 2 ರಂದು ಬಿಡುಗಡೆಯಾದ ಸ್ಕೂಟರ್, ‘ಬ್ಯಾಟರಿ ಆ್ಯಸ್ ಎ ಸರ್ವಿಸ್' ಆಯ್ಕೆಯೊಂದಿಗೆ ಬರುತ್ತದೆ. ಇದು ಭಾರತದ ಮಾರುಕಟ್ಟೆಯಲ್ಲಿ ಮೊದಲ ಬಾರಿಗೆ ಪರಿಚಯಿಸಿದ ಸೌಲಭ್ಯವಾಗಿದೆ. ಸಾಂಪ್ರದಾಯಿಕ ಸ್ಕೂಟರ್‌ಗಳಿಗೆ ಹೋಲಿಸಿದರೆ ಸ್ಕೂಟರ್‌ನ ಚಾಲನೆಯ ವೆಚ್ಚವನ್ನು ಇದು ಗಣನೀಯವಾಗಿ ಅಂದರೆ ಶೇ 40 ರಷ್ಟು ಕಡಿಮೆ ಮಾಡುತ್ತದೆ. ಬೌನ್ಸ್ ಇನ್ಫಿನಿಟಿ ಇ1 ಅನ್ನು ಬ್ಯಾಟರಿಯೊಂದಿಗೆ ಸಹ ನೀಡಲಾಗುವುದು, ಇದನ್ನು ಸ್ಕೂಟರ್‌ನಿಂದ ಹೊರತೆಗೆದು ತಮ್ಮ ಮನೆ ಅಥವಾ ಕಚೇರಿಯಲ್ಲಿ ಅಥವಾ ಇತರ ಅನುಕೂಲಕರ ಸ್ಥಳದಲ್ಲಿ ಸುಲಭವಾಗಿ ಚಾರ್ಜ್ ಮಾಡಬಹುದು. 

Latest Videos
Follow Us:
Download App:
  • android
  • ios