ಬೆಂಗಳೂರು(ಮಾ.01):  ದುಬಾರಿ ಬೆಲೆಯ ದೊಡ್ಡ ಬೈಕ್‍ಗಳ ಮಾರಾಟಕ್ಕೆ ಮೀಸಲಾಗಿರುವ ಹೋಂಡಾ ಬಿಗ್‍ವಿಂಗ್‍ನ (Honda Bigwing) ಬೆಂಗಳೂರು ಷೋರೂಂ ಉದ್ಘಾಟನೆಗೊಂಡಿದೆ. ಈ ಮೂಲಕ ಹೋಂಡಾ ಮೋಟರ್‍ಸೈಕಲ್ ಆ್ಯಂಡ್ ಸ್ಕೂಟರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ (ಎಚ್‍ಎಂಎಸ್‍ಐ), ಪ್ರೀಮಿಯಂ ಬೈಕ್ ಸವಾರರ ಉತ್ಸಾಹ ಹೆಚ್ಚಿಸಿದೆ. 

ಭಾರತದಲ್ಲಿ ಹೊಂಡಾ CB350RS ಬೈಕ್ ಬಿಡುಗಡೆ; ಬೆಲೆ 1.96 ಲಕ್ಷ ರೂ!

ಬೆಂಗಳೂರಿನಲ್ಲಿ ಬಿಗ್‍ವಿಂಗ್ ಉದ್ಘಾಟಿಸಿದ ಹೋಂಡಾ ಮೋಟರ್‍ಸೈಕಲ್ ಆ್ಯಂಡ್ ಸ್ಕೂಟರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‍ನ  ಮಾರಾಟ ಮತ್ತು ಮಾರುಕಟ್ಟೆ ವಿಭಾಗದ ನಿರ್ದೇಶಕ ಯದ್ವಿಂದರ್ ಸಿಂಗ್ ಗುಲೇರಿಯಾ ಅವರು, ‘ನಿಜವಾಗಿಯೂ ವಿಭಿನ್ನ ಬಗೆಯ ತನ್ಮಯಗೊಳಿಸುವ ಅನುಭವ ಒದಗಿಸುವ ಹೋಂಡಾ ಬಿಗ್‍ವಿಂಗ್ ಸೌಲಭ್ಯವನ್ನು (ಹೋಂಡಾದ ಪ್ರೀಮಿಯಂ ಮೋಟರ್ ಸೈಕಲ್‍ಗಳ ಪ್ರತ್ಯೇಕ ಮಾರಾಟ ಜಾಲ) ಗ್ರಾಹಕರಿಗೆ ಹತ್ತಿರದಲ್ಲಿ ವಿಸ್ತರಿಸಲು ನಾವು ಹೆಚ್ಚು ಗಮನ ನೀಡುತ್ತಿದ್ದೇವೆ. ಇಂದು ನಾವು ಬೆಂಗಳೂರಿನಲ್ಲಿ ಬಿಗ್‍ವಿಂಗ್ ಉದ್ಘಾಟಿಸುತ್ತಿರುವುದಕ್ಕೆ ನಮಗೆ ಸಂತಸವಾಗುತ್ತಿದೆ.  ಈ ಹೊಸ ಪ್ರೀಮಿಯಂ ಮಾರಾಟ ಮಳಿಗೆ ಮೂಲಕ, ಹೋಂಡಾದ ಮೋಜಿನ ಮೋಟರ್‍ಸೈಕಲ್ ಸವಾರಿಯನ್ನು ಗ್ರಾಹಕರ ಸಮೀಪಕ್ಕೆ ತೆಗೆದುಕೊಂಡು ಹೋಗಿ   ನಮ್ಮ ಮಧ್ಯಮ ಗಾತ್ರದ ಪ್ರೀಮಿಯಂ ಮೋಟರ್‍ಸೈಕಲ್‍ಗಳ ಸರಣಿ ಪರಿಚಯಿಸುವ ಗುರಿ ಹೊಂದಿದ್ದೇವೆ’ ಎಂದು ಹೇಳಿದ್ದಾರೆ.

ಭಾರತದಲ್ಲಿ 2021 ಆಫ್ರಿಕಾ ಟ್ವಿನ್ ಅಡ್ವೆಂಚರ್ ಹೊಂಡಾ ಸ್ಪೋರ್ಟ್ಸ್ ಬೈಕ್ ಲಾಂಚ್!

ಇಲ್ಲಿ ಗಮನಿಸಬೇಕಾದ ಇನ್ನೊಂದು ಸಂಗತಿ ಏನೆಂದರೆ, ಹೋಂಡಾ 2ವ್ಹೀಲರ್ಸ್ ಇಂಡಿಯಾ, ಕಳೆದ ವರ್ಷ ಗುರುಗ್ರಾಮ್‍ನಲ್ಲಿ ಬಿಗ್‍ವಿಂಗ್ ಟಾಪ್‍ಲೈನ್ ಉದ್ಘಾಟಿಸುವುದರ ಮೂಲಕ ತನ್ನ ಪ್ರೀಮಿಯಂ ಮೋಟರ್‍ಸೈಕಲ್‍ಗಳ ಮಾರಾಟ ಜಾಲಕ್ಕೆ ಭದ್ರ ಅಡಿಪಾಯ ಹಾಕಿತ್ತು. ಈ ಪ್ರಯತ್ನ ಮುಂದುವರೆಸಲಾಗಿದ್ದು,  ಈ ಹಣಕಾಸು ವರ್ಷದ ಅಂತ್ಯದ ವೇಳೆಗೆ ದೇಶದಾದ್ಯಂತ 50 ಬಿಗ್‍ವಿಂಗ್ ಮಾರಾಟ ಮಳಿಗೆಗಳನ್ನು ಆರಂಭಿಸಲಿದೆ.

ವೈವಿಧ್ಯಮಯ ಮೋಟರ್‍ಸೈಕಲ್‍ಗಳು
ಹೋಂಡಾದ ಪ್ರೀಮಿಯಂ ಮೋಟರ್‍ಸೈಕಲ್ ರಿಟೇಲ್ ಮಾದರಿಯು, ಮಹಾನಗರಗಳಲ್ಲಿ ಬಿಗ್‍ವಿಂಗ್ ಟಾಪ್‍ಲೈನ್  ಮತ್ತು ಬೇಡಿಕೆ ಹೆಚ್ಚಿಗೆ ಇರುವ ಇತರ ಕೇಂದ್ರಗಳಲ್ಲಿ ಬಿಗ್‍ವಿಂಗ್ ಒಳಗೊಂಡಿರಲಿದೆ. ಹೋಂಡಾದ ಪ್ರೀಮಿಯಂ ಮೋಟರ್ ಸೈಕಲ್‍ಗಳ ಸಂಪೂರ್ಣ ಶ್ರೇಣಿಯು  ಹೋಂಡಾ ಬಿಗ್‍ವಿಂಗ್ ಟಾಪ್‍ಲೈನ್‍ನಲ್ಲಿ ಇರಲಿದೆ. ಹೊಸದಾಗಿ ಮಾರುಕಟ್ಟೆಗೆ ಪರಿಚಯಿಸಿರುವ  CB350 RS ಸೇರಿದಂತೆ H'ness 350, 2020 CBR1000RR ಸೇರಿದಂತೆ ದುಬಾರಿ ಬೈಕ್  ಮತ್ತು ಸಾಹಸ ಪಯಣಕ್ಕೆ 2021 ಆಫ್ರಿಕಾ ಟ್ವಿನ್ ಅಡ್ವೆಂಚರ್ ಸ್ಪೋಟ್ರ್ಸ್ ಇಲ್ಲಿ ಖರೀದಿಗೆ ಲಭ್ಯವಿದೆ.  

ಪ್ರೀಮಿಯಂ ಅನುಭವ
ಗ್‍ವಿಂಗ್‍ನಲ್ಲಿ ಪ್ರದರ್ಶನಕ್ಕೆ ಇರಿಸಲಾಗುವ ಮೋಟರ್‍ಸೈಕಲ್‍ಗಳು ತಮ್ಮ ಸಂಪೂರ್ಣ ವೈಭವ ಪ್ರದರ್ಶಿಸಲಿವೆ. ಮೋಟರ್‍ಸೈಕಲ್ ಮತ್ತು ಪೂರಕ ಪರಿಕರಗಳಿಗೆ ಸಂಬಂಧಿಸಿದಂತೆ ಗ್ರಾಹಕರ ಅನುಮಾನ ಹಾಗೂ ಪ್ರಶ್ನೆಗಳಿಗೆ ಉತ್ತಮ ತರಬೇತಿ ಪಡೆದ ಸಂಪೂರ್ಣ ತಿಳಿವಳಿಕೆ ಹೊಂದಿದ ವೃತ್ತಿಪರರು ಇಲ್ಲಿ ಅಗತ್ಯ ಮಾಹಿತಿ ನೀಡಲಿದ್ದಾರೆ.

ಸ್ಪರ್ಧಾತ್ಮಕ ಬೆಲೆಯ ಈ ಪೂರಕ ಪರಿಕರಗಳ ತಯಾರಿಕೆಯಲ್ಲಿ ಕಟ್ಟುನಿಟ್ಟಾಗಿ ಗುಣಮಟ್ಟದ ನಿಯಮಗಳನ್ನು ಪಾಲಿಸಲಾಗಿದೆ. ಜತೆಗೆ ಇವುಗಳು ಹೋಂಡಾದ ಪೂರ್ವ ನಿರ್ಧರಿತ ಜಾಗತಿಕ ಗುಣಮಟ್ಟದ ಮಾನದಂಡಗಳಿಗೆ ಅನುಗುಣವಾಗಿವೆ. ಈ ಪೂರಕ ಪರಿಕರಗಳು Hness CB350 ಡಿಎಲ್‍ಎಕ್ಸ್ ಮತ್ತು ಡಿಎಲ್‍ಎಕ್ಸ್ ಪ್ರೊಗೆ ದೊರೆಯಲಿವೆ.