ಭಾರತದಲ್ಲಿ ಹೊಂಡಾ CB350RS ಬೈಕ್ ಬಿಡುಗಡೆ; ಬೆಲೆ 1.96 ಲಕ್ಷ ರೂ!
ಅತ್ಯಾಧುನಿಕ ಡಿಜಿಟಲ್ ಅನಲಾಗ್ ಮೀಟರ್, ಹೋಂಡಾ ಸೆಲೆಕ್ಟೆಬಲ್ ಟಾರ್ಕ್ ಕಂಟ್ರೋಲ್, ಅಸಿಸ್ಟ್ ಆ್ಯಂಡ್ ಸ್ಲಿಪರ್ ಕ್ಲಚ್, 350ಸಿಸಿ ಎಂಜಿನ್, ಪಿಜಿಎಂ-ಎಫ್‍ಐ ತಂತ್ರಜ್ಞಾನದೊಂದಿಗೆ ನೂತನ ಹೊಂಡಾ CB350RS ಬೈಕ್ ಬಿಡುಗಡೆಯಾಗಿದೆ. ನೂತನ ಬೈಕ್ ವಿಶೇಷತೆ ಹಾಗೂ ಇತರ ಮಾಹಿತಿ ಇಲ್ಲಿದೆ.
ಬೆಂಗಳೂರು(ಫೆ.16) ಮಧ್ಯಮ ಗಾತ್ರದ 350-500 ಸಿಸಿ ಮೋಟರ್‍ಸೈಕಲ್ ವಿಭಾಗವನ್ನು ಪುನರುಜ್ಜೀವನಗೊಳಿಸಿರುವ ಹೋಂಡಾ ಮೋಟರ್‍ಸೈಕಲ್ ಆ್ಯಂಡ್ ಸ್ಕೂಟರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್, ಹೊಸ ಮೋಟರ್‍ಸೈಕಲ್ CB350RS ಬೈಕ್ ಬಿಡುಗಡೆ ಮಾಡಿದೆ.
ಸಮಕಾಲೀನ ಆಕರ್ಷಕ ಶೈಲಿ ಮತ್ತು ಶ್ರೇಷ್ಠ ನಿಲುವಿನ ಸಂಗಮವಾಗಿರುವ CB350RS ಸಿಬಿ ಕುಟುಂಬದ ಎರಡನೇ ಹೊಸ ಮೋಟರ್‍ಸೈಕಲ್ ಆಗಿದ್ದು, ಇದನ್ನು ‘ಜಾಗತಿಕ ಮಾರುಕಟ್ಟೆಗೆ ಭಾರತದಲ್ಲಿಯೇ ತಯಾರಿಸಲಾಗಿದೆ. CB350RS ಇದರ ಬೆಲೆ ಆಕರ್ಷಕವಾಗಿದ್ದು 1,96,000 ರೂಪಾಯಿ (ಎಕ್ಸ್ ಶೋ ರೂಂ).
ಭಾರತದಲ್ಲಿ 2021 ಆಫ್ರಿಕಾ ಟ್ವಿನ್ ಅಡ್ವೆಂಚರ್ ಹೊಂಡಾ ಸ್ಪೋರ್ಟ್ಸ್ ಬೈಕ್ ಲಾಂಚ್!
ಆಕರ್ಷಕ ಶೈಲಿ
ಹೊಸ CB350RS ಸದೃಢ, ಗಮನ ಸೆಳೆಯುವ ವಿನ್ಯಾಸ ಹೊಂದಿದ್ದು, ಆಧುನಿಕ ನಗರ ಜೀವನ ಶೈಲಿಗೆ ಸೂಕ್ತವಾಗಿ ಹೊಂದಾಣಿಕೆಯಾಗಲಿದೆ. ಇದು ಪ್ರತಿಯೊಂದು ರಸ್ತೆ, ಬೀದಿಯಲ್ಲಿ ಠೀವಿಯಿಂದ ಸಾಗಲಿದೆ.
ದೊಡ್ಡ ಗಾತ್ರದ ಇಂಧನ ಟ್ಯಾಂಕ್ ಮೇಲೆ ಹೊಳೆಯುವ ದಿಟ್ಟ ಸ್ವರೂಪದ ಹೋಂಡಾ ಲಾಂಛನವು ಪರಂಪರೆಯಿಂದ ಪ್ರೇರಣೆ ಪಡೆದಿರುವ ನೋಟವನ್ನು ತಪ್ಪಿಸಿಕೊಳ್ಳುವುದು ಕಷ್ಟ.
ಹೋಂಡಾ ಗ್ರಾಜಿಯಾ ಸ್ಪೋರ್ಟ್ಸ್ ಎಡಿಶನ್ ಬಿಡುಗಡೆ; ಆಕರ್ಷಕ ವಿನ್ಯಾಸ ಹಾಗೂ ಬೆಲೆ!
ಮಿಶ್ರ ಲೋಹದ ಚಕ್ರಗಳು ಬೈಕ್ ನಿರ್ವಹಣೆ ಮತ್ತು ಕಸರತ್ತನ್ನು ಸುಗಮ ಹಾಗೂ ಹಗುರಗೊಳಿಸುವುದರ ಜತೆಗೆ ಭಿನ್ನವಾದ ಆಧುನಿಕ ರೋಡ್‍ಸ್ಟರ್ ನೋಟ ಒದಗಿಸಲಿದೆ. CB350RS ಅನ್ನು ಯಾವುದೇ ಕೋನದಿಂದ ನೋಡಿದರೂ ಆಕರ್ಷಕವಾಗಿ ಎದ್ದುಕಾಣುವ ಬಗೆಯಲ್ಲಿ ವಿನ್ಯಾಸಗೊಳಿಸಲಾಗಿದೆ. ದುಂಡನೆ ಆಕಾರದ ಎಲ್‍ಇಡಿ ಹೆಡ್‍ಲ್ಯಾಂಪ್ ಜತೆಗೆ ಹಳೆಯ ಮತ್ತು ಹೊಸ ನೋಟದ ವಿಶಿಷ್ಟ ಉಂಗುರ ವಿನ್ಯಾಸವು ಎದ್ದು ಕಾಣುತ್ತದೆ. ಕಣ್ಣಿನ ಆಕಾರದ ಎಲ್‍ಇಡಿ ವಿಂಕರ್ಸ್ ಮತ್ತು ಸೀಟ್ ಕೆಳಭಾಗದ ನುಣುಪಾದ ಎಲ್‍ಇಡಿ ಟೇಲ್ ಲ್ಯಾಂಪ್, ಮೇಲ್ನೋಟಕ್ಕೆ ಕಾಣುವುದಕ್ಕಿಂತಲೂ ಹೆಚ್ಚು ಆಕರ್ಷಕವಾಗಿ ಕಾಣಿಸಲಿದೆ. ಲಘುವಾಗಿ ಕಪ್ಪು ಬಣ್ಣ ಹೊಗೆಯಾಡಿಸಿದಂತೆ ಕಾಣುವ ಮುಂಭಾಗ ಮತ್ತು ಹಿಂಭಾಗದಲ್ಲಿನ ರಕ್ಷಣೆಯು ಅಃ350ಖSಗೆ ಶಕ್ತಿಯುತ ನೋಟ ಒದಗಿಸುತ್ತದೆ. ಕ್ರೋಮಿಯಂ ಬಳಸಿದ ಬದಿಯಲ್ಲಿನ ಮಫ್ಲರ್‍ದ ಸ್ಮೋಕಿ ಬ್ಲ್ಯಾಕ್ ಫಿನಿಷ್ ಎದ್ದು ಕಾಣಿಸುತ್ತದೆ. ಮುಂಭಾಗದ ಸಸ್ಪೆನ್ಶನ್ ಫೋರ್ಕ್ ಬೂಟ್ಸ್, ಒರಟಾದ ನೋಟ ನೀಡುವುದಲ್ಲದೆ, ಸ್ಪೋರ್ಟಿಯಾಗಿ ಕಾಣುವ ಹಿಡಿಯುವ ಸರಳು (ಗ್ರ್ಯಾಬ್ ರೇಲ್) ಒಟ್ಟಾರೆಯಾಗಿ ಅಃ350ಖS ವಿಶಿಷ್ಟ ವಿನ್ಯಾಸಕ್ಕೆ ಪೂರಕವಾಗಿರಲಿದೆ.
20 ದಿನದಲ್ಲಿ ದಾಖಲೆ ಬರೆದ ಹೊಂಡಾ H’ness ಬೈಕ್!
ಸರಿಸಾಟಿ ಇಲ್ಲದ ಕಾರ್ಯಕ್ಷಮತೆ
CB350RSಯು ಗರಿಷ್ಠ 15.5 KW@5500 RPM ಶಕ್ತಿ ಹೊರಸೂಸುವ 350CC, ಏರ್ ಕೂಲ್ಡ್ 4-ಸ್ಟ್ರೋಕ್ OHCಸಿಂಗಲ್ ಸಿಲಿಂಡರ್ ಎಂಜಿನ್ ಹೊಂದಿದೆ. ಸುಧಾರಿತ PGM-FI ವ್ಯವಸ್ಥೆಯು ಆನ್‍ಬೋರ್ಡ್ ಸಂವೇದಕಗಳನ್ನು ಬಳಸಿಕೊಂಡು, ಸವಾರಿ ಪರಿಸ್ಥಿತಿಗೆ ಅನುಗುಣವಾಗಿ ಎಂಜಿನ್‍ಗೆ ಸಮರ್ಪಕ ರೀತಿಯಲ್ಲಿ ಇಂಧನ ಸರಬರಾಜನ್ನು ಖಚಿತಪಡಿಸಲಿದೆ. ಈ ಮೂಲಕ ದಕ್ಷ ರೀತಿಯಲ್ಲಿ ದಹನ ಮತ್ತು ಕಡಿಮೆ ಹೊಗೆ ಹೊರಸೂಸುವುದಕ್ಕೆ ಅನುವು ಮಾಡಿಕೊಡಲಿದೆ. ನಗರ ಪ್ರದೇಶಗಳಲ್ಲಿ ಪ್ರತಿ ದಿನ ಬಹುಬಗೆಯಲ್ಲಿ ಸುಲಲಿತವಾಗಿ ಮೋಟರ್‍ಸೈಕಲ್ ಚಲಾಯಿಸಲು 30 NM@3000 RPM ಮ್ಯಾಕ್ಸ್ ಟಾರ್ಕ್ ನೆರವಾಗಲಿದೆ.
ಆಫ್‍ಸೆಟ್ ಸಿಲಿಂಡರ್ ಪೊಸಿಷನ್ ಬಳಸುವ ಎಂಜಿನ್, ಜಾರುವ ಘರ್ಷಣೆ ಮತ್ತು ಬಿಡಿಭಾಗಗಳಲ್ಲಿನ ಅಸಮರೂಪತೆಯನ್ನು ತಗ್ಗಿಸಲು ನೆರವಾಗುತ್ತದೆ. ಸಂಪರ್ಕ ಕಲ್ಪಿಸುವ ಸಮರೂಪದಲ್ಲಿ ಇರದ ಕೊಳವೆಯು ದಹನದ ಸಂದರ್ಭದಲ್ಲಿ ಇಂಧನ ನಷ್ಟವು ಕಡಿಮೆ ಮಟ್ಟದಲ್ಲಿ ಇರಲು ನೆರವಾಗುತ್ತದೆ. ಕ್ರ್ಯಾಂಕ್‍ಕೇಸ್ ಮತ್ತು ಟ್ರಾನ್ಸ್‍ಮಿಷನ್ ಮಧ್ಯೆ ಗೋಡೆ ಹೊಂದಿರುವ ಕ್ಲೋಸ್ಡ್ ಕ್ರ್ಯಾಂಕ್‍ನೆಸ್ ಬಳಸುವುದರಿಂದ ಇಂಟರ್ನಲ್ ಫ್ರಿಕ್ಷನ್ ಕಾರಣಕ್ಕೆ ಆಗುವ ಇಂಧನ ನಷ್ಟದ ಪ್ರಮಾಣ ತಗ್ಗಿಸಲಿದೆ.
ಏರ್ ಕೂಲಿಂಗ್ ಸಿಸ್ಟಮ್, ಗರಿಷ್ಠ ದಟ್ಟನೆಯ ಗಾಳಿಯನ್ನು ಒಳಗೆ ತೆಗೆದುಕೊಳ್ಳುವುದರ ದಕ್ಷತೆ ಸುಧಾರಿಸಿ ಎಲ್ಲ ಆರ್‍ಪಿಎಂ ರೇಂಜ್‍ನಲ್ಲಿ ಅನುಕೂಲಕರ ದಹನ ಕ್ರಿಯೆ ಇರುವಂತೆ ನೋಡಿಕೊಳ್ಳಲಿದೆ. ಎಂಜಿನ್ನಿನ ಉಷ್ಣತೆಯು ಆದರ್ಶ ಮಟ್ಟದಲ್ಲಿ ಇರಲು ನೆರವಾಗಲಿದೆ. ಪಿಸ್ಟನ್ ಕೂಲಿಂಗ್ ಜೆಟ್, ಎಂಜಿನ್ನಿನ ಶಾಖದ ದಕ್ಷತೆಯು ಸುಧಾರಣೆಯಾಗಲು ನೆರವಾಗಿ ಇಂಧನ ದಕ್ಷತೆ ಸುಧಾರಿಸಲು ಕಾರಣವಾಗಲಿದೆ.
ಸಿಲಿಂಡರ್‍ನಲ್ಲಿನ ಮೇನ್ ಶಾಫ್ಟ್ ಕೊಎಕ್ಸಿಯಲ್ ಬ್ಯಾಲನ್ಸರ್, ಪ್ರೈಮರಿ ಮತ್ತು ಸೆಕೆಂಡರಿ ಕಂಪನಗಳನ್ನು ನಿವಾರಿಸಿ ಅಃ350ಖS ಯನ್ನು ಪರಿಪೂರ್ಣ ಸವಾರಿ ಸಂಗಾತಿಯನ್ನಾಗಿ ಮಾಡಿದೆ. CB350RS, 45 MMನಷ್ಟು ಇರುವ ಹೊಗೆ ಹೊರಸೂಸುವ ಕೊಳವೆಯ ತುದಿಭಾಗ ಹೊಂದಿದ್ದು ಮಫ್ಲರ್ ಸಾಮಥ್ರ್ಯದೊಂದಿಗೆ ಇದು ಎಂಜಿನ್ ಶಬ್ದವನ್ನು ಗಮನಾರ್ಹವಾಗಿ ತಗ್ಗಿಸಲು ನೆರವಾಗಲಿದೆ. ಚೇಂಬರ್‍ನಲ್ಲಿನ ಸಿಂಗಲ್ ಒನ್ ಚೇಂಬರ್ ರಚನೆಯು ಎಂಜಿನ್‍ಗೆ ಇಂಧನ ಹರಿವು ನಿಯಂತ್ರಿಸುವ ಸಾಧನವು ಅಗಾಧ ಪ್ರಮಾಣದಲ್ಲಿ ಹೀರಿ ಬಿಡುವುದಕ್ಕೆ ನೆರವಾಗಲಿದೆ. ಎಕ್ಸಾಸ್ಟ್ ಕೊಳವೆಗಳು ಶಾಖದ ತೀವ್ರತೆ ತಪ್ಪಿಸುವ ಎರಡು ಪದರುಗಳ ರಕ್ಷಣೆ ಹೊಂದಿದ್ದು, ಬಿಸಿಯಿಂದ ಬಣ್ಣ ಮಾಸುವುದನ್ನು ತಪ್ಪಿಸಿ, ದೀರ್ಘ ಸಮಯದವರೆಗೆ ತಮ್ಮ ಬಾಹ್ಯ ನೋಟದ ಆಕರ್ಷಣೆ ಉಳಿಸಿಕೊಳ್ಳಲಿವೆ.
ಅತ್ಯಾಧುನಿಕ ತಂತ್ರಜ್ಞಾನ
ಹೋಂಡಾದ ಅತ್ಯಂತ ಅತ್ಯಾಧುನಿಕ ತಂತ್ರಜ್ಞಾನ ಸೌಲಭ್ಯಗಳು ಅಃ350ಖSನ ಸವಾರರಿಗೆ ಹೆಮ್ಮೆಯಿಂದ ಹೇಳಿಕೊಳ್ಳಲು ಹೆಚ್ಚು ಕಾರಣಗಳನ್ನು ಒದಗಿಸುತ್ತದೆ.
ಈ ವಿಭಾಗದಲ್ಲಿ ಮೊದಲನೆಯದು/ ಅಸಿಸ್ಟ್ ಆ್ಯಂಡ್ ಸ್ಲಿಪ್ಪರ್ ಕ್ಲಚ್. ಇದು ಗೇರ್ ಬದಲಿಸುವುದನ್ನು ಸುಲಲಿತಗೊಳಿಸಲಿದೆ. ಕ್ಲಚ್ ಹಿಡಿಯುವುದರ ಆಯಾಸ ಕಡಿಮೆ ಮಾಡಲಿದ್ದು, ಪದೇ ಪದೇ ಕ್ಲಚ್ ಬದಲಿಸುವ ಸಂದರ್ಭದಲ್ಲಿ ಹೆಚ್ಚು ಆರಾಮದಾಯಕ ಅನುಭವ ನೀಡಲಿದೆ.
ಈ ವಿಭಾಗದಲ್ಲಿ ಮೊದಲನೆಯದು/ ಹಳೆಯ ನೋಟದೊಂದಿಗೆ ಸುಧಾರಿತ ಡಿಜಿಟಲ್ ಅನಲಾಗ್ ಮೀಟರ್ – ಟಾರ್ಕ್ ನಿಯಂತ್ರಣ, ಎಬಿಎಸ್, ಎಂಜಿನ್ ಪ್ರತಿರೋಧಕ ಹೊಂದಿದ ಸೈಡ್ ಸ್ಟ್ಯಾಂಡ್ ಇಂಡಿಕೇಟರ್, ಗಿಯರ್ ಪೊಷಿಶನ್ ಇಂಡಿಕೇಟರ್ ಮತ್ತು ಬ್ಯಾಟರಿ ವೋಲ್ಟೇಜ್ ಮತ್ತಿತರ ವಿವರಗಳನ್ನು ಸಂಯೋಜಿಸಲಿದೆ. ಮೂರು ಮಾದರಿಗಳಲ್ಲಿ ಇಂಧನ ದಕ್ಷತೆಯ ವಿವರಗಳು ಪ್ರದರ್ಶನಗೊಳ್ಳುವುದರಿಂದ ಸವಾರಿ ಅನುಭವವು ಇನ್ನಷ್ಟು ಶ್ರೀಮಂತಗೊಳ್ಳಲಿದೆ.
⦁ ನೈಜ ಸಮಯದಲ್ಲಿ ಇಂಧನ ಕ್ಷಮತೆಯ ಮಾಹಿತಿ: ಇಂಧನ ದಕ್ಷತೆಯ ಕ್ಷಣಕ್ಷಣದ ಮಾಹಿತಿ ಪ್ರದರ್ಶನ
⦁ ಸರಾಸರಿ ಮೈಲೇಜ್: ಸವಾರಿಯ ಸ್ವರೂಪ ಮತ್ತು ಪರಿಸ್ಥಿತಿಯ ಹಿಂದಿನ ಮಾಹಿತಿ ಆಧರಿಸಿ ಸರಾಸರಿ ಮೈಲೇಜ್ ಪ್ರದರ್ಶಿಸಲಿದೆ
⦁ ಇಂಧನ ಖಾಲಿಯಾಗುವ ಮಾಹಿತಿ: ಟ್ಯಾಂಕ್‍ನಲ್ಲಿ ಇರುವ ಇಂಧನ ಬಳಸಿ ಅಃ350ಖS ಎಷ್ಟು ದೂರ ಕ್ರಮಿಸಬಹುದು ಎನ್ನುವುದರ ಮಾಹಿತಿ ಪ್ರದರ್ಶನ
ಈ ವಿಭಾಗದಲ್ಲಿ ಮೊದಲನೆಯದು / ಹೋಂಡಾ ಸೆಲೆಕ್ಟೆಬಲ್ ಟಾರ್ಕ್ ಕಂಟ್ರೋಲ್ (ಎಚ್‍ಎಸ್‍ಟಿಸಿ) ವ್ಯವಸ್ಥೆಯು ಮುಂದಿನ ಮತ್ತು ಹಿಂದಿನ ಚಕ್ರಗಳ ತಿರುಗುವ ವೇಗದ ವ್ಯತ್ಯಾಸ ಆಧರಿಸಿ, ಜಾರುವ ಅನುಪಾತದ ಲೆಕ್ಕ ಹಾಕಿ, ಇಂಧನ ಒಳನುಗ್ಗಿಸುವುದರ ಮೂಲಕ ಎಂಜಿನ್ನಿನ ಟಾರ್ಕ್ ನಿಯಂತ್ರಿಸಿ ಹಿಂದಿನ ಚಕ್ರದ ಎಳೆಯುವ ಸಾಮಥ್ರ್ಯ ಕಾಯ್ದುಕೊಳ್ಳಲು ನೆರವಾಗಲಿದೆ. ಎಡಬದಿಯ ಮೀಟರ್‍ನಲ್ಲಿನ ಸ್ವಿಚ್ ಬಳಸಿ ಎಚ್‍ಎಸ್‍ಟಿಸಿ ಆನ್ ಮತ್ತು ಆಫ್ ಮಾಡಬಹುದು.
ಹೆಚ್ಚುವರಿ ಆರಾಮ ಮತ್ತು ಅನುಕೂಲತೆ
ಡ್ಯುಯೆಲ್ ಚಾನೆಲ್ ಎಬಿಎಸ್ ಜಾರಿಕೆ ತಡೆಯುವ ಈ ಬ್ರೇಕ್ ವ್ಯವಸ್ಥೆಯು (ಎಬಿಎಸ್), ತುರ್ತು ಸಂದರ್ಭದಲ್ಲಿ ಹಠಾತ್ತಾಗಿ ಬ್ರೇಕ್ ಹಾಕಿದಾಗ ಅಥವಾ ಜಾರುವ ರಸ್ತೆಯಲ್ಲಿ ಚಕ್ರಗಳು ಲಾಕ್ ಆಗುವುದನ್ನು ತಪ್ಪಿಸಲಿದ್ದು, ಸವಾರರಲ್ಲಿ ಹೆಚ್ಚು ಆತ್ಮವಿಶ್ವಾಸ ಮೂಡಿಸಲಿದೆ. ಮೋಟರ್ ಸೈಕಲ್ ನಿಲ್ಲಿಸುವಾಗ ದೊಡ್ಡ ಗಾತ್ರದ 310 ಎಂಎಂ ಡಿಸ್ಕ್ ಬ್ರೇಕ್ ಅನ್ ಫ್ರಂಟ್ ಮತ್ತು 240 ಎಂಎಂ ರಿಯರ್ ಡಿಸ್ಕ್, ಯಾವುದೇ ಪರಿಸ್ಥಿತಿಯಲ್ಲಿ ಬ್ರೇಕಿಂಗ್ ಕಾರ್ಯಕ್ಷಮತೆ ಹೆಚ್ಚಿಸಲಿವೆ.
ಹಾಫ್ – ಡ್ಯುಪ್ಲೆಕ್ಸ್ ಕ್ರ್ಯಾಡಲ್ ಫ್ರೇಮ್ ಇನ್ ಸ್ಟೀಲ್ ಪೈಪ್ - ಹಗುರ ಸ್ಟೀರಿಂಗ್ ಅನುಭವ ನೀಡಲು ಇದನ್ನು ಬಳಸಲಾಗಿದೆ. ಮುಂಭಾಗದಲ್ಲಿ ಭಾರದ ಹಂಚಿಕೆಯು ಸಮರ್ಪಕವಾಗಿರುವ ಮತ್ತು ಗುರುತ್ವಾಕರ್ಷಣೆಯ ಕೇಂದ್ರಬಿಂದುವನ್ನು ಕೆಳ ಹಂತದಲ್ಲಿ ಇರುವ ರೀತಿಯಲ್ಲಿ ಎಂಜಿನ್ ಅನ್ನು ವಿಶಿಷ್ಟ ಬಗೆಯಲ್ಲಿ ಅಳವಡಿಸಲಾಗಿದೆ. ಇದು ಮೋಟರ್ ಸೈಕಲ್‍ನ ಒಟ್ಟಾರೆ ಚಾಲನೆಯ ಕಸರತ್ತು ಮತ್ತು ಸವಾರಿ ಅನುಭವ ಪ್ರಭಾವಿಸಲಿದೆ.
ಗರಿಷ್ಠ ದೃಢತೆಯ ಬಾಕ್ಸ್ ಸೆಕ್ಷನ್ ಸ್ಟೀಲ್ ಟ್ಯೂಬ್ ಅನ್ನು ಸ್ವಿಂಗ್ ಆರ್ಮ್‍ಗಾಗಿ ಬಳಸಲಾಗಿದೆ. ಇದು ರಸ್ತೆ ಮೇಲಿನ ಚಾಲನಾ ಸಾಮಥ್ರ್ಯದ ಟಾರ್ಕ್ ಅನ್ನು ರಸ್ತೆ ಮೇಲ್ಭಾಗಕ್ಕೆ ವರ್ಗಾಯಿಸಿ, ಅಸ್ಪಷ್ಟತೆಯನ್ನು ಪರಿಣಾಮಕಾರಿಯಾಗಿ ತಗ್ಗಿಸಿ ಒಟ್ಟಾರೆ ಆರಾಮದಾಯಕ ಸವಾರಿ ಅನುಭವ ನೀಡಲಿದೆ. ಕೆಳಭಾಗದಲ್ಲಿ ಇರುವ ಸ್ಕಿಡ್ ಪ್ಲೇಟ್ ಎಂಜಿನ್‍ಗೆ ಹೆಚ್ಚುವರಿ ರಕ್ಷಣೆ ಒದಗಿಸಲಿದೆ. ಇದರಿಂದ ರಸ್ತೆ, ಬೀದಿಯಲ್ಲಿ ಹೆಚ್ಚು ಶ್ರಮ ಇಲ್ಲದೇ ಮೋಟರ್ ಸೈಕಲ್ ಚಲಾಯಿಸಬಹುದು.
ಲಾರ್ಜ್ ಸೆಕ್ಷನ್ ಫ್ರಂಟ್ ಸಸ್ಪೆನ್ಶನ್ – ಇದು ಬೈಕ್‍ನ ಗಮನ ಸೆಳೆಯುವಂತಹ ನೋಟದ ಆಕರ್ಷಣೆ ಹೆಚ್ಚಿಸುವುದರ ಜತೆಗೆ ಒರಟು ರಸ್ತೆಗಳಲ್ಲಿನ ಸವಾರಿಯು ಹೆಚ್ಚು ಆರಾಮದಾಯಕವಾಗಿರಲು ನೆರವಾಗುತ್ತದೆ. ಪ್ರೆಸರೈಜ್ಡ್ ನೈಟ್ರೊಜೆನ್ ಚಾಜ್ರ್ಡ್ ರಿಯರ್ ಸಸ್ಪೆನ್ಶನ್, ಗರಿಷ್ಠ ಮಟ್ಟದಲ್ಲಿ ಸ್ಪಂದಿಸಿ ಕಂಪನದ ತೀವ್ರತೆ ತಗ್ಗಿಸಲು ನೆರವಾಗುತ್ತದೆ.
ವಾಹನ ಚಾಲನೆಯ ವೇಗ ಅಳೆಯುವ ಮತ್ತು ಮಿತವ್ಯಯದಿಂದ ಇಂಧನ ಬಳಸಿ ಸವಾರಿ ನಡೆಸಲು ಸಂವೇದಕಗಳನ್ನು ಬಳಸುವ ಇಕೊ ಇಂಡಿಕೇಟರ್ ಬಳಸಿ ಹೆಚ್ಚು ಜಾಣ್ಮೆಯಿಂದ ಬೈಕ್ ಸವಾರಿ ಮಾಡಬಹುದು.
ಎಂಜಿನ್ ಸ್ಟಾರ್ಟ್ / ಸ್ಟಾಪ್ ಸ್ವಿಚ್ – ಈ ಸೌಲಭ್ಯವು, ಸ್ವಿಚ್ ತಿರುಗಿಸುವ ಮೂಲಕ ಅಲ್ಪ ಸಮಯದವರೆಗೆ ಎಂಜಿನ್ ಸ್ಥಗಿತಗೊಳಿಸುವ ಅನುಕೂಲತೆ ಕಲ್ಪಿಸಲಿದೆ. ರಸ್ತೆಯಲ್ಲಿನ ದೃಶ್ಯಗಳು ಸ್ಪಷ್ಟವಾಗಿ ಕಾಣದಂತಹ ಮಂದ ಬೆಳಕಿನ ಪರಿಸ್ಥಿತಿಯಲ್ಲಿ ಹಜಾರ್ಡ್ ಸ್ವಿಚ್ ಸೌಲಭ್ಯವು ಸವಾರರಿಗೆ ಹೆಚ್ಚಿನ ಸುರಕ್ಷತೆ ಒದಗಿಸಲಿದೆ. ಗರಿಷ್ಠ ಸಾಮಥ್ರ್ಯದ ಮತ್ತು ಶಕ್ತಿಶಾಲಿಯಾದ 15 ಲೀಟರ್ ಇಂಧನ ಟ್ಯಾಂಕ್ ಮತ್ತು ಉನ್ನತ ದರ್ಜೆಯ ಮೈಲೇಜ್, ದೂರ ಪಯಣದ ಸವಾರಿಯನ್ನು ಅಡೆತಡೆ ಇಲ್ಲದೆ ನಡೆಸಲು ಖಾತರಿ ನೀಡುತ್ತದೆ.
ಬಣ್ಣಗಳು, ಲಭ್ಯತೆ ಮತ್ತು ಬೆಲೆ
CB350RS ಬೆಲೆ ಆಕರ್ಷಕವಾಗಿದೆ. ಆರಂಭಿಕ ಬೆಲೆಯು 1,96,000 (ದೇಶದಾದ್ಯಂತ ಎಕ್ಸ್ ಷೋರೂಂ). ರಸ್ತೆ ಮೇಲೆ ಸಂಚರಿಸುವ ಪ್ರತಿಯೊಬ್ಬರ ಗಮನ ಸೆಳೆಯುವ CB350RS, ಎರಡು ಆಕರ್ಷಕ ಬಣ್ಣಗಳಾದ ರೇಡಿಯಂಟ್ ರೆಡ್ ಮೆಟ್ಯಾಲಿಕ್ ಮತ್ತು ಬ್ಲ್ಯಾಕ್ ವಿತ್ ಪರ್ಲ್ ಸ್ಪೋರ್ಟಿ ಯೆಲ್ಲೊನಲ್ಲಿ ದೊರೆಯಲಿದೆ. ಇಂದಿನಿಂದ ಹೋಂಡಾ, ದೇಶದಾದ್ಯಂತ ಇರುವ ತನ್ನ ಪ್ರೀಮಿಯಂ ಡೀಲರ್‍ಶಿಪ್‍ಗಳಾದ ಬಿಗ್‍ವಿಂಗ್ ಟಾಪ್‍ಲೈನ್ ಮತ್ತು ಬಿಗ್‍ವಿಂಗ್‍ಗಳಲ್ಲಿ CB350RSನ ಬುಕಿಂಗ್ ಆರಂಭಿಸಿದೆ.
ನಿಜವಾದ ಮೋಟರ್‍ಸೈಕಲ್ ಉತ್ಸಾಹಿಗಳ ಕನಸುಗಳನ್ನು ಸಾಕಾರಗೊಳಿಸುವುದನ್ನು ಬ್ರ್ಯಾಂಡ್ ಸಿಬಿ ಪ್ರತಿನಿಧಿಸುತ್ತದೆ. 1959ರಲ್ಲಿ ಮಾರುಕಟ್ಟೆಗೆ ಸಿಬಿ92 ಪರಿಚಯಿಸಿದ ದಿನದಿಂದ ಇಲ್ಲಿಯವರೆಗೆ ಇದು ತಂತ್ರಜ್ಞಾನದ ಎಲ್ಲೆಗಳನ್ನು ಮೀರಿ ಬೆಳೆದಿದೆ. ಕಾರ್ಯಕ್ಷಮತೆ, ಆರಾಮ, ಶೈಲಿ, ತಂತ್ರಜ್ಞಾನ ಮತ್ತು ವಿಶ್ವಾಸಾರ್ಹತೆಯ ಸುಂದರ ಪ್ರತೀಕ ಇದಾಗಿದೆ. ಕಳೆದ ವರ್ಷ, ಭಾರತದ ಸವಾರರು, ‘ಭಾರತದಲ್ಲಿಯೇ ತಯಾರಿಸಿದ’ ಸಿಬಿ ಬ್ರ್ಯಾಂಡ್‍ನ ಅನುಭವಕ್ಕೆ ಸಾಕ್ಷಿಯಾಗಿ, ಮೋಜಿನ ಸವಾರಿಯಿಂದ ಹೆಚ್ಚು ಹೆಮ್ಮೆ ಪಟ್ಟಿದ್ದರು. ಇಂದು, ನಾವು ಸಿಬಿ ಸರಣಿಗೆ ಇನ್ನೊಂದು ಹೊಸ ಅಧ್ಯಾಯ ಸೇರ್ಪಡೆ ಮಾಡುವುದಕ್ಕೆ ತುಂಬ ಉತ್ಸುಕರಾಗಿದ್ದೇವೆ. ಸಿಬಿ ಬ್ರ್ಯಾಂಡ್‍ನ ನಿಜವಾದ ಪರಂಪರೆಯನ್ನು ಪ್ರದರ್ಶಿಸಲಿರುವ ಈ CB350RS, ಸಮಕಾಲೀನ ಶೈಲಿ ಮತ್ತು ಶ್ರೇಷ್ಠ ನಿಲುವಿನ ನೋಟದ ಮೂಲಕ ಮೋಜಿನ ಬೈಕ್ ಸವಾರಿ ಒದಗಿಸಿ ಭಾರತದ ಗ್ರಾಹಕರಿಗೆ ಹೊಸ ಮೌಲ್ಯ ಸೇರ್ಪಡೆ ಮಾಡಲಿದೆ ಎಂದು ಹೋಂಡಾ ಮೋಟರ್‍ಸೈಕಲ್ ಆ್ಯಂಡ್ ಸ್ಕೂಟರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‍ನ ವ್ಯವಸ್ಥಾಪಕ ನಿರ್ದೇಶಕ, ಅಧ್ಯಕ್ಷ ಮತ್ತು ಸಿಇಒ ಅತ್ಸುಶಿ ಒಗಾಟಾ, ಹೇಳಿದ್ದಾರೆ.
ಸಿಬಿ ಬ್ರ್ಯಾಂಡ್‍ನ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುತ್ತಿರುವ ಸಂಪೂರ್ಣ ಹೊಸದಾದ CB350RS, , ರಸ್ತೆ ನೌಕಾಯಾನ ಪರಿಕಲ್ಪನೆ –‘ಆರ್‍ಎಸ್’ ಆಧರಿಸಿ ತಯಾರಿಸಲಾಗಿದೆ. ರಸ್ತೆ ಮೇಲಿನ ಬೈಕ್‍ನ ಸುಲಲಿತ ಕಾರ್ಯವೈಖರಿಯು ಸವಾರರಿಗೆ ಚೇತೋಹಾರಿಯಾದ ನೌಕಾಯಾನದ ಅನುಭವ ಮತ್ತು ಆರಾಮದಾಯಕ ಅನುಭವ ಒದಗಿಸಲಿದೆ. ಸವಾರರ ಜೀವನಶೈಲಿಗೆ ಸರಿಹೊಂದುವ ಬಗೆಯಲ್ಲಿ ಅತ್ಯಾಧುನಿಕ ನಗರ ಶೈಲಿ ಮತ್ತು ಶಕ್ತಿಯುತ ಸುಧಾರಿತ 350ಸಿಸಿ ಎಂಜಿನ್ ಜತೆಗೆ CB350RS, ನ ವಿನ್ಯಾಸ ರೂಪಿಸಲಾಗಿದೆ. ಹೊಸ ಬೈಕ್ ಸವಾರಿಗೆ ಸನ್ನದ್ಧರಾಗಲು ಮತ್ತು ನಿಮ್ಮ ಸಾಧನೆ ಪ್ರದರ್ಶಿಸಲು ಇದು ಎಲ್ಲ ಸವಾರರಿಗೆ ಕರೆ ನೀಡಲಿದೆ’ ಎಂದು ಹೋಂಡಾ ಮೋಟರ್ ಸೈಕಲ್ ಆ್ಯಂಡ್ ಸ್ಕೂಟರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‍ನ ಮಾರಾಟ ಮತ್ತು ಮಾರುಕಟ್ಟೆ ನಿರ್ದೇಶಕ ಯದ್ವಿಂದರ್ ಸಿಂಗ್ ಗುಲೇರಿಯಾ ಹೇಳಿದ್ದಾರೆ.