ಹೆಲ್ಮೆಟ್ ಧರಿಸಿದರೂ ದಂಡ ವಿಧಿಸಲು ಹಲವು ಕಾರಣಗಳಿವೆ. ಐಎಸ್ಐ ಗುರುತಿಲ್ಲದ, ಪಟ್ಟಿ ಕಟ್ಟದ, ತಪ್ಪಾಗಿ ಧರಿಸಿದ ಅಥವಾ ಸರಿಯಾದ ಗಾತ್ರವಿಲ್ಲದ ಹೆಲ್ಮೆಟ್ ಧರಿಸಿದರೆ ದಂಡ ವಿಧಿಸಲಾಗುತ್ತದೆ. ಸುರಕ್ಷತೆಗಾಗಿ ಐಎಸ್ಐ ಗುರುತಿನ ಬ್ರಾಂಡೆಡ್ ಹೆಲ್ಮೆಟ್ ಧರಿಸುವುದು, ಪಟ್ಟಿ ಕಟ್ಟುವುದು ಮತ್ತು ಸರಿಯಾದ ಗಾತ್ರದ ಹೆಲ್ಮೆಟ್ ಬಳಸುವುದು ಮುಖ್ಯ. ಈ ನಿಯಮಗಳನ್ನು ಪಾಲಿಸುವುದರಿಂದ ಅಪಘಾತಗಳನ್ನು ತಪ್ಪಿಸಬಹುದು ಮತ್ತು ದಂಡದಿಂದ ಪಾರಾಗಬಹುದು.

ಹೆಲ್ಮೆಟ್ (Helmet) ಹಾಕಿ ಬೈಕ್ ಓಡಿಸ್ತಿರ್ತಿರಿ. ಕೈ ಅಡ್ಡ ಹಾಕಿದ ಟ್ರಾಫಿಕ್ ಪೊಲೀಸ್ (Traffic Police) ದಂಡ ಕಟ್ಟಿ ಎನ್ನುತ್ತಾರೆ. ಹೆಲ್ಮೆಟ್ ಹಾಕಿದ್ದೇನೆ, ಬೈಕ್ ನ ಎಲ್ಲ ಡಾಕ್ಯೂಮೆಂಟ್ ನನ್ನ ಬಳಿ ಇದೆ ಅಂತೀರಿ. ಆದ್ರೂ ಟ್ರಾಫಿಕ್ ಪೊಲೀಸ್ ಬಿಡೋದಿಲ್ಲ. ದಂಡ ಕಟ್ಟಿಸಿಕೊಳ್ತಾರೆ. ಸುಮ್ನೆ ಹಣ ಮಾಡೋಕೆ ಟ್ರಾಫಿಕ್ ಪೊಲೀಸರು ಹೀಗೆ ಮಾಡ್ತಿದ್ದಾರೆ ಅಂತ ಅನೇಕರು ಗೊಣಗಿಕೊಳ್ತಾರೆ. ಆದ್ರೆ ಟ್ರಾಫಿಕ್ ಪೊಲೀಸರು ನಿಮಗೆ ದಂಡ ವಿಧಿಸಲು ಅನೇಕ ಕಾರಣವಿದೆ. ನೀವು ಹೆಲ್ಮೆಟ್ ಧರಿಸ್ಬೇಕು ಎನ್ನುವ ಕಾರಣಕ್ಕೆ ಯಾವುದೋ ಹೆಲ್ಮೆಟನ್ನು ಹೇಗೇಗೋ ಧರಿಸಿದ್ರೆ ಆಗ್ಲಿಲ್ಲ. ಇದ್ರಿಂದ ಅಪಾಯ ಎದುರಾಗಬಹುದು. ರಸ್ತೆ ಅಪಘಾತ (accident)ಗಳ ಸಂಖ್ಯೆ ಹೆಚ್ಚಾಗಿದೆ. ಹೆಲ್ಮೆಟ್ ಧರಿಸದೆ ಪ್ರಯಾಣ ಮಾಡುವ ಸವಾರರು ಹೆಚ್ಚು ಅಪಾಯಕ್ಕೆ ಒಳಗಾಗ್ತಿದ್ದಾರೆ. ರಸ್ತೆ ಸುರಕ್ಷತೆ ದೃಷ್ಟಿಯಿಂದ ಟ್ರಾಫಿಕ್ ರೂಲ್ಸ್ ನಲ್ಲಿ ಕೆಲ ಬದಲಾವಣೆ ಮಾಡಲಾಗಿದೆ. 2025ರ ಹೊಸ ಸಂಚಾರಿ ನಿಯಮದಲ್ಲಿ ಹೆಲ್ಮೆಟ್ ಗೆ ಸಂಬಂಧಿಸಿದಂತೆ ಏನೆಲ್ಲ ರೂಲ್ಸ್ ಇದೆ ಎಂಬ ಡಿಟೇಲ್ ಇಲ್ಲಿದೆ.

ಹೆಲ್ಮೆಟ್ ಧರಿಸಿದ್ರೂ ದಂಡ ಯಾಕೆ? :
1. ಐಎಸ್ಐ ಮಾರ್ಕ್ : ಟ್ರಾಫಿಕ್ ನಿಯಮ ಇದೆ ಎನ್ನುವ ಕಾರಣಕ್ಕೆ ನೀವು ಯಾವುದೋ ಹೆಲ್ಮೆಟ್ ಧರಿಸಿದ್ರೆ ಆಗ್ಲಿಲ್ಲ. ಸಂಚಾರ ನಿಯಮಗಳ ಪ್ರಕಾರ, ಹೆಲ್ಮೆಟ್ ಮೇಲೆ ಐಎಸ್ಐ ಮಾರ್ಕ್ ಇರ್ಬೇಕು. ಹಾಗೆಯೇ ಬ್ರಾಂಡ್ ನೇಮ್ ಇರ್ಬೇಕು. ನೀವು ಐಎಸ್ಐ ಮಾರ್ಕ್ ಇಲ್ಲದ ಹೆಲ್ಮೆಟ್ ಧರಿಸಿದ್ರೆ ದಂಡ ತೆರಬೇಕಾಗುತ್ತದೆ. ಹೊಸ ನಿಯಮಗಳ ಪ್ರಕಾರ, ನೀವು ಯಾವಾಗಲೂ ISI ಗುರುತು ಹೊಂದಿರುವ ಬ್ರಾಂಡೆಡ್ ಹೆಲ್ಮೆಟ್ ಧರಿಸಬೇಕು. ಸ್ಥಳೀಯ ಮತ್ತು ನಕಲಿ ಹೆಲ್ಮೆಟ್ ನಿಮ್ಮನ್ನು ಅಪಾಯದಿಂದ ರಕ್ಷಿಸೋದಿಲ್ಲ. ನಿಮಗೆ ಹೆಚ್ಚಿನ ಗಾಯವಾಗುವ ಸಾಧ್ಯತೆ ಇರುತ್ತದೆ. ಹಾಗಾಗಿಯೇ ಟ್ರಾಫಿಕ್ ಪೊಲೀಸ್ ದಂಡ ವಿಧಿಸ್ತಾರೆ. ಮಾರುಕಟ್ಟೆಯಲ್ಲಿ ಹೆಲ್ಮೆಟ್ ಖರೀದಿ ಮಾಡುವಾಗ ಈ ಬಗ್ಗೆ ಎಚ್ಚರ ಇರಲಿ. ನೀವು ನಕಲಿ ಹೆಲ್ಮೆಟ್ ಧರಿಸಿದ್ರೆ 1000 ರೂಪಾಯಿ ದಂಡ ಕಟ್ಟಬೇಕಾಗುತ್ತದೆ.

2. ಪಟ್ಟಿ ಧರಿಸೋದು ಮುಖ್ಯ : ಐಎಸ್ ಐ ಮಾರ್ಕ್ ಇರುವ ಹೆಲ್ಮೆಟ್ ತಲೆಗೆ ಹಾಕಿದ್ರೆ ಆಗ್ಲಿಲ್ಲ, ಪಟ್ಟಿಯನ್ನು ಸರಿಯಾಗಿ ಕಟ್ಟಿರಬೇಕು. ಅನೇಕರು ನಿಯಮ ಪಾಲನೆ ಅಂತ ಹೆಲ್ಮೆಟ್ ಧರಿಸ್ತಾರೆ. ಆದ್ರೆ ತಮ್ಮ ಸುರಕ್ಷತೆಗೆ ಆದ್ಯತೆ ನೀಡೋದಿಲ್ಲ. ಹಾಗಾಗಿ ಪಟ್ಟಿ ಲಾಕ್ ಮಾಡದೆ ಹೆಲ್ಮೆಟ್ ಧರಿಸ್ತಾರೆ. ಅವರ ವಿರುದ್ಧ ಟ್ರಾಫಿಕ್ ಪೊಲೀಸರು ಕ್ರಮಕೈಗೊಳ್ಳುತ್ತಾರೆ. 1000 ರೂಪಾಯಿವರೆಗೆ ದಂಡ ವಿಧಿಸ್ತಾರೆ. 

ಭಾರತದಲ್ಲಿ ಅತೀ ಹೆಚ್ಚು ಜನ ಖರೀದಿಸುವ ಎಲೆಕ್ಟ್ರಿಕ್ ಸ್ಕೂಟರ್

3. ಸರಿಯಾದ ವಿಧಾನ : ತಪ್ಪಾಗಿ ಹೆಲ್ಮೆಟ್ ಧರಿಸಿದ್ರೂ ದಂಡ ತೆರಬೇಕಾಗುತ್ತದೆ. ಅನೇಕರು ಸರಿಯಾಗಿ ಹೆಲ್ಮೆಟ್ ಹಾಕೋದಿಲ್ಲ. ಮತ್ತೆ ಕೆಲವರು ಹೆಲ್ಮೆಟನ್ನು ತಲೆಗೆ ಹಾಕುವ ಬದಲು ಕೈನಲ್ಲಿ ಇಟ್ಟುಕೊಂಡು ಓಡಾಡ್ತಾರೆ. ಇದು ಸಂಚಾರಿ ನಿಯಮಕ್ಕೆ ವಿರುದ್ಧವಾಗಿದೆ. ಅಂಥವರಿಗೆ 2 ಸಾವಿರ ರೂಪಾಯಿವರೆಗೆ ದಂಡ ವಿಧಿಸಲಾಗುತ್ತದೆ. 

4. ಹೆಲ್ಮೆಟ್ ಗಾತ್ರ : ಸರಿಯಾದ ಗಾತ್ರದ ಹೆಲ್ಮೆಟ್ ಧರಿಸೋದು ಕೂಡ ಬಹಳ ಮುಖ್ಯ. ನಿಮ್ಮ ತಲೆಯ ಗಾತ್ರಕ್ಕೆ ಅನುಗುಣವಾಗಿ ಸರಿಯಾದ ಹೆಲ್ಮೆಟ್ ಅನ್ನು ಆರಿಸಿ. ಒಂದೇ ಹೆಲ್ಮೆಟ್ ಅನ್ನು ಪದೇ ಪದೇ ಬಳಸುವುದರಿಂದ ಅದು ಸರಿಯಾಗಿ ಹೊಂದಿಕೊಳ್ಳುವುದಿಲ್ಲ, ಇದು ಅಪಘಾತಗಳ ಅಪಾಯವನ್ನು ಹೆಚ್ಚಿಸುತ್ತದೆ.

ಬಹುನಿರೀಕ್ಷಿತ ಟಾಟಾ ನ್ಯಾನೋ ಎಲೆಕ್ಟ್ರಿಕ್ ಕಾರು ಬಿಡುಗಡೆ ಯಾವಾಗ? ಇಲ್ಲಿದೆ ಫೀಚರ್ಸ್

ಇನ್ಮುಂದೆ ಹೆಲ್ಮೆಟ್ ಧರಿಸುವಾಗ ಈ ಎಲ್ಲ ನಿಯಮಗಳನ್ನು ನೆನೆಪಿನಲ್ಲಿಟ್ಟುಕೊಳ್ಳಿ. ಇದ್ರಿಂದ ರಸ್ತೆ ಅಪಘಾತದ ಆಪತ್ತಿನಿಂದ ನಿಮ್ಮನ್ನು ರಕ್ಷಿಸಿಕೊಳ್ಳಬಹುದು. ಜೊತೆಗೆ ಟ್ರಾಫಿಕ್ ಪೊಲೀಸರ ದಂಡದ ಶಿಕ್ಷೆಯಿಂದ ಮುಕ್ತಿ ಪಡೆಯಬಹುದು.