ಅತ್ಯಾಕರ್ಷಕ ವಿನ್ಯಾಸದ 125ಸಿಸಿ ಹೋಂಡಾ ಮಂಕಿ ಬೈಕ್ ಬಿಡುಗಡೆ, 70ಕಿಮಿ ಮೈಲೇಜ್!

ಹೋಂಡಾ ಮೋಟಾರ್‌ಸೈಕಲ್ ಇದೀಗ ಹೋಂಡಾ ಮಂಕಿ ಸ್ಪೆಷಲ್ ಎಡಿಶನ್ ಬೈಕ್ ಬಿಡುಗಡೆ ಮಾಡಿದೆ. ಮೊದಲ ನೋಟದಲ್ಲೇ ಪ್ರಮುಖ ಆಕರ್ಷಣೆಯಾಗಿರುವ ನೂತನ ಬೈಕ್ 125ಸಿಸಿ ಎಂಜಿನ್ ಹೊಂದಿದೆ. ಲೈಟ್ ವೈಟ್ ಬೈಕ್ ಇದಾಗಿದೆ. ಆದರೆ ನೋಟದಲ್ಲಿ ಬುಲೆಟ್ ಮೀರಿಸುವಂತಿದೆ.

Honda Motorcycle launch Monkey special edition 125cc bike in Thailand ckm

ಬ್ಯಾಂಗ್‌ಕಾಕ್(ಜು.24) ಹೋಂಡಾ ಈಗಾಗಲೇ ಹಲವು ಬೈಕ್ ಹಾಗೂ ಸ್ಕೂಟರ್ ಮೂಲಕ ಗ್ರಾಹಕರ ಮನಗೆದಿದೆ. ಲೈಟ್ ವೈಟ್ ದ್ವಿಚಕ್ರವಾಹನದಿಂದ ಹಿಡಿದು, 400 ಸಿಸಿ ಪ್ಲಸ್ ಬೈಕ್‌ ಕೂಡ ಭಾರಿ ಬೇಡಿಕೆ ಪಡೆದುಕೊಂಡಿದೆ. ಇದೀಗ ಹೋಂಡಾ ಹೊಚ್ಚ ಹೊಸ ಬೈಕ್ ಬಿಡುಗಡೆ ಮಾಡಿದೆ. ಹೋಂಡಾ ಮಂಕಿ ಹೆಸರಿನ ಈ ಬೈಕ್ ಭಾರಿ ಸಂಚಲನ ಸೃಷ್ಟಿಸಿದೆ. 125ಸಿಸಿಯ ಲೈಟ್ ವೈಟ್ ಬೈಕ್ ಇದಾಗಿದೆ. ಆದರೆ ನೋಟದಲ್ಲಿ ಈ ಬೈಕ್ ಬುಲೆಟ್ ಬೈಕ್ ಮೀರಿಸುವಂತಿದೆ. ಥಾಯ್‌ಲೆಂಡ್‌ನ ಹೋಂಡಾ ಈ ಸ್ಪೆಷಲ್ ಎಡಿಶನ್ ಬೈಕ್ ಬಿಡುಗಡೆ ಮಾಡಿದೆ. 

ನೂತನ ಹೋಂಡಾ ಮಂಕಿ ಸ್ಪೆಷಲ್ ಎಡಿಶನ್ ಬೈಕ್‌ಗೆ 108,900 ಥಾಯ್‌ಲೆಂಡ್ ಬಾಟ್. ಭಾರತೀಯ ರೂಪಾಯಿಗಳಲ್ಲಿ ಪರಿವರ್ತಿಸಿದರೆ ಸರಿಸುಮಾರು2.59 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). 125ಸಿಸಿ ಬೈಕ್‌ಗೆ ಭಾರತದ ಬೆಲೆಯಲ್ಲಿ ಹೇಳುವುದಾದರೆ ಇದು ದುಬಾರಿ. ಕಾರಣ ಈ ಬೆಲೆಯಲ್ಲಿ 300 ಪ್ಲಸ್ ಸಿಸಿ ಬೈಕ್‌ಗಳು ಭಾರತದಲ್ಲಿ ಲಭ್ಯವಿದೆ. ಹೋಂಡಾ ಮಂಕಿ ಬೈಕ್ 125ಸಿಸಿ, 2 ವೇಲ್ವ್, ಏರ್ ‌ಕೂಲ್ಡ್ ಮೋಟಾರ್ ಎಂಜಿನ್ ಹೊಂದಿದೆ. 9.2bhp ಪವರ್(6,750rpm) ಹಾಗೂ 11Nm ಪೀಕ್ ಟಾರ್ಕ್(5,500rpm) ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. 5 ಸ್ಪೀಡ್ ಗೇರ್‌ಬಾಕ್ಸ್ ಹೊಂದಿರುವ ನೂತನ ಮಂಕಿ ಬೈಕ್‌ಗೆ ಬಾಬರ್ ಲುಕ್ ನೀಡಲಾಗಿದೆ.

ಕಡಿಮೆ ಬೆಲೆಯ ಹೊಚ್ಚ ಹೊಸ ಹೋಂಡಾ ಶೈನ್ 125 ಬೈಕ್ ಬಿಡುಗಡೆ, 10 ವರ್ಷ ವಾರೆಂಟಿ ಪ್ಯಾಕೇಜ್!

ಈ ಬೈಕ್‌ನ ಪ್ರಮುಖ ಆಕರ್ಷಣೆ ಮೈಲೇಜ್. ಒಂದು ಲೀಟರ್ ಪೆಟ್ರೋಲ್‌ಗೆ 70 ಕಿಲೋಮೀಟರ್ ಮೈಲೇಜ್ ನೀಡಲಿದೆ. ಇದರ ಇಂಧನ ಸಾಮರ್ಥ್ಯ 5.6 ಲೀಟರ್. ಇನ್ನುಎಬಿಎಸ್ ಬ್ರೇಕ್, 12 ಇಂಚಿನ್ ವ್ಹೀಲ್, ಇನ್ನು ಬೈಕ್‌ ಒಟ್ಟು 104 ಕೆಜಿ ತೂಕ ಹೊಂದಿದೆ. ಕಡಿಮೆ ತೂಕ, ಸುಲಭವಾಗಿ ರೈಡಿಂಗ್ ಮಾಡಬಲ್ಲ ಅನುಕೂಲತೆ ಈ ಬೈಕ್‌ನಲ್ಲಿದೆ.

ಸದ್ಯ ಈ ಬೈಕ್ ಥಾಯ್‌ಲೆಂಡ್‌ನಲ್ಲಿ ಮಾತ್ರ ಲಭ್ಯವಿದೆ. ಭಾರತದಲ್ಲಿ ಹೋಂಡಾ ಮಂಕಿ ಬೈಕ್ ಬಿಡುಗಡೆಯಾಗುವ ಕುರಿತು ಯಾವುದೇ ಮಾಹಿತಿ ಇಲ್ಲ. ಇಷ್ಟೇ ಅಲ್ಲ ದುಬಾರಿ ಬೆಲೆ ಹಾಗೂ ಕಡಿಮೆ ಸಿಸಿ ಭಾರತದಲ್ಲಿ ವರ್ಕೌಟ್ ಆಗುವ ಸಾಧ್ಯತೆಗಳು ಕಡಿಮೆ. ಕಾರಣ ರಾಯಲ್‌ ಎನ್‌ಫೀಲ್ಡ್ 350, ಜಾವಾ ಸೇರಿದಂತೆ 350 ಸಿಸಿ ಬೈಕ್‌ಗಳು ಇದೇ ಆಸುಪಾಸಿನ ಬೆಲೆಯಲ್ಲಿ ಲಭ್ಯವಿದೆ.

ಹೊಸ ಅವತಾರದಲ್ಲಿ ಹೋಂಡಾ ಡಿಯೋ ಸ್ಕೂಟರ್ ಬಿಡುಗಡೆ, ಬೆಲೆ 70 ಸಾವಿರ ಮಾತ್ರ!

ಭಾರತದಲ್ಲಿ ಹೋಂಡಾ ಮೋಟಾರ್‌ಸೈಕಲ್ ಅತ್ಯಂತ ಜನಪ್ರಿಯವಾಗಿದೆ. ಹೋಂಡಾ ಸ್ಕೂಟರ್ ಹಾಗೂ ಬೈಕ್ ಬಹುಬೇಡಿಕೆ ಪಡೆದುಕೊಂಡಿದೆ. ಹೋಂಡಾ ಆ್ಯಕ್ಟಿವಾ, ಡಿಯೋ, ಹೋಂಡಾ ಶೈನ್, ಹೋಂಡಾ ಹೈನೆಸ್ ಸೇರಿದಂತೆ ಹಲವು ಮಾದರಿ ಬೈಕ್‌ಗಳು ಭಾರತದಲ್ಲಿ ಲಭ್ಯವಿದೆ. ಇತ್ತೀಚೆಗೆ ಹೋಂಡಾ ಕಂಪನಿ ಹೊಸ ಕಾಲಕ್ಕೆ ಸಲ್ಲುವ ಹಾಗೆ ಹೊಸ ಹೋಂಡಾ ಡಿಯೋ 125 ಸ್ಕೂಟರನ್ನು ಬಿಡುಗಡೆ ಮಾಡಿತ್ತು. ಹೋಂಡಾ ಸ್ಮಾರ್ಟ್ ಕೀ, ಸಂಪೂರ್ಣ ಡಿಜಿಟಲ್ ಮೀಟರ್, ಸೈಡ್‌ಸ್ಟ್ಯಾಂಡ್ ಇಂಡಿಕೇಟರ್‌ ಇತ್ಯಾದಿ ಫೀಚರ್‌ಗಳಿರುವ ಈ ಸ್ಕೂಟರ್‌ 10 ವರ್ಷ ವಾರಂಟಿಯೊಂದಿಗೆ ಬರುತ್ತದೆ. ಆರಂಭಿಕ ಬೆಲೆ 83,400 ರೂಪಾಯಿ(ಎಕ್ಸ್ ಶೋ ರೂಂ).

Latest Videos
Follow Us:
Download App:
  • android
  • ios