Asianet Suvarna News Asianet Suvarna News

ಕೈಗೆಟುಕುವ ದರದಲ್ಲಿ ಇನ್ಗೋ ಫ್ಲೀ 2.0 ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ, ಝೀರೋ ಮೈಂಟೆನ್ಸ್!

ಕಡಿಮೆ ಬೆಲೆಯಲ್ಲಿ ಅತ್ಯುತ್ತಮ ದರ್ಜೆಯ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಯಾಗಿದೆ. ಇನ್ಗೋ ಫ್ಲೀ 2.0 ಬೈಕ್ ಹಲವು ವಿಶೇಷತೆಗಳನ್ನು ಹೊಂದಿದೆ. ಶೂನ್ಯ ನಿರ್ವಹಣೆಯ ಈ ಸ್ಕೂಟರ್ ಈಗಾಗಲೇ ಮಾರುಕಟ್ಟೆಯಲ್ಲಿ ಲಭ್ಯವಿದೆ.

Micro Mobility launch ingo Flee 2 0 Electric scooter with RS 62000 in India ckm
Author
First Published Dec 15, 2023, 1:08 PM IST

ಬೆಂಗಳೂರು(ಡಿ.15): ಭಾರತದಲ್ಲಿ ಎಲೆಕ್ಟ್ರಿಕ್ ದ್ವಿಚಕ್ರವಾಹನದಲ್ಲಿ ಕ್ರಾಂತಿಯಾಗಿದೆ. ಪ್ರತಿ ತಿಂಗಳು ಹೊಸ ಹೊಸ ಎಲೆಕ್ಟ್ರಿಕ್ ಸ್ಕೂಟರ್, ಬೈಕ್ ಬಿಡುಗಡೆಯಾಗುತ್ತಿದೆ.  ಕಡಿಮೆ ಬೆಲೆ, ಗರಿಷ್ಠ ಮೈಲೇಜ್, ಸುಲಭ ಚಾರ್ಜಿಂಗ್ ಸೇರಿದಂತೆ ಹಲವು ಫೀಚರ್ಸ್ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಲಭ್ಯವಿದೆ. ಈ ಸಾಲಿಗೆ ಮತ್ತೊಂದು ಸೇರಿಕೊಂಡಿದೆ. ಮೈಕ್ರೋ ಮೊಬಿಲಿಟಿ ಕಂಪನಿಯಾಗಿರುವ ಇನ್​ಗೊ ಎಲೆಕ್ಟ್ರಿಕ್ ತನ್ನ ಇತ್ತೀಚಿನ ಎಲೆಕ್ಟ್ರಿಕ್ ವಾಹನ ಮಾದರಿಯಾಗಿರುವ ಇನ್​ ಗೊ ಫ್ಲೀ  2.0 ದ್ವಿಚಕ್ರ ವಾಹನವನ್ನು  ಬಿಡುಗಡೆ ಮಾಡಿದೆ. ಇದರ ಬೆಲೆ 62,000 ರೂಪಾಯಿ.  ಆರಾಮದಾಯಕ ಪ್ರಯಾಣದ ಮೇಲೆ ಗಮನ ಕೇಂದ್ರೀಕರಿಸಿ ಹೊಸ ದ್ವಿಚಕ್ರ ವಾಹವನ್ನು  ವಿನ್ಯಾಸಗೊಳಿಸಲಾಗಿದೆ.
 
ಇನ್​ಗೊ ಫ್ಲೀ 2.0 ನ ಉನ್ನತ-ಕಾರ್ಯಕ್ಷಮತೆಯ ಅದರ ಉತ್ಕೃಷ್ಟ ದರ್ಜೆಯ ವೈಶಿಷ್ಟ್ಯವಾಗಿದೆ. ವಿಶೇಷ ಅಂದರೆ ಇದಕ್ಕೆ ಯಾವುದೇ ನಿರ್ವಹಣೆ ವೆಚ್ಚವಿಲ್ಲ.  ತನ್ನ ವರ್ಗದಲ್ಲಿ ಅತಿ ಹೆಚ್ಚು ಲೋಡ್ ಹೊರುವ ಸಾಮರ್ಥ್ಯವನ್ನು ಹೊಂದಿರುವ ಇನ್​ಗೊ ಫ್ಲೀನಲ್ಲಿ 25 ಕೆ.ಜಿ ಕ್ಯಾರಿಯರ್​ನಲ್ಲಿ ಮತ್ತು ಫುಟ್ ಬೋರ್ಡ್ ನಲ್ಲಿ 50 ಕೆ.ಜಿ ಸಾಗಿಸಲು ಸಾಧ್ಯವಿದೆ. ಐಒಟಿ (Internet of Things) ಮತ್ತು ಟೆಲಿಮ್ಯಾಟಿಕ್ಸ್ ವೈಶಿಷ್ಟ್ಯಗಳಿಂದಾಗಿ ಸಾಫ್ಟ್ವೇರ್ ಸೂಟ್ ಮೂಲಕ ರಿಯಲ್ ಟೈಮ್​ ಟ್ರ್ಯಾಂಕಿಂಗ್​, ರಿಮೋಟ್ ಲಾಕಿಂಗ್, ಜಿಯೋ-ಫೆನ್ಸಿಂಗ್ ಮತ್ತು ಕಳ್ಳತನ ಎಚ್ಚರಿಕೆಗಳನ್ನು ನೀಡುತ್ತದೆ .ಹೆಚ್ಚುವರಿಯಾಗಿ, ವಾಹನವು ತನ್ನ ಲಿಥಿಯಂ-ಐಯಾನ್ ಬ್ಯಾಟರಿಯೊಂದಿಗೆ ಎಲ್ಲಿಯಾದರೂ ಚಾರ್ಜ್ ಮಾಡುವ ಅನುಕೂಲತೆಯನ್ನು ನೀಡುತ್ತದೆ, 4 ಗಂಟೆಗಳಿಗಿಂತ ಕಡಿಮೆ ಅವಧಿಯಲ್ಲಿ ತ್ವರಿತ ಚಾರ್ಜ್ ವ್ಯವಸ್ಥೆ ಇದರಲ್ಲಿದ್ದು, 2 ನಿಮಿಷಗಳಲ್ಲಿ ಸುಲಭವಾಗಿ ಸ್ವಾಪ್​ ಮಾಡುವುದಕ್ಕೂ ಸಾಧ್ಯವಿದೆ. ​

ನಾವ್‌ ಮಂಡ್ಯ ಗಂಡು... ಹೆಲ್ಮೆಟ್‌ ಧರಿಸೊಲ್ಲ ಎಂದೂ... ಪಟ್ಟುಹಿಡಿದ ಯುವಕರಿಗೆ ಲಾಠಿ ರುಚಿ ತೋರಿಸಿದ ಪೊಲೀಸರು

ವಾಹನದ ವೈಶಿಷ್ಟ್ಯಗಳು 
⦁ ಮೈಲೇಜ್ ರೇಂಜ್: 50 ಕಿ.ಮೀ
⦁ ಬ್ಯಾಟರಿ: 1kW, 48V, 23.2Ah
⦁ ಪೀಕ್ ಟಾರ್ಕ್: 65 ಎನ್ಎಂ
⦁ ಸಸ್ಪೆಂಷನ್: ಮುಂಭಾಗದಲ್ಲಿ 43 ಎಂಎಂ ಟೆಲಿಸ್ಕೋಪಿಕ್, ಹಿಂಭಾಗದಲ್ಲಿ ಹೆವಿ ಡ್ಯೂಟಿ ಶಾಕ್ ಗಳು
⦁ ಅಳತೆಗಳು: 1670 x 685 x 1200 ಮಿಮೀ
⦁ ಗರಿಷ್ಠ ವೇಗ: ಗಂಟೆಗೆ 25 ಕಿ.ಮೀ.
⦁ ಚಾರ್ಜರ್ & ಸಮಯ: 54.6V / 6A - 4 ಗಂಟೆಗಳು
⦁ ಚಕ್ರ ಗಾತ್ರ: 10"x3.00" (ಮುಂಭಾಗ ಮತ್ತು ಹಿಂಭಾಗ)
⦁ ಮ್ಯಾಕ್ಸ್ ಪೇಲೋಡ್: ಫುಟ್ ಬೋರ್ಡ್ ನಲ್ಲಿ 50 ಕೆ.ಜಿ, ಕ್ಯಾರಿಯರ್​ನಲ್ಲಿ  25 ಕೆ.ಜಿ
⦁ ಗ್ರೌಂಡ್ ಕ್ಲಿಯರೆನ್ಸ್: 149 ಎಂಎಂ
⦁ ಮೋಟರ್ & ಕಂಟ್ರೋಲರ್: 250W BLDC ಹಬ್ ಮೋಟರ್​
ಒಟ್ಟು ತೂಕ: 55 ಕೆಜಿ

ಇತರ ಕೆಲವು ಗಮನಾರ್ಹ ವೈಶಿಷ್ಟ್ಯಗಳಲ್ಲಿ ಸವಾರರು ತಮ್ಮ ಸವಾರಿ ಖುಷಿಯನ್ನು ಹಂಚಿಕೊಳ್ಳಲು ಎರಡು ಸೀಟ್​ಗಳ ಆಯ್ಕೆಯೂ ಸೇರಿದೆ. ಇನ್​ಗೊ ಫ್ಲೀ 2.0 10-ಇಂಚಿನ ಎಲ್ಸ್​ಡಿಯನ್ನು ನೀಡಿದ್ದು, ಇದರಲ್ಲಿ ಬ್ಯಾಟರಿ ಗೇಜ್ ಇದೆ. ಇದು ಪ್ರಯಾಣದ ಬಗ್ಗೆ ನೈಜ-ಸಮಯದ ಮಾಹಿತಿಯನ್ನು ಒದಗಿಸುತ್ತದೆ. ಸುಧಾರಿತ ಸಸ್ಪೆಂಷನ್ ವ್ಯವಸ್ಥೆಯು ವರ್ಧಿತ ಸವಾರಿ ಗುಣಮಟ್ಟ ಮತ್ತು ನಿರ್ವಹಣೆಯನ್ನು ಖಚಿತಪಡಿಸುತ್ತದೆ. 110 ಎಂಎಂ ಬ್ರೇಕ್ ಡಿಸ್ಕ್​ ಹೊಂದಿರುವ ಹೊಂದಿರುವ ಅಗಲವಾದ ಮುಂಭಾಗದ ಚಕ್ರಗಳು ಉತ್ತಮ ಸುರಕ್ಷತೆ ಒದಗಿಸುತ್ತದೆ. ಮುಂಭಾಗ ಮತ್ತು ಹಿಂಭಾಗದ ಟ್ಯೂಬ್ ಲೆಸ್ ಟೈರ್ ಗಳಿಳು ವಾಹನದ ಒಟ್ಟಾರೆ ಬಾಳಿಕೆ ದಕ್ಷತೆಯನ್ನು ಹೆಚ್ಚಿಸುತ್ತದೆ. 350 ಎಂಎಂ ಅಗಲದ ಅಲ್ಟ್ರಾ-ಕಂಫರ್ಟ್ ಸೀಟ್ ಅನ್ನು ದೀರ್ಘ ಸವಾರಿಗಳಿಗಾಗಿ ವಿನ್ಯಾಸಗೊಳಿಸಲಾಗಿದೆ. ಒಟ್ಟಿನಲ್ಲಿ ಸವಾರರ ಆರಾಮಕ್ಕೆ ಆದ್ಯತೆ ನೀಡಲಾಗಿದೆ.

5 ವರ್ಷದಿಂದ ಕೂಡಿಟ್ಟಿದ್ದ ಚಿಲ್ಲರೆ ನಾಣ್ಯ ಕೊಟ್ಟು ಸ್ಕೂಟರ್‌ ಖರೀದಿ ಕನಸು ನನಸು ಮಾಡ್ಕೊಂಡ ವ್ಯಾಪಾರಿ..!
 
ಮೇಲ್ವಿಚಾರಣೆ ಮತ್ತು ಟ್ರ್ಯಾಕಿಂಗ್ ಗಾಗಿ  24x7x365 ದಿನಗಳ ಸಂಪರ್ಕಿತ ವಾಹನ ಪ್ಲಾಟ್ ಫಾರ್ಮ್ ಅನ್ನು  ಈಗ ಎಲ್ಲಾ ವೇರಿಯೆಂಟ್​ಗಳಲ್ಲಿ ಸ್ಟ್ಯಾಂಡರ್ಡ್​ ಆಗಿ ನೀಡಲಾಗಿದೆ. ಇದು ಭದ್ರತೆಯನ್ನು ಹೆಚ್ಚಿಸುತ್ತದೆ. ಇನ್​ಗೊ ಫ್ಲೈ 2.0 ಹೊಸ ಸ್ಟೈಲಿಂಗ್ ಮತ್ತು ಗ್ರಾಫಿಕ್ಸ್ ಅನ್ನು ಸಹ ನೀಡಿದೆ, ಇದು ತಾಜಾ ಸೌಂದರ್ಯವನ್ನು ನೀಡುತ್ತದೆ. ಬ್ಯಾಟರಿ ಲೆವೆಲ್ ಇಂಡಿಕೇಷನ್ ಹೊಂದಿರುವ ಚಾರ್ಜರ್​ .  ಆಟೋ-ಹೋಲ್ಡ್ ಬ್ಯಾಟರಿ ಹುಡ್   ವಾಹನವನ್ನು ಬಳಕೆದಾರ ಸ್ನೇಹಿ ಮತ್ತು ವಾಸ್ತವಕ್ಕೆ ಹತ್ತಿರವಾಗಿಸಿದೆ.
 
ಸುರಕ್ಷಿತವಾಗಿ ಮತ್ತು ತಡೆರಹಿತವಾಗಿ ಪ್ರಯಾಣಿಸಲು ಸಹಾಯ ಮಾಡುವ ಪರಿಣಾಮಕಾರಿ ಮೈಕ್ರೋ-ಮೊಬಿಲಿಟಿ ಪರಿಹಾರವನ್ನು ನೀಡುವ ಉದ್ದೇಶದಿಂದ ಇನ್​ಗೊ ಸಂಸ್ಥೆಯನ್ನು ಸ್ಥಾಪಿಸಲಾಗಿದೆ. ಸಂಚಾರ ದಟ್ಟಣೆಯು ದೊಡ್ಡ ಸಮಸ್ಯೆಯ ಕೇಂದ್ರ ಬಿಂದುವಾಗಿರುವ  ನಗರಗಳಲ್ಲಿ  ಪ್ರಯಾಣದ ಮಾದರಿಯನ್ನು ಬದಲಾಯಿಸುವುದು ನಮ್ಮ ದೃಷ್ಟಿಕೋನವಾಗಿದೆ ಎಂದು ಕಂಪನಿ ಸಹ ಸಂಸ್ಥಾಪಕ ನಿಖಿಲ್ ಗೊನ್ಸಾಲ್ವಿಸ್ ಹೇಳಿದ್ದಾರೆ. 

Follow Us:
Download App:
  • android
  • ios