ಭಾರತದಲ್ಲಿ ಹೊಂಡಾ CB350RS ಬೈಕ್ ಡೆಲಿವರಿ ಆರಂಭ!
ಹೊಂಡಾ CB350RS ಬೈಕ್ ಭಾರತದಲ್ಲಿ ಡೆಲಿವರಿ ಆರಂಭಗೊಂಡಿದೆ. ಭಾರತದಲ್ಲೇ ನಿರ್ಮಾಣಗೊಂಡಿರುವ ಮೇಡ್ ಇನ್ ಇಂಡಿಯಾ ಬೈಕ್ ಇದಾಗಿದ್ದು, ಭಾರಿ ಬೇಡಿಕೆಯೂ ವ್ಯಕ್ತವಾಗಿದೆ.
ಗುರುಗ್ರಾಂ(ಮಾ.09): ಭಾರತದ ರಸ್ತೆಗಳ ಮೇಲೆ ಹೊಸ ಮೋಜಿನ ಸವಾರಿ ಪರಿಚಯಿಸಿರುವ ಹೋಂಡಾ ಮೋಟರ್‍ಸೈಕಲ್ ಆ್ಯಂಡ್ ಸ್ಕೂಟರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್, ಗ್ರಾಹಕರಿಗೆ ಹೊಚ್ಚ ಹೊಸದಾದ CB350RS ಬೈಕ್ ವಿತರಣೆ ಆರಂಭಿಸಿದೆ. ಫೆಬ್ರುವರಿ 16ರಂದು ಜಾಗತಿಕ ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದ CB350RS, ‘ಜಾಗತಿಕ ಪೇಟೆಗೆ ಭಾರತದಲ್ಲಿಯೇ ತಯಾರಿಸಿದ’ ಮಧ್ಯಮ ಗಾತ್ರದ ಸಿಬಿ ಕುಟುಂಬದ ಬೈಕ್ ಇದಾಗಿದೆ.
ಬೆಂಗಳೂರಿನಲ್ಲಿ ಹೊಂಡಾ ಬಿಗ್‌ವಿಂಗ್ ಶೋ ರೂಂ ಉದ್ಘಾಟನೆ!.
ಸಿಬಿ ಬ್ರ್ಯಾಂಡ್‍ನ ನಿಜವಾದ ಪರಂಪರೆ ಪ್ರದರ್ಶಿಸುವ CB350RS ಬೃಹತ್, ಆಕ್ರಮಣಕಾರಿ ಶೈಲಿಯ ವಿನ್ಯಾಸ ಹೊಂದಿದ್ದು, ಅತ್ಯಾಧುನಿಕ ನಗರ ಶೈಲಿಗೆ ಸೂಕ್ತವಾಗಿ ಹೊಂದಿಕೊಳ್ಳುತ್ತಿದೆ. ಅದು ಸಾಗಿದ ಪ್ರತಿಯೊಂದು ಬೀದಿಯಲ್ಲಿ ತನ್ನದೇ ಆದ ಪ್ರಭಾವಳಿ ಬೀರಲಿದೆ.
ಹೊಂಡಾ CB350RS ರೇಡಿಯಂಟ್ ರೆಡ್ ಮೆಟ್ಯಾಲಿಕ್ ಬೈಕ್ ಬೆಲೆ 1.96 ಲಕ್ಷ ರೂಪಾಯಿ (ಎಕ್ಸ್ ಶೋ ರೂಂ) ಇನ್ನು ಬ್ಲ್ಯಾಕ್ ವಿತ್ ಪರ್ಲ್ ಸ್ಪೋಟ್ರ್ಸ್ ಯೆಲ್ಲೊ ಬೈಕ್ ಬೆಲೆ 1.98 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ).
ದೇಶದಲ್ಲಿನ ಯುವ ಉತ್ಸಾಹಿಗಳಿಂದ CB350RS ದೊರೆತಿರುವ ನಿರೀಕ್ಷೆ ಮೀರಿದ ಸ್ಪಂದನೆಯಿಂದ ನಮಗೆ ತುಂಬ ಖುಷಿಯಾಗಿದೆ. ರಸ್ತೆ ಮೇಲೆ ತೇಲುವ ಪರಿಕಲ್ಪನೆ ಆಧರಿಸಿ ತಯಾರಿಸಿರುವ ಈ ಮೋಟರ್‍ಸೈಕಲ್, ರಸ್ತೆ ಮೇಲೆ ಸಾಗುವಾಗ ಅಲ್ಟ್ರಾ ನುಣುಪಿನ ಅನುಭವ ನೀಡಲಿದೆ. ಸವಾರನಿಗೆ ತೇಲಿ ಹೋಗುವ ಮತ್ತು ಆರಾಮದಾಯಕ ಅನುಭವ ಒದಗಿಸಲಿದೆ. ಅದರ ಅತ್ಯಾಧುನಿಕ ನಗರ ಶೈಲಿ ಮತ್ತು ಸಮರ್ಥ ಸ್ವರೂಪದ ಸೌಲಭ್ಯಗಳಿಂದಾಗಿ ಅಃ350ಖS ಎಲ್ಲ ಸವಾರರಿಗೆ ಸನ್ನದ್ಧರಾಗಿರಿ ಮತ್ತು ‘ಲೈವ್ ಯುವರ್ ಸ್ಟೋರಿ’ ಎಂದು ಆಹ್ವಾನ ನೀಡುವುದು ಎಂದು ಹೋಂಡಾ ಮೋಟರ್ ಸೈಕಲ್ ಆ್ಯಂಡ್ ಸ್ಕೂಟರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‍ನ ಮಾರಾಟ ಮತ್ತು ಮಾರುಕಟ್ಟೆ ನಿರ್ದೇಶಕ ಯದ್ವಿಂದರ್ ಸಿಂಗ್ ಗುಲೇರಿಯಾ ಹೇಳಿದ್ದಾರೆ.