ಹಳಿಗೆ ಬಿದ್ದ ಮಗುವನ್ನು ರಕ್ಷಿಸಿದ ಮಯೂರ್‌ಗೆ ಜಾವಾ ಬೈಕ್ ಉಡುಗೊರೆ!
ಮಯೂರ್ ಶಿಲ್ಕೆ ಕಾರ್ಯಕ್ಕೆ ಇಡೀ ದೇಶವೇ ಸಲಾಂ ಹೇಳುತ್ತಿದೆ. ತನ್ನ ಪ್ರಾಣದ ಹಂಗು ತೊರೆದು ಮಗುವನ್ನೂ ಕಾಪಾಡಿ ತಾನೂ ಸಾವಿನ ದಡವೆಡಿಯಂದ ಪಾರಾದ ಮಯೂರ್ ಶಿಲ್ಕೆಗೆ ರೈಲ್ವೇ ಸಚಿವರು ಸೇರಿದಂತೆ ಇಡಿ ದೇಶವೇ ಅಭಿನಂದನೆ ಸಲ್ಲಿಸುತ್ತಿದೆ. ಇದೀಗ ಜಾವಾ ಮೋಟಾರ್‌ಸೈಕರ್ ನಿರ್ದೇಶಕ ಮಯೂರ್‌ಗೆ ಜಾವಾ ಬೈಕ್ ಉಡುಗೊರೆಯಾಗಿ ನೀಡಿದ್ದಾರೆ.
ಮುಂಬೈ(ಏ.21): ತನ್ನ ಪ್ರಾಣ ಲೆಕ್ಕಿಸಿದೇ, ಒಂದು ಕ್ಷಣ ತಡಮಾಡದೇ ಮಿಂಚಿನ ವೇಗದಲ್ಲಿ ಓಡಿ ಮಗುವನ್ನು ರಕ್ಷಿಸಿ, ತಾನೂ ಕೂಡ ಸಾವಿನ ದವಡೆಯಿಂದ ಪಾರಾದ ರೈಲು ಸಿಬ್ಬಂದಿ ಮಯೂರ್ ಶಿಲ್ಕೆ ನಿಜವಾದ ಹೀರೋ. ಮುಂಬೈನಲ್ಲಿ ಈ ಘಟನೆ ನಡೆದಿತ್ತು. ಮಯೂರ್ ಶಿಲ್ಕೆ ಕಾರ್ಯಕ್ಕೆ ದೇಶವೇ ಮೆಚ್ಚುಗೆ ವ್ಯಕ್ತಪಡಿಸಿತ್ತು. ರೈಲ್ವೇ ಇಲಾಖೆ 50,000 ರೂಪಾಯಿ ನಗದು ಬಹುಮಾನ ಕೂಡ ಘೋಷಿಸಿದೆ. ಇದೀಗ ದೇಶದ ಹೀರೋ ಮಯೂರ್ ಶಿಲ್ಕೆಗೆ ಜಾವಾ ಮೋಟಾರ್‌ಸೈಕಲ್ ನಿರ್ದೇಶಕ ಹೊಚ್ಚ ಹೊಸ ಜಾವಾ ಉಡುಗೊರೆ ನೀಡಿದ್ದಾರೆ.
ರೈಲು ಹಳಿಗೆ ಬಿದ್ದ ಮಗು ರಕ್ಷಿಸಿದ ರೈಲ್ವೇ ಸಿಬ್ಬಂದಿ: ಮೈ ಜುಮ್ಮೆನಿಸುವ ವಿಡಿಯೋ ವೈರಲ್!
ಜಾವಾ ಮೋಟಾರ್‌ಸೈಕಲ್ ಅನುಪಮ್ ತರೇಜಾ ಇದೀಗ ಮಯೂರ್ ಶಿಲ್ಕೆಗೆ ಜಾವಾ ಮೋಟಾರ್ ಬೈಕ್ ಉಡುಗೊರೆಯಾಗಿ ನೀಡಿದ್ದಾರೆ. ದೇಶದ ಹೀರೋ ಆಗಿರುವ ಮಯೂರ್ ಶಿಲ್ಕೆ ಇದೀಗ ಜಾವಾ ಹೀರೋ. ಹೀಗಾಗಿ ಅವರಿಗೆ ಬೈಕ್ ಉಡುಗೊರೆಯಾಗಿ ನೀಡುತ್ತಿರುವುದಾಗಿ ಘೋಷಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿದ್ದಾರೆ.
ರೈಲ್ವೇ ಸಿಬ್ಬಂದಿ ಮಯೂರ್ ಶೆಲ್ಕೆ ಅವರ ಧೈರ್ಯ ಜಾವಾ ಮೋಟಾರ್‌ಸೈಕಲ್ ಕುಟುಂಬವನ್ನು ವಿಸ್ಮಯಗೊಳಿಸಿದೆ. ಧೈರ್ಯದಿಂದ ಮುನ್ನಗ್ಗಿ ಮಗುವನ್ನು ಕಾಪಾಡಿದ ವಿಚಾರ ನಿಜಕ್ಕೂ ಶ್ಲಾಘನೀಯ. ಈ ಧೈರ್ಯಶಾಲಿ ವ್ಯಕ್ತಿ ಜಾವಾ ಹೀರೋಸ್ ಆಗಿ ಆಯ್ಕೆ ಮಾಡಿದ್ದೇವೆ. ಜಾವಾ ಹೀರೋಗೆ ನಾವು ಜಾವಾ ಬೈಕ್ ಉಡುಗೊರೆಯಾಗಿ ನೀಡಲು ಬಯಸುತ್ತೇವೆ ಎಂದು ಅನುಪಮ್ ತರೇಜಾ ಹೇಳಿದ್ದಾರೆ.
ತನ್ನ ಪ್ರಾಣ ಲೆಕ್ಕಿಸದೆ ಮಗುವನ್ನು ಕಾಪಾಡಿದ್ದ ಮಯೂರ್ ಶೇಲ್ಕೆಗೆ 50 ಸಾವಿರ ಬಹುಮಾನ..!
ಘಟನೆ ವಿವರ:
ದೃಷ್ಟಿ ಹೀನ ತಾಯಿ ಜೊತೆ ತಮ್ಮ ಮಗುವಿನ ಜೊತೆ ರೈಲ್ವೇ ಪ್ಲಾಟ್‌ಫಾರ್ಮ್‌ನಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಮಗು ಪ್ಲಾಟ್‌ಫಾರ್ಮ್‌ನಿಂದ ಹಳಿಗೆ ಬಿದ್ದಿದೆ. ಇತ್ತ ದೃಷ್ಟಿ ಇಲ್ಲದ ತಾಯಿಗೆ ಮಗು ಹಳಿ ಮೇಲೇ ಬಿದ್ದಿದೆ ಅನ್ನೋದು ಮಾತ್ರ ಗೊತ್ತಿದೆ. ಕೈಚಾಚಿ ಎತ್ತಲೂ ಆಗದ ಪರಿಸ್ಥಿತಿ. ಅದೇ ಹಳಿಗಳ ಮೇಲೆ ರೈಲು ಕೂಡ ಆಗಮಿಸಿದೆ. ಈ ವೇಳೆ ರೈಲು ಸಿಬ್ಬಂದಿ ಮಯೂರ್ ಶಿಲ್ಕೆ ಮಿಂಚಿನ ವೇಗದಲ್ಲಿ ಓಡಿ, ಮಗುವನ್ನು ರಕ್ಷಿಸಿ ತಾವೂ ಪ್ಲಾಟ್‌ಫಾರ್ಮ್ ಹತ್ತಿದ್ದಾರೆ.
ಒಂದು ಸೆಕೆಂಡ್ ವಿಳಂಬವಾದರೆ ಮಯೂರ್ ಶಿಲ್ಕೆ ಜೀವ ಅಪಾಯದಲ್ಲಿತ್ತು. 2 ಸೆಕೆಂಡ್ ಲೇಟ್ ಆದರೆ ಇಬ್ಬರ ಪ್ರಾಣವೂ ಅಪಾಯಲ್ಲಿತ್ತು. ಇತಂಹ ಪರಿಸ್ಥಿತಿಯಲ್ಲಿ ಮಯೂರ್ ಶಿಲ್ಕೆ ಮಗುವಿನ ಪ್ರಾಣ ರಕ್ಷಿಸಿದ್ದರು.